Udayavni Special

ಕೋರೆ, ಸುರೇಶ ಅಂಗಡಿ ಮಾತಿನ ಚಕಮಕಿ

Team Udayavani, Dec 26, 2018, 7:28 AM IST

17.jpg

ಬೆಳಗಾವಿ: ರೈಲ್ವೆ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಸುರೇಶ ಅಂಗಡಿ ಹಾಗೂ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಅವರು ಸಚಿವ ಸತೀಶ ಜಾರಕಿಹೊಳಿ ಸೇರಿ ಎಲ್ಲರ ಸಮ್ಮುಖದಲ್ಲೇ ವಾಗ್ವಾದ ನಡೆಸಿದರು. ನಗರದ ಗೋಗಟೆ ವೃತ್ತದಲ್ಲಿ ನಿರ್ಮಾಣಗೊಂಡಿರುವ ರೈಲ್ವೆ ಮೇಲ್ಸೇ ತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ತಮಗೆ ಆಮಂತ್ರಣ ನೀಡಿಲ್ಲ ಹಾಗೂ
ಆಸನದ ಮೇಲೆ ತಮ್ಮ ಹೆಸರು ಹಾಕಿಲ್ಲವೆಂದು ಡಾ.ಕೋರೆ ಮುನಿಸಿಕೊಂಡು ವೇದಿಕೆ ಮೇಲೆ ಬಾರದೇ ಕೆಳಗೆ ಆಸೀನರಾಗಿದ್ದರು. ತಾವು ರಾಜ್ಯಸಭಾ ಸದಸ್ಯರಾಗಿದ್ದರೂ ಉದ್ದೇಶಪೂರ್ವಕವಾಗಿ ನನ್ನ ಹೆಸರು ಹಾಕದೇ ಅವಮಾನ ಮಾಡಲಾಗಿದೆ ಎಂದು ಕೋರೆ ಆಕ್ಷೇಪಿಸಿದರು. ಇದನ್ನು ನೋಡಿ ವೇದಿಕೆಯಿಂದ ಕೆಳಗೆ ಬಂದ ಸಂಸದ ಅಂಗಡಿ “ಎರಡು ತಿಂಗಳ ಹಿಂದೆಯೇ ನಿಮಗೆ ಆಮಂತ್ರಣ
ನೀಡಿದ್ದೇವೆ. ನೀವು ಹಿರಿಯರು. ಹೀಗೇಕೆ ಮಾಡುತ್ತಿದ್ದೀರಿ. ನಿಮಗೆ ಕಾಮನ್‌ ಸೆನ್ಸ್‌ ಇಲ್ಲವಾ’ ಎಂದು ಹರಿಹಾಯ್ದರು. ಅದಕ್ಕೆ “ಏನೋ
ದಾದಾಗಿರಿ ಮಾಡುತ್ತೀಯಾ’ ಎಂದು ಪ್ರಭಾಕರ ಕೋರೆ ಮಾರುತ್ತರ ನೀಡಿದರು.

“ಇದು ನಿನ್ನ ಕಾರ್ಯಕ್ರಮ ಅಲ್ಲ.ರೈಲ್ವೆ ಇಲಾಖೆ ಕಾರ್ಯಕ್ರಮ. ನೀ ಸುಮ್ಮನಿರು. ನಾನು ಯಾವತ್ತೂ ಹೆಸರಿಗಾಗಿ ಜಗಳ ಮಾಡಿದವನಲ್ಲ. ಆದರೆ ಇಲ್ಲಿ ಜಗಳ ಮಾಡಬೇಕಾಗಿದೆ’ ಎಂದು ಕೋರೆ ದನಿ ಏರಿಸಿದರು. ಇದಕ್ಕೆ ಆವೇಶದಿಂದಲೇ ಮಾತನಾಡಿದ
ಸುರೇಶ ಅಂಗಡಿ “ನಾ ಕರಿತೀದಿನಿ, ಬರಿ¤ರೋ ಇಲ್ಲವೋ’ ಎಂದು ಏರು ದನಿಯಲ್ಲೇ ಕೇಳಿದರು. ಸುಮಾರು 10 ನಿಮಿಷಗಳ ಕಾಲ ನಡೆದ ಈ ವಾಗ್ವಾದಕ್ಕೆ ಸಚಿವ ಸತೀಶ ಜಾರಕಿಹೊಳಿ ಮೌನ ವೀಕ್ಷಕರಾಗಿದ್ದರು. “ಎಲ್ಲವನ್ನೂ ನೀನೇ ಜವಾಬ್ದಾರಿ ತೆಗೆದುಕೊಂಡು ಮಾಡುತ್ತಿದ್ದೀಯಾ. ಜಿಲ್ಲೆಯಲ್ಲಿ ಮೂವರು ಸಂಸದರಿದ್ದೇವೆ. ಯಾರೊಬ್ಬರ ಹೆಸರೂ ಇಲ್ಲ. ಎಲ್ಲದರಲ್ಲಿ ನಿಮ್ಮದೇ ಇದೆ. ನೀವೇ ಕಾರ್ಯಕ್ರಮ ಮಾಡಿಕೊಳ್ಳಿ’ ಎಂದು ಕೋರೆ ಹರಿಹಾಯ್ದರು. ನಂತರ ಸುರೇಶ ಅಂಗಡಿ ಬಲವಂತವಾಗಿ ಕೋರೆ ಅವರ ಕೈಹಿಡಿದು ವೇದಿಕೆಯತ್ತ ಕರೆದುಕೊಂಡು ಹೋಗಿ ಜಗಳಕ್ಕೆ ತೆರೆ ಎಳೆದರು. ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಭಾಕರ ಕೋರೆ “ಈ ರೈಲು ಮೇಲ್ಸೇತುವೆಗೆ ಮುಂದೆ ಸುರೇಶ ಅಂಗಡಿ ಸ್ಮರಣಾರ್ಥ ಎಂದು ಹೆಸರಿಡಿ’ ಎಂದು ಛೇಡಿಸಿದರು.

ಟಾಪ್ ನ್ಯೂಸ್

ffhjutgfd

ತುಮಕೂರು : ಮದುವೆ ಮಾಡಿಸುವಂತೆ ಡಿಸಿಗೆ ಅರ್ಜಿ ಸಲ್ಲಿಸಿದ ಯುವಕರು

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

bommai and siddaramaiah

ಒಂದೇ ಹೋಟೆಲ್ ನಲ್ಲಿದ್ದರೂ ಪರಸ್ಪರ ಭೇಟಿಯಾಗದ ಸಿಎಂ-ಮಾಜಿ ಸಿಎಂ!

ಗಂಗಾವತಿ: ಹೆಚ್ಚಳವಾಗುತ್ತಿರುವ ಅನಾಥ ವಯೋವೃದ್ಧರು, ಭಿಕ್ಷುಕರ ಸಂಖ್ಯೆ ಜಿಲ್ಲಾಡಳಿತ ಮೌನ

ಗಂಗಾವತಿ: ಹೆಚ್ಚಳವಾಗುತ್ತಿರುವ ಅನಾಥ ವಯೋವೃದ್ಧರು, ಭಿಕ್ಷುಕರ ಸಂಖ್ಯೆ ಜಿಲ್ಲಾಡಳಿತ ಮೌನ

shrikrishna gmail com movie review

ಶ್ರೀಕೃಷ್ಣ ಅಟ್‌ ಜಿಮೇಲ್‌. ಕಾಂ ಚಿತ್ರ ವಿಮರ್ಶೆ: ಫ್ಯಾಮಿಲಿ ಟೈಮ್‌ ನಲ್ಲಿ ಕೃಷ್ಣ ಸುಂದರ ಯಾನ

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ffhjutgfd

ತುಮಕೂರು : ಮದುವೆ ಮಾಡಿಸುವಂತೆ ಡಿಸಿಗೆ ಅರ್ಜಿ ಸಲ್ಲಿಸಿದ ಯುವಕರು

ಎರಡು ಕೋಟಿ ಮಂದಿ ಕೋವಿಡ್‌ ಲಸಿಕೆ ಪೂರ್ಣ

ಎರಡು ಕೋಟಿ ಮಂದಿ ಕೋವಿಡ್‌ ಲಸಿಕೆ ಪೂರ್ಣ

CMಅ.19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿಗೆ?

ಅ.19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿಗೆ?

ಜೆಡಿಎಸ್ ನಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಅಭ್ಯರ್ಥಿಯೆಂದು ಘೋಷಣೆ ಮಾಡಲಿ:ಜಮೀರ್

ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಸ್ಥಾನದ ಅಭ್ಯರ್ಥಿಯೆಂದು ಘೋಷಣೆ ಮಾಡಲಿ

ಮುಂಗಾರಿನಲ್ಲಿ ಮಳೆ ಅಬ್ಬರ ಜೋರಾಗಿದ್ದರೂ ವಾಡಿಕೆಗಿಂತ ಶೇ.8ರಷ್ಟು ಕಡಿಮೆ ಮಳೆ

ಮುಂಗಾರಿನಲ್ಲಿ ಮಳೆ ಅಬ್ಬರ ಜೋರಾಗಿದ್ದರೂ ವಾಡಿಕೆಗಿಂತ ಶೇ.8ರಷ್ಟು ಕಡಿಮೆ ಮಳೆ

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಕ್ಕೆ ತಹಶೀಲ್ದಾರ್‌ ಚಾಲನೆ

ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಬೇಕು ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ

ffhjutgfd

ತುಮಕೂರು : ಮದುವೆ ಮಾಡಿಸುವಂತೆ ಡಿಸಿಗೆ ಅರ್ಜಿ ಸಲ್ಲಿಸಿದ ಯುವಕರು

ವಾರದಲ್ಲಿ ವಿದ್ಯುತ್ ಸಂಪರ್ಕಕ್ಕೆ  ಶಾಸಕ ಮಂಜುನಾಥ್ ಆದೇಶ

ವಾರದಲ್ಲಿ ವಿದ್ಯುತ್ ಸಂಪರ್ಕಕ್ಕೆ ಶಾಸಕ ಮಂಜುನಾಥ್ ಆದೇಶ

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಎಂ.ಎ.ಹೆಗಡೆರಿಗೆ ಮರಣೋತ್ತರ ಚಂದುಬಾಬು‌ ಪ್ರಶಸ್ತಿ

ಎಂ.ಎ.ಹೆಗಡೆರಿಗೆ ಮರಣೋತ್ತರ ಚಂದುಬಾಬು‌ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.