Kannada ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ! ಕಾಸರಗೋಡಿನಂತೆ ಗಡಿಭಾಗದಲ್ಲಿ ಮಹಾ ಉದ್ಧಟತನ

Team Udayavani, Jun 18, 2024, 7:15 AM IST

ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ!

ಬೆಳಗಾವಿ: ಕೇರಳದ ಕಾಸರಗೋಡಿನ ರೀತಿಯಲ್ಲೇ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಕನ್ನಡ ಶಾಲೆಗಳ ಮಕ್ಕಳಿಗೆ ಶಿಕ್ಷಕರ ನೇಮಕಾತಿ ವಿಷಯದಲ್ಲಿ ಮಹಾರಾಷ್ಟ್ರ ಸರಕಾರ ಅತಂತ್ರ ಸ್ಥಿತಿ ನಿರ್ಮಿಸಿದೆ.

ಕಾಸರಗೋಡಿನಲ್ಲಿ ಕನ್ನಡ ಶಾಲೆಗೆ ಮಲೆಯಾಳಿ ಶಿಕ್ಷಕರನ್ನು ನೇಮಕ ಮಾಡಿದಂತೆ ಇತ್ತ ಮಹಾರಾಷ್ಟ್ರ ಸರಕಾರವೂ ಕನ್ನಡ ಶಾಲೆಗಳಿಗೆ ಮರಾಠಿ ಮಾಧ್ಯಮದ ಶಿಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸುವ ಮೂಲಕ ವಿವಾದಕ್ಕೆ ಕಾರಣವಾಗಿದೆ. ಈ ಆದೇಶ ಸಾಂಗ್ಲಿ ಹಾಗೂ ಸೊಲ್ಲಾಪುರ ಜಿಲ್ಲೆಗಳ 40 ಸಾವಿರಕ್ಕಿಂತ ಹೆಚ್ಚಿನ ಮಕ್ಕಳಿಗೆ ಅತಂತ್ರ ಸ್ಥಿತಿ ತಂದೊಡ್ಡಿದೆ.

ಕೆಲವು ದಿನಗಳ ಹಿಂದೆ ಮಹಾರಾಷ್ಟ್ರ ಸರಕಾರ ಗಡಿ ಭಾಗದ ಜತ್‌ ತಾಲೂಕಿಗೆ 11 ಮತ್ತು ಸೊಲ್ಲಾಪುರ ಜಿಲ್ಲೆಯ ಸರಕಾರಿ ಕನ್ನಡ ಶಾಲೆಗಳಿಗೆ 13 ಶಿಕ್ಷಕರನ್ನು ನೇಮಕ ಮಾಡಿದೆ. ಆದರೆ ಈ 24 ಶಿಕ್ಷಕರಲ್ಲಿ ಕೇವಲ 7 ಮಂದಿಗೆ ಮಾತ್ರ ಕನ್ನಡ ತಿಳಿದಿದೆ ಎನ್ನಲಾಗಿದೆ.

ಮಹಾರಾಷ್ಟ್ರ ಸರಕಾರದ ಈ ನಿರ್ಧಾರದ ವಿರುದ್ಧ ಕನ್ನಡ ಹೋರಾಟಗಾರರು ತಿರುಗಿ ಬಿದ್ದಿದ್ದಾರೆ.

ಕನ್ನಡದ ಗಂಧಗಾಳಿ ಇಲ್ಲ
ಈ ಶಿಕ್ಷಕರಿಗೆ ಕನ್ನಡದ ಗಂಧ ಗಾಳಿಯೂ ಇಲ್ಲ ಎಂದು ಜತ್‌ ತಾಲೂಕಿನ ಕನ್ನಡ ಹೋರಾಟಗಾರರಾದ ಸರೋಜಿನಿ ಬಿರಾದಾರ ಕಿಡಿಕಾರಿದ್ದಾರೆ. ಮಹಾರಾಷ್ಟ್ರ ಸರಕಾರದ ಈ ಆದೇಶದ ವಿರುದ್ಧ ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ವಿರೋಧ ಮಾಡುತ್ತಿದ್ದಾರೆ. ಆದರೆ ಸರಕಾರ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ರಾಜ್ಯ ಸರಕಾರ ತುರ್ತಾಗಿ ಇಲ್ಲಿನ ಕನ್ನಡಿಗರ ಬೆನ್ನೆಲುಬಾಗಿ ನಿಲ್ಲಬೇಕಿದೆ. ಇಲ್ಲವಾದಲ್ಲಿ ಈ ಭಾಗದಲ್ಲಿ ಕನ್ನಡ ಶಾಲೆಗಳು ನಶಿಸಿ ಹೋಗಲಿವೆ ಎಂದು ಗಡಿ ಭಾಗದ ಕನ್ನಡಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

US Presidential Election: ಕಮಲಾ ಹ್ಯಾರಿಸ್ ಗೆಲುವಿಗಾಗಿ ತಮಿಳುನಾಡಿನಲ್ಲಿ ಪ್ರಾರ್ಥನೆ

US Presidential Election: ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನಲ್ಲಿ ವಿಶೇಷ ಪ್ರಾರ್ಥನೆ

5-punjalkatte

ಕ್ರೀಡಾಕೂಟದ ಕೆಸರುಗದ್ದೆಗೆ ಬಿದ್ದ ವಿದ್ಯುತ್‌ ತಂತಿ; ದೈವಗಳ ಕಾರಣಿಕದಿಂದ ತಪ್ಪಿದ ಅಪಾಯ

1-modi-badjet

Budget ಅಭಿವೃದ್ಧಿಗೆ ಹೊಸ ದಾರಿ ತೋರಲಿದೆ: ಪ್ರಧಾನಿ ಮೋದಿ

Union Budget 2024: ಕೇಂದ್ರ ಬಜೆಟ್‌ ನಲ್ಲಿ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ…

Union Budget 2024: ಕೇಂದ್ರ ಬಜೆಟ್‌ ನಲ್ಲಿ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ…

ಹುಟ್ಟುಹಬ್ಬಕ್ಕೆ ಗ್ಯಾಂಗ್‌ಸ್ಟರ್‌ ಆಗಿ ಬಂದ ಸೂರ್ಯ; ʼSuriya 44ʼ ಸ್ಪೆಷೆಲ್‌ ಟೀಸರ್‌ ಔಟ್

ಹುಟ್ಟುಹಬ್ಬಕ್ಕೆ ಗ್ಯಾಂಗ್‌ಸ್ಟರ್‌ ಆಗಿ ಬಂದ ಸೂರ್ಯ; ʼSuriya 44ʼ ಸ್ಪೆಷೆಲ್‌ ಟೀಸರ್‌ ಔಟ್

Belagavi: ಹಲವು ವರ್ಷಗಳಿಂದ ಇತ್ಯರ್ಥವಾಗದ ಜಮೀನು ವಿವಾದ ಸಹೋದರರ ಸಾವಿನಲ್ಲಿ ಅಂತ್ಯ

Belagavi: ಹಲವು ವರ್ಷಗಳಿಂದ ಇತ್ಯರ್ಥವಾಗದ ಜಮೀನು ವಿವಾದ ಸಹೋದರರ ಸಾವಿನಲ್ಲಿ ಅಂತ್ಯ

Supreme court: ಹಲ್ಲೆ ಪ್ರಕರಣ- ಮಾಜಿ ಶಾಸಕನ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

Supreme court: ಹಲ್ಲೆ ಪ್ರಕರಣ- ಮಾಜಿ ಶಾಸಕನ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುಡಚಿ ಕೃಷ್ಣಾ ನದಿ ಮೇಲ್ ಸೇತುವೆ ಜಲಾವೃತ ಸಾರ್ವಜನಿಕರ ಸಂಚಾರ ಬಂದ್

ಕುಡಚಿ ಕೃಷ್ಣಾ ನದಿ ಮೇಲ್ ಸೇತುವೆ ಜಲಾವೃತ… ಸಾರ್ವಜನಿಕ ಸಂಚಾರ ಬಂದ್

drowned

Chikkodi:ಕೃಷ್ಣಾ ನದಿಗೆ ಪೂಜೆ ಸಲ್ಲಿಸುವ ವೇಳೆ ಅಯ ತಪ್ಪಿ ಯುವಕ ನೀರುಪಾಲು

ಚಿಕ್ಕೋಡಿ:ಅಪಾಯ ಮಟ್ಟ ಮೀರಿದ ಕೃಷ್ಣೆ-ಉಪನದಿಗಳು

ಚಿಕ್ಕೋಡಿ: ಅಪಾಯ ಮಟ್ಟ ಮೀರಿದ ಕೃಷ್ಣೆ-ಉಪನದಿಗಳು

belagBelagavi; ಮಹಾರಾಷ್ಟ್ರ ಭಾಗದಲ್ಲಿ ಭಾರೀ ಮಳೆ; ಸೇತುವೆಗಳ ಮೇಲೆ ಹರಿಯುತ್ತಿದೆ ನೀರು

Belagavi; ಮಹಾರಾಷ್ಟ್ರ ಭಾಗದಲ್ಲಿ ಭಾರೀ ಮಳೆ; ಸೇತುವೆಗಳ ಮೇಲೆ ಹರಿಯುತ್ತಿದೆ ನೀರು

yathnal

DCM D.K. Shivakumar 15 ದಿನಗಳಲ್ಲಿ ಮತ್ತೆ ತಿಹಾರ್‌ ಜೈಲಿಗೆ: ಯತ್ನಾಳ್‌

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

US Presidential Election: ಕಮಲಾ ಹ್ಯಾರಿಸ್ ಗೆಲುವಿಗಾಗಿ ತಮಿಳುನಾಡಿನಲ್ಲಿ ಪ್ರಾರ್ಥನೆ

US Presidential Election: ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನಲ್ಲಿ ವಿಶೇಷ ಪ್ರಾರ್ಥನೆ

ಚಿಕ್ಕಮಗಳೂರು: ಸರ್ಕಾರಿ ಬಸ್-ಟ್ಯಾಂಕರ್ ನಡುವೆ ಅಪಘಾತ; ಹಲವರಿಗೆ ಗಾಯ

Chikkamagaluru: ಸರ್ಕಾರಿ ಬಸ್-ಟ್ಯಾಂಕರ್ ನಡುವೆ ಅಪಘಾತ; ಹಲವರಿಗೆ ಗಾಯ

5-punjalkatte

ಕ್ರೀಡಾಕೂಟದ ಕೆಸರುಗದ್ದೆಗೆ ಬಿದ್ದ ವಿದ್ಯುತ್‌ ತಂತಿ; ದೈವಗಳ ಕಾರಣಿಕದಿಂದ ತಪ್ಪಿದ ಅಪಾಯ

Budget: ಈ ಬಾರಿಯ ಕೇಂದ್ರ ಬಜೆಟ್‌ ನಲ್ಲಿ ಸಮಿಶ್ರ ಸರಕಾರದ ಛಾಯೇ ಪ್ರತಿಫಲನ!

Budget: ಈ ಬಾರಿಯ ಕೇಂದ್ರ ಬಜೆಟ್‌ ನಲ್ಲಿ ಸಮಿಶ್ರ ಸರಕಾರದ ಛಾಯೇ ಪ್ರತಿಫಲನ!

4-

Mahalingpur: ಘಟಪ್ರಭಾ ನದಿಗೆ ಹೆಚ್ಚಿದ ನೀರು: ಮೂರು ಸೇತುವೆಗಳು ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.