ಗೋಕಾಕ ಜಿಲ್ಲೆ ರಚನೆಗೆ ಆಗ್ರಹ


Team Udayavani, Sep 22, 2019, 10:08 AM IST

bg-tdy-1

ಗೋಕಾಕ: ದೇಶದ ಸ್ವಾತಂತ್ರ್ಯ ಪೂರ್ವದಲ್ಲಿಯೇ “ಸಬ್‌ ಡಿಸ್ಟ್ರಿಕ್ಟ್’ ಇದ್ದ ಗೋಕಾಕ ನಗರವನ್ನು ರಾಜ್ಯ ಸರಕಾರ ಜಿಲ್ಲೆಯಾಗಿ ಘೋಷಿಸಬೇಕೆಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಈವರೆಗೆ ಗೋಕಾಕ ಜಿಲ್ಲೆ ಘೋಷಣೆಯಾಗಿಲ್ಲ. 1891ರಲ್ಲಿಯೇ ಗೋಕಾಕ ಮಿಲ್ಲಿಗೆ ಜಮೀನು ಲೀಜ್‌ ನೀಡಿದ ಸಮಯದಲ್ಲಿ ಅದು ಗೆಜೆಟ್‌ದಲ್ಲಿ

ಪ್ರಕಟಗೊಂಡಿದ್ದು, ಅದರಲ್ಲಿ ಗೋಕಾಕ ಸಬ್‌ ಡಿಸ್ಟ್ರಿಕ್ಟ್ ಎಂದು ಉಲ್ಲೇಖೀಸಲಾಗಿದೆ. ಕಾರಣಾಂತರದಿಂದ ಹಾಗೂ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಗೋಕಾಕ ಜಿಲ್ಲೆಯಾಗಲು ಸಾಧ್ಯವಾಗಿಲ್ಲ. ಕಳೆದ 40 ವರ್ಷಗಳಿಂದ ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ಹೋರಾಟ, ಚಳವಳಿಯನ್ನು ಈ ಭಾಗದ ಜನತೆ ನಡೆಸಿದರೂ ಉಪಯೋಗವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಈಗ ವಿಜಯನಗರ ಜಿಲ್ಲೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೊರಟಿರುವುದು ನೋಡಿದರೆ ಈ ಭಾಗದ ಜನಸಾಮಾನ್ಯರ ಬೇಡಿಕೆಗೆ ಯಾವ ಬೆಲೆಯೂ ಇಲ್ಲದಂತಾಗಿದೆ. ಜಿಲ್ಲಾ ವಿಭಜನೆಗಾಗಿ ರಚಿಸಿದ ಎಲ್ಲ ಆಯೋಗಗಳು ಗೋಕಾಕ ಜಿಲ್ಲೆ ಮಾಡಲು ಶಿಫಾರಸು ಮಾಡಿದ್ದರೂ ರಾಜ್ಯ ಸರಕಾರ ಗೋಕಾಕ ಜಿಲ್ಲೆ ಮಾಡಲು ಮೀನಿಮೇಷ ಮಾಡುತ್ತಿರುವುದು ದುಃಖದ ಸಂಗತಿ ಎಂದರು.

ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲು ಈ ಬಗ್ಗೆ ಚಳವಳಿ, ಬಂದ್‌ ಇತ್ಯಾದಿ ಹೋರಾಟದ ಮೂಲಕ ಯತ್ನಿಸಲಾಗುವುದು. ಇದು ಪಕ್ಷಾತೀತವಾಗಿ ನಡೆಯಲಿದ್ದು, ಹೋರಾಟದಲ್ಲಿ ಜನಪ್ರತಿನಿಧಿ  ಗಳು ಪಾಲ್ಗೊಳ್ಳುವಂತೆ ಮನವೊಲಿಸಲಾಗುವುದು.ತಾಲೂಕಿನ ಜನತೆ ಕೂಡಾ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಯು.ಬಿ. ಶಿಂಪಿ ಮಾತನಾಡಿ, ಈವರೆಗೆ ಜಿಲ್ಲಾ ಹೋರಾಟದಲ್ಲಿ ನ್ಯಾಯವಾದಿಗಳ ಸಂಘ ಮುಂಚೂಣಿಯಲ್ಲಿದ್ದು, ಸೆ.23ರಂದು ನ್ಯಾಯವಾದಿಗಳ ಸಂಘದ ಸಭೆ ಕರೆದು, ಈ ಬಗ್ಗೆ ಚರ್ಚಿಸಿ ಹೋರಾಟದ ರೂಪುರೇಷೆ ತಯಾರಿಸಲಾಗುವುದು ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಎಸ್‌.ವ್ಹಿ. ದೇಮಶೆಟ್ಟಿ, ಪ್ರಕಾಶ ಭಾಗೋಜಿ, ದಸ್ತಗೀರ ಪೈಲವಾನ, ಸುನೀಲ ಮುರಕೀಭಾಂವಿ, ನ್ಯಾಯವಾದಿಗಳಾದ ಎಸ್‌.ಎಸ್‌. ಪಾಟೀಲ, ಜಿ.ಆರ್‌. ಪೂಜೇರ, ಗಿರೀಶ ನಂದಿ ಅವರು ಮಾತನಾಡಿದರು.

ಟಾಪ್ ನ್ಯೂಸ್

bhagavanth-kubha

ರಸಗೊಬ್ಬರ ಕೊರತೆ; ಕಾಂಗ್ರೆಸ್ ಸುಳ್ಳಿನಿಂದ ಆತಂಕ ಸೃಷ್ಟಿ : ಭಗವಂತ್ ಖೂಬಾ

21school

ಊಟಕ್ಕಾಗಿ 1ಕಿ.ಮೀ ನಡೆಯುತ್ತಿದ್ದ ಮಕ್ಕಳು: ಕೊನೆಗೂ ಬಂತು ಬಿಸಿಯೂಟ

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

Tesla’s market cap crosses $1 trillion

ಟೆಸ್ಲಾ ಮಾರುಕಟ್ಟೆ ಮೌಲ್ಯ 1ಲಕ್ಷ ಕೋಟಿ ರೂ. ದಾಟಿದೆ..!

111111111

ನವೆಂಬರ್ ನಲ್ಲಿ ತೆರೆಯ ಮೇಲೆ ಮೂಡಿ ಬರಲಿದೆ ‘ಟಾಮ್ ಅಂಡ್ ಜೆರ್ರಿ’

siddaramaiah

ಜನತಾ ನ್ಯಾಯಾಲಯದ ಮುಂದೆ ಚರ್ಚೆಗೆ ಭಯವೇಕೆ : ಸಿಎಂಗೆ ಸಿದ್ದರಾಮಯ್ಯ ಪ್ರಶ್ನೆ

WS_Jazz 4

ಕನ್ನಡದಲ್ಲೇ ಮೊದಲ ಪ್ರಯೋಗ : ವಿಂಡೋಸೀಟ್ ನಲ್ಲಿ ಮೂಡಿ ಬಂತು ಜಾಝ್ ಸಾಂಗ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18anganavadi

ಅಂಗನವಾಡಿ ಆವರಣದಲ್ಲಿ ಕಂಗೊಳಿಸುತ್ತಿದೆ ಕೈತೋಟ

belagavi news

ಬೆಳಗಾವಿ ಜಿಲ್ಲೆಯ ವಿಧವೆಯರಿಗೆ 8 ಸಾವಿರ ಮನೆ ಮಂಜೂರು- ಕವಟಗಿಮಠ

26sugar

ಘಟಪ್ರಭಾ ಶುಗರ್ಸ್‌ನಿಂದ ಕಬ್ಬಿಗೆ 2700 ರೂ. ದರ ಘೋಷಣೆ

25protest

ಎಂಇಎಸ್‌ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ನಿಂದನೆ

ಕಿತ್ತೂರಿನ ಸಂಪೂರ್ಣ ಇತಿಹಾಸ ಬೆಳಕಿಗೆ ಬರಲಿ

ಕಿತ್ತೂರಿನ ಸಂಪೂರ್ಣ ಇತಿಹಾಸ ಬೆಳಕಿಗೆ ಬರಲಿ

MUST WATCH

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

ಹೊಸ ಸೇರ್ಪಡೆ

bhagavanth-kubha

ರಸಗೊಬ್ಬರ ಕೊರತೆ; ಕಾಂಗ್ರೆಸ್ ಸುಳ್ಳಿನಿಂದ ಆತಂಕ ಸೃಷ್ಟಿ : ಭಗವಂತ್ ಖೂಬಾ

21school

ಊಟಕ್ಕಾಗಿ 1ಕಿ.ಮೀ ನಡೆಯುತ್ತಿದ್ದ ಮಕ್ಕಳು: ಕೊನೆಗೂ ಬಂತು ಬಿಸಿಯೂಟ

ಮೈಸೂರು ಆರ್ಟಿಸ್ಟ್‌ ಅಸೋಸಿಯೇಷನ್‌ನಿಂದ ಸಾಮೂಹಿಕ ನಾಡಗೀತೆ

ಅನಂತಸ್ವಾಮಿ ಗೀತೆಯನ್ನೇ ನಾಡಗೀತೆಯಾಗಿ ಘೋಷಿಸಿ

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

20lake

ಇನ್ನೂ ತುಂಬಿಲ್ಲ ನಿಡಶೇಸಿ ಕೆರೆಯಂಗಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.