ಮೊಬೈಲ್‌ ಕಸಿದುಕೊಂಡಿದ್ದ ತಂದೆಯ ರುಂಡ-ಕಾಲು ಕತ್ತರಿಸಿದ ಮಗ

Team Udayavani, Sep 9, 2019, 8:53 AM IST

ಬೆಳಗಾವಿ: ಮೊಬೈಲ್ ಕಸಿದುಕೊಂಡಿದ್ದಕ್ಕೆ ಮಗ ತನ್ನ ತಂದೆಯ ರುಂಡ ಹಾಗೂ ಕಾಲನ್ನು ಬೇಪರ್ಡಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಕಾಕತಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ನಡೆದಿದೆ.

ಕಾಕತಿಯ ಸಿದ್ದೇಶ್ವರ ನಗರದ ಶಂಕರ ದೇವಪ್ಪ ಕುಂಬಾರ(60) ಕೊಲೆಗೀಡಾಗಿದ್ದಾರೆ. ಮನೆಯಲ್ಲಿ ರಾತ್ರಿಯಾದರೂ ಮೊಬೈಲ್ ನಲ್ಲಿ ಆಟ ಅಡುತ್ತಿದ್ದಾಗ ಬೇಗ ಮಲಗು ಎಂದು ಬುದ್ದಿ ಮಾತು ಹೇಳಿ ಮೊಬೈಲ್ ಕಸಿದುಕೊಂಡಿದ್ದಕ್ಕೆ ಮಗ ರಘುವೀರ ತನ್ನ ತಂದೆಯನ್ನೇ ಮನೆಯಲ್ಲಿದ್ದ ಇಳಿಗೆಯಿಂದ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಕಳೆದ ಮೂರು ತಿಂಗಳ ಹಿಂದೆಯಷ್ಟೇ ಶಂಕರ ಅವರು ಡಿಆರ್ ಪೊಲೀಸ್ ಹುದ್ದೆಯಿಂದ ನಿವೃತ್ತರಾಗಿದ್ದರು. ಮಗ ರಘುವೀರ ಶಂಕರ ಕುಂಬಾರ(25) ಮೂರು ಬಾರಿ ಡಿಪ್ಲೊಮಾ ಪದವಿ ಫೇಲ್ ಆಗಿ ಮನೆಯಲ್ಲಿಯೇ ಇದ್ದನು.

ಸ್ಥಳಕ್ಕೆ ಗ್ರಾಮೀಣ ಎಸಿಪಿ ಶಿವಾರೆಡ್ಡಿ, ಕಾಕತಿ ಇನ್ಸ್ಪೆಕ್ಟರ್ ಎಸ್.ಎಸ್. ಕೌಜಲಗಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ