ನನಗೆ ಮಂತ್ರಿ ಸ್ಥಾನ ಬೇಡ ಮುಖ್ಯಮಂತ್ರಿಯೇ ಆಗುತ್ತೇನೆ: ಉಮೇಶ ಕತ್ತಿ
Team Udayavani, Feb 10, 2020, 9:23 PM IST
ಬೆಳಗಾವಿ: ಈಗ ನನಗೆ ಮಂತ್ರಿ ಸ್ಥಾನ ಬೇಡ. ಮುಖ್ಯಮಂತ್ರಿಯೇ ಆಗುತ್ತೇನೆ ಎಂದು ಹಿರಿಯ ಶಾಸಕ ಉಮೇಶ ಕತ್ತಿ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ನಂತರ ಮೊದಲ ಬಾರಿ ಮೌನ ಮುರಿದು ಹುಕ್ಕೇರಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ನಾನು ಹಿರಿಯ ಶಾಸಕ. 13 ವರ್ಷ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಈಗ ಮತ್ತೆ ಮಂತ್ರಿ ಆಗುವುದರಲ್ಲಿ ಸ್ವಾರಸ್ಯ ಇಲ್ಲ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಥಾನ ನನಗೆ ಸಿಗಬೇಕು ಎನ್ನುವ ಪ್ರಯತ್ನದಲ್ಲಿದ್ದೇನೆ.
ದೇವರ ಆಶೀರ್ವಾದ ಇದ್ದರೆ ರಾಜ್ಯದ ಮುಖ್ಯಮಂತ್ರಿಯೂ ಆಗುತ್ತೇನೆ. ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಯಡಿಯೂರಪ್ಪ ಜತೆಯಾಗಲಿ, ಇನ್ನಾರ ಜೊತೆಯೂ ಮುನಿಸುಕೊಂಡಿಲ್ಲ. ನಾನು ನನ್ನ ಹೆಂಡತಿಯ ಜತೆಗೇ ಸಿಟ್ಟು ಮಾಡಿಕೊಳ್ಳುವುದಿಲ್ಲ. ಇನ್ನು ಯಡಿಯೂರಪ್ಪನವರ ಜತೆ ಮುನಿಸಿಕೊಂಡು ಸಾಧಿಸುವುದಾದರೂ ಏನಿದೆ ಎಂದರು.
ಕಳೆದ ಚುನಾವಣೆಯಲ್ಲಿ ಸೋತರೂ ಲಕ್ಷ್ಮಣ ಸವದಿಗೆ ಡಿಸಿಎಂ ಸ್ಥಾನ, ಕಾಂಗ್ರೆಸ್‌ನಿಂದ ಬಂದ ಶ್ರೀಮಂತ ಪಾಟೀಲಗೆ ಸಚಿವ ಸ್ಥಾನ ನೀಡಲಾಗಿದೆ. ಅವರಿಗೆ ಅನುಭವ ಜಾಸ್ತಿ ಇದೆ. ನನಗೆ ಅನುಭವ ಕಡಿಮೆ ಇದೆ. ನನ್ನ ನಸೀಬ್‌ದಲ್ಲಿ ಮಂತ್ರಿ ಆಗುವುದು ಬರೆದಿಲ್ಲ. ಹೀಗಾಗಿ ಇದರ ಬಗ್ಗೆ ಹೆಚ್ಚು ಮಾತನಾಡಲ್ಲ. ಹತ್ತು ಜನ ಹೊಸದಾಗಿ ಆರಿಸಿ ಬಂದಿದ್ದಾರೆ ಅವರಿಗೆ ಮಂತ್ರಿ ಮಾಡುವುದರಲ್ಲಿ ತಪ್ಪೇನಿಲ್ಲ. ನಾನು ಹುಕ್ಕೇರಿ ಶಾಸಕನಾಗಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ, ಉಳಿದ ವಿಷಯಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಯಾರೇ ಮಂತ್ರಿಯಾದ್ರೂ ಸ್ವಾಗತಿಸುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಒಂಟಿಯಾಗುತ್ತಿದ್ದಾರೆಯೇ? ಹೈಕಮಾಂಡ್ ನೀಡಿದ ಸಂದೇಶವೇನು?
ಮೇಲ್ಮನೆ: ಇಂದು ಸ್ಪಷ್ಟ ಚಿತ್ರಣ? ಕಾಂಗ್ರೆಸ್ ಪಟ್ಟಿಯಲ್ಲಿ ಹಲವು ಪ್ರಭಾವಿ ನಾಯಕರ ಹೆಸರು
ರಾಜ್ಯಕ್ಕೆ ಆಪತ್ತಿನಲ್ಲಿ ಬರಲಿದ್ದಾರೆ “ಆಪದ್ ಮಿತ್ರ’ರು
ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್
ಲಂಡನ್: ಬಸವೇಶ್ವರರ ಪ್ರತಿಮೆಗೆ ಗೌರವ ಸಲ್ಲಿಸಿದ ಸಚಿವ ಡಾ.ಅಶ್ವತ್ಥನಾರಾಯಣ್