ಒಂದೇ ಕಾರಲ್ಲಿ ಗೌಪ್ಯ ಸ್ಥಳಕ್ಕೆ ತೆರಳಿದ ನಿರಾಣಿ-ಸತೀಶ
Team Udayavani, Sep 30, 2021, 12:58 PM IST
ಬೆಳಗಾವಿ: ಜಿಲ್ಲೆಗೆ ಭೇಟಿ ನೀಡಿರುವ ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬುಧವಾರ ಒಂದೇ ಕಾರಿನಲ್ಲಿ ರಹಸ್ಯ ಸ್ಥಳಕ್ಕೆ ತೆರಳುವ ಮೂಲಕ ಕುತೂಹಲ ಮೂಡಿಸಿದರು.
ಇಬ್ಬರೂ ನಾಯಕರಿಗೆ ಸಕ್ಕರೆ ಕಾರ್ಖಾನೆ ಉದ್ಯಮವಿದ್ದು, ಉದ್ಯಮಕ್ಕೆ ಸಂಬಂಧಿಸಿದಂತೆ ಚರ್ಚೆಗೆ ತೆರಳಿದರೋ ಅಥವಾ ರಾಜಕೀಯ ವಿಷಯಕ್ಕೋ ಎಂಬುದು ನಿಗೂಢವಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಅವರಿಬ್ಬರೂ ಕಾರಿನಲ್ಲಿ ತೆರಳುತ್ತಿದ್ದಂತೆ ನೆರೆದ ಜನರು ಒಂದು ಕ್ಷಣ ನಿಬ್ಬೆರಗಾದರು. ಬಿಜೆಪಿ ಹಾಗೂ ಕಾಂಗ್ರೆಸ್‌ನ ಇಬ್ಬರು ನಾಯಕರು ಕಾರಿನಲ್ಲಿ ನಿಗೂಢ ಸ್ಥಳಕ್ಕೆ ತೆರಳುತ್ತಿರುವುದನ್ನು ಕಂಡು ಅಚ್ಚರಿಪಟ್ಟರು. ಈ ಬಗ್ಗೆ ಸತೀಶ ಜಾರಕಿಹೊಳಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಅವರು ಕರೆ ಸ್ವೀಕರಿಸಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಮುರುಗೇಶ ನಿರಾಣಿ, ಸತೀಶ ಜಾರಕಿಹೊಳಿ ಅವರೊಂದಿಗೆ ಊಟಕ್ಕೆ ಹೋಗಿದ್ದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ. ರಾಜಕೀಯ ವಿಷಯದ ಬಗ್ಗೆ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗ್ರಾ.ಪಂ.ಗಳಲ್ಲಿ ಅಮೃತ ಆರೋಗ್ಯ ಅಭಿಯಾನ : ದಕ್ಷಿಣ ಕನ್ನಡ, ಉಡುಪಿ ಗ್ರಾ.ಪಂ.ಗಳಲ್ಲೂ ಜಾರಿ
ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ ಪ್ರಕರಣ : ನಗರಸಭೆಯ ಕಾಂಗ್ರೇಸ್ ಸದಸ್ಯನ ವಿರುದ್ಧ FIR
ತಲಪಾಡಿ-ಕಾಸರಗೋಡು ಷಟ್ಪಥ 2024ರಲ್ಲಿ ಪೂರ್ತಿ : ರಿಯಾಸ್
ಕೋಲಾರದಲ್ಲಿ ಭೀಕರ ರಸ್ತೆ ಅಪಘಾತ : ಬಸ್ ಪಲ್ಟಿಯಾಗಿ ದಂಪತಿ ಸಾವು, 15 ಕ್ಕೂ ಹೆಚ್ಚು ಮಂದಿ ಗಾಯ
ಹಳೆಯ ಸ್ಕೂಟರಲ್ಲಿ ದೇಶ ಸುತ್ತಿದ ತಾಯಿ-ಮಗ ಈಗ ದಕ್ಷಿಣಕನ್ನಡ ಯಾತ್ರೆಯಲ್ಲಿ !
MUST WATCH
ಹೊಸ ಸೇರ್ಪಡೆ
ಗ್ರಾ.ಪಂ.ಗಳಲ್ಲಿ ಅಮೃತ ಆರೋಗ್ಯ ಅಭಿಯಾನ : ದಕ್ಷಿಣ ಕನ್ನಡ, ಉಡುಪಿ ಗ್ರಾ.ಪಂ.ಗಳಲ್ಲೂ ಜಾರಿ
ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ ಪ್ರಕರಣ : ನಗರಸಭೆಯ ಕಾಂಗ್ರೇಸ್ ಸದಸ್ಯನ ವಿರುದ್ಧ FIR
ಮಹಾರಾಷ್ಟ್ರ:ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಢಿಕ್ಕಿ, 50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ತಲಪಾಡಿ-ಕಾಸರಗೋಡು ಷಟ್ಪಥ 2024ರಲ್ಲಿ ಪೂರ್ತಿ : ರಿಯಾಸ್
ಕೋಲಾರದಲ್ಲಿ ಭೀಕರ ರಸ್ತೆ ಅಪಘಾತ : ಬಸ್ ಪಲ್ಟಿಯಾಗಿ ದಂಪತಿ ಸಾವು, 15 ಕ್ಕೂ ಹೆಚ್ಚು ಮಂದಿ ಗಾಯ