ಸಂಕೇಶ್ವರ: ಮಹಿಳೆಯೋರ್ವಳ ಗುಂಡಿಕ್ಕಿ ಹತ್ಯೆ; ಬೆಚ್ಚಿ ಬಿದ್ದ ಗ್ರಾಮಸ್ಥರು
Team Udayavani, Jan 16, 2022, 2:24 PM IST
ಸಂಕೇಶ್ವರ: ಮಹಿಳೆಯೋರ್ವಳನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಗರದ ಹೃದಯ ಭಾಗದ ಮನೆಯೊಂದರಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ.
ನಿರಂಜನ ಸುಬೇದಾರ ಅವರ ಪತ್ನಿ ಶೈಲಜಾ ಉರ್ಫ್ ಗೌರವ (55) ಹತ್ಯೆಯಾಗಿರುವ ದುರ್ಧೈವಿಯಾಗಿದ್ದಾರೆ. ಇವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಆಸ್ತಿ ವಿವಾದ ಅಥವಾ ಹಣಕಾಸಿನ ವಿಷಯದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಮಹಾಲಿಂಗ ನಂದಗಾವಿ, ಹಾಗೂ ಡಿಎಸ್.ಪಿ ಮನೋಜಕುಮಾರ ನಾಯಿಕ, ಸಂಕೇಶ್ವರ ಪಿಎಸ್ ಐ ಗಣಪತಿ ಕೊಂಗನೋಳಿ ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.