ನಾನು ಹಿಂದೂ-ಮುಸ್ಲಿಂ ಪರ, ದೇಶದ್ರೋಹಿಗಳ ಪರ ಅಲ್ಲ: ಸತೀಶಗೆ ಸಹೋದರ ರಮೇಶ್ ತಿರುಗೇಟು
ಸತೀಶ ಜಾರಕಿಹೊಳಿ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ.
Team Udayavani, Jan 15, 2021, 7:28 PM IST
ಬೆಳಗಾವಿ: ‘ಮುಸ್ಲಿಂ ಕಾರ್ಯಕ್ರಮಕ್ಕೆ ಹೋದರೆ ಟೋಪಿ ಹಾಕುತ್ತಾರೆ, ಹಿಂದೂ ಕಾರ್ಯಕ್ರಮಕ್ಕೆ ಹೋದರೆ ಪೇಟಾ ಸುತ್ತುತ್ತಾರೆ. ಆದರೆ ಇದನ್ನೇ ರಾಜಕೀಯ ಮಾಡಲಾಗುತ್ತಿದೆ. ಈಗಲೂ ನಾನು ಹಿಂದೂ-ಮುಸ್ಲಿಂ ಪರವಾಗಿಯೇ ಇದ್ದೇನೆ. ನಾನು ದೇಶದ್ರೋಹಿಗಳ ಪರವಾಗಿಲ್ಲ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಸತೀಶ್ ಜಾರಕಿಹೊಳಿಗೆ ತಿರುಗೇಟು ನೀಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಜಿಂದಾಬಾದ್ ಎನ್ನುವವರ ವಿರೋಧಿ ನಾನು. ಬಿಜೆಪಿ ಪಕ್ಷ ಮುಸ್ಲಿಂ ವಿರೋಧಿ ಅಲ್ಲ. ನಾನು ಶೋಷಿತರು, ಅಲ್ಪಸಂಖ್ಯಾತರು, ಹಿಂದೂಗಳ ಪರವಾಗಿ ಈಗಲೂ ಇದ್ದೇನೆ ಎಂದರು.
ಸತೀಶ ಜಾರಕಿಹೊಳಿ ಈ ತರಹ ಮಾತನಾಡುವುದು ನೋಡಿದರೆ ನನಗೆ ನಗು ಜೊತೆಗೆ ವಿಚಿತ್ರ ಎನಿಸುತ್ತಿದೆ. ಜವಾಬ್ದಾರಿ ಸ್ಥಾನದಲ್ಲಿ ಇದ್ದುಕೊಂಡು ಈ ತರಹ ಮಾತನಾಡಬಾರದು. ನಮ್ಮ ತಂದೆ ಜನಸಂಘದಲ್ಲಿ ಇದ್ದಿರುವ ಬಗ್ಗೆ ತಿಳಿದುಕೊಳ್ಳಬೇಕಾದರೆ ಮಾಧ್ಯಮದವರು ಗೋಕಾಕಕ್ಕೆ ಹೋಗಿ ಚೆಕ್ ಮಾಡಬಹುದು’ಎಂದರು.
ಜಗನ್ನಾಥ ಜೋಶಿ ನೇತೃತ್ವದಲ್ಲಿ ಆಗಿರುವುದು ಜನಸಂಘದ ಹೋರಾಟ. ನಮ್ಮ ಜಗನ್ನಾಥ ಜೋಶಿಯವರ ಫಾಲೋವರ್ಸ್. ನಾನು ಜನಸಂಘದಿಂದ ಬಂದಿದ್ದು ನಿಜ. ಕಾಂಗ್ರೆಸ್‌ನಲ್ಲಿ ಜಾತ್ಯಾತೀತ ಆಗಿದ್ದೂ ನಿಜ. ಅಜ್ಮೀರಗೆ ಹೋಗಿ ಮುಸ್ಲಿಂ ಟೋಪಿ ಹಾಕಿದ್ದು ನಿಜ ಎಂದರು.
ಇದನ್ನೂ ಓದಿ: ಸಚಿವ ಸಂಪುಟ ಅಸಮಾಧಾನ: ಮಾರ್ಗದಲ್ಲಿ ನಿಂತು ಅಪಸ್ವರ ತೆಗೆಯೋ ಅವಶ್ಯಕತೆ ಇಲ್ಲ ಎಂದ ನಳಿನ್
ಸತೀಶ ಜಾರಕಿಹೊಳಿ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಮುಂದೆ ಮುಖ್ಯಮಂತ್ರಿ ಆಗುವುದು ಬೇರೆ ಇರಲಿ, ಎಲ್ಲ ಅಧಿಕಾರ ಕಳೆದುಕೊಳ್ಳುತ್ತಾನೆ. ಮುಂದಿನ ಚುನಾವಣೆಯಲ್ಲಿ ಯಮಕನಮರಡಿಯಲ್ಲಿ ಗೆದ್ದು ತೋರಿಸಲಿ, ಆಮೇಲೆ ನೋಡೋಣ. ಸತೀಶ ಏಳು ವರ್ಷ ಆರಾಮವಾಗಿ ಇರುವುದು ಒಳ್ಳೆಯದು. ನಾಯಕತ್ವ ಗುಣ ಕಳೆದುಕೊಂಡಿದ್ದಾನೆ. ನಿಜವಾಗಿಯೂ ಜಾರಕಿಹೊಳಿ ಮನುಷ್ಯನಾಗಿದ್ದರೆ ಈ ವಿಚಾರ ಮಾತನಾಡುತ್ತಿರಲಿಲ್ಲ. ಇದೆಲ್ಲ ನೋಡಿದರೆ ಸತೀಶ ರಾಜಕಾರಣಿಯೇ ಅಲ್ಲ. ಕೃತಕ ರಾಜಕಾರಣಿ’ ಎಂದು ಟೀಕಿಸಿದರು.
ನಾನು ಪಕ್ಷದ ವರಿಷ್ಠ ಅಲ್ಲ, ಸಾಮಾನ್ಯ ಕಾರ್ಯಕರ್ತ ಎಂಬ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ರಮೇಶ ಜಾರಕಿಹೊಳಿ, ರೇಣುಕಾಚಾರ್ಯ, ಯತ್ನಾಳ್, ವಿಶ್ವನಾಥ ಅವರಿಗೆ ಮನವಿ ಮಾಡುತ್ತೇನೆ. ಇದು ಶಿಸ್ತಿನ ಪಕ್ಷ ಇರುವುದರಿಂದ ಭಿನ್ನಾಭಿಪ್ರಾಯ ಇದ್ದರೆ ಕುಳಿತು ಮಾತನಾಡೋಣ. ರೇಣುಕಾಚಾರ್ಯ ನನ್ನ ಗೆಳೆಯಾ, ಆತನನ್ನು ಕರೆದು ಮಾತನಾಡುತ್ತೇನೆ. ವಿಶ್ವನಾಥ ಬಾಂಬೆ ಡೇ ಪುಸ್ತಕ ಬರೆಯಲಿ, ಒಳ್ಳೆಯದು ಎಂದು ರಮೇಶ ಹೇಳಿದರು.
ಇದನ್ನೂ ಓದಿ: ಜಂಟಲ್‌ಮನ್ ಗೇಮ್ ನಲ್ಲಿ ಜನಾಂಗೀಯ ನಿಂದನೆ: ಮೋಯಿನ್ ಅಲಿಗೆ ‘ಒಸಾಮ’ ಎಂದಿದ್ದ ಆಸೀಸ್ ಆಟಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು
ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ
ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ
ಶಾಸಕ ಜಿ.ಎಚ್. ತಿಪ್ಪಾರೆಡ್ಡಿಗೆ ಕೋವಿಡ್ ಸೋಂಕು: ಆಸ್ಪತ್ರೆಗೆ ದಾಖಲು
ಇಂದಿನ ಗ್ರಹಬಲ:ಈ ರಾಶಿಯವರಿಗೆ ಬಂಧುಗಳ ಸಮಾಗಮದಿಂದ ಮಾನಸಿಕ ಸಮಾಧಾನ ಸಿಗಲಿದೆ.