ಗಣರಾಜ್ಯೋತ್ಸವ: ಸ್ವಚ್ಛತಾ ಕಾರ್ಯ
Team Udayavani, Jan 26, 2020, 2:47 PM IST
ತೆಲಸಂಗ: ಗ್ರಾಮದ ವಿಶ್ವಚೇತನ ಶಾಲೆ ಮಕ್ಕಳು ಗಣರಾಜ್ಯೋತ್ಸವ ಮುನ್ನಾದಿನ ಶನಿವಾರ ಗ್ರಾಮದ ರಸ್ತೆಯನ್ನು ಕಸಗುಡಿಸುವ ಮೂಲಕ ಸ್ವತ್ಛಗೊಳಿಸಿ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು.
ಬೆಳಗ್ಗೆ 9ಗಂಟೆಗೆ ಸ್ವಚ್ಛತಾ ಕಾರ್ಯ ಆರಂಭಿಸಿದ ಮಕ್ಕಳು, ಗ್ರಾಮದ ಪ್ರಮುಖ ಬೀದಿ ಸೇರಿದಂತೆ ಬಸ್ ನಿಲ್ದಾಣದ ಆವರಣ, ವಿವಿಧ ವೃತ್ತ ಹಾಗೂ ಕೆಲ ಗಟಾರುಗಳನ್ನು ಸ್ವಚ್ಛಗೊಳಿಸಿ ಕನ್ನಡಿಯಂತೆ ಮಾಡಿದ್ದಲ್ಲದೆ, ಪರಿಸರದ ಬಗೆಗಿನ ಕಾಳಜಿ, ಸ್ವಚ್ಛತೆ ಅರಿವು ಮೂಡಿಸುವ ಫಲಕ ಪ್ರದರ್ಶಿಸಿ ಜನ ಜಾಗೃತಿ ಮೂಡಿಸಿದರು.
ಡಾ| ಎಸ್.ಐ. ಇಂಚಗೇರಿ, ಸ್ವಚ್ಛ ಭಾರತದ ಅರಿವು ಮಕ್ಕಳಲ್ಲಿ ಮೂಡಿಸುವ ಪಯತ್ನ ಇದಾಗಿದ್ದು, ಸಾರ್ವಜನಿಕ ಸ್ಥಳಗಳನ್ನ ಸ್ವತ್ಛವಾಗಿಟ್ಟುಕೊಳ್ಳುವ ಜವಾಬ್ದಾರಿಯೂ ಪ್ರತಿಯೊಬ್ಬರ ಮೇಲಿದೆ. ಇದರ ಅರಿವು ಮಹತ್ವದ್ದಾಗಿದೆ. ಮನೆಯ ಸುತ್ತಲಿನ ಸ್ಥಳಗಳನ್ನು ಸ್ವಚ್ಛವಾಗಿರಿಸಿಕೊಂಡಲ್ಲಿ ಆರೋಗ್ಯವಂತ ಬದುಕು ನಮ್ಮದಾಗುತ್ತದೆ ಎಂದರು. ಮುಖ್ಯಶಿಕ್ಷಕಿ ಆರ್.ಎಸ್. ಪಟ್ಟಣಶೆಟ್ಟಿ, ವಿಷ್ಣು ದೇವಖಾತೆ, ಸಲೀಮ ಅಪರಾಜರ್, ಮಹಾನಂದಾಮಡಿವಾಳ, ಸುನಿತಾ, ಪ್ರವೀಣಾ, ಸುಮಾ, ಸುಮಾ ಸಜ್ಜನ, ಅಕ್ಷತಾ, ಆಶಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.