ಜಾಗೃತಿ ಕೊರತೆ; ಎಲ್ಲೆಡೆ ಹಬ್ಬಿದ ಕೋವಿಡ್

Team Udayavani, May 19, 2021, 3:18 PM IST

cats

ವರದಿ : ಮಹಾದೇವ ಪೂಜೇರಿ

ಚಿಕ್ಕೋಡಿ: ನಗರ, ಪಟ್ಟಣ ಪ್ರದೇಶದಲ್ಲಿ ವಕ್ಕರಿಸಿಕೊಂಡಿದ್ದ ಮಹಾಮಾರಿ ಕೊರೊನಾ ಇದೀಗ ಹಳ್ಳಿಗಳಲ್ಲಿ ಸದ್ದು ಮಾಡುತ್ತಿದೆ. ಸದಾ ಆರೋಗ್ಯವಂತವಾಗಿ ಇರುತ್ತಿದ್ದ ಹಳ್ಳಿಗಳತ್ತ ಸೋಂಕು ವ್ಯಾಪಿಸಿಕೊಂಡಿದೆ.

ನೆರೆಯ ಮಹಾರಾಷ್ಟ್ರದ ಗಡಿಗೆ ಹೊಂದಿರುವ ರಾಜ್ಯದ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕುಗಳಲ್ಲಿ ಸೋಂಕು ಭಾರಿ ಪ್ರಮಾಣದಲ್ಲಿ ಹರಡಿಕೊಂಡು ಜನರು ಭಯಭೀತರಾಗಿದ್ದಾರೆ. ರಾಜ್ಯದ ಗಡಿ ಭಾಗದ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನಲ್ಲಿ ಹೆಲ್ತ ಬುಲೇಟಿನ ಪ್ರಕಾರ ಏಪ್ರೀಲ್‌ ಮತ್ತು ಮೇ ತಿಂಗಳ ಅವ ಧಿಯಲ್ಲಿ ಇಲ್ಲಿಯವರಿಗೆ 950 ಸೋಂಕಿತರು ಕಂಡು ಬಂದಿದ್ದಾರೆ. ಇಲ್ಲಿಯವರಿಗೆ 43 ಜನ ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇದೇ ರೀತಿ ಮುಂದುವರೆದರೆ ಸೋಂಕು ಗಂಭೀರತೆ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕೊರೊನಾ ಎರಡನೆ ಅಲೆಗೆ ಬೆಚ್ಚಿ ಬಿದ್ದ ಹಳ್ಳಿಗಳು: ಮೊದಲ ಅಲೆಯಲ್ಲಿ ನಗರ, ಪಟ್ಟಣ ಪ್ರದೇಶದ ಜನರ ನಿದ್ದೆಗೆಡಿಸಿ ಕೊರೊನಾ ಈಗ ಎರಡನೆ ಅಲೆಯಲ್ಲಿ ಹಳ್ಳಿಗಳ ಜನರನ್ನು ಸಂಕಷ್ಟಕ್ಕೆ ನೂಕಿದೆ. ಹಳ್ಳಿಯ ಜನರಿಗೆ ಬೇಕಿದೆ ಆತ್ಮಸ್ಥೈರ್ಯ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರಕರಣಕ್ಕೆ ಬೆಸ್ತು ಬಿದ್ದಿರುವ ಅ ಧಿಕಾರಿಗಳು ಕೊರೊನಾ ಸೋಂಕಿಗೆ ಹೆದರಿ ಗ್ರಾಮೀಣ ಪ್ರದೇಶಗಳತ್ತ ಮುಖ ಮಾಡುತ್ತಿಲ್ಲ, ಹಳ್ಳಿಯ ಜನರಿಗೆ ಸಿಗಬೇಕಾದ ಧೈರ್ಯ, ರೋಗದ ಕುರಿತು ತಿಳಿವಳಿಕೆ ಇಲ್ಲವಾಗಿದ್ದರಿಂದ ಸೋಂಕು ಗಂಭೀರತೆ ಪಡೆಯುತ್ತಿದೆ.

ಚಿಕ್ಕೋಡಿ ಹಾಗೂ ನಿಪ್ಪಾಣಿ ಎರಡು ಅವಳಿ ತಾಲೂಕಿನಲ್ಲಿ ಪ್ರತಿನ ದಿನ 40 ರಿಂದ 80 ಜನರಲ್ಲಿ ಸೋಂಕು ಕಾಣಿಸುತ್ತಿದೆ. ಪಾಸಿಟಿವ್‌ ಬಂದಿರುವ ವ್ಯಕ್ತಿಗಳಿಗೆ ಆತ್ಮಸ್ಥೈರ್ಯ ಇಲ್ಲದೇ ಇರುವುದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನಲಾಗಿದೆ.

ಸೋಂಕು ತಡೆಗೆ ತಂಡ ರಚನೆ: ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಆಶಾ ಕಾರ್ಯಕರ್ತರನ್ನೊಳ್ಳಗೊಂಡ ತಂಡ ರಚಿಸಿದ್ದು, ಯಾರಿಗೆ ಸೋಂಕು ತಗುಲಿದೆ ಅಂತಹವರ ಮನೆಗೆ ಹೋಗಿ ಮೆಡಿಕಲ್‌ ಕಿಟ್‌ ನೀಡಿ ಮನೆಯಲ್ಲಿದ್ದು ಕೊರೊನಾ ಗುಣಮುಖವಾಗಬೇಕೆಂದು ಸಲಹೆ ನೀಡುತ್ತಿದ್ದಾರೆ. ಮೆಡಿಕಲ್‌ ಕಿಟ್‌ದಲ್ಲಿ ಕೊರೊನಾ ಸೋಂಕು ಕಡಿಮೆ ಮಾಡುವ ಮಾತ್ರೆಗಳು ಇರುತ್ತವೆ.

ತಾಲೂಕಾಡಳಿತದ ಗಮನಕ್ಕೆ ತಾರದೇ ನಡೆಯುತ್ತವೆ ಮದುವೆ-ಸಮಾರಂಭಗಳು: ಕೊರೊನಾ ಸೋಂಕು ಗಂಭೀರತೆ ಅರಿತುಕೊಳ್ಳದ ಗ್ರಾಮೀಣ ಪ್ರದೇಶದ ಜನರು ತಾಲೂಕಾಡಳಿತದ ಗಮನಕ್ಕೆ ತಾರದೇ ತೋಟಪಟ್ಟಿ ಪ್ರದೇಶದಲ್ಲಿ ಬಂಧು ಬಳಗ ಕರೆದುಕೊಂಡು ಅದ್ದೂರಿಯಾಗಿ ಮಧುವೆ ಮತ್ತು ಇನ್ನಿತರ ಸಭೆ ಸಮಾರಂಭ ಆಯೋಜಿಸುತ್ತಿದ್ದಾರೆ. ಇದರಿಂದಲೂ ಸೋಂಕು ಹೆಚ್ಚಳವಾಗುತ್ತಿವೆ. ಗ್ರಾಮದಲ್ಲಿ ಯಾರಾದರೂ ನಿಧನರಾದರೆ ಇಡೀ ಗ್ರಾಮವೇ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತವೆ. ಇದು ಸಹ ಸೋಂಕು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ಮೂಲಭೂತ ಸೌಲಭ್ಯ ಕೊರತೆ: ಗ್ರಾಮೀಣ ಪ್ರದೇಶದ ಜನರಿಗೆ ಸಿಬೇಕಾದ ಮೂಲಭೂತ ಸೌಲಭ್ಯ ಮರೀಚಿಕೆಯಾಗಿದೆ. ಸರ್ಕಾರ ಕೋವಿಡ್‌ ಆಸ್ಪತ್ರೆಗಳನ್ನು ತೆರೆದಿದೆ. ಆದರೆ ಅಲ್ಲಿ ಆಕ್ಸಿಜನ್‌ ಬೆಡ್‌ ಮತ್ತು ಇತರೇ ಸೌಲಭ್ಯ ಇಲ್ಲ. ಗ್ರಾಮಗಳಲ್ಲಿ ಇರುವ ಆರೋಗ್ಯ ಕೇಂದ್ರದಲ್ಲಿ ನುರಿತ ವೈದ್ಯರೂ ಮತ್ತು ಸಮರ್ಪಕ ಆರೋಗ್ಯ ಸೇವೆ ಇಲ್ಲದೇ ಇರುವುದರಿಂದ ಹಳ್ಳಿಗಳಲ್ಲಿ ಸೋಂಕು ಹೆಚ್ಚುತ್ತಾ ಹೋಗುತ್ತಿದೆ.

ಟಾಪ್ ನ್ಯೂಸ್

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕು

ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕು

ಪ್ರತಿಕೂಲ ಹವಾಮಾನದ ಹಿನ್ನೆಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಪ್ರತಿಕೂಲ ಹವಾಮಾನದ ಹಿನ್ನೆಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

ಉಡುಪಿ ಜಿಲ್ಲಾದ್ಯಂತ ಅಬ್ಬರದ ಮಳೆ; ಜನಜೀವನ ಅಸ್ತವ್ಯಸ್ತ

ಉಡುಪಿ ಜಿಲ್ಲಾದ್ಯಂತ ಅಬ್ಬರದ ಮಳೆ; ಜನಜೀವನ ಅಸ್ತವ್ಯಸ್ತ

ಕುವೈಟ್‌ನಲ್ಲಿ ತೊಂದರೆಗೆ ಸಿಲುಕಿದ್ದ ಯುವಕ ಊರಿನತ್ತ

ಕುವೈಟ್‌ನಲ್ಲಿ ತೊಂದರೆಗೆ ಸಿಲುಕಿದ್ದ ಯುವಕ ಊರಿನತ್ತ

ಶ್ರೀ ಕ್ಷೇತ್ರ ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿ ನೀರು

ಶ್ರೀ ಕ್ಷೇತ್ರ ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿ ನೀರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

ಉಡುಪಿ ಜಿಲ್ಲಾದ್ಯಂತ ಅಬ್ಬರದ ಮಳೆ; ಜನಜೀವನ ಅಸ್ತವ್ಯಸ್ತ

ಉಡುಪಿ ಜಿಲ್ಲಾದ್ಯಂತ ಅಬ್ಬರದ ಮಳೆ; ಜನಜೀವನ ಅಸ್ತವ್ಯಸ್ತ

ಕುವೈಟ್‌ನಲ್ಲಿ ತೊಂದರೆಗೆ ಸಿಲುಕಿದ್ದ ಯುವಕ ಊರಿನತ್ತ

ಕುವೈಟ್‌ನಲ್ಲಿ ತೊಂದರೆಗೆ ಸಿಲುಕಿದ್ದ ಯುವಕ ಊರಿನತ್ತ

ಶ್ರೀ ಕ್ಷೇತ್ರ ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿ ನೀರು

ಶ್ರೀ ಕ್ಷೇತ್ರ ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿ ನೀರು

ನೀರಿನಲ್ಲಿ ಮುಳುಗಿ ನಾಪತ್ತೆ ಪ್ರಕರಣ : ಮೂರನೇ ದಿನವೂ ಯುವಕನ ಸುಳಿವು ಪತ್ತೆಯಿಲ್ಲ

ನೀರಿನಲ್ಲಿ ಮುಳುಗಿ ನಾಪತ್ತೆ ಪ್ರಕರಣ : ಮೂರನೇ ದಿನವೂ ಯುವಕನ ಸುಳಿವು ಪತ್ತೆಯಿಲ್ಲ

MUST WATCH

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

udayavani youtube

ವಿಟ್ಲ ಸಾರಡ್ಕ ಬಳಿ ಕುಸಿದ ಗುಡ್ಡ : ಕರ್ನಾಟಕ – ಕೇರಳ ಸಂಚಾರ ಬಂದ್

ಹೊಸ ಸೇರ್ಪಡೆ

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕು

ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕು

ಪ್ರತಿಕೂಲ ಹವಾಮಾನದ ಹಿನ್ನೆಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಪ್ರತಿಕೂಲ ಹವಾಮಾನದ ಹಿನ್ನೆಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

ಉಡುಪಿ ಜಿಲ್ಲಾದ್ಯಂತ ಅಬ್ಬರದ ಮಳೆ; ಜನಜೀವನ ಅಸ್ತವ್ಯಸ್ತ

ಉಡುಪಿ ಜಿಲ್ಲಾದ್ಯಂತ ಅಬ್ಬರದ ಮಳೆ; ಜನಜೀವನ ಅಸ್ತವ್ಯಸ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.