ಶಾಲೆಗೆ ಬಸ್‌ ಸೌಲಭ್ಯ ನೀಡಿಕೆ: ಪ್ರತಿಭಟನೆ ಹಿಂದಕ್ಕೆ

Team Udayavani, Jul 14, 2019, 10:06 AM IST

ರಾಮದುರ್ಗ: ಕಟಕೋಳ ಆದರ್ಶ ವಿದ್ಯಾಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಿರುವ ಕುರಿತು ಸ್ಥಳೀಯ ಸಾರಿಗೆ ಘಟಕ ವ್ಯವಸ್ಥಾಪಕ ಎಚ್.ಆರ್‌. ಪಾಟೀಲ ಪಾಲಕರಿಗೆ ಲಿಖೀತ ಪತ್ರ ನೀಡಿದರು.

ರಾಮದುರ್ಗ: ಕಟಕೋಳ ಆದರ್ಶ ವಿದ್ಯಾಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರತಿಭಟನೆ ನಡೆಸುವ ಮುನ್ನವೇ ಸಾರಿಗೆ ಇಲಾಖೆ ಅಧಿಕಾರಿಗಳು ಸೌಲಭ್ಯ ಕಲ್ಪಿಸಿದ್ದಾರೆ.

ಪಟ್ಟಣದಲ್ಲಿದ್ದ ಆದರ್ಶ ವಿದ್ಯಾಲಯವನ್ನು ಕಟಕೋಳಕ್ಕೆ ಸ್ಥಳಾಂತರಿಸಿದ್ದರಿಂದ ರಾಮದುರ್ಗ ಪಟ್ಟಣ, ಸುರೇಬಾನ, ಸಂಗಳ, ಕಲಹಾಳ, ಮುದೇನೂರ, ಬಟಕುರ್ಕಿ, ಮುದಕವಿ ಸೇರಿದಂತೆ ಇತರ ಭಾಗಗಳ ಸುಮಾರು 180 ವಿದ್ಯಾರ್ಥಿಗಳು ಸಾರಿಗೆ ಸೌಲಭ್ಯ ಇಲ್ಲದೆ ತೊಂದರೆ ಅನುಭವಿಸುವಂತಾಗಿತ್ತು. ವಿದ್ಯಾರ್ಥಿಗಳಿಗೆ ಕಟಕೋಳಕ್ಕೆ ಹೋಗಲು ಸರಿಯಾಗಿ ಬಸ್ಸಿನ ವ್ಯವಸ್ಥೆ ಇಲ್ಲ. ಬೆಳಿಗ್ಗೆ 8.30 ಹಾಗೂ 9 ಗಂಟೆ ಸಮಯಕ್ಕೆ ಹಾಗೂ ಮರಳಿ ಶಾಲೆ ಬಿಡುವ ಸಮಯ 5 ಹಾಗೂ 5.30ಕ್ಕೆ ಬಸ್ಸಿನ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಜು.13ರೊಳಗಾಗಿ ಈ ವ್ಯವಸ್ಥೆ ಕಲ್ಪಿಸದೆ ಹೋದಲ್ಲಿ ಅಲ್ಲಿನ ಶಾಲೆಯ ಮಕ್ಕಳ ಜೊತೆಗೆ ಪಾಲಕರು ಸೇರಿಕೊಂಡು ರಾಮದುರ್ಗ ಸಾರಿಗೆ ಘಟಕದ ಮುಖ್ಯ ಗೇಟ್ ಬಂದ್‌ ಮಾಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಚ್ಚರಿಕೆ ನೀಡಿದ್ದರು.

ಇದನ್ನು ಅರಿತ ಸಾರಿಗೆ ಇಲಾಖೆ ಅಧಿಕಾರಿಗಳು ಶನಿವಾರ ಬಸ್‌ ಸೌಲಭ್ಯ ಕಲ್ಪಿಸಿರುವ ಕುರಿತು ಪಾಲಕರಿಗೆ ತಿಳಿಸಿದ್ದಾರೆ. ಬೆಳಿಗ್ಗೆ 8.45 ಕ್ಕೆ ಹಾಗೂ 9 ಗಂಟೆಗೆ ಮತ್ತು ಸಂಜೆ 4.45ಕ್ಕೆ ಹಾಗೂ 5 ಗಂಟೆಗೆ ಸಮಯಕ್ಕೆ ಕಟಕೋಳ ಹಾಗೂ ಗೊಡಚಿ ಮೂಲಕ ಆದರ್ಶ ವಿದ್ಯಾಲಯ ಮಾರ್ಗವಾಗಿ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸ್ಥಳೀಯ ಸಾರಿಗೆ ಘಟಕದ ವ್ಯವಸ್ಥಾಪಕ ಎಚ್.ಆರ್‌. ಪಾಟೀಲ ಪಾಲಕರಿಗೆ ಲಿಖೀತ ಪತ್ರ ನೀಡಿದರು.

ಈ ಕುರಿತು ವಿದ್ಯಾರ್ಥಿ ಪಾಲಕ ಸಹದೇವ ಪವಾರ ಮಾತನಾಡಿ, ನಮ್ಮ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಬಸ್‌ ಸೌಲಭ್ಯ ಕಲ್ಪಿಸಿದ ಕಾರಣ ಜು.13ರಂದು ನಡೆಸಬೇಕಾಗಿದ್ದ ಪ್ರತಿಭಟನೆ ಹಿಂಪಡೆದುಕೊಂಡಿದ್ದೇವೆ ಎಂದರು. ಮಲಿಕಾಜಗೌಡ ಪಾಟೀಲ, ಆರ್‌.ಬಿ. ಸವಟಗಿ, ಎಸ್‌.ಬಿ. ಹೊಸಮನಿ, ಯಶೋಧಾ ಅರಮನಿ, ಜಗದೀಶ ಆರಿಬೆಂಚಿ, ಎಸ್‌.ಬಿ. ಬೈರಕಧಾರ, ಚಂದ್ರಕಾಂತ ಹೊಸಮನಿ ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಳಗಾವಿ: ನಗರ ಸೇರಿದಂತೆ ಇಡೀ ಜಿಲ್ಲೆ ಕೋವಿಡ್ 19 ಭೀತಿ ಮಧ್ಯೆ ಪೊಲೀಸ್‌ಕಣ್ಗಾವಲಿನಲ್ಲಿದ್ದು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮನೆ ಬಿಟ್ಟು ಯಾರೂ ಹೊರ ಬಾರದಂತೆ...

  • ಬೆಳಗಾವಿ: "ಕೋವಿಡ್‌-19 ಎಲ್ಲ ಲಕ್ಷಣಗಳು ನನ್ನಲ್ಲಿ ನೂರಕ್ಕೆ ನೂರರಷ್ಟಿವೆ. ದಯವಿಟ್ಟು ನನ್ನನ್ನು ಪರೀಕ್ಷೆಗೆ ಒಳಪಡಿಸಿ' ಎಂದು ಸಿಆರ್‌ಪಿಎಫ್‌ ಯೋಧನೊಬ್ಬ ಗೋಗರೆದ...

  • ಬೆಳಗಾವಿ: ಕೋವಿಡ್‌-19 ಸೋಂಕು ಹರಡದಂತೆ ಕ್ರಮಕ್ಕೆ ಮುಂದಾಗಿರುವ ಸರ್ಕಾರದ ಆದೇಶ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದ್ದರೂ ವಾಹನ ಸವಾರರು ಅನಾವಶ್ಯಕವಾಗಿ...

  • ಚಿಕ್ಕೋಡಿ: ವಿಶ್ವ ವ್ಯಾಪಿ ಹಬ್ಬಿರುವ ಮಹಾಮಾರಿ ಕೋವಿಡ್ 19 ವೈರಸ್‌ ಅಬ್ಬರದಿಂದ ಯುಗಾದಿ ಅಮಾವಾಸ್ಯೆ ಮಂಕಾಗಿದೆ. ಹೀಗಾಗಿ ಅಮಾವಾಸ್ಯೆಯಂದು ಜನಜಂಗುಳಿಯಿಂದ ಕೂಡಿರುತ್ತಿದ್ದ...

  • ಬೆಳಗಾವಿ: ಕೋವಿಡ್ 19 ವೈರಸ್‌ ಹಾವಳಿ ದಿನದಿಂದ ದಿನಕ್ಕೆ ತನ್ನ ಕಬಂಧಬಾಹು ವಿಸ್ತರಿಸುತ್ತಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತ ಗೊಂಡಿರುವ ಬೆನ್ನಲ್ಲೆ, ಈ ವೈರಸ್‌...

ಹೊಸ ಸೇರ್ಪಡೆ