
ನೆರೆ ನೀರಿನಲ್ಲೇ ಭರ್ಜರಿ ಡಿಜೆ ಡ್ಯಾನ್ಸ್…!
Team Udayavani, Aug 8, 2019, 3:29 PM IST

ಬೆಳಗಾವಿ: ಭಾರೀ ನೆರೆ ಮತ್ತು ಮಳೆಗೆ ಉತ್ತರ ಕರ್ನಾಟಕ ತತ್ತರಿಸಿದೆ. ಇಲ್ಲಿನ ಬಹುತೇಕ ಜಿಲ್ಲಗಳ ಹಲವಾರು ಭಾಗಗಳಲ್ಲಿ ನೆರೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇಷ್ಟು ಮಾತ್ರವಲ್ಲದೇ ಜನ ಮತ್ತು ಜಾನುವಾರುಗಳಿಗೆ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುವುದೂ ಸಹ ಅನಿವಾರ್ಯವಾಗಿದೆ.
ಪರಿಸ್ಥಿತಿ ಹೀಗಿದ್ದರೂ ಕೆಲವು ಕಡೆಗಳಲ್ಲಿ ಜನರು ನೆರೆ ನೀರಿನಲ್ಲಿ ನಾನಾ ರೀತಿಯ ಮೋಜು ಮಸ್ತಿಗಳನ್ನು ಮಾಡುತ್ತಿರುವ ವರದಿಗಳು ಲಭ್ಯವಾಗುತ್ತಿವೆ. ಮೊನ್ನೆ ತಾನೆ ರಾಯಚೂರಿನಲ್ಲಿ ಕೃಷ್ಣಾ ನದಿಯ ನೆರೆ ನೀರಿನಲ್ಲಿ ಈಜು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮತ್ತು ಇನ್ನು ಕೆಲವು ಕಡೆಗಳಲ್ಲಿ ಜನರು ನೀರಿಗೆ ಧುಮುಕಿ ಈಜುವ ಮೂಲಕ ಅಪಾಯವನ್ನು ಆಹ್ವಾನಿಸಿಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು.
ಇತ್ತ ಬೆಳಗಾವಿಯಲ್ಲಿ ಕೆಲವು ಯುವಕರು ನೆರೆ ನೀರಿನಲ್ಲಿ ಮಳೆ ಸುರಿಯುತ್ತಿರುವ ಸಂದರ್ಭದಲ್ಲೇ ಡಿಜೆ ಹಾಕಿ ಕುಣಿದಿದ್ದು ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ನಿಪ್ಪಾಣಿ-ಕೊಲ್ಹಾಪುರ ರಾಷ್ಟ್ರೀಯ ಹೆದ್ದಾರಿಯ ಯಮಗರ್ಣಿ ಗ್ರಾಮದ ಯುವಕರು ಈ ರೀತಿಯಾಗಿ ನೆರೆ ನೀರಿನಲ್ಲಿ ಡಿಜೆ ಹಾಕಿ ಕುಣಿಯುವ ಮೂಲಕ ಸುದ್ದಿಯಾಗಿದ್ದಾರೆ.
#WATCH: Locals dance on waterlogged National Highway (Nippani-Kolhapur Road) in Yamagarni village, Belagavi. #KarnatakaFloods pic.twitter.com/JFHfwGNNzR
— ANI (@ANI) August 8, 2019
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ; ಅಧಿಕಾರಕ್ಕೆ ಬಂದ ಕೂಡಲೇ ವಿಶೇಷ ಅನುದಾನ: ಸಿದ್ದರಾಮಯ್ಯ

360 ಡಿಗ್ರಿ ಬ್ರ್ಯಾಂಡಿಂಗ್ ಪ್ರಚಾರ ನಡೆಸಲು ಕಾಂಗ್ರೆಸ್ ಮುಖಂಡರಿಗೆ ಟಾಸ್ಕ್

ಪ್ರತಿಪಕ್ಷದ ನಾಯಕರನ್ನು ಹೀಗಳೆದಾಗ ಭಾರತದ ಗೌರವಕ್ಕೆ ಧಕ್ಕೆ ಉಂಟಾಗುವುದಿಲ್ಲವೇ : ಸಿದ್ದರಾಮಯ್ಯ

ಬೆಂಗಳೂರು ಏರೋ ಇಂಡಿಯಾ ಶೋ ; ಮಾಂಸ ಮಾರಾಟ ಬಂದ್

ದಾಖಲೆ ಸಮೇತ ದೂರು ನೀಡಿದರೆ ದೂರುದಾರಿಗೂ ರಕ್ಷಣೆ : ಲೋಕಾಯುಕ್ತ ಪಾಟೀಲ್
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
