ನೀರಿನ ಕೊರತೆಗೆ ಕಮರಿದ ದ್ರಾಕ್ಷಿ 

ಮಳೆ ಕೈಕೊಟ್ಟು ದ್ರಾಕ್ಷಿ ಬೆಳೆ ನಾಶಅಂತರ್ಜಲಮಟ್ಟವೂ ಇಳಿಕೆಅಕಾಲ ಮಳೆಗೆ ಬೆಳೆ ನಾಶ ಭೀತಿ

Team Udayavani, Mar 27, 2019, 3:59 PM IST

27-March-16

ತೆಲಸಂಗ: ಗ್ರಾಮದಲ್ಲಿ ನೀರಿಲ್ಲದೆ ಕಮರುತ್ತಿರುವ ದ್ರಾಕ್ಷಿ ಬೆಳೆ 

ತೆಲಸಂಗ: ಅಥಣಿ ತಾಲೂಕಿನ ಒಂದು ಭಾಗ ಅತಿವೃಷ್ಟಿಯಿಂದ ನಲುಗಿದರೆ ಇನ್ನು ಒಂದು ಭಾಗ ಅನಾವೃಷ್ಟಿಯಿಂದ ನಲುಗುತ್ತದೆ. ಅಂತೆಯೇ ಸತತ ಬರದಿಂದ ನಲುಗಿದ ಅಥಣಿ ಪೂರ್ವಭಾಗದ ರೈತನಿಗೆ ಈ ವರ್ಷವೂ ಮಳೆ ಕೈಕೊಟ್ಟಿದ್ದರಿಂದ ನೀರಿಲ್ಲದೆ ದ್ರಾಕ್ಷಿ ಕಮರಿ ಹೋಗುತ್ತಿದೆ.
ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕುಸಿಯುತ್ತಿರುವುರಿಂದ ಮಳೆ ಆಧಾರಿತ ಬೆಳೆಯಿಂದ ಹಿಂದೆ ಸರಿದ ರೈತರು ತುಂತುರು ನೀರಾವರಿ ಮೂಲಕ ಬೆಳೆಯಬಹುದಾದ ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಳ ಮೊರೆ ಹೋಗಿದ್ದಾರೆ. ಭಾರಿ ಪ್ರಮಾಣದಲ್ಲಿ ಬೋರ್‌ವೆಲ್‌ಗ‌ಳ ನೀರು ಬತ್ತಿ ಹೋಗುತ್ತಿರುವುದರಿಂದ ಅದು ಕೂಡಾ ಸದ್ಯಕ್ಕೆ ಸಂಕಷ್ಟಕ್ಕೆ ಸಿಲುಕಿಸಿದೆ. ಮೂರು ನೂರು ಅಡಿ ಆಳಕ್ಕೆ ಕೊರೆಸುತ್ತಿದ್ದ ಬೋರ್‌ವೆಲ್‌ಗ‌ಳ ಆಳ, ಕಳೆದ ಏಳೆಂಟು ವರ್ಷಗಳಲ್ಲಿ ಸಾವಿರ ಅಡಿಗೆ ಮುಟ್ಟಿದೆ. ಅಷ್ಟು ಕೊರೆಸಿದರೂ ನೀರು ಸಿಗುತ್ತದೆನ್ನುವ ಭರವಸೆಯಿಲ್ಲ. ನೀರು ದೊರಕದಿದ್ದರೆ ಬೆಳೆ ಉಳಿಯುವುದಿಲ್ಲ.
ರೈತ ಕಷ್ಟಪಟ್ಟು ವರ್ಷದಿಂದ ಬೆಳೆಸಿದ ಗಿಡ ಫಲ ಕೊಡುವ ಸಮಯದಲ್ಲಿ ಕಮರಿ ಹೋಗುತ್ತಿರುವುದನ್ನು ಕಂಡು ಮರಮರನೆ ಮರಗುತ್ತಿದ್ದಾನೆ. ವರ್ಷದ ಆರಂಭದಲ್ಲಿಯೇ ಹವಾಮಾನದಲ್ಲಿ ವ್ಯತ್ಯಾಸವಾಗಿದ್ದರಿಂದ ಶೇ.
70 ರಷ್ಟು ದ್ರಾಕ್ಷಿ ತೋಟಗಳು ಹಣ್ಣು ಬಿಡದೆ ಕೈಕೊಟ್ಟಿವೆ. ಇನ್ನು ಕೆಲವು ತೋಟಗಳಲ್ಲಿ ಹಣ್ಣು ಬಿಟ್ಟರೂ ಇಳುವರಿಗೆ ಹೊಡೆತ ಬಿದ್ದಿದೆ. ಇಷ್ಟಿದ್ದರೂ ಉಳಿದ ಬೆಳೆಗೆ ಔಷಧಿ ಸಿಂಪಡಿಸಿ ಮಗುವಿನಂತೆ ಬೆಳೆಸಿದ ಗಿಡಗಳು ಕೊನೆಯ ಗಳಿಗೆಯಲ್ಲಿ ಕಮರುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬಂದ ಅಲ್ಪಸ್ವಲ್ಪ ದ್ರಾಕ್ಷಿಗೂ ಬೆಲೆ ಸಿಗದೇ ಇರುವುದರಿಂದ ಹಸಿ ದ್ರಾಕ್ಷಿ ಮಾರಾಟದ ಬದಲು ಒಣದ್ರಾಕ್ಷಿ ತಯಾರಿಸುತ್ತಿದ್ದೇವೆ ಎಂದು ನೋವು ತೋಡಿಕೊಳ್ಳುತ್ತಾರೆ ದ್ರಾಕ್ಷಿ ಬೆಳೆಗಾರರು.
ಟ್ಯಾಂಕರ್‌ ನೀರು: ಬೆಳೆ ಬರದಿದ್ದರೆ ವರ್ಷದಿಂದ ಹಾಕಿದ ಲಕ್ಷಾಂತರ ಹಣ ನಷ್ಟವಾಗುತ್ತಿದೆ ಎಂಬ
ಆತಂಕದಿಂದ ಟ್ಯಾಂಕರ್‌ ವ್ಯವಸ್ಥೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಹಣ ಖರ್ಚು ಮಾಡಿ ಟ್ಯಾಂಕರ್‌ ವ್ಯವಸ್ಥೆ ಮಾಡಿದರೂ ನೀರು ತರುವುದೆಲ್ಲಿಂದ ಎಂಬ ಪ್ರಶ್ನೆಗೆ ಪರಿಹಾರ ಸಿಗುತ್ತಿಲ್ಲ.
30 ಬೋರ್‌ವೆಲ್‌ ಕೊರೆದರು: ವರ್ಷದಿಂದ ವರ್ಷಕ್ಕೆ ಅಂತರ್ಜಲ ಕುಸಿದು ಕೊಳವೆ ಬಾವಿ ಬತ್ತಿದ್ದರಿಂದ ಪ್ರತಿವರ್ಷ ನೀರಿನ ಕೊರತೆ ಆದಾಗಲೆಲ್ಲ ಕೊಳವೆ ಬಾವಿ ಕೊರೆಸುತ್ತ ಬಂದಿರುವುದರಿಂದ ಎಕರೆ ಭೂಮಿಯಲ್ಲಿ 4 ರಿಂದ 5 ಬೋರ್‌ವೆಲ್‌ ಕೊರೆದಿರುವುದು ಕಾಣುಸಿಗುತ್ತದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಇರುವ ನಮಗೆ ಸರಕಾರ ಕೈ ಹಿಡಿಯಬೇಕು ಇಲ್ಲದಿದ್ದರೆ ದ್ರಾಕ್ಷಿ ಬೆಳೆದ ರೈತನ ಸ್ಥಿತಿ ನೋಡತೀರದಾಗಿದೆ ಎಂದು ರೈತರು ಸಂಕಷ್ಟ
ತೋಡಿಕೊಂಡಿದ್ದಾರೆ.
ಬರದ ಪರಿಣಾಮ ಮೊದಲಿದ್ದ ನಾಲ್ಕು ಬೋರ್‌ವೆಲ್‌ ಕೈಕೊಟ್ಟಿದ್ದರಿಂದ ಮತ್ತೆ ಈ ವರ್ಷ ಎರೆಡು ಬೋರ್‌ವೆಲ್‌ ಕೊರೆಸಿದ್ದೇವೆ. ತೋಟದಲ್ಲಿ ವಾಸಿಸುವ ನಮಗೆ ಕುಡಿಯಲು ನೀರಿನ ತೊಂದರೆ ಎದುರಾಗಿದ್ದು, ಇನ್ನು ದ್ರಾಕ್ಷಿ ಬೆಳೆ ಉಳಿಸಿಕೊಳ್ಳುವುದು ಹೇಗೆಂಬ ಯೋಚನೆ ಎದುರಾಗಿ ದಿಕ್ಕು ತೋಚದಂತಾಗಿದೆ.
 ನವೀನ ಪೋಳ,
ಯುವ ರೈತ ತೆಲಸಂಗ
ಜಗದೀಶ ತೆಲಸಂಗ

ಟಾಪ್ ನ್ಯೂಸ್

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.