Maharashtra ಕನ್ನಡ ಶಿಕ್ಷಕರ ನೇಮಕವೇ ಆಗಿಲ್ಲ !ಚಕಾರ ಎತ್ತದ ಕರ್ನಾಟಕ ಗಡಿಯ ಶಾಸಕರು

ಕರ್ನಾಟಕ ಗಡಿಭಾಗದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಿಸಲು ಮಹಾರಾಷ್ಟ್ರ ಸರಕಾರದ ವ್ಯವಸ್ಥಿತ ಕುತಂತ್ರ: ಆರೋಪ

Team Udayavani, Jun 20, 2024, 6:25 AM IST

kaMaharashtra ಕನ್ನಡ ಶಿಕ್ಷಕರ ನೇಮಕವೇ ಆಗಿಲ್ಲ !ಚಕಾರ ಎತ್ತದ ಕರ್ನಾಟಕ ಗಡಿಯ ಶಾಸಕರುMaharashtra ಕನ್ನಡ ಶಿಕ್ಷಕರ ನೇಮಕವೇ ಆಗಿಲ್ಲ !ಚಕಾರ ಎತ್ತದ ಕರ್ನಾಟಕ ಗಡಿಯ ಶಾಸಕರುMaharashtra ಕನ್ನಡ ಶಿಕ್ಷಕರ ನೇಮಕವೇ ಆಗಿಲ್ಲ !ಚಕಾರ ಎತ್ತದ ಕರ್ನಾಟಕ ಗಡಿಯ ಶಾಸಕರು

ಬೆಳಗಾವಿ: ಕರ್ನಾಟಕದ ಗಡಿಭಾಗದಲ್ಲಿ ರುವ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಿಸುತ್ತಿರುವ ಮಹಾರಾಷ್ಟ್ರ ಸರಕಾರವು ಸದ್ದಿಲ್ಲದೆ ಇನ್ನೊಂದು ಪಿತೂರಿ ಮಾಡುತ್ತಿದೆ ಎಂದು ಆರೋಪಿಸ ಲಾಗಿದೆ. ಅದು ಕಳೆದ 15 ವರ್ಷಗಳಿಂದ ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿಯನ್ನೇ ಮಾಡಿಲ್ಲ ಎನ್ನುವ ಸಂಗತಿ ಈಗ ಹೊರಬಿದ್ದಿದೆ. ಉರ್ದು ಭಾಷಾ ಶಿಕ್ಷಕರ ನೇಮಕಾತಿ ಮಾಡಿದ್ದು, ಕನ್ನಡ ಶಾಲೆಗಳಿಗೆ ಮಾತ್ರ ಅರ್ಹ ಶಿಕ್ಷಕರಿದ್ದರೂ ಮಹಾರಾಷ್ಟ್ರ ಸರಕಾರ ಅವರನ್ನು ಪರಿಗಣಿಸಿಲ್ಲ.

15 ವರ್ಷಗಳಿಂದ ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಮಾಡಿಲ್ಲ. ಇದು ಗಡಿ ಭಾಗದ ಕನ್ನಡ ಶಾಲೆಗಳನ್ನು ಶಾಶ್ವತವಾಗಿ ಮುಚ್ಚುವ ಹುನ್ನಾರದ ಒಂದು ಭಾಗ ಎಂಬುದು ಅಲ್ಲಿನ ಕನ್ನಡ ಹೋರಾಟಗಾರರ ಅಸಮಾಧಾನ.
ಕರ್ನಾಟಕದಲ್ಲಿ ಮರಾಠಿ ಶಾಲೆಗಳಿಗೆ ಸೌಲಭ್ಯ ಗಳನ್ನು ಕಲ್ಪಿಸುತ್ತಿಲ್ಲ, ಶಿಕ್ಷಕರ ಕೊರತೆ ಇದೆ ಎಂದೆಲ್ಲ ಆರೋಪ ಮಾಡುವ ಮಹಾರಾಷ್ಟ್ರ ಸರಕಾರವು ತನ್ನ ಗಡಿಯ ಸರಕಾರಿ ಕನ್ನಡ ಶಾಲೆಗಳ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಕನ್ನಡ ಶಾಲೆಗಳಿಗೆ ಮರಾಠಿ ಮಾಧ್ಯಮ ಶಿಕ್ಷಕರ ನೇಮಕ ಏಕೆ ಎನ್ನುವ ಪ್ರಶ್ನೆಗೆ ಅದರ ಬಳಿ ಉತ್ತರ ಇಲ್ಲ.

ಗಡಿಭಾಗದ ಕನ್ನಡ ಶಾಲೆಗಳ ಶಿಕ್ಷಕರ ನೇಮಕಾತಿ ವಿಷಯ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದರೂ ಮಹಾರಾಷ್ಟ್ರ ಗಡಿಯ ಕರ್ನಾಟಕದ ಜಿಲ್ಲೆಗಳ ಶಾಸಕರ್ಯಾರೂ ಇದರ ಬಗ್ಗೆ ಆಕ್ಷೇಪ ಎತ್ತಿಲ್ಲ. ಸರಕಾರದ ಮೇಲೆ ಒತ್ತಡ ತರುವ ಕೆಲಸಕ್ಕೆ ಮುಂದಾಗಿಲ್ಲ.

ಶಿಕ್ಷಕರ ಸಮಸ್ಯೆ ಹೊಸದಲ್ಲ
ಮಹಾರಾಷ್ಟ್ರದ ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಗಳಲ್ಲಿ ಸುಮಾರು 40 ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯ ಮಕ್ಕಳು ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು, ಈ ಪ್ರದೇಶಗಳಲ್ಲಿ 300ಕ್ಕೂ ಹೆಚ್ಚು ಕನ್ನಡ ಶಾಲೆಗಳಿವೆ.

ಆದರೆ ಈ ಶಾಲೆಗಳಿಗೆ ಹಲವಾರು ವರ್ಷಗಳಿಂದ ಕನ್ನಡ ಶಿಕ್ಷಕರ ನೇಮಕಾತಿ ಮಾಡಿಲ್ಲ. ಇದರ ಬಗ್ಗೆ ಕನ್ನಡ ಹೋರಾಟಗಾರರು ನಿರಂತರ ಆಗ್ರಹ ಮಾಡುತ್ತ ಬಂದಿದ್ದರೂ ಅದಕ್ಕೆ ಸೊಪ್ಪು ಹಾಕದ ಮಹಾರಾಷ್ಟ್ರ ಸರಕಾರವು ಈಗ ಏಕಾಏಕಿ ಕನ್ನಡ ಬಾರದ ಸುಮಾರು 15 ಶಿಕ್ಷಕರನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ನೇಮಕ ಮಾಡಿದೆ.
ಕನ್ನಡಿಗರು ಹೆಚ್ಚಿನ ಸಂಖ್ಯೆ ಯಲ್ಲಿರುವ ಭಾಷಾ ಅಲ್ಪಸಂಖ್ಯಾಕ ಪ್ರದೇಶಗಳಾದ ಸಾಂಗ್ಲಿ ಹಾಗೂ ಸೊಲ್ಲಾಪುರ ಜಿಲ್ಲೆಯ ದಕ್ಷಿಣ ಭಾಗ ಜತ್‌, ಅಕ್ಕಲಕೋಟೆ ತಾಲೂಕುಗಳು ಕಡ್ಡಾಯ ಮರಾಠಿ ಭಾಷಾ ಕಲಿಕೆಯಿಂದ ವಿನಾಯಿತಿ ಪಡೆದಿದ್ದರೂ ಸರಕಾರ ಮಾತ್ರ ಇದನ್ನು ಸಂಪೂರ್ಣ ಕಡೆಗಣಿಸಿದೆ.

ಸಂವಿಧಾನ ಬದ್ಧ
ಹಕ್ಕು ಏನು?
ಸಂವಿಧಾನದ ಅನುಚ್ಛೇದ 347, 350 ಮತ್ತು 350ಎ ಪ್ರಕಾರ ಭಾಷಾ ಅಲ್ಪಸಂಖ್ಯಾಕ ಪ್ರದೇಶಗಳ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಭಾಷಾ ಅಲ್ಪಸಂಖ್ಯಾಕ ವಿದ್ಯಾರ್ಥಿಗಳಿಗೆ ತಮ್ಮ ಮಾತೃ ಭಾಷೆಯನ್ನು ಕಲಿಯುವುದನ್ನು ನಿರ್ಬಂಧಿಸುವಂತಿಲ್ಲ ಅಥವಾ ಮಾತೃ ಭಾಷೆ ಹೊರತು ಅನ್ಯ ಭಾಷೆ ಕಲಿಯಲು ಒತ್ತಾಯಿಸುವಂತಿಲ್ಲ. ಅದರೆ ಇದಾವುದೂ ಇಲ್ಲಿ ಪಾಲನೆಯಾಗುತ್ತಿಲ್ಲ ಎಂಬುದು ಸಾಂಗ್ಲಿ ಮತ್ತು ಜತ್‌ ಭಾಗದ ಕನ್ನಡ ಹೋರಾಟಗಾರರ ಆರೋಪ.

ಮನವಿ
ಹಾಗೆಂದು ಗಡಿ ಭಾಗದ ಕನ್ನಡ ಶಾಲೆಗಳ ದುಸ್ಥಿತಿ ಹಾಗೂ ಕನ್ನಡ ಶಿಕ್ಷಕರ ಕೊರತೆ ಬಗ್ಗೆ ಕರ್ನಾಟಕ ಸರಕಾರಕ್ಕೆ ಗೊತ್ತಿಲ್ಲ ಎನ್ನುವಂತಿಲ್ಲ. ಸರಕಾರದ ಮುಂದೆ ಸಮಸ್ಯೆಗಳ ಸಮಗ್ರ ವರದಿಗಳೇ ಇವೆ. ಕನ್ನಡ ಹೋರಾಟಗಾರರ ಮನವಿಗಳ ಗಂಟೇ ಇದೆ. ಆದರೆ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಇಚ್ಛಾಶಕ್ತಿ ಇಲ್ಲ ಅಷ್ಟೇ.
ಕರ್ನಾಟಕದ ಗಡಿಭಾಗದಲ್ಲಿರುವ ಮರಾಠಿ ಶಾಲೆಗಳಿಗೆ ಕರ್ನಾಟಕ ಸರಕಾರ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಮರಾಠಿ ಶಿಕ್ಷಕರನ್ನು ನೇಮಿಸುವ ರಾಜ್ಯ ಸರಕಾರವು ಇದೇ ಮಾರ್ಗವನ್ನು ನೀವೂ ಅನುಸರಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಏಕೆ ತಾಕೀತು ಮಾಡುತ್ತಿಲ್ಲ? ಎರಡೂ ಸರಕಾರಗಳು ಪರಸ್ಪರ ಶಾಶ್ವತ ಒಪ್ಪಂದ ಮಾಡಿಕೊಳ್ಳಲು ಏಕೆ ಆಸಕ್ತಿ ತೋರಿಸುತ್ತಿಲ್ಲ ಎಂಬ ಪ್ರಶ್ನೆಗಳು ಎಲ್ಲರನ್ನು ಕಾಡುತ್ತಿದೆ.

ಕಳೆದ 15 ವರ್ಷ ಗಳಿಂದ ಉದ್ದೇಶ ಪೂರ್ವಕ ವಾಗಿ ಕನ್ನಡ ಶಿಕ್ಷಕರನ್ನು ನೇಮಕ ಮಾಡದ ಮಹಾರಾಷ್ಟ್ರ ಸರಕಾರ ಹಂತಹಂತವಾಗಿ ಕನ್ನಡ ಶಾಲೆಗಳನ್ನು ಮುಚ್ಚುವ ಕ್ರಮಕ್ಕೆ ಮುಂದಾಗಿದೆ. ಕನ್ನಡ ಶಾಲೆಗಳಿಗೆ ಉರ್ದು ಶಿಕ್ಷಕರನ್ನು ನೇಮಕ ಮಾಡಿ ಕನ್ನಡ ಕಲಿತವರಿಗೆ ಬಹಳ ಅನ್ಯಾಯ ಮಾಡಿದೆ. ಕರ್ನಾಟಕ ಸರಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಗಡಿ ಭಾಗದ ಕನ್ನಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ.
– ಸೋಮಶೇಖರ ಜಾಮಶೆಟ್ಟಿ,
ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷರು

ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಗಳ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮರಾಠಿ ಶಿಕ್ಷಕರನ್ನು ನೇಮಿಸುವ ಮೂಲಕ ಮಹಾರಾಷ್ಟ್ರ ಸರಕಾರವು ಸಂವಿಧಾನದ ಅನುಚ್ಛೇದ 14, 29, 30, 347, 350 ಮತ್ತು 350ಎ ಅನ್ನು ಉಲ್ಲಂಘಿಸಿದೆ. ಇದನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಇದರ ಬಗ್ಗೆ ಮಹಾರಾಷ್ಟ್ರ ಸರಕಾರದ ಗಮನಕ್ಕೆ ತರುವಂತೆ ನಮ್ಮ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿದ್ದೇನೆ.
– ಸೋಮಶೇಖರ ಬೇವಿನಮರದ,
ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು

ಮಹಾರಾಷ್ಟ್ರದಲ್ಲಿ ಕನ್ನಡ ಕಲಿಸುವ ಶಿಕ್ಷಕರೇ ಇಲ್ಲ. ಅಲ್ಲಿನ ಸರಕಾರ 10 ವರ್ಷಗಳ ಹಿಂದೆಯೇ ಡಿಇಡಿ ಕೋರ್ಸ್‌ಗಳನ್ನು ಬಂದ್‌ ಮಾಡಿದೆ. ಹೀಗಾಗಿ ಅಲ್ಲಿ ಕನ್ನಡ ಶಿಕ್ಷಕರೇ ಇಲ್ಲ. ಅಲ್ಲಿನ ಮಕ್ಕಳು ಅನಿವಾರ್ಯವಾಗಿ ಮರಾಠಿ ಕಲಿಯಬೇಕು. ಈ ಬಗ್ಗೆ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ.
ಸತೀಶ ಜಾರಕಿಹೊಳಿ,
ಲೋಕೋಪಯೋಗಿ ಸಚಿವ

- ಕೇಶವ ಆದಿ

ಟಾಪ್ ನ್ಯೂಸ್

10

ಬದ್ಧರಾಗಿರುವುದೆಂದರೆ ಸುಲಭವಲ್ಲ, ಬುದ್ಧನಾಗಿರುವಷ್ಟೇ ಕಠಿಣ… 

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

9-hearing-screening

Hearing Screening: ಹಿರಿಯ ವಯಸ್ಕರಲ್ಲಿ ಶ್ರವಣ ತಪಾಸಣೆಯ ಅಗತ್ಯ

Jagannath Ratna Bhandara Treasury of Puri opened after 46 years

Ratna Bhandar: 46 ವರ್ಷಗಳ ಬಳಿಕ ತೆರೆದ ಪುರಿಯ ಜಗನ್ನಾಥ ರತ್ನ ಭಂಡಾರ ಖಜಾನೆ

OTT release: ಓಟಿಟಿಗೆ ಬರಲಿದೆ ಪೃಥ್ವಿರಾಜ್‌ ಸುಕುಮಾರನ್‌ ʼಆಡುಜೀವಿತಂʼ; ಎಲ್ಲಿ, ಯಾವಾಗ?

OTT release: ಓಟಿಟಿಗೆ ಬರಲಿದೆ ಪೃಥ್ವಿರಾಜ್‌ ಸುಕುಮಾರನ್‌ ʼಆಡುಜೀವಿತಂʼ; ಎಲ್ಲಿ, ಯಾವಾಗ?

Thomas Matthew Crooks,

Republican; ಡೊನಾಲ್ಡ್ ಟ್ರಂಪ್ ಗೆ ಗುಂಡಿಕ್ಕಿದವನು ಅವರದೇ ಪಕ್ಷದ ಸದಸ್ಯ! ಯಾರೀತ ಥೋಮಸ್?

Kollywood: ʼಇಂಡಿಯನ್-2‌ʼ ಥಿಯೇಟರ್‌ನಲ್ಲಿರವಾಗಲೇ ಓಟಿಟಿಗೆ ಬರಲಿದೆ ʼಇಂಡಿಯನ್‌ʼ

Kollywood: ʼಇಂಡಿಯನ್-2‌ʼ ಥಿಯೇಟರ್‌ನಲ್ಲಿರವಾಗಲೇ ಓಟಿಟಿಗೆ ಬರಲಿದೆ ʼಇಂಡಿಯನ್‌ʼ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raibag: ತೋಟದ ಶಾಲೆಗೆ ಧಿಡೀರ್ ಭೇಟಿ ನೀಡಿದ ಶಾಸಕ… ಪರಿಶೀಲನೆ

Raibag: ತೋಟದ ಶಾಲೆಗೆ ಧಿಡೀರ್ ಭೇಟಿ ನೀಡಿದ ಶಾಸಕ… ಮೂಲಭೂತ ಸೌಕರ್ಯಗಳ ಪರಿಶೀಲನೆ

Valmiki scam: ಶಾಸಕರು ಭಾಗಿಯಾಗಿದ್ದರೆ ಕಳಂಕ: ಸತೀಶ ಜಾರಕಿಹೊಳಿ

Valmiki scam: ಶಾಸಕರು ಭಾಗಿಯಾಗಿದ್ದರೆ ಕಳಂಕ: ಸತೀಶ ಜಾರಕಿಹೊಳಿ

1-a-belgavi

Belagavi; ರಸ್ತೆ ಪಕ್ಕದ ಸೇತುವೆಗೆ ಕಾರು ಡಿಕ್ಕಿ: ಇಬ್ಬರು ಯುವಕರು ಸಾವು

Lakshmi Hebbalkar ಬಿದ್ದಾಗ ಸೊರಗೋದು, ಗೆದ್ದಾಗ ಸೊಕ್ಕು ಮಾಡೋದು ರಾಜಕಾರಣವಲ್ಲ

Lakshmi Hebbalkar ಬಿದ್ದಾಗ ಸೊರಗೋದು, ಗೆದ್ದಾಗ ಸೊಕ್ಕು ಮಾಡೋದು ರಾಜಕಾರಣವಲ್ಲ

Govt. school; ಮೂಲಭೂತ ಸೌಕರ್ಯಗಳಿಂದ ವಂಚಿತವಾದ ರಾಯಭಾಗ ಪಟ್ಟಣದ ಸರ್ಕಾರಿ ಶಾಲೆ

Govt. school; ಮೂಲಭೂತ ಸೌಕರ್ಯಗಳಿಂದ ವಂಚಿತವಾದ ರಾಯಭಾಗ ಪಟ್ಟಣದ ಸರ್ಕಾರಿ ಶಾಲೆ

MUST WATCH

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

udayavani youtube

ಮಾತು ನಿಲ್ಲಿಸಿದ ಅಪರ್ಣಾ | ಗೆಳತಿಯರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳು

ಹೊಸ ಸೇರ್ಪಡೆ

10-cow

ರಸ್ತೆಯಲ್ಲಿ ಓಡಾಡುತ್ತಿದ್ದ ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಸೇರಿಸಿದ ಪೊಲೀಸರು

Davanagere; Indefinite struggle demanding fulfillment of 19 demands of Gram Panchayat employees

CITU; ಗ್ರಾ.ಪಂ ನೌಕರರ 19 ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಹೋರಾಟ

10

ಬದ್ಧರಾಗಿರುವುದೆಂದರೆ ಸುಲಭವಲ್ಲ, ಬುದ್ಧನಾಗಿರುವಷ್ಟೇ ಕಠಿಣ… 

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

9-hearing-screening

Hearing Screening: ಹಿರಿಯ ವಯಸ್ಕರಲ್ಲಿ ಶ್ರವಣ ತಪಾಸಣೆಯ ಅಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.