ಕಿತ್ತೂರು ಕೋಟೆ ಗಲೀಜು ಮಾಡೋರು ಪಾಕಿಸ್ತಾನದವರಾ?: ಸಿ.ಟಿ.ರವಿ ಕಿಡಿ

Team Udayavani, Oct 23, 2019, 10:47 PM IST

ಚನ್ನಮ್ಮನ ಕಿತ್ತೂರು: ಕಿತ್ತೂರಿನ ಕೋಟೆಯನ್ನು ಗಲೀಜು, ಹೊಲಸು ಮಾಡುವವರು ಪಾಕಿಸ್ತಾನದವರಾ?. ನಮ್ಮವರೇ ಇಲ್ಲಿ ಹೊಲಸು ಮಾಡುತ್ತಿರುವಾಗ ಅದನ್ನು ನೋಡಿ ನಾವೇಕೆ ಸುಮ್ಮನಿರಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಹೇಳಿದರು.

ಕಿತ್ತೂರು ಉತ್ಸವ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಿತ್ತೂರಿಗೆ ಸಂಬಂಧಿಸಿದ ನಾವೆಲ್ಲರೂ ಅದನ್ನು ಸಂರಕ್ಷಣೆ ಮಾಡಬೇಕು. ಕೋಟೆಯ ಗತವೈಭವ ಉಳಿಯಬೇಕಾಗಿದೆ. ನಮ್ಮತನ ಉಳಿಸಿಕೊಳ್ಳುವ ಸಂಕಲ್ಪ ಮಾಡಿದರೆ ಈ ಉತ್ಸವ ಸಾರ್ಥಕವಾಗುತ್ತದೆ. ಪ್ರತಿಯೊಬ್ಬರೂ ಈ ಕೋಟೆಯನ್ನು ರಕ್ಷಿಸಿ ಮುಂದಿನ ಪೀಳಿಗೆ ಕಾಯ್ದಿಡುತೇ¤ವೆ ಎಂದು ನಾವೆಲ್ಲರೂ ಪ್ರತಿಜ್ಞೆ ಮಾಡಬೇಕು ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ