ಬಾಧಿತ ಕಬ್ಬು ಕಟಾವಿಗೆ ಆಗ್ರಹ


Team Udayavani, Nov 25, 2019, 11:47 AM IST

bg-tdy-1

ಚಿಕ್ಕೋಡಿ: ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಕಟಾವು ಆರಂಭವಾಗಿದ್ದು, ಸಕ್ಕರೆ ಕಾರ್ಖಾನೆಗಳು ಎಫ್‌ಆರ್‌ಪಿ ಜೊತೆಗೆ ಹೆಚ್ಚುವರಿ 200 ರೂ. ದರವನ್ನು ಒಂದೇ ಕಂತಿನಲ್ಲಿ ರೈತರಿಗೆ ನೀಡಬೇಕೆಂದು ಸ್ವಾಭಿಮಾನಿ ಶೇತಕರ ಸಂಘಟನೆ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಂಸದ ರಾಜು ಶೆಟ್ಟಿ ಒತ್ತಾಯಿಸಿದರು.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಜಯಸಿಂಗಪುರ ನಗರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ-ಮಹಾರಾಷ್ಟ್ರ 18ನೇ ರೈತರ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿದರು. ಆಗಸ್ಟ್‌ ತಿಂಗಳಲ್ಲಿ ಕೃಷ್ಣಾ, ದೂಧಗಂಗಾ, ವೇದಗಂಗಾ ಮತ್ತು ಪಂಚಗಂಗಾ ನದಿಗಳ ಭೀಕರ ಪ್ರವಾಹದಿಂದ ಲಕ್ಷಾಂತರ ಹೆಕ್ಟೇರ್‌ ಕಬ್ಬು ನೀರಿನಲ್ಲಿ ಬಾಧಿ ತವಾಗಿದೆ. ಸಕ್ಕರೆ ಕಾರ್ಖಾನೆಗಳು ಪ್ರವಾಹ ಬಾಧಿತಗೊಂಡಿರುವ ಕಬ್ಬು ಕಟಾವಿಗೆ ಮೊದಲು ಆದ್ಯತೆ ನೀಡಬೇಕು. ಮುಂಬರುವ ಡಿಸೆಂಬರ್‌ 15ರೊಳಗಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದಲ್ಲಿ ಪ್ರವಾಹ ಬಾಧಿ ತ ಕಬ್ಬು ಕಟಾವು ಮಾಡಬೇಕೆಂದು ಸಕ್ಕರೆ ಕಾರ್ಖಾನೆಗಳನ್ನು ಒತ್ತಾಯಿಸಿದರು.

ಸರ್ಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ ಜೊತೆಗೆ ಹೆಚ್ಚುವರಿ ಬೆಲೆ ನೀಡಲು 15 ದಿನದೊಳಗಾಗಿ ಎಲ್ಲ ಸಕ್ಕರೆ ಕಾರ್ಖಾನೆಗಳು ನಿರ್ಣಯ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ಗಡಿ ಭಾಗದಲ್ಲಿ ಇರುವ ಎಲ್ಲ ಸಕ್ಕರೆ ಕಾರ್ಖಾನೆಯನ್ನು ಬಂದ್‌ ಮಾಡಲಾಗುತ್ತದೆ ಎಂದು ಕಾರ್ಖಾನೆಗಳಿಗೆ ಎಚ್ಚರಿಕೆ ನೀಡಿದರು. ಕಳೆದ ಹಂಗಾಮಿನಲ್ಲಿ ಹೋಲಿಕೆ ಮಾಡಿದರೇ ಈ ಹಂಗಾಮಿನಲ್ಲಿ ಸಕ್ಕರೆ ಉತ್ಪಾದನೆ ಕಡಿಮೆಯಾಗಲಿದೆ. ಕಾರ್ಖಾನೆಗಳನ್ನು ಕನಿಷ್ಠ 120 ದಿನಗಳು ನಡೆಸಬೇಕಾದರೇ ಅನೇಕ ಕಾರ್ಖಾನೆಗಳಿಗೆ ಕಬ್ಬು ಕೊರತೆಯಾಗಲಿದೆ. ಹೀಗಾಗಿ ಕಬ್ಬಿಗಾಗಿ ಕಾರ್ಖಾನೆಗಳು ರೈತರ ಮನೆ ಬಾಗಿಲಿಗೆ ಬರಬೇಕಾಗುತ್ತದೆ. ಯಾವ ಸಕ್ಕರೆ ಕಾರ್ಖಾನೆ ಹೆಚ್ಚು ದರ ಕೊಡುತ್ತದೆಯೋ ಅದೇ ಕಾರ್ಖಾನೆಗೆ ರೈತರು ಕಬ್ಬು ಕಳಿಸಲು ಚಿಂತನೆ ನಡೆಸುತ್ತಾರೆ. ಕೂಡಲೇ ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿಗೆ ಎಷ್ಟು ದರ ನೀಡುತ್ತಿರಾ? ಎಂಬುದನ್ನು ಬಹಿರಂಗ ಪಡಿಸಬೇಕೆಂದು ಆಗ್ರಹಿಸಿದರು.

ಶೇತಕರ ಕೃತಿ ಸಮಿತಿ ಅಧ್ಯಕ್ಷ ಸತೀಶ ಕಾಕಡೆ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಸ್ವಾಭಿಮಾನಿ ಪಕ್ಷದ ರಾಜ್ಯಾಧ್ಯಕ್ಷ ಪ್ರಕಾಶ ಹೋಪಳೆ, ಶಾಸಕ ದೇವೇಂದ್ರ ಗೂಯಾರ, ಜಾಲಂದ್ರ ಪಾಟೀಲ, ರಾಜ್ಯ ಮಹಿಳಾ ಅಗಾಡಿಯಾ ಅಧ್ಯಕ್ಷೆ ರಸಿಕಾತಾಯಿಡಗೆ, ರವಿಕಾಂತ ತುಪಕರ, ಸಾಹುಕಾರ ಮಾದನಾಯಿಕ, ಡಾ| ಮಹಾವೀರ ಅಕ್ಕೋಳೆ, ಡಾ| ಶ್ರೀವರ್ಧನ ಪಾಟೀಲ, ಬಂಗಾಳಿ ಪಾಟೀಲ, ದೇವೇಗೌಂಡ ಚಿಪ್ಪರಗೆ, ರಾಜೇಂದ್ರ ಗಡೆನ್ನವರ, ರಾಜು ಕಿಚಡೆ, ಸುಭಾಷ ಚೌಗಲೆ, ಪಂಕಜ ತಿಪ್ಪನ್ನವರ, ಅಲ್ಲಗೌಡ ಪಾಟೀಲ, ಜೀತೇಂದ್ರ ಟಾಕಳೆ, ತಾತ್ಯಾಸಾಹೇಬ ಕೇಸ್ತೆ, ಪ್ರಕಾಶ ತೇರದಾಳೆ, ವಿಕ್ರಾಂತ ಸಮಗೆ, ರಮೇಶ ಪಾಟೀಲ, ರಾಜು ಉಪಾಧ್ಯೆ ಇದ್ದರು.

ಟಾಪ್ ನ್ಯೂಸ್

3yakshagana

ಯಕ್ಷಗಾನ ಹಿರಿಯ ಕಲಾವಿದ ಬೇತ ಕುಂಞ ಕುಲಾಲ್ ನಿಧನ

2gold

ಮಂಗಳೂರು ವಿಮಾನ ನಿಲ್ದಾಣದಲ್ಲಿ 29,14,160 ಮೌಲ್ಯದ ಚಿನ್ನ ವಶ

thavarchand gahlot

ಸಮಾಜದ ದುರ್ಬಲ ವರ್ಗಗಳ ಏಳಿಗೆಗೆ ನನ್ನ ಸರ್ಕಾರ ಬದ್ಧ: ರಾಜ್ಯಪಾಲರ ಗಣರಾಜ್ಯೋತ್ಸವ ಸಂದೇಶ

1fire2

ಚಾರ್ಮಾಡಿ ಅರಣ್ಯದಲ್ಲಿ ಅಗ್ನಿ ಆಕಸ್ಮಿಕ: ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ

ಬಿ.ಸಿ.ಪಾಟೀಲ್

ಸೆಲ್ಯೂಟ್ ಹೊಡೆಯುತ್ತಿದ್ದ ಮೈದಾನದಲ್ಲಿ ಗೌರವ ಸ್ವೀಕರಿಸಿದ್ದು ನನ್ನ ಭಾಗ್ಯ: ಬಿ.ಸಿ.ಪಾಟೀಲ್

11,000 ಅಡಿ ಎತ್ತರದಲ್ಲಿ ಮೈನಸ್ 20 ಡಿಗ್ರಿ ಸೆಲ್ಸಿಯಸ್ ನಲ್ಲಿ ಗಣರಾಜ್ಯ ಸಂಭ್ರಮ: ವಿಡಿಯೋ

11,000 ಅಡಿ ಎತ್ತರ, ಮೈನಸ್ 20 ಡಿಗ್ರಿ ಸೆಲ್ಸಿಯಸ್ ನಲ್ಲಿ ಯೋಧರ ಗಣರಾಜ್ಯ ಸಂಭ್ರಮ: ವಿಡಿಯೋ

Musical artist Sheela Divakar passes away

ಖ್ಯಾತ ಸಂಗೀತ ಕಲಾವಿದೆ ಶೀಲಾ ದಿವಾಕರ್ ನಿಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನ್ಯಾಯಯುತವಾಗಿ ಮಹದಾಯಿ ನೀರು ನಮಗೆ ಸಿಗಬೇಕು: ಎಂ.ಬಿ ಪಾಟೀಲ್

ನ್ಯಾಯಯುತವಾಗಿ ಮಹದಾಯಿ ನೀರು ನಮಗೆ ಸಿಗಬೇಕು: ಎಂ.ಬಿ ಪಾಟೀಲ್

belagavi

ಮಕ್ಕಳ ಭವಿಷ್ಯ ರೂಪಿಸಲು ಪುಸ್ತಕ ಸಹಕಾರಿ

ಬಸವಲಿಂಗ ಸ್ವಾಮಿಗಳ ಸ್ಮರಣೆ; ಪ್ರವಚನಕ್ಕೆ ಚಾಲನೆ

ಬಸವಲಿಂಗ ಸ್ವಾಮಿಗಳ ಸ್ಮರಣೆ; ಪ್ರವಚನಕ್ಕೆ ಚಾಲನೆ

ಮಕ್ಕಳ ಭವಿಷ್ಯ ರೂಪಿಸಲು ಪುಸ್ತಕ ಸಹಕಾರಿ

ಮಕ್ಕಳ ಭವಿಷ್ಯ ರೂಪಿಸಲು ಪುಸ್ತಕ ಸಹಕಾರಿ

ರಮೇಶ ಜಾರಕಿಹೊಳಿ ಸಚಿವಗಿರಿಗೆ ವಿಘ್ನಗಳೇ ಅಡ್ಡಿ; ಬಾಲಚಂದ್ರ ಬದಲಾವಣೆ ಕಷ್ಟ

ರಮೇಶ ಜಾರಕಿಹೊಳಿ ಸಚಿವಗಿರಿಗೆ ವಿಘ್ನಗಳೇ ಅಡ್ಡಿ; ಬಾಲಚಂದ್ರ ಬದಲಾವಣೆ ಕಷ್ಟ

MUST WATCH

udayavani youtube

73ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

udayavani youtube

ಮದುವೆ ದಿನದಂದು ಕಾಫಿದೊರೆ ಸಿದ್ದಾರ್ಥ ಹೆಗ್ಗಡೆ ಅವರಿಗೆ ನುಡಿ ನಮನ ಸಲ್ಲಿಸಿದ ಮದುಮಗ

udayavani youtube

ಅಭಿಮಾನದಿಂದ ಹಾಕಿದ ಕೇಸರಿ ರುಮಾಲು ಕಿತ್ತೆಸೆದ ಸಿದ್ದರಾಮಯ್ಯ ! ದಂಗಾದ ಅಭಿಮಾನಿ

udayavani youtube

ಮುತ್ತಿನ ಪ್ರಕರಣ : ಶಿಲ್ಪಾ ಶೆಟ್ಟಿಯನ್ನು ’ಸಂತ್ರಸ್ತೆ’ ಎಂದ ಮುಂಬೈ ಕೋರ್ಟ್

udayavani youtube

ವಾಹನ ಸವಾರರ ಗೋಳು ಕೇಳುವವರು ಯಾರು

ಹೊಸ ಸೇರ್ಪಡೆ

3yakshagana

ಯಕ್ಷಗಾನ ಹಿರಿಯ ಕಲಾವಿದ ಬೇತ ಕುಂಞ ಕುಲಾಲ್ ನಿಧನ

2gold

ಮಂಗಳೂರು ವಿಮಾನ ನಿಲ್ದಾಣದಲ್ಲಿ 29,14,160 ಮೌಲ್ಯದ ಚಿನ್ನ ವಶ

thavarchand gahlot

ಸಮಾಜದ ದುರ್ಬಲ ವರ್ಗಗಳ ಏಳಿಗೆಗೆ ನನ್ನ ಸರ್ಕಾರ ಬದ್ಧ: ರಾಜ್ಯಪಾಲರ ಗಣರಾಜ್ಯೋತ್ಸವ ಸಂದೇಶ

1fire2

ಚಾರ್ಮಾಡಿ ಅರಣ್ಯದಲ್ಲಿ ಅಗ್ನಿ ಆಕಸ್ಮಿಕ: ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ

ಬಿ.ಸಿ.ಪಾಟೀಲ್

ಸೆಲ್ಯೂಟ್ ಹೊಡೆಯುತ್ತಿದ್ದ ಮೈದಾನದಲ್ಲಿ ಗೌರವ ಸ್ವೀಕರಿಸಿದ್ದು ನನ್ನ ಭಾಗ್ಯ: ಬಿ.ಸಿ.ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.