ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಲು ಒತ್ತಾಯ
Team Udayavani, Oct 26, 2019, 12:24 PM IST
ಮೂಡಲಗಿ: ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಶುಭೋದಯ ಸ್ವಾಭಿಮಾನಿ ಕನ್ನಡ ಸಂರಕ್ಷಣಾ ವೇದಿಕೆ ಸದಸ್ಯರು ಮೂಡಲಗಿ ಸಾರಿಗೆ ನಿಯಂತ್ರಣಾಧಿ ಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ವೇದಿಕೆ ಅಧ್ಯಕ್ಷ ಸುಭಾಸ ಕಡಾಡಿ ಮಾತನಾಡಿ, ಮೂಡಲಗಿಗೆ ಪ್ರತಿ ದಿನ ಬೆಳಗ್ಗೆ 4ಗಂಟೆಗೆ ಔರಾದದಿಂದ (ಬೀದರ) ಮೂಡಲಗಿ ಮಾರ್ಗವಾಗಿ ಬೆಳಗಾವಿಗೆ ಹೋಗುವ ಬಸ್ ಮೂಡಲಗಿಗೆ ಬರದೆ ಇರುವದರಿಂದ ಮೂಡಲಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಶೀಘ್ರವೇ ಸಾರಿಗೆ ಇಲಾಖೆ ಅಧಿಕಾರಿಗಳು ಇಲ್ಲಿರುವ ಸಮಸ್ಯೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿದಿನ ಹಲವಾರು ಪ್ರಯಾಣಿಕರು ಈ ಬಸನ್ನು ಅವಲಂಭಿಸಿದ್ದಾರೆ. ಮೂಡಲಗಿ ತಾಲೂಕು ಕೇಂದ್ರವಾಗಿದರಿಂದ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲವು ಬಸಗಳು ಗುರ್ಲಾಪುರದಿಂದ ಹೊರಮಾರ್ಗವಾಗಿ ಹೋಗುತ್ತಿವೆ. ಇದರಿಂದ ಪರೀಕ್ಷೆಗೆ ಅಥವಾ ಸಂದರ್ಶನಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ ಎಂದರು. ಈ ಸಂದರ್ಭದಲ್ಲಿ ವೇದಿ ಕೆ ಸದಸ್ಯರಾದ ಶಿವಬಸು ಗಾಡವಿ, ಶಿವು ಪಿರೋಜಿ, ಕೇಶವ ದೇಸಾಯಿ, ಬಾಳಯ್ನಾ ಹಿರೇಮಠ, ರವಿ ನೇಸೂರ, ಶ್ರೀನಿವಾಸ ಗೀರೆನ್ನವರ, ಸಂತ್ರಾಮ ನಾಶಿ, ಶಿವಾನಂದ ಮುಧೋಳ ಸೇರಿದಂತೆ ಇತರರು ಇದ್ದರು.