ರೋಟಾ ವೈರಸ್‌ ಲಸಿಕೆ ತಪ್ಪದೇ ಮಕ್ಕಳಿಗೆ ಹಾಕಿಸಿ

Team Udayavani, Sep 7, 2019, 10:52 AM IST

ತೆಲಸಂಗ: ಸರಕಾರಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ರೋಟಾ ವೈರಸ್‌ ಲಸಿಕೆಗೆ ವೈದ್ಯಾಧಿಕಾರಿ ಡಾ| ವಾಸಂತಿ ಉದ್ಘಾಟಿಸಿದರು.

ತೆಲಸಂಗ: ರೋಟಾ ವೈರಸ್‌ ಲಸಿಕೆ ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಮಕ್ಕಳಲ್ಲಿ ಅತಿಸಾರ ಭೇದಿ ತಡೆಗಟ್ಟಲು ಪೋಷಕರು ತಪ್ಪದೇ ತಮ್ಮ ಮಕ್ಕಳಿಗೆ ನಿಗದಿತ ಅವಧಿಯಲ್ಲಿ ಲಸಿಕೆ ಹಾಕಿಸಬೇಕು ಎಂದು ವೈದ್ಯಾಧಿಕಾರಿ ಡಾ.ವಾಸಂತಿ ಹೇಳಿದರು.

ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ನಡೆದ ರೋಟಾ ವೈರಸ್‌ ಲಸಿಕೆ ಹಾಕುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೋಟಾ ವೈರಸ್‌ ಸೋಂಕು ಕಲುಷಿತ ನೀರು, ಅಹಾರ, ಕೊಳೆಯಾದ ಕೈಗಳಿಂದ ಹರಡುತ್ತದೆ. ಈ ಸೊಂಕು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತಾ ಅತಿಸಾರ ಉಂಟಾಗಿ ಕೆಲ ಸಂದರ್ಭದಲ್ಲಿ ಸಾವನ್ನು ತರಬಹುದು.ಪೋಷಕರು ಮಗು ಜನಿಸಿದ 6, 10, 14ನೇ ವಾರದಲ್ಲಿ ತಪ್ಪದೇ ಈ ಲಸಿಕೆ ಹಾಕಿಸಬೇಕು ಎಂದರು.

ತಾಪಂ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ ಮಾತನಾಡಿ, ರೋಟಾ ವೈರಸ್‌ನಿಂದಾಗುವ ಭೇದಿಗೆ ಯಾವುದೇ ಚಿಕಿತ್ಸೆ ಇಲ್ಲ. ಲಸಿಕೆ ಹಾಕಿಸುವುದೇ ಇದಕ್ಕೆ ಸೂಕ್ತ ಮಾರ್ಗೋಪಾಯ ಎಂದರು.

ಮುಖಂಡರಾದ ರಾಜಕುಮಾರ ಪರ್ನಾಕರ, ಅಮೀತ್‌, ವಿನೋದ ಪಾಟೀಲ, ಪ್ರೇಮಾ ಇದ್ದರು.


ಈ ವಿಭಾಗದಿಂದ ಇನ್ನಷ್ಟು

  • ಬೆಳಗಾವಿ: ಉಪ ಚುನಾವಣೆ ಮುಗಿದು ಫಲಿತಾಂಶ ಬಂದ ಬೆನ್ನಲ್ಲೇ ಯಾರು ಉಪ ಮುಖ್ಯಮಂತ್ರಿ, ಯಾರಿಗೆ ಸಚಿವ ಸ್ಥಾನ, ಜಿಲ್ಲಾ ಉಸ್ತುವಾರಿ ಯಾರಿಗೆ ಎಂಬ ಚರ್ಚೆ ಜಿಲ್ಲೆಯಲ್ಲಿ...

  • ಮೂಡಲಗಿ: ಗೋಕಾಕ ಮತಕ್ಷೇತ್ರದ ಇತಿಹಾಸದಲ್ಲಿಯೇ ಪ್ರಥಮ ಭಾರೀಗೆ ಬಿಜೆಪಿಯಿಂದ ರಮೇಶ ಜಾರಕಿಹೊಳಿ ಅವರು ಆಯ್ಕೆಯಾಗಿದರಿಂದ ಮೂಡಲಗಿ ಪಟ್ಟಣ ಸೇರಿದಂತೆ ಅರಭಾವಿ ಕ್ಷೇತ್ರದಲ್ಲಿ...

  • ಹಾರೂಗೇರಿ: ಅಬಾಜಿಯವರು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಬಡ ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಮೂಲಕ ಸಹಸ್ರಾರು...

  • ಚಿಕ್ಕೋಡಿ: ಕೃಷ್ಣಾ ನದಿಗೆ ಕಟ್ಟಿರುವ ಕಲ್ಲೋಳ-ಯಡೂರ ಸೇತುವೆ ಕಳೆದ ಹತ್ತು ವರ್ಷಗಳಿಂದ ಶಿಥಿಲಗೊಂಡು ಈಗಲೋ ಆಗಲೋ ಬೀಳುವ ಹಂತ ತಲುಪಿದೆ. ಸೇತುವೆ ಮೇಲೆ ಭಾರಿ ವಾಹನಗಳು...

  • ಚಿಕ್ಕೋಡಿ: ರಾಜ್ಯದ ಅಂಗನವಾಡಿ ಕಟ್ಟಡಗಳಿಗೆ ಪುನನಿರ್ಮಾಣ ಹಾಗೂ ನವೀಕರಣದ ಅವಶ್ಯಕವಿದ್ದು, ಕೂಡಲೇ ಕೇಂದ್ರ ಸಚಿವರು ಗಮನ ಹರಿಸಿ ಸೂಕ್ತ ಅನುದಾನ ಬಿಡುಗಡೆ ಮಾಡಬೇಕೆಂದು...

ಹೊಸ ಸೇರ್ಪಡೆ