Udayavni Special

ವಾರ್ಡ್‌ವಾರು ಮಾರುಕಟ್ಟೆ ಸ್ಥಾಪನೆಗೆ ಚಿಂತನೆ

ಜನರಿಗೆ ಅನುಕೂಲ ಮಾಡಿಕೊಡಲು ಚರ್ಚೆ­ಹಳೇ ವ್ಯವಸ್ಥೆಗೆ ಹೊಸ ರೂಪ ಕೊಡುವ ಪ್ರಯತ್ನ

Team Udayavani, May 12, 2021, 11:54 AM IST

kyujfghy

ವರದಿ : ಕೇಶವ ಆದಿ

ಬೆಳಗಾವಿ: ಕೊರೊನಾ ಹಾವಳಿ ಅದರಲ್ಲೂ ಎರಡನೇ ಅಲೆಯ ಪ್ರಭಾವ ಸುಧಾರಣೆಯ ವಿಚಾರದಲ್ಲಿ ಹಲವಾರು ಸಕಾರಾತ್ಮಕ ಚಿಂತನೆಗಳಿಗೆ ದಾರಿ ಮಾಡಿಕೊಟ್ಟಿದೆ. ಅಭಿವೃದ್ಧಿ ಹಾಗೂ ಬದಲಾವಣೆಯಲ್ಲಿ ಹೊಸ ವಿಚಾರಗಳು ಜೀವ ತಳೆದಿವೆ.

ಹಳೆಯ ವ್ಯವಸ್ಥೆಗಳಿಗೆ ಹೊಸ ರೂಪ ಕೊಡುವ ಹಾಗೂ ಜನರಿಗೆ ಅನುಕೂಲ ಮಾಡಿಕೊಡುವ ಚರ್ಚೆ ಮತ್ತು ಪ್ರಯತ್ನಗಳು ನಡೆದಿವೆ. ಇದಕ್ಕೆ ನಗರ ಪ್ರದೇಶಗಳಲ್ಲಿ ವಾರ್ಡ್‌ವಾರು ಮಾರುಕಟ್ಟೆ ಸ್ಥಾಪನೆ ವಿಚಾರ ಹೊಸ ಸೇರ್ಪಡೆ. ಒಂದೇ ಕಡೆ ಜನ ಸೇರುವುದನ್ನು ತಪ್ಪಿಸಿ ಅವರಿಗೆ ಇನ್ನೂ ಹೆಚ್ಚಿನ ಅನುಕೂಲ ಮಾಡಿಕೊಡುವ ಉದ್ದೇಶದಿಂದ ವಾರ್ಡ್‌ವಾರು ತರಕಾರಿ, ಹಣ್ಣು ಮಾರಾಟ ಮಾರುಕಟ್ಟೆ ನಿರ್ಮಾಣ ಚಿಂತನೆ ಈಗ ಚರ್ಚೆಗೆ ಬಂದಿದೆ. ಅಧಿಕಾರಿಗಳೂ ಸಹ ಈ ನಿಟ್ಟಿನಲ್ಲಿ ವಿಚಾರ ಮಾಡುತ್ತಿರುವುದು ಬದಲಾವಣೆಯ ಸಂಕೇತ ಎನ್ನಬಹುದು. ಇದಕ್ಕೆ ಪೂರಕವಾಗಿ ಕೋವಿಡ್‌-19 ನಿಯಂತ್ರಣ ಹಿನ್ನೆಲೆಯಲ್ಲಿ ಈಗ ಕೊರೊನಾ ಕರ್ಫ್ಯೂ ಜಾರಿಯಲ್ಲಿರುವುದರಿಂದ ಬೆಳಗಾವಿ ನಗರದ ಎಲ್ಲ ವಾರ್ಡ್‌ಗಳಲ್ಲಿ ತರಕಾರಿ, ಹಣ್ಣು, ಹೂವು ಮಾರಾಟ ಮಾಡಲು ತೋಟಗಾರಿಕೆ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಜಿಲ್ಲಾ ಹಾಪ್‌ಕಾಮ್ಸ್‌, ರೈತ ಉತ್ಪಾದಕ ಸಂಸ್ಥೆ ಮುಂದಾಗಿವೆ.

ಇದರಿಂದ ಮುಖ್ಯ ಮಾರುಕಟ್ಟೆಗಳಲ್ಲಿ ಅನಗತ್ಯ ಜನಜಂಗುಳಿ ತಪ್ಪಿಸುವುದು ಇದರ ಮುಖ್ಯ ಉದ್ದೇಶ. ಬೆಳಗಾವಿಯ ನಗರದಲ್ಲಿ 58 ವಾರ್ಡ್‌ಗಳಿವೆ. ಎಲ್ಲ ವಾರ್ಡ್‌ಗಳಿಗೆ ಅಲ್ಲಿನ ಬೇಡಿಕೆಗಳಿಗೆ ಅನುಗುಣವಾಗಿ ಸಣ್ಣ ಪ್ರಮಾಣದ ಮಾರುಕಟ್ಟೆ ಮಾಡಿದರೆ ದೊಡ್ಡ ಮಾರುಕಟ್ಟೆಯ ಮೇಲಿನ ಒತ್ತಡ ತಾನಾಗೇ ಕಡಿಮೆಯಾಗುತ್ತದೆ. ಅದರಲ್ಲೂ ಹಬ್ಬದ ಸಮಯದಲ್ಲಂತೂ ಇದು ಇನ್ನೂ ಅನುಕೂಲವಾಗುತ್ತದೆ. ಇದೆಲ್ಲದರ ಜೊತೆಗೆ ಪಾಲಿಕೆಯ ಆದಾಯದಲ್ಲೂ ಇದು ಮಹತ್ವದ ಪಾತ್ರ ನಿರ್ವಹಿಸುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ನಾಲ್ಕೈದು ಹೆಜ್ಜೆ ಮುಂದಿಟ್ಟಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅಗತ್ಯವಿರುವ ಕಡೆ ತರಕಾರಿ ಹಾಗೂ ಹಣ್ಣಿನ ಮಾರುಕಟ್ಟೆ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಮೂರ್‍ನಾಲ್ಕು ತಿಂಗಳಲ್ಲಿ ಈ ಹೊಸ ಮಾರುಕಟ್ಟೆಗಳು ಬೆಳಗಾವಿ ಜನರ ಸೇವೆಗೆ ಸಮರ್ಪಣೆಯಾಗಲಿವೆ. ಮಾರುಕಟ್ಟೆ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣವಾಗಬೇಕು. ಇದರಿಂದ ರೈತರಿಗೆ, ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದೆ. ದಿನನಿತ್ಯ ವೇಗವಾಗಿ ಬೆಳೆಯುತ್ತಿರುವ ಬೆಳಗಾವಿಯಲ್ಲಿ ಹೊಸ ಬದಲಾವಣೆಯ ಅಗತ್ಯವಿದೆ.

ಒಂದೇ ಮಾರುಕಟ್ಟೆಯಲ್ಲಿ ಹೆಚ್ಚಿನ ಜನದಟ್ಟಣೆ ತಪ್ಪಿಸಬೇಕು. ಹತ್ತಿರದಲ್ಲೇ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಣ್ಣಸಣ್ಣ ಮಾರುಕಟ್ಟೆಗಳ ಸ್ಥಾಪನೆ ಅಗತ್ಯವಾಗಿದೆ. ಇದಕ್ಕೆ ಜಾಗದ ಸಮಸ್ಯೆ ಏನಿಲ್ಲ. ಆದರೆ ಸ್ವತ್ಛತೆಯ ಕಡೆಗೆ ಗಮನ ಹರಿಸಬೇಕು ಎಂಬುದು ಶಾಸಕರ ಅಭಿಪ್ರಾಯ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಸ್ಥಾಪನೆಯಾಗುತ್ತಿರುವ ಮಾರುಕಟ್ಟೆಯಲ್ಲಿ ಪ್ರತಿಶತ 60ರಿಂದ 70ರಷ್ಟು ಅಂಗಡಿಗಳನ್ನು ತರಕಾರಿಗೆ ಮೀಸಲಿಡಲು ಉದ್ದೇಶಿಸಲಾಗಿದೆ. ಪ್ರತಿ ಅಂಗಡಿಗೆ 50 ಸಾವಿರ ರೂ. ವೆಚ್ಚ ಬರಲಿದ್ದು, ಅದನ್ನು ಶೂನ್ಯ ಬಡ್ಡಿ ದರದ ಸಾಲದಲ್ಲಿ ವ್ಯಾಪಾರಿಗಳಿಗೆ ಹಂಚಿಕೆ ಮಾಡಲಾಗುವುದು. ಈ ಮಾರುಕಟ್ಟೆಗೆ ಸರಕಾರದಿಂದ ಎಲ್ಲ ರೀತಿಯ ಸೌಲಭ್ಯ ಒದಗಿಸುವ ಯೋಜನೆ ರೂಪಿಸಲಾಗಿದೆ.

ಟಾಪ್ ನ್ಯೂಸ್

ಚುನಾವಣೆಯಲ್ಲಿ ಭರ್ಜರಿ ಜಯ: ಇರಾನ್ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಆಯ್ಕೆ

ಚುನಾವಣೆಯಲ್ಲಿ ಭರ್ಜರಿ ಜಯ: ಇರಾನ್ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಆಯ್ಕೆ

Minister Aravind  Limbavali

ತ್ಯಾಜ್ಯ ನಿರ್ವಹಣೆಯಲ್ಲಿ ಲೋಪವಾದರೆ, ಸಂಬಂಧಪಟ್ಟವರ ಮೇಲೆ ಕ್ರಮ : ಸಚಿವ ಲಿಂಬಾವಳಿ ಎಚ್ಚರಿಕೆ

Minister Basavaraj Bommai On River Krishna water sharing with Maharashtra

ಕೃಷ್ಣಾ ನದಿ ನೀರು ಹಂಚಿಕೆ : ಅಂತಿಮ ಅಧಿಸೂಚನೆಗೆ ಕರ್ನಾಟಕ-ಮಹಾರಾಷ್ಟ್ರ ಜಂಟಿ ಪ್ರಯತ್ನ

ವಿಟ್ಲ:  ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪಿಕಪ್ ವಾಹನ

ವಿಟ್ಲ:  ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪಿಕಪ್ ವಾಹನ

Maharashtra: Former minister Sunil Deshmukh quits BJP, joins Congress on Rahul Gandhi’s birthday

ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಮಹಾರಾಷ್ಟ್ರದ ಮಾಜಿ ಸಚಿವ ಸುನಿಲ್ ದೇಶ್ ಮುಖ್..!

ಉತ್ತರಪ್ರದೇಶ: ಮಾಜಿ ಐಎಎಸ್ ಅಧಿಕಾರಿ ಎ.ಕೆ.ಶರ್ಮಾ ಬಿಜೆಪಿಯ ನೂತನ ಉಪಾಧ್ಯಕ್ಷರಾಗಿ ಆಯ್ಕೆ

ಉತ್ತರಪ್ರದೇಶ: ಮಾಜಿ ಐಎಎಸ್ ಅಧಿಕಾರಿ ಎ.ಕೆ.ಶರ್ಮಾ ಬಿಜೆಪಿಯ ನೂತನ ಉಪಾಧ್ಯಕ್ಷರಾಗಿ ಆಯ್ಕೆ

The world health organization says new species of coronavirus are spreading across the world data are available variant concern virus origin

ಕೋವಿಡ್ ಹೊಸ ರೂಪಾಂತರಿ ‘ಲಾಂಡಾ’ 29 ದೇಶಗಳಲ್ಲಿ ಪತ್ತೆ : ವಿಶ್ವ ಆರೋಗ್ಯ ಸಂಸ್ಥೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kolara news

ಸಂಕಷ್ಟದಲ್ಲಿರುವವರಿಗೆ ಜೆಡಿಎಸ್‌ ಸಹಾಯಹಸ್ತ

Private hospital doctors, staff protest

ಖಾಸಗಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಪ್ರತಿಭಟನೆ

covid vaccination

ಬಿಳಿಗಿರಿರಂಗನ ಬೆಟ್ಟ ಪ್ರಥಮ ವ್ಯಾಕ್ಸಿನ್ ಯುಕ್ತ ಗ್ರಾಪಂ ಆಗಲಿ

mysore news

ಮನೆ ಮೇಲ್ಚಾವಣಿಯ ಪುಟ್ಟ ಜಾಗದಲ್ಲೇ ಸುಂದರ ಸಸ್ಯಕಾಶಿ

covid vaccination

ಲಸಿಕೆ ವಿರುದ್ಧ ಪ್ರತಿಪಕ್ಷಗಳ ಅಪಪ್ರಚಾರ

MUST WATCH

udayavani youtube

ಕೊರ್ಗಿ : ಡಾ. ರವಿಶಂಕರ್‌ ಶೆಟ್ಟಿ ಅವರಿಂದ ಆಕ್ಸಿಜನ್ ಸಾಂದ್ರಕ ಕೊಡುಗೆ

udayavani youtube

ಸಾಮಾಜಿಕ ಅಂತರವಿಲ್ಲದೆ ಶಿಕ್ಷಕರಿಗೆ ಲಸಿಕಾ ಅಭಿಯಾನ

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

udayavani youtube

ದಿ. ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ

udayavani youtube

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

ಹೊಸ ಸೇರ್ಪಡೆ

kolara news

ಸಂಕಷ್ಟದಲ್ಲಿರುವವರಿಗೆ ಜೆಡಿಎಸ್‌ ಸಹಾಯಹಸ್ತ

Private hospital doctors, staff protest

ಖಾಸಗಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಪ್ರತಿಭಟನೆ

covid vaccination

ಬಿಳಿಗಿರಿರಂಗನ ಬೆಟ್ಟ ಪ್ರಥಮ ವ್ಯಾಕ್ಸಿನ್ ಯುಕ್ತ ಗ್ರಾಪಂ ಆಗಲಿ

ಚುನಾವಣೆಯಲ್ಲಿ ಭರ್ಜರಿ ಜಯ: ಇರಾನ್ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಆಯ್ಕೆ

ಚುನಾವಣೆಯಲ್ಲಿ ಭರ್ಜರಿ ಜಯ: ಇರಾನ್ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಆಯ್ಕೆ

Minister Aravind  Limbavali

ತ್ಯಾಜ್ಯ ನಿರ್ವಹಣೆಯಲ್ಲಿ ಲೋಪವಾದರೆ, ಸಂಬಂಧಪಟ್ಟವರ ಮೇಲೆ ಕ್ರಮ : ಸಚಿವ ಲಿಂಬಾವಳಿ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.