ರಾಜಕೀಯ ಬಿಕ್ಕಟ್ಟಿಗೂ ನನಗೂ ಸಂಬಂಧ ಇಲ್ಲ
Team Udayavani, Sep 15, 2018, 6:15 AM IST
ಬೆಳಗಾವಿ: “ರಾಜ್ಯ ರಾಜಕೀಯದಲ್ಲಿ ಉಂಟಾಗಿರುವ ಬಿಕ್ಕಟ್ಟಿಗೂ, ನನಗೂ ಸಂಬಂಧ ಇಲ್ಲ’ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಯಾವ ಶಾಸಕರೂ ಬಿಜೆಪಿ ಜತೆ ಹೋಗುವುದಿಲ್ಲ. ಎಲ್ಲ ಸಮಸ್ಯೆಯೂ ಬಗೆಹರಿದಿದೆ ಎಂದರು.
“ಈಗ ನಡೆದಿರುವ ರಾಜಕೀಯ ಬೆಳವಣಿಗೆಗೂ, ನನಗೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ನನ್ನ ಪಾತ್ರವೂ ಇಲ್ಲ. ಹೀಗಾಗಿ, ಕಾಂಗ್ರೆಸ್ ವರಿಷ್ಠರು ನಮಗೆ ಎಚ್ಚರಿಕೆ ಕೊಡುವ ಪ್ರಶ್ನೆಯೇ ಇಲ್ಲ. ಸೆ.16ರಂದು ನಡೆಯಬಹುದಾದ ಬೆಳವಣಿಗೆಯ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ಹೇಳಿದರು.
ಜಿಲ್ಲೆಯ ರಾಜಕಾರಣದಲ್ಲಿ ಹೊರಗಿನವರು ಪ್ರವೇಶ ಮಾಡಿದ್ದರಿಂದ ಸಮಸ್ಯೆ ಉಂಟಾಗಿತ್ತು. ಈಗ ಎಲ್ಲವೂ
ಬಗೆಹರಿದಿದೆ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದ ನಾಯಕರು ಪರಿಹಾರ ನೀಡುತ್ತಾರೆ. ಮಾಸಾಂತ್ಯದಲ್ಲಿ ಸಂಪುಟ
ವಿಸ್ತರಣೆ ಆಗಲಿದ್ದು, ಆಗ ನಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತೈಲ ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ: ಈಶ್ವರಪ್ಪ
ಕುಮಾರಸ್ವಾಮಿ ಪಕ್ಷ ಜೋಕರ್ ನಂತೆ: ಸಿ.ಪಿ. ಯೋಗೀಶ್ವರ್ ಟೀಕೆ
ಸಚಿವರೆಂದರೆ ದೇವಲೋಕದಿಂದ ಇಳಿದು ಬಂದವರಾ? ಸುಧಾಕರ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ
ಸಚಿವ ಸುಧಾಕರ್ ಆಪ್ತ ಕಾರ್ಯದರ್ಶಿಗೆ ಧಮಕಿ ಹಾಕಿದ ರೇಣುಕಾಚಾರ್ಯ!
ಎಲ್ಪಿಜಿ ಗ್ರಾಹಕರಿಗೆ ಅವಳಿ ಆಘಾತ : ಸಬ್ಸಿಡಿಯೂ ರದ್ದು, ಸಿಲಿಂಡರ್ ಬೆಲೆ 25 ರೂ. ಏರಿಕೆ