ಆಧಾರ್ ಜಾಗೃತಿಗೆ ಮದುವೆ ಕಾರ್ಡ್ ಬಳಕೆ
Team Udayavani, Apr 2, 2022, 3:49 PM IST
ಬೆಟಗೇರಿ: ಇಲ್ಲೊಂದು ಜೋಡಿ ಮದುವೆ ಆಮಂತ್ರಣ ಪತ್ರಿಕೆಯನ್ನೇ ಆಧಾರ್ ಕಾರ್ಡ್ ಮಾದರಿಯಲ್ಲಿ ಪ್ರಕಟಿಸಿದ್ದು, ಭಾರಿ ವೈರಲ್ ಆಗಿದೆ. ಬಗರನಾಳ ಗ್ರಾಮದಲ್ಲಿ ಇದೇ ಏ.21ರಂದು ಮಠದ-ಹಿರೇಮಠ ಬಂಧುಗಳ ಮದುವೆ ಸಮಾರಂಭ ನಡೆಯಲಿದೆ.
ಬಗರನಾಳ ಗ್ರಾಮದ ಮಠದ ಸಹೋದರರಾದ ಈಶ್ವರಯ್ಯ-ಕಾವೇರಿ, ಬಸಯ್ಯ-ಪವಿತ್ರಾ ಎಂಬ ಜೋಡಿಗಳು ಹಸೆಮಣೆ ಏರಲಿದ್ದಾರೆ. ತಮ್ಮ ವಿವಾಹ ಆಮಂತ್ರಣ ಪತ್ರಿಕೆಯ ಮೂಲಕ ಆಧಾರ್ ಕಾರ್ಡ್ ಮಾಡಿಸಲು ಎಲ್ಲರೂ ಮುಂದಾಗುವಂತೆ ತಿಳಿಸುವ ಪ್ರಯತ್ನ ಮಾಡಿ, ವಿಭಿನ್ನವಾಗಿ ಮದುವೆ ಆಮಂತ್ರಣ ಪತ್ರಿಕೆಯನ್ನು ಬಂಧು ಬಾಂದವರಿಗೆ, ಮಿತ್ರರಿಗೆ ನೀಡುತ್ತಿದ್ದೇವೆ ಎಂದು ದಾಂಪತ್ಯ ಬದುಕಿಗೆ ಕಾಲಿಡಲು ಸಜ್ಜಾಗಿರುವ ಮದುಮಗ ಬಸಯ್ಯ ಮಠದ ಅವರು ಹೇಳುತ್ತಾರೆ.
ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮದುವೆ ದಿನ, ಸ್ಥಳ ಮೊದಲಾದ ಮಾಹಿತಿ ಜತೆಗೆ ಆಧಾರ್ ಕಾರ್ಡ್ ಮಾಡಿಸುವಂತೆ ಈ ಜೋಡಿಗಳು ಕರೆ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅಲ್ಲದೇ ಆಧಾರ್ ಕಾರ್ಡ್‌ದಿಂದ ಆಗುವ ವಿವಿಧ ಉಪಯೋಗಗಳ ಬಗ್ಗೆ ತಿಳಿಸಿದ್ದಾರೆ.
ತಪ್ಪದೇ ಮದುವೆಗೆ ಬನ್ನಿ, ಮರೆಯದೆ ಆಧಾರ್ ನೋಂದಣಿ ಮಾಡಿಸಿ ಎಂದು ಬರೆದು ವಿವಾಹ ಆಮಂತ್ರಣ ನೀಡುತ್ತಿರುವ ಈ ಜೋಡಿಗಳಿಗೆ ಪ್ರಜ್ಞಾವಂತ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಈಡೇರದ ಬೇಡಿಕೆ : 67ನೇ ದಿನಕ್ಕೆ ಕಾಲಿಟ್ಟ ಮೊಗೇರ ಸಮುದಾಯದ ಧರಣಿ ಸತ್ಯಾಗ್ರಹ
ಆನ್ಲೈನ್ನಲ್ಲಿ ಪ್ರೀತಿ, ಮದುವೆ : 12 ಲಕ್ಷ ರೂ ವಂಚಿಸಿದ ಮೂರು ಮಕ್ಕಳ ತಾಯಿ
ಮಿಜೋರಾಂ: ವಿದೇಶಕ್ಕೆ ಕಳ್ಳಸಾಗಾಣಿಕೆಯಾಗುತ್ತಿದ್ದ 468 ವನ್ಯಜೀವಿಗಳ ರಕ್ಷಣೆ
ಸಾಗರ : ರಸ್ತೆ ಪಕ್ಕದ ಚರಂಡಿಗೆ ಬಿದ್ದು ಗಾಯಗೊಂಡಿದ್ದ ಬೈಕ್ ಸವಾರ ಸಾವು
ಮಹಾರಾಷ್ಟ್ರದಲ್ಲಿ ಬಿ.ಎ.4 ಮತ್ತು ಬಿ.ಎ.5 ಒಮಿಕ್ರಾನ್ ರೂಪಾಂತರಿ ಪತ್ತೆ