Udayavni Special

ಗಂಡನನ್ನೇ ಕೊಂದು ಹೂತು ಹಾಕಿದ ಪತ್ನಿ


Team Udayavani, Sep 6, 2020, 3:12 PM IST

ಗಂಡನನ್ನೇ ಕೊಂದು ಹೂತು ಹಾಕಿದ ಪತ್ನಿ

ಚಿಕ್ಕೋಡಿ: ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಗಂಡನನ್ನೇ ಹೆಂಡತಿ ಕೊಲೆ ಮಾಡಿ ಹೂತು ಹಾಕಿದ ಘಟನೆ ನಿಪ್ಪಾಣಿ ತಾಲೂಕಿನ ಹಂಚನಾಳ ಗ್ರಾಮದಲ್ಲಿ ತಡವಾಗಿ ಪತ್ತೆಯಾಗಿದೆ.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್‌ ತಾಲೂಕಿನ ನೇರ್ಲೆ ಗ್ರಾಮದ ಸಚಿನ ಸದಾಶಿವ ಭೋಪಳೆ(35) ಕೊಲೆಯಾದ ವ್ಯಕ್ತಿ. ಕೊಲೆ ಮಾಡಿದ ಪತ್ನಿ ಅನಿತಾ ಭೋಪಳೆ(33) ಸಹಚರ ಸಹೋದರ ಹಂಚಿನಾಳ ಗ್ರಾಮದ ಕೃಷ್ಣಾತ್‌ ರಾಜಾರಾಮ ಘಾಟಗೆ(26) ಹಾಗೂ ಪತ್ನಿಯ ಸಹೋದರಿ ಕಾಗಲ್‌ ತಾಲೂಕಿನ ಸಿದ್ಧನೇರ್ಲಿ ಗ್ರಾಮದ ವನಿತಾ ಕೃಷ್ಣಾತ್‌ ಚವ್ಹಾಣ(29) ಮೂವರೂ ಆರೋಪಿಗಳು ತಲೆಮರೆಸಿಕೊಂಡಿದ್ದು ಪೊಲೀಸರು ಅವರ ಶೋಧ ಕಾರ್ಯ ನಡೆಸಿದ್ದಾರೆ.

ಕೊಲೆಯಾದ ವ್ಯಕ್ತಿ ಪತ್ನಿ ಶೀಲದ ಬಗ್ಗೆ ಆಗಾಗ ಸಂಶಯ ವ್ಯಕ್ತಪಡಿಸಿ ಮದ್ಯದ ಅಮಲಿನಲ್ಲಿ ಕಿರುಕುಳ ಕೊಡುತ್ತಿದ್ದ ಎಂದು ಪೊಲೀಸರು ತಿಳಿಸಿದರು. ಕೆಲ ದಿನಗಳ ಹಿಂದೆ ಇಬ್ಬರೂ ಹಂಚಿನಾಳ ಗ್ರಾಮಕ್ಕೆ ಬಂದಿದ್ದರು. ಅಲ್ಲಿಯೂ ಸಹ ಸಚಿನ ಸೆ.3ರಂದು ಮದ್ಯದ ಅಮಲಿನಲ್ಲಿ ತನ್ನ ಪತ್ನಿ ಜತೆಗೆ ಜಗಳಕ್ಕಿಳಿದಿದ್ದ. ಈ ಜಗಳದಲ್ಲಿ ಪತ್ನಿ ಅನಿತಾ ಬಡಿಗೆಯಿಂದ ಆತನ ತಲೆಗೆ ಜೋರಾಗಿ ಪೆಟ್ಟು ಕೊಟ್ಟಿದ್ದಾಳೆ. ಇದರಲ್ಲಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಂತರ ಮನೆಯಲ್ಲಿ ಎಮ್ಮೆ ಸತ್ತಿದ್ದು ಅದನ್ನು ಅಂಗಳದಲ್ಲಿ ಹೂಳಲು ಜೆಸಿಬಿ ಚಾಲಕನಿಗೆ ರಾತ್ರೋರಾತ್ರಿ ಕರೆ ಮಾಡಿ ಕರೆಸಿ ದೊಡ್ಡ ತಗ್ಗು ತೆಗೆಸಿ, ನಂತರ ಅನಿತಾ ಮತ್ತು ಆಕೆಯ ಸಹೋದರ ಹಾಗೂ ಸಹೋದರಿ ಸಚಿನನ ಹೆಣವನ್ನು ಅಲ್ಲೇ ಮಣ್ಣು ಮಾಡಿದ್ದರು. ಶನಿವಾರ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ಗೊತ್ತಾಗಿ ತಪಾಸಣೆ ನಡೆಸಿದ ನಂತರ ಸತ್ಯ ಬಯಲಾಗಿದೆ. ಈ ಕುರಿತು ನಿಪ್ಪಾಣಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

gfjfytfyjt

ಬೆಳಗಾವಿ:  ಕೊಳವೆ ಬಾವಿಗೆ ಬಿದ್ದಿದ್ದ ಮಗು ಸಾವು

ವಿಶ್ವಸಂಸ್ಥೆಯ ಎಸ್‌ಡಿಜಿ ವಕೀಲರಾಗಿ ನೋಬೆಲ್‌ ಶಾಂತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ನೇಮಕ

ವಿಶ್ವಸಂಸ್ಥೆಯ ಎಸ್‌ಡಿಜಿ ವಕೀಲರಾಗಿ ನೋಬೆಲ್‌ ಶಾಂತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ನೇಮಕ

gfgrr

ತಾಂತ್ರಿಕ ದೋಷ : ರನ್‍ವೇನಲ್ಲೆ ನಿಂತ ಏರ್‌ ಇಂಡಿಯಾ ವಿಮಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gfjfytfyjt

ಬೆಳಗಾವಿ:  ಕೊಳವೆ ಬಾವಿಗೆ ಬಿದ್ದಿದ್ದ ಮಗು ಸಾವು

dxfsere

ಬೆಳಗಾವಿ: ನಾಪತ್ತೆ ಆಗಿದ್ದ ಮಗು ಕೊಳವೆ ಬಾವಿಯಲ್ಲಿ ಪತ್ತೆ| ಮುಂದುವರಿದ ಕಾರ್ಯಾಚರಣೆ

fghtht

ಸೆ.20 ರಂದು ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಗೆ ರೈತ ಸಂಘ ಮುತ್ತಿಗೆ

ಮೆಗಾ ಲಸಿಕಾ ಮೇಳದಲ್ಲಿ ದೇಶಕ್ಕೆ‌ ಬೆಳಗಾವಿ ದ್ವಿತೀಯ ಸ್ಥಾನ

ಮೆಗಾ ಲಸಿಕಾ ಮೇಳದಲ್ಲಿ ದೇಶಕ್ಕೆ‌ ಬೆಳಗಾವಿ ದ್ವಿತೀಯ ಸ್ಥಾನ

ಬೈಲಹೊಂಗಲ : ಗ್ರಾಮ ಪಂಚಾಯತ್ ಸದಸ್ಯನಿಗೆ ಕಪಾಳ ಮೋಕ್ಷ ಮಾಡಿದ ಪಿಡಿಓ

ಬೈಲಹೊಂಗಲ : ಗ್ರಾಮ ಪಂಚಾಯತ್ ಸದಸ್ಯನಿಗೆ ಕಪಾಳ ಮೋಕ್ಷ ಮಾಡಿದ ಪಿಡಿಓ

MUST WATCH

udayavani youtube

ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಮಾಡೆಲ್

udayavani youtube

ಕ್ಯಾಪ್ಟನ್ ಅಭಿಮನ್ಯು ಮೊಮ್ಮಗನ ಜೊತೆಗೆ ಸಿಹಿ ತಿನಿಸಿ ಶುಭ ಹಾರೈಸಿದ ಮೋದದೇವಿ ಒಡೆಯರ್

udayavani youtube

ಕಾಲ ಅಂದ್ರೇನು?

udayavani youtube

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ

udayavani youtube

ಸರ್ವೇ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈತನ ಏಕಾಂಗಿ ಪ್ರತಿಭಟನೆ

ಹೊಸ ಸೇರ್ಪಡೆ

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

xfser4er4

ಪಾಕ್ ಪಿಎಂ ಈತನಿಗೆ ಗುಡ್ ಫ್ರೆಂಡ್|ಸಿಎಂ ಸ್ಥಾನಕ್ಕೆ ಸಿಧು ಆಯ್ಕೆಗೆ ನನ್ನ ವಿರೋಧ ಇದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.