ಮೂರು ಸರ್ಕಾರಿ ಶಾಲೆ ದತ್ತು ಪಡೆದ ಕತ್ತಿ

| 290.65 ಲಕ್ಷ ರೂ. ಕ್ರಿಯಾಯೋಜನೆ ರೆಡಿ | ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಬಳಕೆ

Team Udayavani, Jan 4, 2021, 3:22 PM IST

ಮೂರು ಸರ್ಕಾರಿ ಶಾಲೆ ದತ್ತು ಪಡೆದ ಕತ್ತಿ

ಬೆಳಗಾವಿ: ಜಿಲ್ಲೆಯ ಅತ್ಯಂತ ಹಿರಿಯ ಹಾಗೂ ಅನುಭವಿ ರಾಜಕಾರಣಿ ಉಮೇಶ ಕತ್ತಿ ಅವರು ತಮ್ಮ ಕ್ಷೇತ್ರದಲ್ಲಿಸರಕಾರಿ ಶಾಲೆಗಳ ಸುಧಾರಣೆಗೆ ತಮ್ಮದೇ ಆದ ಕನಸುಕಂಡಿದ್ದು, ಮುಖ್ಯಮಂತ್ರಿಗಳ ಮನವಿಗೆ ಸ್ಪಂದಿಸಿಮೂರು ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.

ಯರಗಟ್ಟಿಯ ಕರ್ನಾಟಕ ಪಬ್ಲಿಕ್‌ ಶಾಲೆ, ಬೆಲ್ಲದಬಾಗೇವಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಹಾಗೂ ಬಾಡದ ಸರಕಾರಿ ಹಿರಿಯಪ್ರಾಥಮಿಕ ಶಾಲೆಯನ್ನು ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಯೋಜನೆಯಡಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಅಂದಾಜು 290.65 ಲಕ್ಷ ರೂ. ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ.

ಶಾಲೆಯ ಅಭಿವೃದ್ಧಿ ಯೋಜನೆಯಲ್ಲಿ ಹೊಸ ಕೊಠಡಿಗಳ ನಿರ್ಮಾಣ, ಸುಸಜ್ಜಿತ ಶೌಚಾಲಯಗಳು,ವಿಜ್ಞಾನ ಪ್ರಯೋಗಾಲಯಗಳು, ಗ್ರಂಥಾಲಯ, ಭೋಜನಾಲಯ, ಆಟದ ಮೈದಾನ, ಸ್ಮಾರ್ಟ್‌ ಕ್ಲಾಸ್‌ಹಾಗೂ ಕೊಠಡಿಗಳ ದುರಸ್ತಿ ಸೇರ್ಪಡೆಗೊಂಡಿವೆ. ಈಗಇರುವ ಸೌಲಭ್ಯಗಳಲ್ಲೇ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವಶಾಲಾ ಶಿಕ್ಷಕ ಸಿಬ್ಬಂದಿ ಶಾಲೆಗೆ ಆಧುನಿಕ ಸ್ಪರ್ಶ ಕೊಡುವ ಯೋಜನೆಗಳನ್ನು ಎದುರು ನೋಡುತ್ತಿದೆ.

ಕೆಪಿಎಸ್‌ ಯರಗಟ್ಟಿ :

1ರಿಂದ 12 ತರಗತಿಗಳನ್ನು ಹೊಂದಿರುವ ಶಾಲೆಯಲ್ಲಿ 663 ಮಕ್ಕಳಿದ್ದಾರೆ. ಶಾಲೆಗೆ ಕಟ್ಟಡಗಳ ಅಗತ್ಯತೆ ಇದ್ದು, ಏಳು ಕೊಠಡಿಗಳ ನಿರ್ಮಾಣಕ್ಕೆ 77 ಲಕ್ಷ ರೂ. ಕ್ರಿಯಾ ಯೋಜನೆ ಮಾಡಲಾಗಿದೆ. ಇದಲ್ಲದೆ ಮೂರು ಲಕ್ಷ ರೂ.ವೆಚ್ಚದಲ್ಲಿ ಹೈಟೆಕ್‌ ಶೌಚಾಲಯಗಳು, 6 ಲಕ್ಷ ರೂ. ವೆಚ್ಚದಲ್ಲಿ 4 ಸ್ಮಾರ್ಟ್‌ ಕ್ಲಾಸ್‌ಗಳ ನಿರ್ಮಾಣ, 11 ಲಕ್ಷ ರೂ. ವೆಚ್ಚದಲ್ಲಿ ಗ್ರಂಥಾಲಯ ಕೊಠಡಿಹಾಗೂ ಪುಸ್ತಕಗಳ ಖರೀದಿ, 4 ಲಕ್ಷ ರೂ. ಗಳಲ್ಲಿ ವಿಜ್ಞಾನ ಪ್ರಯೋಗಾಲಯ ಸಾಮಗ್ರಿಗಳನ್ನು ಖರೀದಿ ಮಾಡಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಸಭಾಭವನ ನಿರ್ಮಾಣಕ್ಕೆ 12 ಲಕ್ಷ ರೂ. ಮತ್ತು 3.50 ಲಕ್ಷ ರೂ. ವೆಚ್ಚದಲ್ಲಿ ಭೋಜನಾಲಯ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

ಎಲ್‌ಕೆಜಿಯಿಂದ ಹಿಡಿದು 12ನೇ ತರಗತಿವರೆಗೆ ಈಗ ಮಕ್ಕಳ ಸಂಖ್ಯೆ 1000ಕ್ಕೆ ತಲುಪಿದೆ. ಅದಕ್ಕೆ ತಕ್ಕಂತೆ ಕೊಠಡಿಗಳಿಲ್ಲ. ಹೀಗಾಗಿ 14 ಕೊಠಡಿಗಳಿಗೆ ಬೇಡಿಕೆ ಸಲ್ಲಿಸಿದ್ದೇವೆ. ಇದರ ಜತೆಗೆ ಶಾಲೆಗೆ ಅಡುಗೆ ಸಾಮಗ್ರಿಗಳ ಅಗತ್ಯತೆ ಇದೆ. ಮಕ್ಕಳಿಗೆ ಹೈಟೆಕ್‌ಶೌಚಾಲಯ, ಏಳು ಸ್ಮಾರ್ಟ್‌ ಕ್ಲಾಸ್‌ ಕೊಠಡಿಗಳ ಬೇಡಿಕೆ ಸಲ್ಲಿಸಲಾಗಿದೆ.  –ಎಸ್‌.ಎ. ಸರಿಕರ, ಮುಖ್ಯಾಧ್ಯಾಪಕ

ಹಿರಿಯ ಪ್ರಾಥಮಿಕ ಶಾಲೆ ಬಾಡ :  321 ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯಲ್ಲಿ1ರಿಂದ 7 ತರಗತಿಗಳಿವೆ. 21 ಲಕ್ಷ ರೂ. ವೆಚ್ಚದಲ್ಲಿಎರಡು ಹೊಸ ಕೊಠಡಿಗಳ ನಿರ್ಮಾಣಮಾಡಲಾಗುತ್ತಿದೆ. ವಿಜ್ಞಾನ ಪ್ರಯೋಗಾಲಯ ಕಟ್ಟಡಮತ್ತು ಸಾಮಗ್ರಿಗಳಿಗೆ 25 ಲಕ್ಷ ರೂ. ಕ್ರಿಯಾಯೋಜನೆ ಸಿದ್ಧವಾಗಿದೆ. ಇದಲ್ಲದೆ 17 ಲಕ್ಷ ರೂ. ವೆಚ್ಚದಲ್ಲಿಗ್ರಂಥಾಲಯ ಕೊಠಡಿ ಮತ್ತು ಪುಸ್ತಕಗಳನ್ನು ಒದಗಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ.

ಶಾಲೆಯ ಅಭಿವೃದ್ಧಿಗೆ ಸುಮಾರು 60 ಲಕ್ಷಕ್ಕೂ ಹೆಚ್ಚು ಯೋಜನಾ ವೆಚ್ಚದ ಕ್ರಿಯಾಯೋಜನೆಯನ್ನು ಶಾಸಕರು ಹಾಗೂ ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿದೆ. ಅದರಲ್ಲಿ ತುರ್ತಾಗಿ ಹೈಟೆಕ್‌ ಶೌಚಾಲಯ, ಗ್ರಂಥಾಲಯ, ಆಟದ ಮೈದಾನ ಹಾಗೂ ಹೊಸ ಕೊಠಡಿಗಳ ನಿರ್ಮಾಣಮಾಡಿಕೊಡುವಂತೆ ಮನವಿ ಮಾಡಲಾಗಿದೆ. –ವರುಣ ಪಾಟೀಲ, ಮುಖ್ಯಾಧ್ಯಾಪಕ

ಹಿ.ಪ್ರಾ.ಗಂ. ಶಾಲೆ ಬೆಲ್ಲದ ಬಾಗೇವಾಡಿ :

ಒಂದರಿಂದ 7ನೇ ತರಗತಿಗಳನ್ನು ಹೊಂದಿರುವ ಶಾಲೆಯಲ್ಲಿ 156 ಮಕ್ಕಳಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು 95.25 ಲಕ್ಷ ರೂ. ಕ್ರಿಯಾಯೋಜನೆ ಸಿದ್ಧಪಡಿಸಿಸರ್ಕಾರಕ್ಕೆ ಕಳಿಸಲಾಗಿದೆ. ಇದರಲ್ಲಿ ನಾಲ್ಕು ಹೊಸ ಕೊಠಡಿಗಳ ಅಗತ್ಯತೆಇದ್ದು, ಇದಕ್ಕಾಗಿ 44 ಲಕ್ಷ ರೂ. ಕ್ರಿಯಾಯೋಜನೆ, ಇದಲ್ಲದೆ 4 ಲಕ್ಷರೂ. ದಲ್ಲಿ 10 ಗಣಕಯಂತ್ರ, 3 ಲಕ್ಷದಲ್ಲಿ ಶುದ್ಧ ಕುಡಿಯುವ ನೀರಿನಘಟಕ, 11.50 ಲಕ್ಷ ರೂ. ವೆಚ್ಚದಲ್ಲಿ ಸಭಾಭವನ ಹಾಗೂ ವಿದ್ಯುತ್‌ಸೌಲಭ್ಯ, 11 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್‌ ವಿಜ್ಞಾನ ಪ್ರಯೋಗಾಲಯ ಮಾಡಲು ಉದ್ದೇಶಿಸಲಾಗಿದೆ.

ಶಾಲೆಯ ಕೊಠಡಿಗಳು ಬಹಳ ಹಳೆಯದಾಗಿರುವುದರಿಂದ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂಬ ಚಿಂತನೆಯನ್ನು ಶಾಸಕರು ನಡೆಸಿದ್ದಾರೆ. ಮುಖ್ಯವಾಗಿ ಈಗ ಕೊಠಡಿಗಳ ದುರಸ್ತಿ ಆಗಬೇಕು. ಶಾಲಾ ಗೋಡೆ ನಿರ್ಮಾಣ,ಸಭಾಭವನ ಹಾಗೂ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಮನವಿ ಮಾಡಿದ್ದೇವೆ.  –ಪ್ರದೀಪ ಕುಮಾರ ರಾಯ್ಕರ, ಮುಖ್ಯಾಧ್ಯಾಪಕ

 

ಸರ್ಕಾರದ ಯೋಜನೆ ಹಾಗೂ ಅನುದಾನವನ್ನು ಶಿಕ್ಷಣ ಸೇರಿದಂತೆವಿವಿಧ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿಶಾಲೆಗಳ ಅಭಿವೃದ್ಧಿಗೆ ವಿಶೇಷಗಮನ ಹರಿಸಲಾಗಿದೆ. ಬೇಡಿಕೆಗಳಿಗೆ ಅನುಗುಣವಾಗಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಸರ್ಕಾರದ ಅನುದಾನದಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಉಮೇಶ ಕತ್ತಿ, ಹುಕ್ಕೇರಿ ಶಾಸಕ

 

-ಕೇಶವ ಆದಿ

ಟಾಪ್ ನ್ಯೂಸ್

ಭಾರತಕ್ಕೆ ಬವುಮ-ಡುಸೆನ್‌ ಶತಕದ ಏಟು

ಭಾರತಕ್ಕೆ ಬವುಮ-ಡುಸೆನ್‌ ಶತಕದ ಏಟು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ

ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

ಸ್ಪೆಕ್ಟ್ರಂ ಬಾಕಿ 30,791 ಕೋಟಿ ಕೊಟ್ಟ ರಿಲಯನ್ಸ್‌ ಜಿಯೋ

ಸ್ಪೆಕ್ಟ್ರಂ ಬಾಕಿ 30,791 ಕೋಟಿ ಕೊಟ್ಟ ರಿಲಯನ್ಸ್‌ ಜಿಯೋ

ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್‌

ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶತಮಾನ ಪೂರೈಸಿದ ಶಾಲೆಗಳಿಗೆ ಅನುದಾನ

ಶತಮಾನ ಪೂರೈಸಿದ ಶಾಲೆಗಳಿಗೆ ಅನುದಾನ

ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆ ಮಾಡಿ

ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆ ಮಾಡಿ

ಬೆಳಗಾವಿ ಜಿಲ್ಲೆಯ 57 ಪೊಲೀಸ್ ಪೇದೆಗಳಿಗೆ ಪಾಸಿಟಿವ್

ಬೆಳಗಾವಿ ಜಿಲ್ಲೆಯ 57 ಪೊಲೀಸ್ ಪೇದೆಗಳಿಗೆ ಪಾಸಿಟಿವ್

ಮಾಸ್ಕ್ ಹಾಕಬೇಕೆಂದು ನನಗೆ ಅನಿಸಿಲ್ಲ, ಹಾಕಲ್ಲ: ಸಚಿವ ಕತ್ತಿ ಉಡಾಫೆ

ಮಾಸ್ಕ್ ಹಾಕಬೇಕೆಂದು ನನಗೆ ಅನಿಸಿಲ್ಲ, ಹಾಕಲ್ಲ: ಸಚಿವ ಕತ್ತಿ ಉಡಾಫೆ ಉತ್ತರ

ಶೇ.33 ಅರಣ್ಯಪ್ರದೇಶ ವಿಸ್ತರಣೆ: ಕತ್ತಿ

ಶೇ.33 ಅರಣ್ಯಪ್ರದೇಶ ವಿಸ್ತರಣೆ: ಕತ್ತಿ

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

ಭಾರತಕ್ಕೆ ಬವುಮ-ಡುಸೆನ್‌ ಶತಕದ ಏಟು

ಭಾರತಕ್ಕೆ ಬವುಮ-ಡುಸೆನ್‌ ಶತಕದ ಏಟು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ

ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.