Udayavni Special

ಸೋಂಕಿತರ ಸೇವೆಗೆ ಮಾದರಿ ಗಣೇಶ

ಸ್ವಂತ ವೆಚ್ಚದಲ್ಲಿ 22 ವೈದ್ಯಕೀಯ ಸಿಬ್ಬಂದಿ ನೇಮಕ­! ಆಸ್ಪತ್ರೆಯಲ್ಲಿ ‌ಪ್ರತಿ ದಿನ ಉಚಿತ ಊಟದ ವ್ಯವಸ್ಥೆ

Team Udayavani, May 29, 2021, 5:25 PM IST

45654645645

ವರದಿ : ಮಹಾದೇವ ಪೂಜೇರಿ

ಚಿಕ್ಕೋಡಿ: ಕೋವಿಡ್‌ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕೊಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿ ತಮ್ಮ ಕ್ಷೇತ್ರದ ಜನರನ್ನು ಕೊರೊನಾ ಸಂಕಟದಿಂದ ಪಾರು ಮಾಡಲು ನಿರಂತರ ಪ್ರಯತ್ನದ ಜೊತೆಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ.

ಕ್ಷೇತ್ರದ ಜನರಿಗೆ ಯಾವುದೇ ತೊಂದರೆಯಾಗದಂತೆ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಎರಡು ಕೋವಿಡ್‌ ಆಸ್ಪತ್ರೆ, ಯಕ್ಸಂಬಾ ಮತ್ತು ಸದಲಗಾ ಪಟ್ಟಣದಲ್ಲಿ ಕೋವಿಡ್‌ ಆಸ್ಪತ್ರೆ ಆರಂಭ ಮಾಡಿ ಸೋಂಕಿತರ ಆರೈಕೆಗೆ ಅನುಕೂಲ ಕಲ್ಪಿಸಿದ್ದಾರೆ.

ಸ್ವಂತ ಖರ್ಚಿನಲ್ಲಿ ವೈದ್ಯರ ನೇಮಕ: ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದನ್ನು ಮನಗಂಡು ಶಾಸಕ ಹುಕ್ಕೇರಿ ಅವರು ತಮ್ಮ ಅನ್ನಪೂರ್ಣೇಶ್ವರಿ ಫೌಂಡೇಶನ್‌ ಮೂಲಕ ವೈದ್ಯರು ಸೇರಿದಂತೆ 22 ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಿಕೊಂಡು ಅವರನ್ನು ಚಿಕ್ಕೋಡಿ ತಾಲೂಕಿನ ಅಂಕಲಿ, ಯಕ್ಸಂಬಾ ಮತ್ತು ಸದಲಗಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಿಯೋಜಿಸುವ ಮೂಲಕ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. 8 ಜನ ಎಂಬಿಬಿಎಸ್‌ ವೈದ್ಯರು, ಇಬ್ಬರು ಎಂಡಿ, ಇಬ್ಬರು ಬಿಎಎಂಎಸ್‌ ವೈದ್ಯರು ಹಾಗೂ ಸ್ಟಾಫ್‌ ನರ್ಸ ಮತ್ತು ಡಿ ಗ್ರೂಪ್‌ನ 10 ಜನ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ. ಎಂ.ಡಿ ವೈದ್ಯರಿಗೆ 4 ಲಕ್ಷ ರೂ, ಎಂಬಿಬಿಎಸ್‌ ವೈದ್ಯರಿಗೆ 3 ಲಕ್ಷ ರೂ, ಬಿಎಎಂಎಸ್‌ ವೈದ್ಯರಿಗೆ 60 ಸಾವಿರ ರೂ, ಸ್ಟಾಫ್‌ ನರ್ಸ್‌ಗೆ 30 ಸಾವಿರ ರೂ. ಹಾಗೂ ಡಿ ಗ್ರೂಪ್‌ ಸಿಬ್ಬಂದಿಗಳಿಗೆ 20 ಸಾವಿರ ರೂ. ವೇತನ ನಿಗದಿ ಮಾಡಿದ್ದಾರೆ. ಬರುವ ದಿನಗಳಲ್ಲಿ ಖಡಕಲಾಟ ಹಾಗೂ ಪಟ್ಟಣಕುಡಿ ಪ್ರಾಥಮಿಕ ಆಸ್ಪತ್ರೆಗಳಲ್ಲಿಯೂ ಸಹ ವೈದ್ಯರನ್ನು ನೇಮಕ ಮಾಡಿಕೊಂಡು ಕೊರೊನಾ ನಿಯಂತ್ರಣಕ್ಕೆ ಮುಂದಾಗಲಿದ್ದಾರೆ.

ಕ್ಷೇತ್ರದ ಜನರಿಗೆ ವ್ಯಾಕ್ಸಿನ್‌ ಕೊಡಿಸಲು ವಾಹನದ ವ್ಯವಸ್ಥೆ, ಕೋವಿಡ್‌ ಆಸ್ಪತ್ರೆಯಲ್ಲಿ ಉಚಿತ ಊಟದ ವ್ಯವಸ್ಥೆ, ಆಕ್ಸಿಜನ್‌ ಕೊರತೆ ನೀಗಿಸುವಲ್ಲಿ ನಿರಂತರವಾಗಿ ಅಧಿ ಕಾರಿಗಳ ಸಭೆ ನಡೆಸುತ್ತಿರುವ ಶಾಸಕ ಗಣೇಶ ಹುಕ್ಕೇರಿ ಅವರು ಹಗಲು ರಾತ್ರಿ ಎನ್ನದೇ ಕೊರೊನಾ ನಿಯಂತ್ರಣ ದಲ್ಲಿ ಸಮರೋಪಾದಿಯಲ್ಲಿ ತೊಡಗಿಕೊಂಡಿದ್ದಾರೆ.

ಪುತ್ರನಿಗೆ ತಂದೆ ಸಾಥ್‌: ಕೊರೊನಾ ವಿರುದ್ಧ ಹೋರಾಟದಲ್ಲಿ ಶಾಸಕ ಗಣೇಶ ಹುಕ್ಕೇರಿಗೆ ತಂದೆ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಸಂಪೂರ್ಣ ಸಾಥ್‌ ನೀಡಿದ್ದಾರೆ. 75ರ ಇಳಿವಯಸ್ಸಿನಲ್ಲಿಯೂ ಕೂಡ ಚಿಕ್ಕೋಡಿ-ಸದಲಗಾ ಕ್ಷೇತ್ರದ ಪ್ರತಿಯೊಂದು ಹಳ್ಳಿಗೆ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸುತ್ತಿದ್ದಾರೆ.

ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಮತ್ತು ತಾಲೂಕಿನ ವಿವಿಧ ಪ್ರಾಥಮಿಕ ಆಸ್ಪತ್ರೆಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿಯ ಸಮಸ್ಯೆ ನಿವಾರಿಸಿ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಗಳಿಗೆ ಜನರೇಟರ್‌ ಸೌಲಭ್ಯ: ಮಳೆ-ಗಾಳಿಗೆ ವಿದ್ಯುತ್‌ ಸಮಸ್ಯೆ ಆಗಬಾರೆಂದು ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನ ನಾಲ್ಕು ಆಸ್ಪತ್ರೆಗಳಿಗೆ ಹುಕ್ಕೇರಿ ಕುಟುಂಬ ಅನ್ನಪೂರ್ಣೇಶ್ವರಿ ಫೌಂಡೇಶನ್‌ ಮೂಲಕ ಹೊಸ ಜನರೇಟರ್‌ ಒದಗಿಸಿ ವಿದ್ಯುತ್‌ ಸಮಸ್ಯೆ ನೀಗಿಸಿದ್ದಾರೆ.

ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ, ಸದಲಗಾ, ಯಕ್ಸಂಬಾ ಮತ್ತು ಖಡಕಲಾಟ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 16 ಲಕ್ಷ ರೂ. ವೆಚ್ಚದಲ್ಲಿ ಜನರೇಟರ್‌ ಸೌಲಭ್ಯ ಕಲ್ಪಿಸಿದ್ದಾರೆ.

ಆಸ್ಪತ್ರೆಗಳಿಗೆ ಆಕ್ಸಿಜನ್‌ ಪೈಪಲೈನ್‌ ಅಳವಡಿಕೆ: ಹೆಚ್ಚಿನ ಸೋಂಕಿತರು ಆಕ್ಸಿಜನ್‌ ಕೊರತೆಯಿಂದ ಬಳಲುತ್ತಿರುವ ಪರಿಣಾಮ ಕೊರೊನಾ ಪೀಡಿತರಿಗೆ ಅನುಕೂಲವಾಗಲು ತಾಲೂಕಿನ ಎಲ್ಲ ಆಸ್ಪತ್ರೆಗಳಿಗೆ ಆಕ್ಸಿಜನ್‌ ಪೈಪ್‌ಲೈನ್‌ ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಉಚಿತ ಊಟ-ಔಷಧ: ಶಾಸಕ ಗಣೇಶ ಹುಕ್ಕೇರಿ ಮತ್ತು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಕೊರೊನಾ ಸೋಂಕು ತಗುಲಿರುವ ಗ್ರಾಮೀಣ ಪ್ರದೇಶದ ಬಡ ಜನರಿಗೆ ಉಚಿತ ಊಟ, ಔಷಧ ನೀಡಿ, ಬಡ ಜನರ ಕಷ್ಟಕ್ಕೆ ಹೆಗಲು ಕೊಟ್ಟು ನಾವು ನಿಮ್ಮೊಂದಿಗೆ ಇದ್ದೇವೆ ಎಂದು ತಾಲೂಕಿನ ಜನರಿಗೆ ಧೆ„ರ್ಯ ತುಂಬುತ್ತಿದ್ದಾರೆ.

ಟಾಪ್ ನ್ಯೂಸ್

ಅಮೆರಿಕನ್‌ ನಕಲಿ ಡಾಲರ್‌ ದಂಧೆ-ಇಬ್ಬರು ಕ್ಯಾಮರೂನ್‌ ದೇಶದ ಪ್ರಜೆಗಳ ಬಂಧನ

ಅಮೆರಿಕನ್‌ ನಕಲಿ ಡಾಲರ್‌ ದಂಧೆ-ಇಬ್ಬರು ಕ್ಯಾಮರೂನ್‌ ದೇಶದ ಪ್ರಜೆಗಳ ಬಂಧನ

ಆಂಧ್ರ ಹೈಕೋರ್ಟ್‌ನಿಂದಲೇ ಸಿಎಂ ಜಗನ್‌ ವಿರುದ್ಧ 11 ಪ್ರಕರಣ!

ಆಂಧ್ರ ಹೈಕೋರ್ಟ್‌ನಿಂದಲೇ ಸಿಎಂ ಜಗನ್‌ ವಿರುದ್ಧ 11 ಪ್ರಕರಣ!

j14srs4

ಅನ್‌ಲಾಕ್‌ಗೂ ಮೊದಲೇ ಮುಂಡಿಗೆಕೆರೆಗೆ ಬಂದವು ಬೆಳ್ಳಕ್ಕಿಗಳು!

ವಿಜಯಪುರ ಮರ್ಯಾದಾ ಹತ್ಯೆ: ನಾಲ್ವರು ಆರೋಪಿಗಳ ಬಂಧನ

ವಿಜಯಪುರ ಮರ್ಯಾದಾ ಹತ್ಯೆ: ನಾಲ್ವರು ಆರೋಪಿಗಳ ಬಂಧನ

23msk04 (1)

ಬೀಜ ಮಾತ್ರವಲ್ಲ ಗೊಬ್ಬರವೂ ನಕಲಿ!

Delimitation, peaceful polls important milestones in restoring statehood: Amit Shah after all-party meet on Jammu and Kashmir

ಜಮ್ಮು ಮತ್ತು ಕಾಶ್ಮೀರದ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಬದ್ಧ : ಅಮಿತ್ ಶಾ

Committed to restoring statehood: PM Narendra Modi tells J&K leaders after all-party meet

ಜಮ್ಮು ಕಾ‍ಶ್ಮೀರಕ್ಕೆ ಶೀಘ್ರ ರಾಜ್ಯ ಸ್ಥಾನಮಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24-23

ಆಧುನಿಕ ತಂತ್ರಜ್ಞಾನ ಸದ್ಬಳಕೆಯಾಗಲಿ

24-22

ದೇಶಕ್ಕೆ ಶ್ಯಾಮಪ್ರಸಾದ್‌ ಮುಖರ್ಜಿ ಕೊಡುಗೆ ಅಪಾರ

24-22

ರೈತರಿಗೆ ಬೆಳೆ ವಿಮೆ ಕೊಡಿಸಲು ಪ್ರಾಮಾಣಿಕ ಯತ್ನ : ಶ್ರೀರಾಮುಲು

24-21

ಅಗಲಿದ ಗಣ್ಯರಿಗೆ ಕಸಾಪ ನುಡಿ ನಮನ

j14srs4

ಅನ್‌ಲಾಕ್‌ಗೂ ಮೊದಲೇ ಮುಂಡಿಗೆಕೆರೆಗೆ ಬಂದವು ಬೆಳ್ಳಕ್ಕಿಗಳು!

MUST WATCH

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

udayavani youtube

ಖಾಸಗಿ TECHIE, ದೇಸಿ ದನ ಸಾಕಣೆಯಲ್ಲಿ ಯಶಸ್ಸು ಕಂಡಿದ್ದು ಹೇಗೆ ?

ಹೊಸ ಸೇರ್ಪಡೆ

ಅಮೆರಿಕನ್‌ ನಕಲಿ ಡಾಲರ್‌ ದಂಧೆ-ಇಬ್ಬರು ಕ್ಯಾಮರೂನ್‌ ದೇಶದ ಪ್ರಜೆಗಳ ಬಂಧನ

ಅಮೆರಿಕನ್‌ ನಕಲಿ ಡಾಲರ್‌ ದಂಧೆ-ಇಬ್ಬರು ಕ್ಯಾಮರೂನ್‌ ದೇಶದ ಪ್ರಜೆಗಳ ಬಂಧನ

24-23

ಆಧುನಿಕ ತಂತ್ರಜ್ಞಾನ ಸದ್ಬಳಕೆಯಾಗಲಿ

24-22

ದೇಶಕ್ಕೆ ಶ್ಯಾಮಪ್ರಸಾದ್‌ ಮುಖರ್ಜಿ ಕೊಡುಗೆ ಅಪಾರ

24-22

ರೈತರಿಗೆ ಬೆಳೆ ವಿಮೆ ಕೊಡಿಸಲು ಪ್ರಾಮಾಣಿಕ ಯತ್ನ : ಶ್ರೀರಾಮುಲು

24-21

ಅಗಲಿದ ಗಣ್ಯರಿಗೆ ಕಸಾಪ ನುಡಿ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.