ಚುನಾವಣೆ ಸುದ್ದಿ-ಜಾಹೀರಾತುಗಳ ಮೇಲೆ ನಿಗಾ
Team Udayavani, Mar 26, 2021, 6:51 PM IST
ಬೆಳಗಾವಿ: ಬೆಳಗಾವಿ ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆಗೆಸಂಬಂಧಿಸಿದ ಸುದ್ದಿ ಮತ್ತು ಜಾಹೀರಾತುಗಳ ಮೇಲೆ ನಿಗಾ ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿ ಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ| ಕೆ. ಹರೀಶಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಉಪ ಚುನಾವಣೆ ಹಿನ್ನೆಲೆಯಲ್ಲಿ ನಗರದ ವಾರ್ತಾಭವನದಲ್ಲಿ ಆರಂಭಿಸಲಾಗಿರುವಮಾಧ್ಯಮ ಕಣ್ಗಾವಲು ಕೇಂದ್ರ (ಮೀಡಿಯಾಮಾನಿಟರಿಂಗ್ ಸೆಲ್)ಕ್ಕೆ ಗುರುವಾರ ಭೇಟಿ ನೀಡಿ ಅವರು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚುನಾವಣೆಗೆ ಸಂಬಂ ಧಿಸಿದಂತೆ ಯಾವುದೇ ಪಕ್ಷಅಥವಾ ಅಭ್ಯರ್ಥಿಗಳು ಟಿವಿ, ಕೇಬಲ್ ಟಿವಿ,ಸಾಮಾಜಿಕ ಜಾಲತಾಣ, ಸಿನಿಮಾ ಮಂದಿರ,ಎಲ್‌ಇ.ಡಿ. ವಾಹನದ ಮೂಲಕ ಪ್ರಚಾರ ಕೈಗೊಳ್ಳಬೇಕಾದರೆ ಜಾಹೀರಾತು ವಿಷಯ ವಸ್ತುವಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ಎಂ.ಸಿ.ಎಂ.ಸಿ.ಯಿಂದ ಪೂರ್ವಾನುಮತಿ ಪಡೆಯಬೇಕು ಎಂದು ತಿಳಿಸಿದರು.
ಅನುಮತಿ ಪಡೆಯದಿದ್ದರೆ ಕಾನೂನು ಕ್ರಮ: ಅನುಮತಿಯನ್ನು ಪಡೆಯದೇ ಪ್ರಚಾರ ಕೈಗೊಂಡರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅದೇ ರೀತಿ ಮಾಧ್ಯಮ ಸಂಸ್ಥೆಗಳು ಪೂರ್ವಾನುಮತಿ ಪಡೆಯದೆಜಾಹೀರಾತುಗಳನ್ನು ಪ್ರಸಾರ ಮಾಡಬಾರದು.ಚುನಾವಣಾ ಆಯೋಗ ನೀಡಿರುವಮಾರ್ಗಸೂಚಿಯನ್ನು ಪಾಲಿಸುವ ಮೂಲಕಮುಕ್ತ ಮತ್ತು ನ್ಯಾಯಸಮ್ಮತ ಉಪ ಚುನಾವಣೆ ನಡೆಸಲು ಸಹಕರಿಸಬೇಕು ಎಂದು ಜಿಲ್ಲಾಚುನಾವಣಾಧಿ ಕಾರಿ ಡಾ. ಕೆ. ಹರೀಶಕುಮಾರ್ ಮನವಿ ಮಾಡಿಕೊಂಡರು.
ಮಾಧ್ಯಮ ಕಣ್ಗಾವಲು ಕೇಂದ್ರದಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯ ನೋಡಲ್ ಅಧಿಕಾರಿ ಹಾಗೂ ವಾರ್ತಾ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ, ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಕಟ/ ಪ್ರಸಾರ ಆಗುವ ಎಲ್ಲ ಸುದ್ದಿ ಮತ್ತುಜಾಹೀರಾತುಗಳ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ಹೇಳಿದರು.
ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿ ನಿಸಾರ್ ಅಹ್ಮದ್, ಮಾಧ್ಯಮ ಕಣ್ಗಾವಲು ಕೇಂದ್ರದ ಸಿಬ್ಬಂದಿ ಝಡ್.ಜಿ. ಸಯ್ಯದ್, ವಿನಾಯಕ ವಣ್ಣೂರ, ಕೆ.ಆರ್.ಕುಲಕರ್ಣಿ, ಎಂ.ಎಂ. ಪಾಟೀಲ, ಜಿ.ವೈ.ಕಾವಳೆ, ಕೆ.ಎಸ್. ಕಾಗಲೆ, ವಜ್ರಾ ಪಾಟೀಲ, ಜಿ.ಡಿ. ಹಳೇಮನಿ ಇತರರು ಇದ್ದರು.