ಕೋವಿಡ್ ನಿಯಂತ್ರಣಕ್ಕೆ ಹೋಮ
ಮನೆಯಲ್ಲೇ ಉಳಿದು ಸರ್ಕಾರದ ಮಾರ್ಗಸೂಚಿ ಪಾಲಿಸಿ: ಶ್ರೀ
Team Udayavani, May 29, 2021, 5:27 PM IST
ಮುನವಳ್ಳಿ: ಸಮೀಪದ ಶಿಂದೋಗಿ, ಮುನವಳ್ಳಿ ಗೋ ಕೈಲಾಸ ಮಂದಿರದ ಗೋಶಾಲೆಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಮಹಾರುದ್ರಯಾಗ ಪ್ರಜ್ಜನಿ ಹೋಮ ಕಟಕೋಳ ಎಂ. ಚಂದರಗಿಯ ಶ್ರೀ ಗುರುಗಡದೇಶ್ವರ ಸಂಸ್ಥಾನ ಹಿರೇಮಠದ ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಹಾಗೂ ಮುನವಳ್ಳಿ ಶ್ರೀಸೋಮಶೇಖರ ಮಠದ ಶ್ರೀ ಮುರುಘೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಿತು.
ನಂತರ ಶ್ರೀಗಳು ಮಾತನಾಡಿ ದೇಶವನ್ನು ಕೊರೊನಾ ಮುಕ್ತ ಮಾಡಲು ಧರ್ಮವೊಂದೇ ದಾರಿ. ಪ್ರತಿಯೊಬ್ಬರು ಧರ್ಮಕ್ಕೆ ಶರಣಾಗಿ, ಮನೆಯಲ್ಲಿ ಉಳಿದು ಸರಕಾರದ ಆದೇಶಗಳನ್ನು ಪಾಲಿಸಬೇಕು ಎಂದರು.
ಶ್ರೀ ರೇಣುಕ ಗಡದೇಶ್ವರ ದೇವರು, ಮಾವಿನಕಟ್ಟಿ ಹಿರೇಮಠ ರುದ್ರಮುನಿ ದೇವರು, ಬೆಳಗಾವಿಯ ಚಂದ್ರಶೇಖರ ಶಾಸ್ತ್ರಿಗಳು, ಮುನವಳ್ಳಿ ಶಾಸ್ತ್ರಿಗಳು ಸೇರಿದಂತೆ ಎಂಟು ಜನ ವೈದಿಕರು ಪಾಲ್ಗೊಂಡಿದ್ದರು. ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಪಿಕೆಪಿಎಸ್ ಅಧ್ಯಕ್ಷ ಅಂಬರೀಷ ಯಲಿಗಾರ, ಕಾಂಗ್ರೆಸ್ ಮುಖಂಡರಾದ ವಿಶ್ವಾಸ ವೈದ್ಯ, ಪಂಚನಗೌಡ ದ್ಯಾಮನಗೌಡರ, ಬೆಳಗಾವಿ ಜಿಲ್ಲಾ ಹಾಲುಮತ ಸಮಾಜ ಅಧ್ಯಕ್ಷ ಡಿ.ಡಿ.ಟೋಪೋಜಿ, ಟಿ.ಪಿ.ಮುನೋಳಿ, ಈರಣ್ಣ ಕಮ್ಮಾರ, ಈರಯ್ಯ ಮಠಪತಿ, ಮಂಜು ಹನಸಿ, ಪಂಚಪ್ಪ ಹನಸಿ, ಸಿ.ಬಿ.ಬಾಳಿ, ಚಂದ್ರು ಜಂಬ್ರಿ, ಭವರಸಿಂಗ ಪರಿಹಾರ, ಭವರ ಮೇವಾಡ, ಉದಯ ಕದಂ, ಸೇರಿದಂತೆ ಇತರರು ಇದ್ದರು.