ಜಲಕ್ಷಾಮಕ್ಕೆ ಕಮರಿದ ಕಬ್ಬು ಬೆಳೆ!

•ಬಿಸಲಿನ ದಗೆಗೆ ಶೇ.40 ಕಬ್ಬು ಬೆಳೆಹಾನಿ•ಕೃಷ್ಣಾ ನದಿ ತೀರದ ಭಾಗದ ರೈತರಿಗೆ ಸಂಕಷ್ಟ

Team Udayavani, Jun 17, 2019, 9:51 AM IST

ಚಿಕ್ಕೋಡಿ: ಕೃಷ್ಣಾ ನದಿ ತೀರದ ರೈತರ ಕಬ್ಬು ಒಣಗಿ ನಿಂತಿರುವುದು.

ಚಿಕ್ಕೋಡಿ: ಪ್ರಸಕ್ತ ವರ್ಷದ ಬೇಸಿಗೆಯಲ್ಲಿ ಜಲಮೂಲಗಳು ಬತ್ತಿ ಹೋಗಿದ್ದರ ಪರಿಣಾಮ ತಾಲೂಕಿನ ಶೇ.40ರಷ್ಟು ಕಬ್ಬು ಬಿಸಲಿನ ದಗೆಗೆ ಕಮರಿ ಹೋಗಿದೆ. ಇದರಿಂದ ಕೋಟ್ಯಂತರ ರೂ. ಆರ್ಥಿಕ ನಷ್ಟ ಹೊಂದಿರುವ ರೈತರಿಗೆ ದೊಡ್ಡ ಆಘಾತವಾಗಿದ್ದು, ಸರ್ಕಾರ ಸೂಕ್ತ ಸರ್ವೇ ಮಾಡಿ ಪರಿಹಾರ ಒದಗಿಸಬೇಕೆನ್ನುವುದು ರೈತ ಸಮುದಾಯ ಒತ್ತಾಯಿಸಿದೆ.

ಚಿಕ್ಕೋಡಿ ತಾಲೂಕಿನಲ್ಲಿ ಕೃಷ್ಣಾ, ದೂಧಗಂಗಾ, ವೇದಗಂಗಾ, ಪಂಚಗಂಗಾ ನದಿಗಳು ಹರಿದರೂ ಕೂಡಾ ಪ್ರಸಕ್ತ ವರ್ಷದಲ್ಲಿ ನೀರಿನ ಅಭಾವ ಮಾತ್ರ ರೈತರನ್ನು ಸಂಕಷ್ಟಕ್ಕೆ ಈಡು ಮಾಡಿದೆ. ಅನಾವೃಷ್ಟಿಯಿಂದ ನದಿಗಳು ಬತ್ತಿ ಹೊಗಿವೆ. ಬೆಳೆ ಸಕಾಲದಲ್ಲಿ ನೀರಾವರಿ ಸೌಕರ್ಯ ದೊರಕದೇ ಕಬ್ಬುಬೆಳೆ ಹಾಳಾಗುತ್ತಿದೆ. ತಾಲೂಕಿನಲ್ಲಿ ಒಟ್ಟು 103 ಗ್ರಾಮಗಳಿದ್ದು, ಆ ಪೈಕಿ 36 ಗ್ರಾಮಗಳು ಮಾತ್ರ ನದಿಗಳ ಹತ್ತಿರದಲ್ಲಿವೆ. ಉಳಿದ ಗ್ರಾಮಗಳು ನದಿಯಿಂದ ದೂರ ಇರುವುದರಿಂದ ಕುಡಿಯುವ ನೀರಿಗಾಗಿ ಪರದಾಡುವ ಪ್ರಸಂಗ ಬಂದೋದಗಿದೆ. ಅಲ್ಪಸ್ವಲ್ಪ ನೀರು ಎತ್ತ ಬೇಕಾದಲ್ಲಿ ವಿದ್ಯುತ್‌ ಕಡಿತ ಸಮಸ್ಯೆ ರೈತರನ್ನು ಕಾಡುತ್ತಿದೆ. ಪ್ರಸಕ್ತ ವರ್ಷ ದೂಧಗಂಗಾ ನದಿ ಹೊರತು ಪಡಿಸಿ ಕೃಷ್ಣಾ ನದಿ ತೀರದ ಹಾಗೂ ಇನ್ನುಳಿದ ಕಡೆಗಳಲ್ಲಿ ಕಬ್ಬು ಬೆಳೆಗಳಿಗೆ ನೀರು ಇಲ್ಲದೆ ಸಂಪೂರ್ಣ ಒಣಗಿ ಹೋಗುತ್ತಿದೆ. ಬೇಸಿಗೆ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಸುಮಾರು ಶೇ.40ರಷ್ಟ್ರು ಕಬ್ಬು ನಾಶವಾಗಿದೆ.

2002ರಿಂದ 2004ರ ವರೆಗೆ ಭೀಕರ ಬರಗಾಲ ಇದ್ದರೂ ಪ್ರಸಕ್ತ ಸಾಲಿನಷ್ಟು ನೀರಿನ ಸಮಸ್ಯೆ ಉಂಟಾಗಿರಲಿಲ್ಲ. 2005ರಿಂದ 2010ರವರಿಗೆ ಪ್ರವಾಹದಿಂದ ರೈತರು ಸಂಕಷ್ಟ ಅನುಭವಿಸಿದರೂ ಕಳೆದ 2010 ರಿಂದ 2018ರವರೆಗೆ ಮಳೆ ಪ್ರಮಾಣ ಕುಸಿಯುತ್ತಲೇ ಬಂದಿದೆ. ಮಡ್ಡಿ ಭಾಗದ ರೈತರ ಜೀವನ ಅಯೋಮಯ: ಕೃಷ್ಣಾ ಮತ್ತು ಉಪನದಿಗಳ ದಡದಲ್ಲಿರುವ ರೈತರ ಕಬ್ಬು ನೀರಿಲ್ಲದೆ ಒಣಗಿ ಹೋಗಿದೆ. ಇನ್ನು ಮಡ್ಡಿ ಭಾಗದ ರೈತರ ಗೋಳು ಅಯೋಮಯವಾಗಿದೆ. ಪ್ರಸಕ್ತ ವರ್ಷದಲ್ಲಿ ನದಿಗಳು ಬತ್ತಿ ಹೋಗಿವೆ. ಇನ್ನು ಮಡ್ಡಿ ಭಾಗದಲ್ಲಿರುವ ಕೊಳವೆಬಾವಿ, ಬಾವಿ, ಕೆರೆಗಳಂತೂ ಬಿಸಿಲಿನ ದಗೆಗೆ ಫೆಬ್ರವರಿ-ಮಾರ್ಚ್‌ ತಿಂಗಳಲ್ಲಿಯೇ ಬತ್ತಿ ಹೋಗಿವೆ. ಕಬ್ಬು ಬೆಳೆಯುವುದಂತೂ ಅಗಾದ ಮಾತು. ಆದರೆ ಪ್ರಸಕ್ತ ವರ್ಷದಲ್ಲಿ ಮುಂಗಾರು ಮಳೆ ಉತ್ತಮವಾದರೆ ಮಾತ್ರ ಮಡ್ಡಿ ಭಾಗದ ರೈತರ ಜೀವನ ಉಜ್ವಲವಾಗುತ್ತದೆ. ಆದರೆ ನದಿ ಪಾತ್ರದ ರೈತರ ಕಬ್ಬು ಮಾತ್ರ ಕೈಗೆಟಕುವುದು ಸುಲಭವಿಲ್ಲ.

ಕಬ್ಬು ಬೆಳೆಗಾರರ ಜೊತೆಗೆ ಸಕ್ಕರೆ ಕಾರ್ಖಾನೆಗಳೂ ಸಹ ಸಂಕಷ್ಟ ಅನುಭವಿಸುವ ಪ್ರಸಂಗ ಬಂದೋದಗಲಿದೆ. ಇನ್ನೊಂದಡೆ ಸಕ್ಕರೆ-ಬೆಲ್ಲದ ಬೆಲೆ ಗಗಣಕ್ಕೆ ಏರಿದರೂ ಕೂಡಾ ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಲು ಸಕ್ಕರೆ ಕಾರ್ಖಾನೆಗಳು ಹಿಂದೇಟು ಹಾಕುತ್ತಿರುವುದು ರೈತರಲ್ಲಿ ಮತ್ತಷ್ಟು ಅಸಮಾಧಾನ ಮೂಡಿಸಿದೆ. ಚಿಕ್ಕೋಡಿ ತಾಲೂಕಿನ ಕಬ್ಬು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೂ ಸಾಗುತ್ತಿದೆ. ಆದರೆ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಬೆಲೆ ನೀಡುವಷ್ಟು ರಾಜ್ಯದ ಗಡಿ ಭಾಗದ ಸಕ್ಕರೆ ಕಾರ್ಖಾನೆಗಳು ಏಕೆ? ನೀಡುತ್ತಿಲ್ಲ ಎಂಬುದು ಕಬ್ಬು ಬೆಳೆಗಾರರ ಆರೋಪವಾಗಿದೆ.

•ಮಹಾದೇವ ಪೂಜೇರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

 • ಚಿಕ್ಕೋಡಿ: ಕಳೆದ ಎರಡು ದಶಕಗಳಿಂದ ಈ ಭಾಗದ ಜನರ ಪಾಲಿಗೆ ವರದಾನವಾಗಬೇಕಿದ್ದ ರಾಯಬಾಗ ಉನ್ನತ ಮಟ್ಟದ (ಆರ್‌ಎಚ್ಎಲ್ಡಿ) ಕಾಲುವೆಯಲ್ಲಿ ನೀರು ಹರಿದಿಲ್ಲ. ಇದರಿಂದ...

 • ಬೆಳಗಾವಿ: ನಗರಲ್ಲಿ ಬೇಕಾಬಿಟ್ಟಿಯಾಗಿ, ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿದರೆ ನಿಮಗೆ ಇನ್ನು ಮುಂದೆ ದೊಡ್ಡ ಪ್ರಮಾಣದ ದಂಡ ಬೀಳುವುದು ಖಚಿತ. ನೋ ಪಾರ್ಕಿಂಗ್‌...

 • ತೆಲಸಂಗ: ತಾಲೂಕಿನಲ್ಲಿ ಸರಕಾರದಿಂದ ಕರ್ನಾಟಕ ಪಬ್ಲಿಕ್‌ ಸ್ಕೂಲ್ ತೆರೆಯುವ ಸೂಚನೆ ಮೇರೆಗೆ ಮಾಹಿತಿ ತಯಾರಿ ನಡೆಯುತ್ತಿದ್ದು, ತೆಲಸಂಗ ಹೋಬಳಿಯಲ್ಲಿಯೇ ಸ್ಕೂಲ್...

 • ಬೆಳಗಾವಿ: ಪತಿಯ ಮನಸ್ಸು ಬದಲಿಸುತ್ತೇನೆ ಎಂದು ಪತ್ನಿಯನ್ನು ನಂಬಿಸಿ ಮೋಸ ಮಾಡಿದ ನಕಲಿ ಜ್ಯೋತಿಷಿಯನ್ನು ಬಂಧಿಸುವಲ್ಲಿ ನಗರದ ಎಪಿಎಂಸಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಯಚೂರು...

 • ಬೆಳಗಾವಿ: ಹೃದಯಾಘಾತ ಹಾಗೂ ಅಪಘಾತಗಳಿಂದ ಅಸುನೀಗುವವರ ಸಂಖ್ಯೆ ಅಧಿಕವಾಗುತ್ತಿದೆ. ಆದ್ದರಿಂದ ವೈದ್ಯಕೀಯ ರಂಗದಲ್ಲಿ ಎಲ್ಲರೂ ತಕ್ಕಮಟ್ಟಿನ ಜ್ಞಾನ ಹೊಂದಿರುವುದು...

ಹೊಸ ಸೇರ್ಪಡೆ

 • ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಸುಮಾರು 1800 ಹೊರಗುತ್ತಿಗೆ ಪೌರಕಾರ್ಮಿಕರನ್ನು ನೇರ ನೇಮಕಾತಿ ಅರ್ಹತೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಪೌರಕಾರ್ಮಿಕರ...

 • ಧಾರವಾಡ: ಎಲ್ಲೆಂದರಲ್ಲಿ ಸತ್ತು ಬೀಳುತ್ತಿವೆ ಕಪ್ಪೆ, ಇಲಿ, ಹಾವು, ಪಕ್ಷಿಗಳು, ಸುರಿಯುವ ಮಳೆಯಲ್ಲೂ ಸುಟ್ಟು ಹೋಗುತ್ತಿದೆ ಹಸಿರು ಹುಲ್ಲು, ತಿಳಿಯದೇ ಎರಡು ಹಿಡಿ...

 • ಕೊರಟಗೆರೆ: ಸರ್ಕಾರದಿಂದ 1 ಲಕ್ಷ ರೂ. ಸಹಾಯಧನ ಕೂಡಿಸುವುದಾಗಿ ನಂಬಿಸಿ ತಾಲೂಕಿನ 650 ಸ್ತ್ರೀ ಶಕ್ತಿ ಸಂಘಗಳಿಂದ ಕೋಟ್ಯಾಂತರ ರೂ. ಪಡೆದು ಕೊರಟಗೆರೆ ವಲಯ ಮೇಲ್ವಿಚಾರಕ...

 • ಚಿಕ್ಕನಾಯಕನಹಳ್ಳಿ: ಸಣ್ಣ ವಹಿವಾಟಿನ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಚಿಲ್ಲರೆ ಸಮಸ್ಯೆ ಯಾಗುವುದು ಸಾಮಾನ್ಯ. ಇದರಿಂದ ವ್ಯಾಪಾರಿಗಳಿಗೆ ನಷ್ಟ ಅಥವಾ ಗ್ರಾಹಕರು...

 • ಮಾಗಡಿ: ಒಂದು ವರ್ಷದಲ್ಲಿ ಒಂದು ಕೋಟಿ ಸಸಿ ನೆಡಲು ರೋಟರಿ ಮಾಗಡಿ ಸೆಂಟ್ರಲ್ ಸಂಸ್ಥೆ ತೀರ್ಮಾನ ಮಾಡಿದೆ ಎಂದು ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಡಿ.ಎನ್‌. ಸಿದ್ದಲಿಂಗಯ್ಯ...

 • ರಾಮನಗರ: ನುರಿತ ಉಪನ್ಯಾಸಕರಿಂದ ಪಠ್ಯಕ್ರಮಗಳ ಉಪನ್ಯಾಸಗಳ ವೀಡಿಯೋ ರೆಕಾರ್ಡ್‌ಗಳನ್ನು ಯೂಟ್ಯೂಬ್‌ ಮೂಲಕ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ನೂತನ ವ್ಯವಸ್ಥೆಯನ್ನು...