ಅಂತ್ಯಸಂಸ್ಕಾರಕ್ಕೆ ಅಥಣಿ ಗೆಳೆಯರ ಬಳಗ ಹೆಗಲು
Team Udayavani, May 22, 2021, 9:50 PM IST
ಸಂತೋಷ ರಾ ಬಡಕಂಬಿ.
ಅಥಣಿ: ಕೊರೊನಾ ಮಹಾಮಾರಿ ಮಾನವ ಸಂಬಂಧಗಳನ್ನು ದೂರಮಾಡಿ ಸಾವಿನ ರಣಕೇಕೆ ಹಾಕುತ್ತಿದ್ದು. ಸೋಂಕಿಗೆ ಒಳಗಾದ ವ್ಯಕ್ತಿಯ ಶವ ಸಂಸ್ಕಾರಕ್ಕೂ ಕುಟುಂಬ ವರ್ಗದವರು ಮುಂದೆ ಬಾರದ ಸಮಯದಲ್ಲಿ ಪಟ್ಟಣದಲ್ಲಿ ಗೆಳೆಯರ ಬಳಗ ಉಚಿತವಾಗಿ ಸೋಂಕಿತರ ಶವಸಂಸ್ಕಾರ ನಿರ್ವಹಿಸಿ ಸಮಾಜಕ್ಕೆ ಮಾದರಿಯಾಗಿದೆ.
ಪಟ್ಟಣದಲ್ಲಿ “ಅಥಣಿ ಗೆಳೆಯರ ಬಳಗ’ದ ಸದಸ್ಯರು ಕಳೆದ 15 ದಿನಗಳಿಂದ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಕ್ರಿಯೆಯನ್ನು ಕೋವಿಡ್ ನಿಯಮಾವಳಿ ಅನುಸರಿಸಿ ಉಚಿತವಾಗಿ ನೆರವೇರಿಸುತ್ತಿದ್ದಾರೆ. ಹಲವೆಡೆ ಅಂತ್ಯಸಂಸ್ಕಾರಕ್ಕೆ ಸಾವಿರಾರು ರೂ. ಪಡೆದದ್ದು, ಅಮಾನವೀಯವಾಗಿ ಅಂತ್ಯಸ್ಕಾರ ನೆರವೇರಿಸಿದ ಘಟನೆಗಳನ್ನು ನೋಡಿದ್ದ ಈ ಅಥಣಿ ಗೆಳೆಯರ ಬಳಗದ ಸುಮಾರು ಹನ್ನೆರಡು ಜನ ಸೇರಿಕೊಂಡು ಕಳೆದ 15 ದಿನಗಳಿಂದ ಉಚಿತ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದಾರೆ.
ಯಾರಿಂದಲೂ ನಯಾ ಪೈಸೆ ಅಪೇಕ್ಷಿಸದೆ ತಮ್ಮ ಸ್ವಂತ ಖರ್ಚಿನಿಂದ ವಿಧಿ ವಿಧಾನಕ್ಕೆ ಬೇಕಾದ ವೆಚ್ಚಗಳನ್ನು ಭರಿಸುತ್ತಿದ್ದಾರೆ. ಅಥಣಿ ಗೆಳೆಯರ ಬಳಗದ ಹೆಸರಲ್ಲಿ ಮಲ್ಲೇಶ ಪಟ್ಟಣ, ಸಿದ್ದು ಮಾಳಿ, ಅರುಣ ಮಾಳಿ, ಪ್ರಶಾಂತ ತೋಡಕರ, ರಶೀದ ಶೇಡಬಾಳೆ, ಮಹಾದೇವ ಅಡಹಳ್ಳಿ, ಜಗನ್ನಾಥ ಬಾಮನೆ, ಆನಂದ ಮಾಕಾಣಿ, ಮಯೂರೇಶ ಮಂಗಸೂಳಿ, ಪ್ರಮೋದ ಚಂಡಕೆ, ಮಲ್ಲೇಶ ಕಾಂಬಳೆ, ಪ್ರಕಾಶ ಜಾಧವ ಮೊದಲಾದ 12 ಯುವಕರು ಜನಸೇವೆಗೆ ಮುಂದಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಗತ್ಯವಿರುವವರು ಉಚಿತ ಅಂತ್ಯಸಂಸ್ಕಾರಕ್ಕಾಗಿ 8546868005 ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು
ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್
ಕಾಪು ತಾಲೂಕಿನಾದ್ಯಂತ ಭಾರೀ ಮಳೆ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ
ಮಹಾ ತಿರುವು ; ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಟ್ಟ ಬಿಜೆಪಿ
ಸುರತ್ಕಲ್ ಸುತ್ತಮುತ್ತ 15 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಹೊಸ ಸೇರ್ಪಡೆ
ಸುಳ್ಯ-ಸಂಪಾಜೆಯಲ್ಲಿ ಮತ್ತೆ ಕಂಪನ; ಒಂದೇ ವಾರದಲ್ಲಿ ನಾಲ್ಕನೇ ಬಾರಿ ನಡುಗಿದ ಭೂಮಿ!
ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ ಲಕ್ಷ್ಮಿ ನಾರಾಯಣ್ಗೆ ಶೋಕಾಸ್ ನೋಟಿಸ್
ಇಂಗ್ಲೆಂಡ್ ವಿರುದ್ಧ ಟಿ20 ಏಕದಿನ ಸರಣಿಗೆ ತಂಡ ಪ್ರಕಟ; ಮರಳಿದ ಶಿಖರ್ ಧವನ್
ಬರ್ಮಿಂಗ್ಹ್ಯಾಮ್: ಭಾರತಕ್ಕೆ ಸವಾಲಿನ ಟೆಸ್ಟ್
ರಾಷ್ಟ್ರಪತಿ ಚುನಾವಣೆ: ಮುರ್ಮು, ಸಿನ್ಹಾ ನಾಮಪತ್ರ ಸ್ವೀಕೃತ