ದೇಶದ ಕೀರ್ತಿ ಪತಾಕೆ ಹಾರಿಸಿದ ಪ್ರಧಾನಿ ಮೋದಿ

Team Udayavani, May 24, 2019, 12:28 PM IST

ಗೋಕಾಕ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಹುಮತ ಪಡೆದ ಹಿನ್ನೆಲೆಯಲ್ಲಿ ಇಲ್ಲಿಯ ಶ್ರೀರಾಮ ಸೇನಾ, ಬಿಜೆಪಿ ನಗರ ಘಟಕ ಪದಾಧಿಕಾರಿಗಳು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನಂತರ ಬಸ್‌ ನಿಲ್ದಾಣ ಮಾರ್ಗವಾಗಿ ಮೆರವಣಿಗೆ ಮೂಲಕ ಶ್ರೀ ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ನಂತರ ಮಾತನಾಡಿದ ಬಿಜೆಪಿ ಮುಖಂಡ ಅಶೋಕ ಪೂಜಾರಿ, ಇಂದಿನ ಫಲಿತಾಂಶದಿಂದ ಭಾರತ ಕೀರ್ತಿ ಪತಾಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಹೆಚ್ಚಿದ್ದು, ನರೇಂದ್ರ ಮೋದಿ ಅವರ ನಾಯಕತ್ವವನ್ನು ದೇಶದ ಜನತೆ ಮನಪೂರ್ವಕವಾಗಿ ಒಪ್ಪಿ ಬೆಂಬಲಿಸಿದ್ದಾರೆ. ಸಮಗ್ರ ಭಾರತ ಅಭಿವೃದ್ಧಿ ಪಥದತ್ತ ಸಾಗಲಿದ್ದು, ಇದಕ್ಕೆ ಕಾರಣಿಭೂತರಾದ ಪ್ರಬುದ್ಧ ಮತದಾರರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಎಸ್‌.ವಿ.ದೇಮಶೆಟ್ಟಿ, ಶ್ರೀರಾಮ ಸೇನೆಯ ಮುಖಂಡರಾದ ರಾಜು ಜಾಧವ, ಸುನೀಲ ಮುರ್ಕಿಭಾಂವಿ, ಡಾ| ರಮೇಶ ಪಟಗುಂದಿ, ಶ್ರೀದೇವಿ ತಡಕೋಡ ಮಾತನಾಡಿ, ಈ ವಿಜಯವನ್ನು ಇಡಿ ಜಗತ್ತೆ ನಿಬ್ಬೆರಗಾಗಿ ನೋಡುತ್ತಿದ್ದು, ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ. ಇನ್ನು ಮುಂದಿನ 5 ವರ್ಷಗಳಲ್ಲಿ ನಮ್ಮ ದೇಶ ಅಭಿವೃದ್ಧಿ ಹೊಂದಿ ವಿಶ್ವ ಗುರುವಾಗಿ ಸಂಭ್ರಮಿಸಲಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಕುಸಮಾ ಖನಗಾಂವಿ, ಮಹಾಂತೇಶ ತಾಂವಶಿ, ಕೇದಾರಿ ಜಾಧವ, ಬಸು ಪಡತಾರೆ, ಅಮಿತ್‌ ವಣ್ಣೂರ, ಪ್ರಸಾದ ಬಡಿಗೇರ, ಕೃಷ್ಣಾ ಗುಡ್ಡದಮನಿ, ಸುನೀಲ ಸುಭಂಜಿ, ಶಿವು ಪೂಜೇರಿ, ಪ್ರೊ. ಬಿಕ್ಕನ್ನವರ, ದಸ್ತಗೀರ ಪೈಲವಾನ, ಸತೀಶ ಗೋಳಸಂಗಿ, ಸುನೀಲ ಘೋರ್ಪಡೆ, ಮಹೇಶ ಕರೋಶಿ, ವಿಶ್ವನಾಥ ಸುಣಧೋಳಿ, ಸಮೀರ ಸುಣಧೋಳಿ, ಲಕ್ಷ್ಮೀಕಾಂತ ದನದವರ ಸೇರಿದಂತೆ ಅನೇಕರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ