ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪ್ರದಾನ: ಶಿಲ್ಪಕಲೆಯಲ್ಲೂ ರಾಜ್ಯ ಹೆಸರುವಾಸಿ: ಅರ್ಕಸಾಲಿ
Team Udayavani, Sep 18, 2022, 10:42 PM IST
ಬೆಳಗಾವಿ: ರಾಜ್ಯವು ಕಲೆ, ಸಾಹಿತ್ಯದ ಜತೆ ಶಿಲ್ಪಕಲೆ ಯಲ್ಲೂ ಹೆಸರುವಾಸಿಯಾಗಿದೆ. ಇಲ್ಲಿರುವ ದೇವಾಲಯ ಗಳು, ಗುಹಾಲಯಗಳ ಕಲಾಕೃತಿಗಳು ಶಿಲ್ಪಕಲೆಗೆ ನಿದರ್ಶನ ವಾಗಿವೆ. ಪ್ರಸ್ತುತ ಶಿಲ್ಪಕಲೆ ನಿಧಾನಗತಿಯಲ್ಲಿದ್ದು, ಕರ್ನಾಟಕ ಸಾಹಿತ್ಯ, ಸಂಸ್ಕೃತಿಯ ಜತೆ ಶಿಲ್ಪಕಲೆಯನ್ನು ಬೆಳೆಸಲು ನಾವೆಲ್ಲರೂ ಶ್ರಮಿಸಬೇಕು ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ ಹೇಳಿದರು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಆಶ್ರಯದಲ್ಲಿ ರವಿವಾರ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಜರಗಿದ 2021ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ 17ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತರಬೇತಿಗಳ ಮೂಲಕ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಭಾವಿ ಶಿಲ್ಪ ಕಲೆಗಾರರನ್ನು ಸೃಷ್ಟಿಸುವ ಕಾರ್ಯ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಅಕಾಡೆಮಿ ರಿಜಿಸ್ಟ್ರಾರ್ ಆರ್. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿ ನಿಕಟಪೂರ್ವ ಅಧ್ಯಕ್ಷೆ ಪ್ರೊ| ಮಾಲತಿ ಪಟ್ಟಣ್ಣಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಬಸವರಾಜ ಹೂಗಾರ್, ಜಮಖಂಡಿ ಹಿರಿಯ ಕಲಾವಿದರಾದ ವಿಜಯ ಶಿಂಧೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರು
ಕಲಬುರಗಿಯ ಬಾಬುರಾವ್ ಎಚ್., ಉಡುಪಿಯ ನರೇಶ್ ನಾಯ್ಕ, ಮೈಸೂರಿನ ಸುಮನ್ ಬಿ.,
ಎಸ್. ವೇಣುಗೋಪಾಲ್, ಶಿವಮೊಗ್ಗದ ಅಜೇಯ ಗಜಾನನ, ಬೆಂಗಳೂರಿನ ವಿನಯ್ ಕುಮಾರ್ ಎಸ್., ವಿಜಯಪುರದ ಮೌನೇಶ ಆಚಾರ್‌ಗೆ 17ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನ ವಿತರಿಸಲಾಯಿತು. ಉಡುಪಿಯ ರತ್ನಾಕರ ಎಸ್. ಗುಡಿಗಾರ್, ಬಳ್ಳಾರಿಯ ಡಾ|ಪಿ. ಮುನಿರತ್ನಾಚಾರಿ, ಬಾಗಲಕೋಟೆಯ ನಾಗಲಿಂಗಪ್ಪ ಗಂಗಪ್ಪ ಗಂಗೂರ, ಕಲಬುರಗಿಯ ಮಾನಯ್ಯ ನಾ. ಬಡಿಗೇರ, ಬೆಂಗಳೂರಿನ ಬಿ.ಸಿ.ಶಿವಕುಮಾರ್ ಅವರಿಗೆ 2021ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.