ನೇತಾಜಿ ದೇಶ ಕಂಡ ಮಹಾನ್‌ ಕ್ರಾಂತಿಕಾರಿ

ಜನರನ್ನು ಸಂಘಟಿಸಿ ಸೈನ್ಯ ಕಟ್ಟಿ ಅದಕ್ಕೆ "ಅಜಾದ್‌ -ಹಿಂದ್‌-ಫೌಜ್‌' ಎಂದು ಹೆಸರಿಟ್ಟರು.

Team Udayavani, Jan 24, 2022, 5:49 PM IST

ನೇತಾಜಿ ದೇಶ ಕಂಡ ಮಹಾನ್‌ ಕ್ರಾಂತಿಕಾರಿ

ಬೆಳಗಾವಿ: ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾ ಮಾರ್ಗದ ಹೋರಾಟ ನಡೆದರೆ, ನೇತಾಜಿ ಸುಭಾಷ ಚಂದ್ರ ಬೋಸ್‌ ಅವರು ಕ್ರಾಂತಿಕಾರಕ ಮಾರ್ಗ ಅನುಸರಿಸಿದರು.

ಅವರು ಜನರನ್ನು ಸಂಘಟಿಸಿ ಸೈನ್ಯ ಕಟ್ಟಿ ಅದಕ್ಕೆ “ಅಜಾದ್‌ -ಹಿಂದ್‌-ಫೌಜ್‌’ ಎಂದು ಹೆಸರಿಟ್ಟರು. ಅದೇ ಇಂದಿನ ಭಾರತೀಯ ರಾಷ್ಟ್ರೀಯ ಸೇನೆಯಾಗಿ ರೂಪಗೊಂಡಿತು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರಹುಸೇನ್‌ ಪಠಾಣ ಹೇಳಿದರು.

ನಗರದ ಹೊರವಲಯದ ಕಣಬರಗಿಯ ಸಮತಾ ಶಾಲೆಯಲ್ಲಿ ರವಿವಾರ ನಡೆದ ನೇತಾಜಿ, ಸುಭಾಷಚಂದ್ರ ಬೋಸ್‌ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನೇತಾಜಿಯವರ 125ನೇ ಜನ್ಮದಿನದ ನಿಮಿತ್ತ ಕೇಂದ್ರ ಸರ್ಕಾರ ದೆಹಲಿಯ ಇಂಡಿಯಾ ಗೇಟ್‌ ಬಳಿ ನೇತಾಜಿಯವರ ಪುತ್ಥಳಿ ಸ್ಥಾಪಿಸುವ ನಿರ್ಧಾರ ಕೈಗೊಂಡಿದ್ದು ಸ್ವಾಗತಾರ್ಹ ಎಂದರು.

ಸಮಾಜ ಸೇವಕ ಸುರೇಶ ಯಾದವ ಮಾತನಾಡಿ, ದೇಶದ ಯುವಕರಿಗೆ ಸ್ಫೂರ್ತಿಯ ಸೆಲೆಯಾದ ನೇತಾಜಿ ಸುಭಾಷಚಂದ್ರ ಬೋಸ್‌ ಅವರು ಯುವಶಕ್ತಿಯನ್ನು ಸಂಘಟಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸುವಲ್ಲಿ ಯಶಸ್ವಿಯಾದರು. ಅಂತಹ ಮಹನೀಯರ ಜೀವನ ನಮಗೆ ಆದರ್ಶವಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಶಂಕರ ಬಾಗೇವಾಡಿ, ವೀರ ಸೇನಾನಿ ನೇತಾಜಿ ಬೋಸರು ಪುರುಷರೊಂದಿಗೆ ಸ್ತ್ರೀಯರನ್ನೂ ಸೈನ್ಯಕ್ಕೆ ಸೇರಿಸಿಕೊಂಡು ಅವರಿಗೆ ಯುದ್ಧಕಲೆ ಕಲಿಸಿದ ಸಮಾನತೆಯ ಹರಿಕಾರರು. ನಮ್ಮ ದೇಶದ ಸ್ವಾತಂತ್ರ್ಯೋತ್ಸವದ ಸಂಭ್ರಮ ನೋಡಲು ಅವರಿರಲಿಲ್ಲ ಎನ್ನುವ ನೋವು ನಮ್ಮಂತವರನ್ನು ನಿರಂತರ ಕಾಡುತ್ತಲೇ ಇರುತ್ತದೆ ಎಂದರು.

ಬೆಳಗಾವಿಯ ಸಂಕಲ್ಪ ಫೌಂಡೇಶನ್‌ ಸಂಸ್ಥಾಪಕ ನಾನಾಗೌಡ ಬಿರಾದಾರ, ಶಿಕ್ಷಕಿ ಜಯಶ್ರೀ ನಾಯಕ, ಪ್ರಾಂಶುಪಾಲೆ ತೇಜಸ್ವಿನಿ ಬಾಗೇವಾಡಿ, ಕಾರ್ಯದರ್ಶಿ ರೇಣುಕಾ ಮಜಲಟ್ಟಿ, ವಿಜಯಲಕ್ಷಿ ವಿ. ಮಲಿಕಜಾನ ಗದಗಿನ, ಶಾಂತಾ ಮೋದಿ, ಅರುಣಾ ಪಾಟೀಲ, ಪೂಜಾ ಪಾಟೀಲ, ತೇಜಸ್ವಿನಿ ನಾಯ್ಕರ್‌ ಉಪಸ್ಥಿತರಿದ್ದರು. ಲಕ್ಷಿ ಬುಡ್ರಾಗೋಳ ಸ್ವಾಗತಿಸಿದರು. ವೃಷಭ ಮುಚಂಡಿಕರ ನಿರೂಪಿಸಿದರು. ಚೇತನ ಗುತ್ತಿ ವಂದಿಸಿದರು.

ಟಾಪ್ ನ್ಯೂಸ್

ಜ್ಞಾನವಾಪಿ ಮಸೀದಿ ವಿಡಿಯೋ ಚಿತ್ರೀಕರಣದ ವರದಿ ವಾರಾಣಸಿ ಕೋರ್ಟ್ ಗೆ ಸಲ್ಲಿಕೆ

ಜ್ಞಾನವಾಪಿ ಮಸೀದಿ ವಿಡಿಯೋ ಚಿತ್ರೀಕರಣದ ವರದಿ ವಾರಾಣಸಿ ಕೋರ್ಟ್ ಗೆ ಸಲ್ಲಿಕೆ

ಮತ್ತೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ: 1,000 ರೂಪಾಯಿ ಗಡಿ ದಾಟಿದ ದರ

ಮತ್ತೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ: 1,000 ರೂಪಾಯಿ ಗಡಿ ದಾಟಿದ ದರ

truck runs over sleeping workers near Jhajjar

ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟ್ರಕ್; ಮೂವರು ಸಾವು, 11 ಮಂದಿಗೆ ಗಾಯ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್ ನಿಧನ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್ ನಿಧನ

ಮುಂದುವರಿದ ಭಾರೀ ಮಳೆ: ದಕ್ಷಿಣ ಕನ್ನಡ, ಶಿವಮೊಗ್ಗದ ಶಾಲೆಗಳಿಗೆ ರಜೆ ಘೋಷಣೆ

ಮುಂದುವರಿದ ಭಾರೀ ಮಳೆ: ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗದ ಶಾಲೆಗಳಿಗೆ ರಜೆ ಘೋಷಣೆ

AIMIM leader arrested for derogatory comment on Shivling

ಶಿವಲಿಂಗದ ಕುರಿತು ಅವಹೇಳನಕಾರಿ ಹೇಳಿಕೆ: ಎಐಎಂಐಎಂ ನಾಯಕನ ಬಂಧನ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಡು ಇಲ್ಲವೇ ಮಡಿ ಹೋರಾಟ; ಮೃತ್ಯುಂಜಯ ಸ್ವಾಮೀಜಿ

ಮಾಡು ಇಲ್ಲವೇ ಮಡಿ ಹೋರಾಟ; ಮೃತ್ಯುಂಜಯ ಸ್ವಾಮೀಜಿ

ಕಟ್ಟುನಿಟ್ಟಾಗಿ ಚುನಾವಣೆ ಕರ್ತವ್ಯ ಮಾಡಿ

ಕಟ್ಟುನಿಟ್ಟಾಗಿ ಚುನಾವಣೆ ಕರ್ತವ್ಯ ಮಾಡಿ

12

ವಿವಿಧತೆಯಲ್ಲಿ ಏಕತೆ ಸಾರುವ ದೇಶ ನಮ್ಮದು

11

ಶಿಕ್ಷಕರ ಸಹಕಾರಿ ರಾಜ್ಯಕ್ಕೆ ಮಾದರಿ: ಷಡಕ್ಷರಿ

10

ಲಿಂಗಾಯತರು ಸಂಘಟಿತರಾಗದಿದ್ದರೆ ಭವಿಷ್ಯವಿಲ್ಲ

MUST WATCH

udayavani youtube

ಕಾರ್ಖಾನೆಯ ಗೋಡೆ ಕುಸಿದು 12 ಮಂದಿ ಕಾರ್ಮಿಕರ ಸಾವು

udayavani youtube

ಬೆಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿಯರ ಮಾರಾಮಾರಿ ! ವಿಡಿಯೋ ವೈರಲ್ ..

udayavani youtube

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

ಹೊಸ ಸೇರ್ಪಡೆ

ಜ್ಞಾನವಾಪಿ ಮಸೀದಿ ವಿಡಿಯೋ ಚಿತ್ರೀಕರಣದ ವರದಿ ವಾರಾಣಸಿ ಕೋರ್ಟ್ ಗೆ ಸಲ್ಲಿಕೆ

ಜ್ಞಾನವಾಪಿ ಮಸೀದಿ ವಿಡಿಯೋ ಚಿತ್ರೀಕರಣದ ವರದಿ ವಾರಾಣಸಿ ಕೋರ್ಟ್ ಗೆ ಸಲ್ಲಿಕೆ

corporation

ಮಂಗಳಾ ಸಂಸ್ಥೆಯ ಹೆಗಲಿಗೆ ತ್ಯಾಜ್ಯ ನಿರ್ವಹಣೆ

1

ಮಲೆನಾಡಿನ ಹಲವೆಡೆ ಮಳೆ ಅವಾಂತರ; ರಸ್ತೆ ಸಂಪರ್ಕ ಕಡಿತ

jaladi

ನದಿದಂಡೆ ಕಾಮಗಾರಿಗೆ ಇಂದು ಶಾಸಕರಿಂದ ಶಿಲಾನ್ಯಾಸ

ಶಿರ್ವ: ರಸ್ತೆಗೆ ಉರುಳಿ ಬಿದ್ದ ಮರ, ಬೈಕ್ ಸವಾರನಿಗೆ ಗಾಯ

ಶಿರ್ವ: ರಸ್ತೆಗೆ ಉರುಳಿ ಬಿದ್ದ ಮರ, ಬೈಕ್ ಸವಾರನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.