ರಸಗೊಬ್ಬರ ಅಂಗಡಿ ಮೇಲೆ ದಾಳಿ; ದಾಖಲೆ ಪರಿಶೀಲನೆ
Team Udayavani, May 21, 2022, 6:25 PM IST
ಹುಬ್ಬಳ್ಳಿ: ಇಟಗಿ, ಗಂದಿಗವಾಡ, ನಂದಗಡ, ಬೇಕವಾಡ, ಬೀಡಿ ಗ್ರಾಮಗಳಲ್ಲಿ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮಾರಾಟ ಮಳಿಗೆಗಳ ಮೇಲೆ ಸಹಾಯಕ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಬಿ.ಚವ್ಹಾಣ ಹಾಗೂ ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಮಂಜುನಾಥ ಕುಸಗಲ್, ಕೃಷಿ ಅಧಿಕಾರಿ ಮಂಜುನಾಥ ಕೆಂಚನ್ನವರ ದಾಳಿ ನೇತೃತ್ವ ವಹಿಸಿದ್ದರು.
ಕೆಲವೆಡೆ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುವುದು ಕಂಡು ಬಂದ ಹಿನ್ನೆಲೆಯಲ್ಲಿ ಕೆಲ ಅಂಗಡಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ರಸಗೊಬ್ಬರ ದಾಸ್ತಾನು, ದಾಸ್ತಾನು ಪುಸ್ತಕ ಮತ್ತು ದರಪಟ್ಟಿ ಫಲಕಗಳನ್ನು ದಾಳಿ ವೇಳೆ ಪರಿಸೀಲಿಸಲಾಯಿತು.
ಮಾರಾಟ ಮಳಿಗೆದಾರರಿಗೆ ದರಫಲಕದಲ್ಲಿ ಕಡ್ಡಾಯವಾಗಿ ರಸಗೊಬ್ಬರ ದರ, ದಾಸ್ತಾನು ವಿವರ, ದಾಸ್ತಾನು ಪುಸ್ತಕದ ಸಮರ್ಪಕ ನಿರ್ವಹಿಸಬೇಕೆಂದು ಹಾಗೂ ಪಿಓಎಸ್ ಮಶೀನ್ ಮತ್ತು ಭೌತಿಕ ರಸಗೊಬ್ಬರ ದಾಸ್ತಾನು ಎರಡು ಹೊಂದಾಣಿಕೆ ಇರಬೇಕೆಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಬಿ.ಚವ್ಹಾಣ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ : ರಾಮಲಿಂಗಾ ರೆಡ್ಡಿ
ಫ್ರೀಡಂ ಪಾರ್ಕ್ ನಲ್ಲಿ ಆರೋಗ್ಯ ಸಿಬ್ಬಂದಿಗಳ ಪ್ರತಿಭಟನೆ; ಪೂರಕ ಸ್ಪಂದನೆ ಎಂದ ಸಚಿವ
ಕೆಲಸಕಿದ್ದ ಮನೆಯಲ್ಲಿ ನಗನಾಣ್ಯ ಕದ್ದ ತಾಯಿ-ಮಗಳು
ಸಿದ್ದರಾಮೋತ್ಸವಕ್ಕಿಂತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಿದ್ದತೆ ಮುಖ್ಯವೆಂದ ಡಿಕೆಶಿ
ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್ ಗೆ 19 ಕೋ ರೂ ಲಾಭ : ತೇಲ್ಕೂರ