ಶಾಶ್ವತ ವಸತಿ ಸೌಲಭ್ಯ ಕಲ್ಪಿಸಲು ಮನವಿ

Team Udayavani, Sep 10, 2019, 11:29 AM IST

ಬೆಳಗಾವಿ: ಗೋಕಾಕದ ಪ್ರವಾಹ ಸಂತ್ರಸ್ತರು ಹಾಗೂ ವಸತಿ ರಹಿತರಿಗೆ ಶಾಶ್ವತ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ವಸತಿ ರಹಿತರು ಜಿಲ್ಲಾಧಿಕಾರಿ ಜತೆ ಚರ್ಚಿಸಿದರು.

ಬೆಳಗಾವಿ: ಗೋಕಾಕ ನಗರದ ಪ್ರವಾಹ ಪೀಡಿತ ಸಂತ್ರಸ್ತರು ಹಾಗೂ ವಸತಿ ರಹಿತ ಬಡ ಜನರಿಗೆ ನಗರದ ಸರಹದ್ದಿನಲ್ಲಿರುವ ಸರಕಾರಿ ಜಾಗದಲ್ಲಿ ಶಾಶ್ವತ ವಸತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ತಾಲೂಕಿನ ವಸತಿ ರಹಿತರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸಂತ್ರಸ್ತರ ನೇತೃತ್ವ ವಹಿಸಿದ್ದ ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಅಶೋಕ ಪೂಜಾರಿ ಮಾತನಾಡಿ, ಗೋಕಾಕ ನಗರದ ಪಶ್ಚಿಮ ಮತ್ತು ಉತ್ತರ ದಿಕ್ಕಿಗೆ ಮಾರ್ಕಂಡೇಯ ಮತ್ತು ಘಟಪ್ರಭಾ ನದಿಗಳು ಹರಿಯುತ್ತವೆ. ಈ ಎರಡೂ ನದಿಗಳಿಗೆ ಮಾರ್ಕಂಡೇಯ ಜಲಾಶಯ, ಹಿಡಕಲ್ ಮತ್ತು ಧೂಪದಾಳ ಜಲಾಶಯಗಳು ಗೋಕಾಕ ನಗರದ ಮೇಲ್ಮಟ್ಟದ ಪ್ರದೇಶಗಳಲ್ಲಿ ಇವೆ. ಘಟಪ್ರಭಾ ನದಿಗೆ ಹಿರಣ್ಯಕೇಶಿ ಕೂಡುವುದರಿಂದ ಈ ಮೂರು ನದಿಗಳ ಪ್ರವಾಹಗಳಿಗೆ ಸಿಲುಕಿ ಗೋಕಾಕ ನಗರ ಮೇಲಿಂದ ಮೇಲೆ ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದರು.

ಈ ವರ್ಷದ ಆಗಸ್ಟ್‌ ತಿಂಗಳಲ್ಲಿ ಉಂಟಾದ ಭೀಕರ ಪ್ರವಾಹವು ಅಪಾರ ಪ್ರಮಾಣದಲ್ಲಿ ಅವಾಂತರ ಸೃಷ್ಟಿಸಿದೆ. ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ. ನೆರೆಯಿಂದಾಗಿ ಸಾವಿರಾರು ಬಡ ಜನರು ಸೂರು ಕಳೆದುಕೊಂಡಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸಿಸುವ ಬಡ ಜನರು, ವಸತಿ ರಹಿತರಿಗೆ ಶಾಶ್ವತ ಸೂರು ಒದಗಿಸಬೇಕಾಗಿದೆ. ಆದರೆ ಇಷ್ಟೊಂದು ಜನರಿಗೆ ಖಾಸಗಿ ಜಮೀನು ಖರೀದಿಸಿ, ನಿವೇಶನ ಒದಗಿಸುವುದು.

ಸಾಧ್ಯವಿಲ್ಲ. ಗೋಕಾಕ ಸರಹದ್ದಿನಲ್ಲಿರುವ ಸರ್ವೇ ನಂ. 244/ಎ ದಲ್ಲಿರುವ ಸರ್ಕಾರದ ಸುಮಾರು 312 ಎಕರೆ 10 ಗುಂಟೆ ಜಾಗವನ್ನು ಅಭಿವೃದ್ಧಿಪಡಿಸುವ ಮೂಲಕ ಅಲ್ಲಿ ಈ ಜನರಿಗೆ ವಸತಿ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಪ್ರದೇಶದ ಜಮೀನನ್ನು ಬ್ರಿಟಿಷ್‌ ಸರ್ಕಾರ ಸ್ವಾತಂತ್ರ ಪೂರ್ವದಲ್ಲಿ ಗೋಕಾಕ ಮಿಲ್ಸ್ ಕಂಪನಿಗೆ ನೀಡಿತ್ತು. ಆದರೆ ಕಂಪನಿಯು ಪೂರ್ಣ ಜಮೀನನ್ನು ಉಪಯೋಗಿಸಿಕೊಂಡಿಲ್ಲ. ರಾಜ್ಯ ಸರ್ಕಾರ ಲೀಜ್‌ ಅವಧಿ ವಿಸ್ತರಿಸಿರುವದೂ ಅವೈಜ್ಞಾನಿಕವಾಗಿದೆ. ಆದ್ದರಿಂದ ಈ ಜಾಗವನ್ನು ಹಿಂದಕ್ಕೆ ಪಡೆದು ಅಲ್ಲಿ ಶಾಶ್ವತ ವಸತಿ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ವರದಿ ಕಳುಹಿಸಬೇಕು ಎಂದು ಅವರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ. ಎಸ್‌.ಬಿ.ಬೊಮ್ಮನಹಳ್ಳಿ ಅವರು ಈ ಕುರಿತು ಸರಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು ಹಾಗೂ ವಸತಿ ರಹಿತರಿಗೆ ಶಾಶ್ವತ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದಸ್ತಗೀರ ಪಹೇಲ್ವಾನ್‌, ರಾಜು ಜಾಧವ, ಎ.ವೈ. ಪಂಗಣ್ಣವರ, ಸುನಿಲ ಮುರಕಿಭಾವಿ, ಎಂ.ಟಿ. ಪಾಟೀಲ, ಪ್ರವೀಣ ಪಾಟೀಲ, ಲಕ್ಷ್ಮಣ ತಳ್ಳಿ, ಸುಭಾಷ ಕವಲಗಿ, ಶ್ರೀಶೈಲ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

  • ಬೆಳಗಾವಿ: ಉಪ ಚುನಾವಣೆ ಮುಗಿದು ಫಲಿತಾಂಶ ಬಂದ ಬೆನ್ನಲ್ಲೇ ಯಾರು ಉಪ ಮುಖ್ಯಮಂತ್ರಿ, ಯಾರಿಗೆ ಸಚಿವ ಸ್ಥಾನ, ಜಿಲ್ಲಾ ಉಸ್ತುವಾರಿ ಯಾರಿಗೆ ಎಂಬ ಚರ್ಚೆ ಜಿಲ್ಲೆಯಲ್ಲಿ...

  • ಮೂಡಲಗಿ: ಗೋಕಾಕ ಮತಕ್ಷೇತ್ರದ ಇತಿಹಾಸದಲ್ಲಿಯೇ ಪ್ರಥಮ ಭಾರೀಗೆ ಬಿಜೆಪಿಯಿಂದ ರಮೇಶ ಜಾರಕಿಹೊಳಿ ಅವರು ಆಯ್ಕೆಯಾಗಿದರಿಂದ ಮೂಡಲಗಿ ಪಟ್ಟಣ ಸೇರಿದಂತೆ ಅರಭಾವಿ ಕ್ಷೇತ್ರದಲ್ಲಿ...

  • ಹಾರೂಗೇರಿ: ಅಬಾಜಿಯವರು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಬಡ ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಮೂಲಕ ಸಹಸ್ರಾರು...

  • ಚಿಕ್ಕೋಡಿ: ಕೃಷ್ಣಾ ನದಿಗೆ ಕಟ್ಟಿರುವ ಕಲ್ಲೋಳ-ಯಡೂರ ಸೇತುವೆ ಕಳೆದ ಹತ್ತು ವರ್ಷಗಳಿಂದ ಶಿಥಿಲಗೊಂಡು ಈಗಲೋ ಆಗಲೋ ಬೀಳುವ ಹಂತ ತಲುಪಿದೆ. ಸೇತುವೆ ಮೇಲೆ ಭಾರಿ ವಾಹನಗಳು...

  • ಚಿಕ್ಕೋಡಿ: ರಾಜ್ಯದ ಅಂಗನವಾಡಿ ಕಟ್ಟಡಗಳಿಗೆ ಪುನನಿರ್ಮಾಣ ಹಾಗೂ ನವೀಕರಣದ ಅವಶ್ಯಕವಿದ್ದು, ಕೂಡಲೇ ಕೇಂದ್ರ ಸಚಿವರು ಗಮನ ಹರಿಸಿ ಸೂಕ್ತ ಅನುದಾನ ಬಿಡುಗಡೆ ಮಾಡಬೇಕೆಂದು...

ಹೊಸ ಸೇರ್ಪಡೆ

  • ಮಲ್ಪೆ: ಮಂಗಳೂರು ವಿಶ್ವವಿದ್ಯಾನಿಲಯ, ತೆಂಕನಿಡಿ ಯೂರು ಸರಕಾರಿ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಕೇಂದ್ರದ ಪ್ರಾಯೋಜಕತ್ವದಲ್ಲಿ ತೆಂಕನಿಡಿ ಯೂರು ಕಾಲೇಜಿನಲ್ಲಿ...

  • ಪರ್ತ್‌: ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ನಡುವೆ ಗುರುವಾರದಿಂದ ಪರ್ತ್‌ನಲ್ಲಿ ಆರಂಭ ವಾಗಲಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿ ಯುವ ಮೂಲಕ ಪಾಕಿಸ್ಥಾನದ...

  • ರಾವಲ್ಪಿಂಡಿ: ದಶಕದ ಬಳಿಕ ತವರಲ್ಲಿ ಟೆಸ್ಟ್‌ ಸಂಭ್ರಮ ಆಚರಿಸುತ್ತಿರುವ ಪಾಕಿಸ್ಥಾನ, ಪ್ರವಾಸಿ ಲಂಕಾ ವಿರುದ್ಧ ಮೊದಲ ದಿನದಾಟದಲ್ಲಿ ಮೇಲುಗೈ ಸಾಧಿಸಿದೆ. ಬೆಳಕಿನ...

  • ಕರಾಚಿ: ದಶಕದ ಬಳಿಕ ತಾಯ್ನಾಡಿನಲ್ಲಿ ಟೆಸ್ಟ್‌ ಪಂದ್ಯ ಆಯೋಜಿಸಿದ ಸಂಭ್ರಮದಲ್ಲಿರುವ ಪಾಕಿಸ್ಥಾನ, ಮುಂದಿನ ವರ್ಷಾರಂಭದಲ್ಲಿ ಬಾಂಗ್ಲಾದೇಶ ವಿರುದ್ಧ ಹಗಲು-ರಾತ್ರಿ...

  • ಪುತ್ತೂರು: ವಿಜ್ಞಾನ ಕಷ್ಟ ಎನಿಸಿದರೂ ಆಟದ ರೀತಿಯಲ್ಲಿ ವಿನಿ ಯೋಗಿಸಿದರೆ ಉತ್ತಮ ಅನ್ವೇಷಣೆ ಮಾಡ ಬಹುದು. ಈ ನಿಟ್ಟಿನಲ್ಲಿ ಮಕ್ಕಳು ಅನ್ವೇಷಣೆ ಯಲ್ಲಿ ಪಾಲ್ಗೊಳ್ಳಬೇಕೆಂದು...