ಮೂಗು ಮುಚ್ಚಿ ಕೊಂಡೇ ಗಣಪನಿಗೆ ನಮನ!

ನೀರಿನಲ್ಲಿ ಕರಗದ ಪಿಒಪಿ ಮೂರ್ತಿಗಳು

Team Udayavani, Sep 27, 2019, 12:36 PM IST

bg-tdy-2

ಬೆಳಗಾವಿ: ಹನ್ನೊಂದು ದಿನಗಳ ಕಾಲ ಭಕ್ತಿ ಭಾವದಿಂದ ಪೂಜಿಸಿ, ಕುಣಿದು ಕುಪ್ಪಳಿಸಿ 26 ಗಂಟೆಗಳ ಕಾಲ ನಿರಂತರಮೆರವಣಿಗೆ ಮಾಡಿ ವಿಸರ್ಜನೆ ಮಾಡಿರುವ ನಿಮ್ಮ ಗಣಪನ ಅವಸ್ಥೆ ಒಮ್ಮೆ ಇಲ್ಲಿ ನೋಡಿ. ಹೊಂಡದಲ್ಲಿ ಪೂಜ್ಯನೀಯ ಭಾವದಿಂದ ಮೂರ್ತಿಗಳನ್ನು ವಿಸರ್ಜನೆ ಮಾಡಿರುವ ಸ್ಥಳದಲ್ಲಿ ಕಣ್ಣು, ಬಾಯಿ, ಮೂಗು ಮುಚ್ಚಿಕೊಂಡೇ ಸಾಗುವುದು ಅನಿವಾರ್ಯವಾಗಿದೆ.

ಬೆಳಗಾವಿ ನಗರದ ಗಣೇಶೋತ್ಸವ ಎಂದರೆ ಎಲ್ಲಿಲ್ಲದ ಸಂಭ್ರಮ. ಮಹಾರಾಷ್ಟ್ರದ ಮುಂಬೈ, ಪುಣೆ ಹೊರತುಪಡಿಸಿದರೆ ಕರ್ನಾಟಕದಲ್ಲಿಯೇ ಅತ್ಯಂತ ವಿಜೃಂಭಣೆಯ ಗಣೇಶನ ಉತ್ಸವ ನಡೆಯುತ್ತದೆ. ಹನ್ನೊಂದನಕೇ ದಿನಕ್ಕೆ ವಿಸರ್ಜನಾ ಮೆರವಣಿಗೆಯಂತೂ ಮಾದರಿ ಆಗಿದೆ. ಸಂಪ್ರದಾಯದಂತೆ ಗಣಪನನ್ನು ವಿಸರ್ಜನೆ ಮಾಡಿರುವ ಹೊಂಡಗಳತ್ತ ಕಣ್ಣು ಹಾಯಿಸಿದಾಗ ಗಣಪನ ಮೂರ್ತಿಗಳ ಅವಸ್ಥೆ ನೋಡಿ ಅಯ್ಯೋ ಎನಿಸುತ್ತಿದೆ.

ಬಣ್ಣ ಮಾಸಿಲ್ಲ, ಮೂರ್ತಿ ಕರಗಿಲ್ಲ: ವಿಸರ್ಜನೆ ಮಾಡಿರುವ ಬೆನಕನ ಪಿಒಪಿ ಮಾದರಿಯ ಬಹುತೇಕ ಮೂರ್ತಿಗಳು ಇನ್ನೂ ನೀರಿನಲ್ಲಿ ಕರಗಿಲ್ಲ. ಮೂರ್ತಿಗಳ ಬಣ್ಣಗಳೂ ಮಾಸಿಲ್ಲ. ಯಥಾವತ್ತಾಗಿ ಕಣ್ಣಿಗೆ ರಾಚುತ್ತಿವೆ. ನೀರು ಹೊರ ಬಿಡುತ್ತಿದ್ದಂತೆ ಮೂರ್ತಿಗಳೆಲ್ಲ ಹೊರಗೆ ಕಾಣ ಸಿಗುತ್ತಿದ್ದು, ಆರಾಧ್ಯ ದೇವರು ಗಣಪನ ದುಸ್ಥಿತಿಯಿಂದ ಭಕ್ತರೆಲ್ಲರೂ ಕಣ್ಣು, ಬಾಯಿ, ಮೂಗು ಮುಚ್ಚಿಕೊಂಡು ಅಡ್ಡಾಡುತ್ತಿದ್ದಾರೆ. ಕೆಲವರಂತೂ ಮೂಗು ಮುಚ್ಚಿಕೊಂಡೇ ಗಣಪನಿಗೆ ನಮಸ್ಕರಿಸುತ್ತಿರುವ ದೃಶ್ಯಗಳೂ ಕಂಡು ಬರುತ್ತಿವೆ.

ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ: ಮಣ್ಣಿನ ಗಣಪಗಳ ಪ್ರತಿಷ್ಠಾಪನೆ ಮಾಡುವಂತೆ ಆದೇಶ ಇದ್ದರೂ ಯಾರೂ ಅದನ್ನು ಪಾಲಿಸುತ್ತಿಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಬಾರದೆಂಬ ಉದ್ದೇಶದಿಂದಲೋ ಅಥವಾ ಕಟ್ಟುನಿಟ್ಟಾಗಿ ಕಾನೂನು ಜಾರಿ ಮಾಡಲು ಜಿಲ್ಲಾಡಳಿತದ ನಿರ್ಲಕ್ಷ್ಯವೋ ಗೊತ್ತಿಲ್ಲ. ಆದರೆ ಕಡ್ಡಾಯವಾಗಿ ಎಲ್ಲರೂ ಪ್ಲಾಸ್ಟರ್‌ ಆಪ್‌ ಪ್ಯಾರಿಸ್‌ ಗಣಪನನ್ನೇ ಪ್ರತಿಷ್ಠಾಪಿಸುತ್ತಿರುವುದು ಜಿಲ್ಲಾಡಳಿತ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಬೆಳಗಾವಿಯಲ್ಲಿ ಅದ್ಧೂರಿಯಾಗಿ ಆಚರಣೆ ಆದ ಗಣೇಶೋತ್ಸವ ನಂತರದ ಸ್ಥಿತಿಗತಿ ಬಗ್ಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಬೆಳಗಾವಿ ನಗರದಲ್ಲಿ ಸುಮಾರು 10ಕ್ಕೂ ಹೆಚ್ಚು ಕಡೆಗೆ ಗಣಪತಿ ವಿಸರ್ಜನಾ ಹೊಂಡಗಳನ್ನು ನಿರ್ಮಾಣ ಮಾಡಲಾಗಿತ್ತು. ಕೆಲವು ಸಂಚಾರಿ ಹೊಂಡಗಳೂ ಇದ್ದವು. ಪ್ರತಿ ವರ್ಷದಂತೆ ಅತಿ ಹೆಚ್ಚು ಮೂರ್ತಿ ವಿಸರ್ಜನೆ ಆಗುವ ಕಪಿಲೇಶ್ವರ ಹೊಂಡ, ಜಕ್ಕೇರಿ ಹೊಂಡದಲ್ಲಿ ಈಗಿನ ಸ್ಥಿತಿ ಅಯ್ಯೋ ಎನಿಸುತ್ತಿದೆ.

ವಿಸರ್ಜನಾ ಮೆರವಣಿಗೆ ಮುಗಿದು ಇನ್ನೂ 15 ದಿನಗಳು ಕಳೆದಿಲ್ಲ. ಆದರೆ ಇಲ್ಲಿಯ ದುಸ್ಥಿತಿ ಬಗ್ಗೆ ಸಾರ್ವಜನಿಕರಿಗೆ ಅಸಂಹ್ಯ ಆಗುತ್ತಿದೆ.ಜಕ್ಕೇರಿ ಹೊಂಡ ಹಾಗೂ ಕಪಿಲೇಶ್ವರ ಹೊಂಡದಲ್ಲಿದ್ದ ನೀರನ್ನು ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಹೊರಬಿಡುತ್ತಿದ್ದಾರೆ. ಹೀಗಾಗಿ ಹೊಂಡದಲ್ಲಿ ನೀರು ಖಾಲಿಯಾದಂತೆ ಮೂರ್ತಿಗಳ ಅವಸ್ಥೆ ಅನಾವರಣಗೊಂಡಿದೆ. ಹೊಂಡದಲ್ಲಿಯೇ ಹೂವು, ಹಣ್ಣುಗಳನ್ನು ಹಾಕಿದ್ದರಿಂದ ಸುತ್ತಲಿನ ಪ್ರದೇಶವೆಲ್ಲ ಗಬ್ಬು ನಾರುತ್ತಿದೆ. ಹೊಂಡದ ಸುತ್ತಲೂ ಹಾಯ್ದು ಹೋಗುವ ಜನರು ಮೂಗು ಮುಚ್ಚಿಕೊಂಡೇ ಹೋಗುತ್ತಿದೆ. ಅಷ್ಟೊಂದು ದುರ್ವಾಸನೆ ಬೀರುತ್ತಿದೆ.

 

-ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೆಟ್ಟರ್ ನಾಮಪತ್ರ ಸಲ್ಲಿಕೆ

Nomination: ನಾಮಪತ್ರ ಸಲ್ಲಿಸಿದ ಜಗದೀಶ್ ಶೆಟ್ಟರ್, ಬಿಎಸ್ ವೈ, ಗೋವಾ ಸಿಎಂ ಭಾಗಿ

HDK ವಿರುದ್ಧ ರಾಜ್ಯಾದ್ಯಂತ ಮಹಿಳೆಯರಿಂದ ಪ್ರತಿಭಟನೆ: ಡಿಕೆಶಿ

HDK ವಿರುದ್ಧ ರಾಜ್ಯಾದ್ಯಂತ ಮಹಿಳೆಯರಿಂದ ಪ್ರತಿಭಟನೆ: ಡಿಕೆಶಿ

ಮೋದಿ ಪ್ರಧಾನಿಯಾದರೆ ಪಿಒಕೆ ಭಾರತಕ್ಕೆ: ಜಗದೀಶ ಶೆಟ್ಟರ

ಮೋದಿ ಪ್ರಧಾನಿಯಾದರೆ ಪಿಒಕೆ ಭಾರತಕ್ಕೆ: ಜಗದೀಶ ಶೆಟ್ಟರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.