ಸರ್ಕಾರಿ ಶಾಲೆ ಅಭಿವೃದ್ಧಿ ಕನಸಿಗೆ ಮುನ್ನುಡಿ
| ಚಿಕ್ಕೋಡಿ ತಾಲೂಕಿನಲ್ಲಿ 3 ಶಾಲೆ ಆಯ್ಕೆ| 2.83 ಕೋಟಿ ರೂ. ಯೋಜನೆ ಪ್ರಸ್ತಾವನೆ ಸಿದ್ಧ
Team Udayavani, Dec 23, 2020, 6:41 PM IST
ಚಿಕ್ಕೋಡಿ: ಖಾಸಗಿ ಶಾಲೆಗಳ ಹಾಗೇ ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಾಣುವ ಕನಸು ಹೊತ್ತಿರುವ ಶಾಸಕ ಗಣೇಶ ಹುಕ್ಕೇರಿ ಅವರು ಚಿಕ್ಕೋಡಿ ತಾಲೂಕಿನ ಮೂರು ಶಾಲೆಗಳನ್ನುದತ್ತು ಪಡೆದುಕೊಂಡು ಗಡಿಭಾಗದಲ್ಲಿ ಮಾದರಿ ಶಾಲೆಗಳನ್ನಾಗಿ ರೂಪಿಸಲು ಪಣ ತೊಟ್ಟಿದ್ದಾರೆ.
ಶಾಸಕ ಗಣೇಶ ಹುಕ್ಕೇರಿ ಪ್ರತಿನಿಧಿಸುವ ಚಿಕ್ಕೋಡಿ-ಸದಲಗಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಕರ್ನಾಟಕ ಪಬ್ಲಿಕ್‌ಸ್ಕೂಲ್, ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ವಾಳಕಿ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಹೊಸಯಡೂರಶಾಲೆಗಳನ್ನು ಆಯ್ಕೆ ಮಾಡಿಕೊಂಡು ಶಾಸಕರಪ್ರದೇಶಾಭಿವೃದ್ಧಿ ಅನುದಾನದಡಿ ಶಾಲೆಗಳದುರಸ್ತಿಗೆ ಒಟ್ಟು 2.83 ಕೋಟಿ ರೂ.ಯೋಜನೆಯ ಪ್ರಸ್ತಾವನೆ ರೂಪಿಸಿದ್ದಾರೆ.ಚಿಕ್ಕೋಡಿ ಅಭಿವೃದ್ಧಿ ವಿಷಯದಲ್ಲಿ ಮುಂಚೂಣಿಯಲ್ಲೇ ಇದೆ. ರಸ್ತೆ, ಸಮುದಾಯ ಭವನ, ಚರಂಡಿ, ನೀರಾವರಿಯೋಜನೆ ಹೀಗೆ ಹತ್ತು ಹಲವು ಅಭಿವೃದ್ಧಿಕಾರ್ಯಗಳು ಪ್ರಗತಿಯಲ್ಲಿವೆ. ಆದರೆ ನಿರೀಕ್ಷೆಗೆ ತಕ್ಕಷ್ಟು ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಕಾಣಬೇಕಿದೆ.
ಕರ್ನಾಟಕ ಪಬ್ಲಿಕ ಸ್ಕೂಲ್, ಕೇರೂರ-(1.1 ಕೋಟಿ ರೂ. ಯೋಜನೆ):
ಕೇರೂರ ಗ್ರಾಮದಲ್ಲಿ 1ರಿಂದ 12ನೇ ತರಗತಿ ವರೆಗೆ ಕರ್ನಾಟಕ ಪಬ್ಲಿಕ್ ಶಾಲೆ ಆರಂಭವಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕಶಾಲೆ, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪಿಯು ಕಾಲೇಜುಒಳಗೊಂಡು ಕರ್ನಾಟಕ ಪಬ್ಲಿಕ್ ಶಾಲೆ ರಚಿತವಾಗಿದೆ. ಎರಡು ಕ್ಯಾಂಪಸ್‌ದಲ್ಲಿ ಶಾಲೆ ನಡೆಯುತ್ತಿದೆ. ಬಾಲಕ ಮತ್ತು ಬಾಲಕಿಯರಿಗೆಸಮರ್ಪಕ ಶೌಚಾಲಯ, ಕುಡಿವ ನೀರು, ಶಾಲಾ ಕೊಠಡಿಗಳು ನಿರ್ಮಾಣವಾಗಬೇಕಿದೆ. ಶಾಲೆ ಸುತ್ತಮುತ್ತ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಶಾಸಕರು ಮುತುವರ್ಜಿವಹಿಸಬೇಕಿದೆ. 1ರಿಂದ 12ನೇ ತರಗತಿ ವರೆಗೆ 1089 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.ಶಾಲೆ ಅಭಿವೃದ್ಧಿಗೆ ಶಾಸಕ ಗಣೇಶ ಹುಕ್ಕೇರಿ ಅವರು 1.1 ಕೋಟಿ ರೂ. ಅನುದಾನದಲ್ಲಿ ಯೋಜನೆ ರೂಪಿಸಿದ್ದಾರೆ. ಶಾಲಾ ಕಟ್ಟಡ,ಕಲಿಕಾ ಉಪಕರಣಗಳು, ಶಾಶ್ವತ ಕುಡಿಯುವ ನೀರು, ಶೌಚಾಲಯಮತ್ತು ಕಾಂಪೌಂಡ್ ನಿರ್ಮಾಣ ಯೋಜನೆಯಲ್ಲಿ ಒಳಗೊಂಡಿದೆ.ಖಾಸಗಿ ಶಾಲೆಗಳಹಾಗೇ ಸರ್ಕಾರಿಶಾಲೆಗಳು ಪ್ರಗತಿ ಕಾಣಬೇಕು.
ಹೆಚ್ಚು ಮಕ್ಕಳ ಸಂಖ್ಯೆ ಹೊಂದಿರುವ ಕೇರೂರ ಪಬ್ಲಿಕ್ ಶಾಲೆ ಇತರೆ ಶಾಲೆಗಳಿಗಿಂತಮಾದರಿಯಾಗಿದೆ. ಶಾಲೆಗೆ ಬೇಕಾಗಿರುವಸೌಲಭ್ಯ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಲೆಯನ್ನು ಶಾಸಕರು ದತ್ತು ಪಡೆದುಕೊಂಡಿರುವುದು ಸಂತಸ ತಂದಿದೆ. ಶಾಲೆಗೆ ಬೇಕಾಗಿರುವಮತ್ತಷ್ಟು ಬೇಡಿಕೆಗಳನ್ನು ಗ್ರಾಮಸ್ಥರಮುಂದಾಳತ್ವದಲ್ಲಿ ಶಾಸಕರ ಗಮನಕ್ಕೆ ತರಲಾಗುತ್ತದೆ. – ಎಂ.ಆರ್. ಬಾಗಾಯಿ,ಚಿಕ್ಕೋಡಿ: ಕೇರೂರ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್. ಪ್ರಾಚಾರ್ಯ, ಪಪೂ ಕಾಲೇಜು ಕೇರೂರ
ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಹೊಸಯಡೂರ-(82.15 ಲಕ್ಷ ರೂ. ಯೋಜನೆ) :
2019ರಲ್ಲಿ ಕೃಷ್ಣಾ ನದಿ ಪ್ರವಾಹದ ಹೊಡೆತಕ್ಕೆ ನಲುಗಿ ಹೋದ ಹೊಸಯಡೂರದ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆ ಸಂಪೂರ್ಣ ಮುಳುಗಡೆಗೊಂಡಿತ್ತು. ಇದರಿಂದ ಕೊಠಡಿಗಳು ಶಿಥಿಲಾವಸ್ಥೆತಲುಪಿವೆ. 1ರಿಂದ 7ನೇ ತರಗತಿಯಲ್ಲಿ 120ಮಕ್ಕಳು ಓದುತ್ತಿದ್ದಾರೆ. ನದಿ ಬದಿಯಲ್ಲಿ ಇದ್ದರೂ ಮಕ್ಕಳು ಕುಡಿಯುವ ನೀರಿನಿಂದವಂಚಿತರಾಗಿದ್ದು, ಶಾಶ್ವತ ಕುಡಿಯುವ ನೀರಿನಯೋಜನೆ ರೂಪಿಸಲು ಸರ್ಕಾರದ ಮುಂದೆ ಬೇಡಿಕೆ ಇದೆ.ಶಾಲೆಯಲ್ಲಿ ಮೂರು ಕೊಠಡಿ, ಗ್ರಂಥಾಲಯ, ಕುಡಿಯುವನೀರು ಮತ್ತು ಶೌಚಾಲಯ ನಿರ್ಮಾಣ ಮಾಡಲು ಶಾಸಕರು 82.15 ಲಕ್ಷ ರೂ. ಯೋಜನೆ ಸಿದ್ಧಪಡಿಸಿದ್ದಾರೆ.
ಕೃಷ್ಣಾ ನದಿ ಪ್ರವಾಹದಲ್ಲಿ ಮುಳುಗಡೆಗೊಂಡಿದ್ದ ಶಾಲೆಯ ಕಟ್ಟಡ ದುರಸ್ತಿಯಾಗಬೇಕಿದೆ.ಈ ಕುರಿತು ಇಲಾಖೆಗೆ ಮಾಹಿತಿನೀಡಲಾಗಿದೆ. ಶಾಲೆಯನ್ನು ಶಾಸಕರು ದತ್ತು ಪಡೆದಿರುವುದು ಇನ್ನೂನನ್ನ ಗಮನಕ್ಕೆ ಬಂದಿಲ್ಲ. ಕೊಠಡಿನಿರ್ಮಾಣ ಮಾಡಿಕೊಡಬೇಕೆಂದುಶಾಸಕರ ಗಮನಕ್ಕೆ ತರಲಾಗಿದೆ. -ಡಿ.ಎಸ್. ಕಾಂಬಳೆ, ಮುಖ್ಯಾಧ್ಯಾಪಕರು, ಹೊಸಯಡೂರ
ಕನ್ನಡ ಹಿರಿಯ ಪ್ರಾಥಮಿಕ ಶಾಲೆ :
ವಾಳಕಿ-(91.15 ಲಕ್ಷ ರೂ. ಯೋಜನೆ) ಶಾಸಕ ಗಣೇಶ ಹುಕ್ಕೇರಿ ಪ್ರೀತಿಯ ಗ್ರಾಮ ವಾಳಕಿ. ಇಲ್ಲಿನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿಯವರಿಗೆ 485 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಮಳೆ ನೀರಿನಿಂದ ಶಾಲೆ ಶಿಥಿಲಾವಸ್ಥೆ ಕಂಡಿದೆ. ಗ್ರಾಮದಲ್ಲಿ ಮರಾಠಿ ಭಾಷಿಕರು ಇದ್ದರೂ ಕನ್ನಡ ಶಾಲೆಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಶಾಲೆಯ ಅಭಿವೃದ್ಧಿಗೆ ನಾಲ್ಕು ಕೊಠಡಿ ನಿರ್ಮಾಣಕ್ಕೆ 91.15 ಲಕ್ಷ ರೂ. ಯೋಜನೆ ರೂಪಿಸಲಾಗಿದೆ.
ಖಾಸಗಿ ಶಾಲೆಗಳ ಹಾಗೇ ಸರ್ಕಾರಿ ಶಾಲೆಗಳು ಪ್ರಗತಿ ಕಾಣಬೇಕು. ಖಾಸಗಿ ಶಾಲೆಗಳಲ್ಲಿ ಸಿಗುವ ಮೂಲಸೌಲಭ್ಯ ಸರ್ಕಾರಿ ಶಾಲೆಯಲ್ಲಿಯೂ ಸಿಗಲು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಣ ತೊಟ್ಟು ಮಾದರಿ ಶಾಲೆ ನಿರ್ಮಾಣ ಮಾಡಲುಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ.ಶಿಕ್ಷಣ, ಆರೋಗ್ಯ ಮತ್ತು ಕುಡಿಯುವನೀರಿಗೆ ಸರ್ಕಾರ ಆದ್ಯತೆ ಕೊಡಬೇಕು. – ಗಣೇಶ ಹುಕ್ಕೇರಿ, ಶಾಸಕ, ಚಿಕ್ಕೋಡಿ-ಸದಲಗಾ ಕ್ಷೇತ್ರ
-ಮಹಾದೇವ ಪೂಜೇರಿ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಮದುರ್ಗ: ಮಕ್ಕಳಿಗೆ ಕ್ರಿಮಿನಾಶಕ ಕುಡಿಸಿ ದಂಪತಿ ಆತ್ಮಹತ್ಯೆ
ಸಂಡೂರಿನ ವ್ಯಕ್ತಿ ಮೃತಪಟ್ಟಿರುವುದು ಕೋವಿಡ್ ಲಸಿಕೆಯಿಂದಲ್ಲ, ಹೃದಯಾಘಾತದಿಂದ : ಸುಧಾಕರ್
ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ನಂ. 1 : ಸತೀಶ್ ಜಾರಕಿಹೊಳಿ
ಹುತಾತ್ಮ ದಿನಾಚರಣೆಗೆ ಆಗಮಿಸುತ್ತಿದ್ದ ಮಹಾರಾಷ್ಟ್ರ ಸಚಿವನ ವಾಪಸ್ ಕಳಿಸಿದ ಪೊಲೀಸರು
ಬೆಳಗಾವಿ ಕುರಿತಾದ ಅಜಿತ್ ಪವಾರ್ ಹೇಳಿಕೆ ಉದ್ಧಟತನದ ಪ್ರತೀಕ : ಡಾ. ಸಿ. ಸೋಮಶೇಖರ