ಚಚಡಿ ಯೋಜನೆ ಕಾಲುವೆ ನಿರ್ಮಾಣಕ್ಕೆ ಚಾಲನೆ

ಪೈಪ್‌ಲೈನ್‌ ಅಳವಡಿಸಿ ನೀರಾವರಿ ಒದಗಿಸುವ ಕಾಮಗಾರಿ ಪ್ರಗತಿ ಹಂತದಲ್ಲಿದೆ.

Team Udayavani, Jan 27, 2022, 6:10 PM IST

ಚಚಡಿ ಯೋಜನೆ ಕಾಲುವೆ ನಿರ್ಮಾಣಕ್ಕೆ ಚಾಲನೆ

ಬೈಲಹೊಂಗಲ: ಚಚಡಿ ಏತ ನೀರಾವರಿ ಯೋಜನೆಯ ಚಾಲನೆಯಿಂದ ಗೋಕಾಕ, ಬೈಲಹೊಂಗಲ, ಸವದತ್ತಿ ತಾಲೂಕಿನ ರೈತರ ಹೊಲಗಳು ನೀರಾವರಿಯಿಂದ ಕಂಗೊಳಿಸಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ವಣ್ಣೂರ ಗ್ರಾಮದ ಸರಕಾರಿ ಪಿಯು ಕಾಲೇಜಿನಲ್ಲಿ ಚಚಡಿ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆ ಕಿಮೀ 6ರಿಂದ 39ರ ವರೆಗಿನ ನಿರ್ಮಾಣ ಕಾಮಗಾರಿಗಳ ಅಡಿಗಲ್ಲು ಸಮಾರಂಭಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು.

ಚಚಡಿ ಯೋಜನೆಯ ಮುಖ್ಯ ಕಾಲುವೆ ನಿರ್ಮಾಣಕ್ಕೆ 2020-21ರಲ್ಲಿ ಅನುಮೋದನೆಗೊಂಡಿತ್ತು. ಇದೀಗ 28.29 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇನ್ನೂ 26 ಕೋಟಿ ರೂ. ನೀಡಲು ಸರಕಾರ ಸಿದ್ಧವಿದೆ. ನಿಗದಿತ ವೇಳೆಯಲ್ಲಿ ಕಾಮಗಾರಿಯನ್ನು ಗುತ್ತಿಗೆದಾರರು ಸಮರ್ಪಕವಾಗಿ ನಿರ್ವಹಿಸಬೇಕು. ಅಸಮರ್ಪಕವಾಗಿ ಕಾಮಗಾರಿ ನಡೆದಿದ್ದು ಕಂಡುಬಂದರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಬಿಲ್‌ ತಡೆ ಹಿಡಿಯಲಾಗುವುದು ಎಂದು ಎಚ್ಚರಿಸಿದರು.

ರೈತರು ಕಾಲುವೆ ಆದ ಮೇಲೆ ಕೈಕಟ್ಟಿಕೊಂಡು ಎಲ್ಲವೂ ಸರಕಾರವೇ ನಿರ್ವಹಿಸಲಿ ಎಂದು ಯೋಚಿಸದೆ, ತಮ್ಮ ಮನೆಯಂತೆ ಕಾಲುವೆಯನ್ನು ಸ್ವಚ್ಛವಾಗಿಟ್ಟಲ್ಲಿ ಯೋಜನೆ ಸಾಕಾರಗೊಳ್ಳಲು ಸಾಧ್ಯವಿದೆ. ಬರುವ ಜೂನ್‌ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಶಾಸಕ ಮಹಾಂತೇಶ ದೊಡ್ಡಗೌಡರ ಕಿತ್ತೂರ ಮತಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಕಷ್ಟು ಸುತ್ತಾಟಗಳ ಮೂಲಕ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.

ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಈ ನೀರಾವರಿ ಯೋಜನೆಗೆ ಅರಣ್ಯ ಇಲಾಖೆ ಭಾಗಶಃ ಅನುಮೋದನೆ ಕೊಟ್ಟಿದ್ದು, ಇಲ್ಲಿಯ 14 ಹಳ್ಳಿಗಳಿಗೆ ಕೆನಾಲ್‌ ಮುಖಾಂತರ ಪೈಪ್‌ಲೈನ್‌ ಅಳವಡಿಸಿ ನೀರಾವರಿ ಒದಗಿಸುವ ಕಾಮಗಾರಿ ಪ್ರಗತಿ ಹಂತದಲ್ಲಿದೆ. ವನ್ನೂರ ಗ್ರಾಮದಲ್ಲಿ 20 ಕೋಟಿ ಅನುದಾನದಲ್ಲಿ ಡಾ| ಅಂಬೇಡ್ಕರ್‌ ವಸತಿ ನಿಲಯ ನಿರ್ಮಾಣಗೊಂಡಿದ್ದು, ಜೂನ್‌ದೊಳಗೆ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಫ್‌. ಕೊಳದೂರ, ಕಿತ್ತೂರು ಗ್ರಾಮೀಣ ಬಿಜೆಪಿ ಅಧ್ಯಕ್ಷ ಬಸವರಾಜ ಪರವನ್ನವರ, ಬಸನಗೌಡ ಸಿದ್ರಾಮನಿ, ಗ್ರಾಪಂ ಅಧ್ಯಕ್ಷ ಸಿದ್ದಪ್ಪ ಮಿಂಡೊಳ್ಳಿ, ಮುಖ್ಯ ಅಭಿಯಂತ ಅರವಿಂದ ಕಣಗಿಲ, ಅಧಿಧೀಕ್ಷಕ ಅಭಿಯಂತ ಸಿ.ಎಂ. ಬಂತಿ, ಮಲ್ಲಿಕಾರ್ಜುನ ತುಬಾಕಿ, ತಹಶೀಲ್ದಾರ್‌ ಬಸವರಾಜ ನಾಗರಾಳ, ತಾಪಂ ಇಒ ಸುಭಾಸ ಸಂಪಗಾವಿ, ಬಸವರಾಜ ಅಂಗಡಿ, ಬಾಳಾಸಾಹೇಬ ದೇಸಾಯಿ, ಬಸಲಿಂಗಪ್ಪ ಬಸೆಟ್ಟಿ, ಎಸ್‌.ಎಫ್‌. ನಾಯಕ, ಸತ್ಯನಾಯ್ಕ ನಾಯ್ಕ, ಎ.ಆರ್‌. ಮಾಳನ್ನವರ, ಎಸ್‌.ಎಂ. ಪಾಟೀಲ, ಮಹಾಂತೇಶ ಹಿರೇಮಠ, ಮನೋಜ ಕೆಳಗೇರಿ, ಆನಂದ ಕಿರಗಿ, ಶಿವು ಚೋಬಾರಿ, ಸಂತೋಷ ಪಾಟೀಲ ಇದ್ದರು.

ಟಾಪ್ ನ್ಯೂಸ್

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

1-d-s-sfsf

ಬೆಂಗಳೂರಿನಲ್ಲಿ ಐಕಿಯ ಸ್ಟೋರ್:ಸಿಇಓ ಜೆಸ್ಪರ್ ಬ್ರಾಡಿನ್ ಜತೆ ಸಿಎಂ ಚರ್ಚೆ

ಲವ್‌ ಬರ್ಡ್ಸ್‌ನಲ್ಲಿ ಲವ್‌ ಮಾಕ್ಟೇಲ್‌ ಜೋಡಿ: ಹೊಸ ಚಿತ್ರದಲ್ಲಿ ಕೃಷ್ಣ-ಮಿಲನಾ

ಲವ್‌ ಬರ್ಡ್ಸ್‌ನಲ್ಲಿ ಲವ್‌ ಮಾಕ್ಟೇಲ್‌ ಜೋಡಿ: ಹೊಸ ಚಿತ್ರದಲ್ಲಿ ಕೃಷ್ಣ-ಮಿಲನಾ

1-fsfdf

ಹೆಚ್ಚುತ್ತಿರುವ ಮಂಕಿ ಪಾಕ್ಸ್ ಸೋಂಕಿನ ಪ್ರಮಾಣ : ಸಲಿಂಗಕಾಮಿಗಳಿಗೆ ಎಚ್ಚರಿಕೆ

1-dfdffds

ಬಿಜೆಪಿ ನಿಷ್ಠಾವಂತನಾದ ನನ್ನ ಸಚಿವ ಸ್ಥಾನ ಭದ್ರ: ಸಚಿವ ಪ್ರಭು ಚವ್ಹಾಣ್

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

dk shi 2

ಮಸೀದಿ ಕುರಿತು ತಾಂಬೂಲ ಪ್ರಶ್ನೆ; ಬಿಜೆಪಿ ಈ ರಾಜ್ಯವನ್ನು ಕೊಲ್ಲುತ್ತಿದೆ :ಡಿಕೆಶಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

ಕಾಂಗ್ರೆಸ್‌ ಮುಕ್ತ ಭಾರತ ಜನತೆಯ ತೀರ್ಮಾನ

11

ರಾಜ್ಯ ಪೊಲೀಸ್‌ ವ್ಯವಸ್ಥೆ ಅತ್ಯಂತ ಬಲಿಷ್ಠ

10

ಏಣಗಿ ಬಾಳಪ್ಪನವರಿಗೆ ಅವರೇ ಸಾಟಿ: ಕಾಟ್ಕರ್‌

9

ಪ್ರವಾಹ ಎದುರಿಸಲು ಸನ್ನದರಾಗಿರಿ: ಡಿಸಿ  

8

ಸಿದ್ಧು-ಡಿಕೆಶಿಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್‌ ನಾಶ: ಶೆಟ್ಟರ

MUST WATCH

udayavani youtube

ಮಳಲಿ ಮಸೀದಿಯಲ್ಲಿ ದೇವರ ಸಾನಿಧ್ಯ ಗೋಚರ

udayavani youtube

‘ನನಗೆ ಏಳೂವರೆ ಶನಿ ಉಂಟು!’

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ಉಡುಪಿ : ಹಲವು ಸಂಶಯಗಳನ್ನು ಹುಟ್ಟು ಹಾಕಿದ ಯುವಜೋಡಿ ಸಾವು ಪ್ರಕರಣ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

ಹೊಸ ಸೇರ್ಪಡೆ

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

Untitled-1

ಶಿಥಿಲಗೊಂಡ ಸರಕಾರಿ ಶಾಲೆಗಳ ಅಭಿವೃದ್ಧಿಪಡಿಸಿ

huvinahadagali

ರೈತರ ಹೊಲಗಳಿಗೆ ಕಲುಷಿತ ನೀರು ತಡೆಗೆ ಮನವಿ

17

ಪಶು ಆಸ್ಪತ್ರೆಗೆ ಸಿಬ್ಬಂದಿ ನೇಮಿಸಲು ಒತ್ತಾಯ

1-f-fdsf

ಗೋವಾದಲ್ಲಿ ಸನ್‍ಬರ್ನ್ ಫೆಸ್ಟಿವಲ್ ಆಯೋಜನೆಗೆ ಅವಕಾಶವಿಲ್ಲ : ಸಚಿವ ಖಂವಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.