Udayavni Special

ಮರಾಠಿಗರ ಹೆಗಲ ಮೇಲೆ ಬಂದೂಕಿಟ್ಟ ಶಿವಸೇನೆ: ಫಡ್ನವೀಸ್‌


Team Udayavani, Apr 16, 2021, 9:25 PM IST

ಕಜಹಯಗತರೆಡ3

ಬೆಳಗಾವಿ : ಮರಾಠಿಗರ ಹೆಗಲ ಮೇಲೆ ಬಂದೂಕು ಇಟ್ಟು ಟಿಪ್ಪು ಸುಲ್ತಾನ್‌ ಕೀ ಜೈ ಎನ್ನುವವರ(ಕಾಂಗ್ರೆಸ್‌) ಕೊರಳಿಗೆ ಹಾರ ಹಾಕಲು ಶಿವಸೇನೆ ಮುಂದಾಗಿದೆ. ಇದಕ್ಕೆ ನಮ್ಮ ಮರಾಠಿಯ ಹೆಗಲು ಯಾವಾಗಲೂ ನಿಮಗೆ ಸಾಥ್‌ ನೀಡುವುದಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ ಎಚ್ಚರಿಕೆ ನೀಡಿದರು.

ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಗುರುವಾರ ನಡೆದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಜತೆ ಶಿವಸೇನೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಬೆಳಗಾವಿಯ ಮರಾಠಿಗರ ಹೆಗಲ ಮೇಲೆ ಬಂದೂಕು ಇಟ್ಟು ಬಿಜೆಪಿಗೆ ಗುಂಡು ಹಾರಿಸಿ ಕಾಂಗ್ರೆಸ್‌ ಬೆಂಬಲಿಸಲು ಶಿವಸೇನೆಯ ಸಂಜಯ ರಾವುತ್‌ ಕುತಂತ್ರ ನಡೆಸಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಟಿಪ್ಪು ಜಯಂತಿ ರದ್ದುಗೊಳಿಸಿದೆ. ಆದರೆ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸುವ ಕಾಂಗ್ರೆಸ್‌ ಜತೆ ಮಹಾರಾಷ್ಟ್ರದಲ್ಲಿ ಶಿವಸೇನೆ ಕೈಜೋಡಿಸಿದೆ. ಸಂಜಯ ರಾವುತ್‌ ಮರಾಠಿ ಮನುಷ್ಯನ ಬೆನ್ನಿಗೆ ನಿಲ್ಲಲು ಬಂದಿರುವುದಾಗಿ ಹೇಳಿದ್ದರು. ಆದರೆ ಅದರ ಹಿಂದಿನ ಅಸಲಿಯತ್ತು ಬೇರೆ ಇದೆ. ಕಾಂಗ್ರೆಸ್‌ಗೆ ಲಾಭ ಮಾಡಲು ಮತ ವಿಭಜನೆಗೆಂದು ಆಗಮಿಸಿದ್ದರು. ಬಾಳಾಸಾಹೇಬ ಠಾಕ್ರೆ ಅವರ ಶಿವಸೇನೆ ಈಗ ಮಹಾರಾಷ್ಟ್ರದಲ್ಲಿ ಉಳಿದಿಲ್ಲ. ಮತ ಬ್ಯಾಂಕ್‌ಗಾಗಿ ಅಧಿ ಕಾರದ ದುರಾಸೆಗಾಗಿ ಶಿವಸೇನೆ ಏನೇನೋ ಮಾಡಲು ಹೊರಟಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯು ಉರ್ದು ಭಾಷೆಯಲ್ಲಿ ಕ್ಯಾಲೆಂಡರ್‌ ಮುದ್ರಿಸಿದೆ. ಅದರಲ್ಲಿ ಜನಾಬ್‌ ಬಾಳಾಸಾಹೇಬ ಠಾಕ್ರೆ ಎಂದು ಬರೆದಿದೆ. ಜತೆಗೆ ಆಜಾನ್‌ ಸ್ಪರ್ಧೆ ಹಮ್ಮಿಕೊಂಡಿದೆ.

ಉದ್ಧವ ಠಾಕ್ರೆ ಸರ್ಕಾರ ಇನ್ನು ಮುಂದೆ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಲಿದೆ ಎಂದರು. ಛತ್ರಪತಿ ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ್‌ ನಿರ್ಮಾಣಕ್ಕಾಗಿ ಹೋರಾಡಿದ್ದಾರೆ. ಇಲ್ಲಿಯ ಮರಾಠಿ ಭಾಷಿಕರು ಅಪ್ಪಟ ಹಿಂದುತ್ವವಾದಿಗಳಾಗಿದ್ದಾರೆ. ಮರಾಠಿಗರು ಅಮಾಯಕರೇ ಹೊರತು ಮೂರ್ಖರಲ್ಲ. ಉಪಚುನಾವಣೆಯಲ್ಲಿ ಎಂಇಎಸ್‌ ಹಾಗೂ ಸಂಜಯ ರಾವುತ್‌ಗೆ ಬೆಳಗಾವಿ ಮರಾಠಿ ಭಾಷಿಕ ಮತದಾರರು ಪಾಠ ಕಲಿಸಲಿದ್ದಾರೆ. ಬೆಳಗಾವಿ ಮರಾಠಿ ಭಾಷಿಕರ ಮೇಲೆ ರಾವುತ್‌ ನಕಲಿ ಪ್ರೀತಿ ತೋರಿಸುತ್ತಿದ್ದಾರೆ ಎಂದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಮಾತನಾಡಿದರು. ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಸ್ವಾಗತಿಸಿದರು. ಸಚಿವರಾದ ಜಗದೀಶ ಶೆಟ್ಟರ, ಉಮೇಶ ಕತ್ತಿ, ಮುರುಗೇಶ ನಿರಾಣಿ, ಶಾಸಕ ಅನಿಲ ಬೆನಕೆ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಮುಖಂಡರಾದ ರಾಜೇಂದ್ರ ನೇರ್ಲಿ, ಉಜ್ವಲಾ ಬಡವನಾಚೆ, ಜಗದೀಶ ಹಿರೇಮನಿ, ಶಶಿಕಾಂತ ಪಾಟೀಲ, ಶಿವಾಜಿ ಸುಂಠಕರ, ಮನೋಹರ ಕಡೋಲ್ಕರ ಇತರರು ಇದ್ದರು.

ಟಾಪ್ ನ್ಯೂಸ್

7th pay commission central may announce da hike for central govt employees in june-2021

ಕೇಂದ್ರ ನೌಕರರ ಡಿಎ ಹೆಚ್ಚಳ ಮತ್ತೆ ವಿಳಂಬ..!?

rterrr

ಕೋವಿಡ್ ಸಂಕಷ್ಟಕ್ಕೆ ಮಿಡಿದ ತಲೈವಾ : ಒಂದು ಕೋಟಿ ರೂ. ನೆರವು ನೀಡಿದ ರಜನಿ

ಅಫ್ಘಾನಿಸ್ತಾನ್: ಕಾಬೂಲ್ ಮಸೀದಿಯೊಳಗೆ ಬಾಂಬ್ ಸ್ಫೋಟ, ಇಮಾಮ್ ಸೇರಿ 12 ಮಂದಿ ಸಾವು

ಅಫ್ಘಾನಿಸ್ತಾನ್: ಕಾಬೂಲ್ ಮಸೀದಿಯೊಳಗೆ ಬಾಂಬ್ ಸ್ಫೋಟ, ಇಮಾಮ್ ಸೇರಿ 12 ಮಂದಿ ಸಾವು

groww to acquire indiabulls mf for rs 175 cr

ಇಂಡಿಯಾ ಬುಲ್ಸ್‌ ಮ್ಯೂಚುವಲ್‌ ಫಂಡ್‌ ಕಂಪನಿಯ ‘ಗ್ರೋವ್‌’ ದಾಪುಗಾಲು..!?

ಕೋವಿಡ್ 19 “ಅದೃಶ್ಯ ಶತ್ರು”…ಸೋಂಕು ನಿವಾರಣೆಗೆ ಕಠಿಣ ಹೋರಾಟ: ಪ್ರಧಾನಿ ಮೋದಿ

ಕೋವಿಡ್ 19 “ಅದೃಶ್ಯ ಶತ್ರು”…ಸೋಂಕು ನಿವಾರಣೆಗೆ ಕಠಿಣ ಹೋರಾಟ: ಪ್ರಧಾನಿ ಮೋದಿ

gfdffdfv

ಸಾವಿನ ಮನೆಯಲ್ಲಿ ಸಿದ್ದರಾಮಯ್ಯ ರಾಜಕೀಯ: ಕಾರಜೋಳ ಆಕ್ರೋಶ

ಕೋವಿಡ್ ದುರಂತ: ಪೋಷಕರನ್ನು ಕಳೆದುಕೊಂಡ ಕುಟುಂಬ, ಮಕ್ಕಳಿಗೆ ಆರ್ಥಿಕ ನೆರವು; ಕೇಜ್ರಿವಾಲ್

ಕೋವಿಡ್ ದುರಂತ: ಪೋಷಕರನ್ನು ಕಳೆದುಕೊಂಡ ಕುಟುಂಬ, ಮಕ್ಕಳಿಗೆ ಆರ್ಥಿಕ ನೆರವು; ಕೇಜ್ರಿವಾಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gfdsrt

ಅಥಣಿಯಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಿದ ಲಕ್ಷ್ಮಣ ಸವದಿ

Industry sector

ಕೋವಿಡ್‌-19 ಅಟ್ಟಹಾಸಕ್ಕೆ ನೆಲಕಚ್ಚಿದ ಉದ್ಯಮ ವಲಯ

ಹಿರಿಯ ಪತ್ರಕರ್ತ, ಕಾಂಗ್ರೆಸ್ ಮುಖಂಡ ಪ್ರಕಾಶ ದೇಶಪಾಂಡೆ  ಇನ್ನಿಲ್ಲ!

ಹಿರಿಯ ಪತ್ರಕರ್ತ, ಕಾಂಗ್ರೆಸ್ ಮುಖಂಡ ಪ್ರಕಾಶ ದೇಶಪಾಂಡೆ ಇನ್ನಿಲ್ಲ!

ghgffgf

ಬೇಸಿಗೆ ಬರ ನೀಗಿಸಿದ ಕೃಷ್ಣೆಯ ಒಡಲು

hfghfhrtyt

ಹಳ್ಳಿ  ಸೇರಿದ ಜನರ ಕೈ ಹಿಡಿದ ನರೇಗಾ

MUST WATCH

udayavani youtube

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ

udayavani youtube

ಸರ್ಕಾರ ಚಿತ್ರರಂಗದ ಕೈ ಹಿಡಿಯಲಿ

udayavani youtube

ಮರವಂತೆಯಲ್ಲಿ‌ ತೀವ್ರಗೊಂಡ‌ ಕಡಲ್ಕೊರೆತ

udayavani youtube

ಸ್ವ್ಯಾಬ್ ಕಲಕ್ಷನ್​ಗೆ ಬಂದ ಆರೋಗ್ಯ ಸಿಬ್ಬಂದಿ ಮೇಲೆ ಅವಾಜ್​ ಹಾಕಿದ ವ್ಯಕ್ತಿ

udayavani youtube

ರಾಬರ್ಟ್ ಚಿತ್ರ Tonic ಆಯ್ತು

ಹೊಸ ಸೇರ್ಪಡೆ

7th pay commission central may announce da hike for central govt employees in june-2021

ಕೇಂದ್ರ ನೌಕರರ ಡಿಎ ಹೆಚ್ಚಳ ಮತ್ತೆ ವಿಳಂಬ..!?

rterrr

ಕೋವಿಡ್ ಸಂಕಷ್ಟಕ್ಕೆ ಮಿಡಿದ ತಲೈವಾ : ಒಂದು ಕೋಟಿ ರೂ. ನೆರವು ನೀಡಿದ ರಜನಿ

ಅಫ್ಘಾನಿಸ್ತಾನ್: ಕಾಬೂಲ್ ಮಸೀದಿಯೊಳಗೆ ಬಾಂಬ್ ಸ್ಫೋಟ, ಇಮಾಮ್ ಸೇರಿ 12 ಮಂದಿ ಸಾವು

ಅಫ್ಘಾನಿಸ್ತಾನ್: ಕಾಬೂಲ್ ಮಸೀದಿಯೊಳಗೆ ಬಾಂಬ್ ಸ್ಫೋಟ, ಇಮಾಮ್ ಸೇರಿ 12 ಮಂದಿ ಸಾವು

groww to acquire indiabulls mf for rs 175 cr

ಇಂಡಿಯಾ ಬುಲ್ಸ್‌ ಮ್ಯೂಚುವಲ್‌ ಫಂಡ್‌ ಕಂಪನಿಯ ‘ಗ್ರೋವ್‌’ ದಾಪುಗಾಲು..!?

may_13_tmk_ph_02______1305bg_2

ಹೋಂ ಕ್ವಾರಂಟೈನ್‌: ಮನೆಮಂದಿಗೆಲ್ಲ ಸೋಂಕು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.