ಶಾಸಕರು ಅತೃಪ್ತರಾಗೋಕೆ ಸಿದ್ದರಾಮಯ್ಯ ಕಾರಣ : ಸೋಮಣ್ಣ ವಾಗ್ದಾಳಿ

Team Udayavani, Nov 4, 2019, 1:30 PM IST

ಬೆಳಗಾವಿ: ನಾವೇನು 17 ಜನ ಶಾಸಕರಿಗೆ ರಾಜೀನಾಮೆ ಕೊಡಿ. ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದೆವಾ ಅಥವಾ ಅರ್ಜಿ ಹಾಕಿದ್ದೇವಾ? ಎಲ್ಲವೂ ಮಾಡಿದ್ದು ಅವರೇ ಎಂದು  ವಸತಿ ಸಚಿವ ಸೋಮಣ್ಣ  ಹೇಳಿದರು.

ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು 17 ಜನರಲ್ಲಿ 14 ಜನ ಸಿದ್ದರಾಮಯ್ಯ ಫೋಟೋ ಹಾಕೊಂಡು ಗೆದ್ದವರು. ನಾವು ಯಾರನ್ನು ಕರೆದಿರಲಿಲ್ಲ, ಅರ್ಜಿ ಹಾಕಿಲ್ಲ ಎಂದು ವಸತಿ ಸಚಿವ ಸೋಮಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಇರುವ ಗೊಂದಲದಿಂದ ಅವರೆಲ್ಲಾ ರಾಜೀನಾಮೆ ಕೊಟ್ಟಿದ್ದಾರೆ ಎಂದ ಅವರು ಸಂಬಂಧ ಅಂದ್ರೆ ಏನು ನಾವೇನು ನೆಂಟಸ್ಥಿಕೆ ಮಾಡಬೇಕೇ?. ವಿಶ್ವಾಸ, ಪ್ರೀತಿ ಇದೆ.ಶಾಸಕರು ಅತೃಪ್ತರಾಗೋಕೆ ಸಿದ್ದರಾಮಯ್ಯ ಕಾರಣ. ಸಿದ್ದರಾಮಯ್ಯ ಅವರು  ಸೋನಿಯಾ ಗಾಂಧಿ ತೃಪ್ತಿ ಪಡಿಸಲು ಈ ಕೆಲಸ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು. ಅತೃಪ್ತರ ಪರ ಬಿ ಎಸ್ ವೈ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು ಸಿಎಂ ಯಡಿಯೂರಪ್ಪ ದೊಡ್ಡತನ ಪ್ರದರ್ಶನ ಮಾಡಿದ್ದಾರೆ‌ ಎಂದರು.

ನೆರೆ ಪರಿಹಾರ ಹಾಗೂ ಸಂತ್ರಸ್ತರ ವಿಚಾರದಲ್ಲಿ ಮಾತಾನಾಡಿದ ಅವರು ವಿಪಕ್ಷ ಸಿದ್ದರಾಮಯ್ಯ ಯಾರಿಯಾಗಿ ಈ ರೀತಿ ಹೇಳಿಕೆ ಕೊಡ್ತಾರೆ ಗೊತ್ತಿಲ್ಲ. ಸಿದ್ದರಾಮಯ್ಯ ಮಾತಿಗೆ ಅವರ ಪಕ್ಷದ ನಾಯಕರು ಯಾವ ರೀತಿ ಸ್ಪಂದಿಸಿದ್ದಾರೆ ಗೊತ್ತಿದೆ ಎಂದು ವಸತಿ ಸಚಿವ ಸೋಮಣ್ಣ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಸಿದ್ದರಾಮಯ್ಯ ಆಗಿರೋದು ತುಂಬ ಒಳ್ಳೆಯದು. ಅವರ ಕಾಲದಲ್ಲಿ 5 ವರ್ಷ ಬರೀ ಬರಗಾಲ ಇತ್ತು. ಇವತ್ತು ರಾಜ್ಯದಲ್ಲಿ ಅತಿವೃಷ್ಠಿ ಇದೆ. ಸಿದ್ದರಾಮಯ್ಯ, ಬಿ ಎಸ್ ವೈ ಆಡಳಿತದಲ್ಲಿ ತುಂಬ ವ್ಯತ್ಯಾಸವಿದೆ. ಬಿ ಎಸ್ ವೈ ಜನರ ಬಳಿ ಹೋಗಿ ಸಮಸ್ಯೆ ಕೇಳುತ್ತಾರೆ. ಸಿದ್ದರಾಮಯ್ಯ ನಾಯಕರ ಬಳಿ ಹೋಗ್ತಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಯಾರದೋ ಮನೆಯಲ್ಲಿ ಕುಳಿತು ಏನೆನೋ ಮಾತನಾಡುತ್ತಾರೆ ನೆರೆ ವಿಚಾರದಲ್ಲಿ ಗೋಲಮಾಲ್, ಮದ್ಯವರ್ತಿಗಳ ಹಾವಳಿ ಇಲ್ಲ ಎಂದ ಅವರು ರಾಜ್ಯದಲ್ಲಿ ಪ್ರವಾಹದಲ್ಲಿ ಪರಿಸ್ಥಿತಿ ಪ್ರಕೃತಿಯೋ ಯಡಿಯೂರಪ್ಪ ಅವರ ದುರಾದೃಷ್ಟವೋ ಪ್ರವಾಹ ಬಂದಿದೆ.ಯಡಿಯೂರಪ್ಪ ಕಾಲದಲ್ಲಿ ಪ್ರವಾಹ ಆದ್ರೆ ಎಲ್ಲ ಬಡವರಿಗೆ ಪರಿಹಾರ ತಲುಪುತ್ತದೆ ಅಂತ ಆಗಿದೆ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ