ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Team Udayavani, May 1, 2024, 6:01 PM IST

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಉದಯವಾಣಿ ಸಮಾಚಾರ
ಗೋಕಾಕ: ಕಾಂಗ್ರೆಸ್‌ ಪಕ್ಷ ಎಸ್‌ಸಿ ಮತ್ತು ಎಸ್‌ಟಿ ಸಮುದಾಯವನ್ನು ತಮ್ಮ ವೋಟ್‌ ಬ್ಯಾಂಕ್‌ ಆಗಿ ಬಳಸಿಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಿಲ್ಲ. ಎಲ್ಲರನ್ನೂ ಒಗ್ಗೂಡಿಸಿ ಕರೆದುಕೊಂಡು ಹೋಗುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಅವರು ನಗರದ ನ್ಯೂ ಇಂಗ್ಲಿಷ್‌ ಶಾಲೆ ಆವರಣದಲ್ಲಿ ನಡೆದ ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ಮುಸ್ಲಿಮ್‌ ಸಮುದಾಯದವರು ಸಹ ಭಾರತೀಯರೇ. ಕಾಂಗ್ರೆಸ್‌ ಪಕ್ಷದ ಸುಳ್ಳು ಭರವಸೆಗಳಿಗೆ ಕಿವಿಗೊಡದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಬಾರಿ ಮುಸ್ಲಿಂ ಸಮುದಾಯ ಬೆಂಬಲಿಸಿ ಅವರ ಕೈ ಬಲಪಡಿಸಬೇಕು.

ಎಲ್ಲರೊಡನೆ ಎಲ್ಲರ ಶ್ರೇಯೋಭಿವೃದ್ಧಿ ಬಯಸುವ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿಸಲು ನಾವೆಲ್ಲರೂ ಶ್ರಮಿಸೋಣ ಎಂದರು. ಕಾಂಗ್ರೆಸ್‌ ಪಕ್ಷ ನೀಡುತ್ತಿರುವ ಗ್ಯಾರಂಟಿಗಳು ಚುನಾವಣೆ ಗಿಮಿಕ್‌. ಚುನಾವಣೆ ನಂತರ ಎಲ್ಲವನ್ನೂ ಸ್ಥಗಿತಗೊಳಿಸಲಿದ್ದಾರೆ. ಕಾಂಗ್ರೆಸ್‌ನ ಬಿಟ್ಟಿ ಭಾಗ್ಯಗಳು ಮುಂದುವರೆದಲ್ಲಿ ಪಾಕಿಸ್ತಾನ, ಶ್ರೀಲಂಕಾ ದೇಶಗಳಂತೆ ಅರಾಜಕತೆ ಸೃಷ್ಟಿಯಾಗುತ್ತದೆ. ದೇಶದ ಭದ್ರತೆ, ಅಭಿವೃದ್ಧಿಯ ಚುನಾವಣೆ ಇದಾಗಿದ್ದು ಹಗಲಿರುಳು ದೇಶಕ್ಕಾಗಿ ದುಡಿಯುತ್ತಿರುವ ಉಕ್ಕಿನ ಮನುಷ್ಯ ಮೋದಿಯವರನ್ನು ಬೆಂಬಲಿಸೋಣ. ಅವರು ಪ್ರಧಾನಿ ಆಗುವದು ನಿಶ್ಚಿತ.

ಅದರೊಂದಿಗೆ ಜಗದೀಶ ಶೆಟ್ಟರ ಮಂತ್ರಿಯಾಗುವುದು ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಬೆಳಗಾವಿ ಜಿಲ್ಲೆಗೆ ಬಿಜೆಪಿ ಪಕ್ಷ ಅನೇಕ ಕೊಡುಗೆಗಳನ್ನು ನೀಡಿದೆ. ಕಳೆದ ಬಿಜೆಪಿ ಸರಕಾರದಲ್ಲಿ ತಾಲೂಕಿನ ಶಿವಾಪೂರ ಗ್ರಾಮದಲ್ಲಿ ಇಂಡಸ್ಟ್ರಿಯಲ್‌ ಪಾರ್ಕ್‌ ಸ್ಥಾಪಿಸಲು ಸರ್ವೇ ಮಾಡಿಸಲಾಗಿತ್ತು, ಕಾಂಗ್ರೆಸ್‌ ಅಧಿ ಕಾರಕ್ಕೆ ಬಂದಿದ್ದರಿಂದ ಆ ಯೋಜನೆ ಸ್ಥಗಿತಗೊಂಡಿದೆ. ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಅನುಭವಿ ರಾಜಕಾರಣಿ.

ಅವರ ಮೂಲಕ ಬರುವ ದಿನಗಳಲ್ಲಿ ಕೈಗಾರಿಕೆ, ನೀರಾವರಿ, ಆಧುನಿಕ ತಂತ್ರಜ್ಞಾನದ ಕೃಷಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರೊಂದಿಗೆ ಜಿಲ್ಲೆ ಅಭಿವೃದ್ಧಿಯಾಗುತ್ತದೆ. ಜಗದೀಶ ಶೆಟ್ಟರ ಅವರು ನನ್ನ ಮಿತ್ರರಾಗಿದ್ದು ಅವರಿಗೆ ತಮ್ಮ ಮತವನ್ನು ನೀಡಿ ಆಶೀರ್ವದಿ ಸುವಂತೆ ಪ್ರಧಾನಿ ಮೋದಿಯವರೇ ಹೇಳಿದ್ದು, ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.

ಅಭ್ಯರ್ಥಿ ಜಗದೀಶ ಶೆಟ್ಟರ ಮಾತನಾಡಿ, ನರೇಂದ್ರ ಮೋದಿಯವರು ದೇಶದ ಆಸ್ತಿಯಾಗಿದ್ದು ಅವರಂತಹ ಮತ್ತೊಬ್ಬ ಪ್ರಧಾನಿ ಸಿಗಲು ಸಾಧ್ಯವಿಲ್ಲ. ತಮ್ಮ ದಕ್ಷ ಆಡಳಿತದಿಂದ ದೇಶ ವಿದೇಶಗಳಲ್ಲಿ ಜನಪ್ರಿಯರಾಗಿದ್ದಾರೆ. ಯುದ್ಧಕಾಲದಲ್ಲಿ ಭಾರತೀಯರನ್ನು ಸುರಕ್ಷಿತವಾಗಿ ಕರೆ ತಂದಿದ್ದಾರೆ ಎಂದರು.

ವೇದಿಕೆ ಮೇಲೆ ಬೆಳಗಾವಿ ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸುಭಾಸ ಪಾಟೀಲ, ಮಾಜಿ ಶಾಸಕ ಎಮ್‌ ಎಲ್‌ ಮುತ್ತೇನ್ನವರ, ಕೆಎಲ್‌ಇ ನಿರ್ದೇಶಕ ಜಯಾನಂದ ಮುನವಳ್ಳಿ, ಪ್ರಭಾ ಶುಗರ್ ಅಧ್ಯಕ್ಷ ಅಶೋಕ ಪಾಟೀಲ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಚಿಕ್ಕರೇವಣ್ಣ, ಕೆ ವಿ ಪಾಟೀಲ ಇದ್ದರು. ನ್ಯಾಯವಾದಿ ಎಲ್‌ ಎಚ್‌ ಭಂಡಿ ಸ್ವಾಗತಿಸಿ, ವಂದಿಸಿದರು.

Ad

ಟಾಪ್ ನ್ಯೂಸ್

Maharaja Trophy auction: Devdutt Padikkal is the most expensive player

Maharaja Trophy auction: ದೇವದತ್ತ ಪಡಿಕ್ಕಲ್‌ ದುಬಾರಿ ಆಟಗಾರ

Congress: ಮತ್ತೆ ಹೈಕಮಾಂಡ್‌ ಅಂಗಳಕ್ಕೆ ಕೆಪಿಸಿಸಿ ಅಧ್ಯಕ್ಷ ಬದಲು ಚರ್ಚೆ?

Congress: ಮತ್ತೆ ಹೈಕಮಾಂಡ್‌ ಅಂಗಳಕ್ಕೆ ಕೆಪಿಸಿಸಿ ಅಧ್ಯಕ್ಷ ಬದಲು ಚರ್ಚೆ?

Central government says warning labels on samosa, jalebi are false

No health warning: ಸಮೋಸಾ, ಜಿಲೇಬಿಗೆ ಎಚ್ಚರಿಕೆ ಲೇಬಲ್‌ ಸುಳ್ಳು ಎಂದ ಕೇಂದ್ರ ಸರ್ಕಾರ

Nabard–meet

ಪ್ರಸಕ್ತ ಹಣಕಾಸು ವರ್ಷದಲ್ಲಿ ಕರ್ನಾಟಕಕ್ಕೆ 4.46 ಲಕ್ಷ ಕೋಟಿ ರೂ. ಸಾಲ: ನಬಾರ್ಡ್‌

ಅಳಿವೆ ಬಾಗಿಲು ಕಡೆ ಬಂದದ್ದೇ ಮುಳುವಾಯಿತೇ? ತೂಫಾನ್‌ಗೆ ಸಿಕ್ಕಿ ದೋಣಿ ಸಂಪೂರ್ಣ ದಿಕ್ಕಾಪಾಲು

ಅಳಿವೆ ಬಾಗಿಲು ಕಡೆ ಬಂದದ್ದೇ ಮುಳುವಾಯಿತೇ? ತೂಫಾನ್‌ಗೆ ಸಿಕ್ಕಿ ದೋಣಿ ಸಂಪೂರ್ಣ ದಿಕ್ಕಾಪಾಲು

Odisha harassment case: Student dies after 3 days

Odisha se*xual harassment case: 3 ದಿನ ಬಳಿಕ ವಿದ್ಯಾರ್ಥಿನಿ ಸಾವು

Udupi: ಫೈಬರ್‌ ಮೂರ್ತಿ ಎಂದಿದ್ದ ಕಾಂಗ್ರೆಸ್‌ ಆರೋಪ ಸುಳ್ಳು: ಸುನಿಲ್‌ ಕುಮಾರ್‌

Udupi: ಫೈಬರ್‌ ಮೂರ್ತಿ ಎಂದಿದ್ದ ಕಾಂಗ್ರೆಸ್‌ ಆರೋಪ ಸುಳ್ಳು: ಸುನಿಲ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: Rani Channamma University receives IIT Mumbai’s Emerging University Award

Belagavi: ರಾಣಿ ಚನ್ನಮ್ಮ ವಿವಿಗೆ ಮುಂಬೈ ಐಐಟಿಯ ಎಮರ್ಜಿಂಗ್ ಯೂನಿವರ್ಸಿಟಿ ಅವಾರ್ಡ್

Belagavi: ವಿಷಯುಕ್ತ ನೀರು ಸೇವಿಸಿ 12 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Belagavi: ವಿಷಯುಕ್ತ ನೀರು ಸೇವಿಸಿ 12 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

11

Khanapur: ಅಶೋಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕೀಗ ಚಿಕಿತ್ಸೆ

10

Belagavi: ಹಳಿಗೆ ಬಂದ ರಾಚವಿ ಶೈಕ್ಷಣಿಕ ವರ್ಷ

5-belagavi

Belagavi: 5 ಸಾವಿರ ರೂ.ಗಾಗಿ ಜಾನಪದ ಕಲಾವಿದನ ಭೀಕರ ಹ*ತ್ಯೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

EDU-Dpt

ಶಿಕ್ಷಣ ಇಲಾಖೆ: ಮುಖ ಚಹರೆ ಮೂಲಕ ಹಾಜರಿ ಹಾಕುವ ಪ್ರಕ್ರಿಯೆ ಜಾರಿ

Maharaja Trophy auction: Devdutt Padikkal is the most expensive player

Maharaja Trophy auction: ದೇವದತ್ತ ಪಡಿಕ್ಕಲ್‌ ದುಬಾರಿ ಆಟಗಾರ

Congress: ಮತ್ತೆ ಹೈಕಮಾಂಡ್‌ ಅಂಗಳಕ್ಕೆ ಕೆಪಿಸಿಸಿ ಅಧ್ಯಕ್ಷ ಬದಲು ಚರ್ಚೆ?

Congress: ಮತ್ತೆ ಹೈಕಮಾಂಡ್‌ ಅಂಗಳಕ್ಕೆ ಕೆಪಿಸಿಸಿ ಅಧ್ಯಕ್ಷ ಬದಲು ಚರ್ಚೆ?

Central government says warning labels on samosa, jalebi are false

No health warning: ಸಮೋಸಾ, ಜಿಲೇಬಿಗೆ ಎಚ್ಚರಿಕೆ ಲೇಬಲ್‌ ಸುಳ್ಳು ಎಂದ ಕೇಂದ್ರ ಸರ್ಕಾರ

Nabard–meet

ಪ್ರಸಕ್ತ ಹಣಕಾಸು ವರ್ಷದಲ್ಲಿ ಕರ್ನಾಟಕಕ್ಕೆ 4.46 ಲಕ್ಷ ಕೋಟಿ ರೂ. ಸಾಲ: ನಬಾರ್ಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.