ಹಕ್ಕು ಪತ್ರ ನೀಡಲು ಸಂತ್ರಸ್ತರ ಹರತಾಳ

Team Udayavani, Nov 19, 2019, 4:09 PM IST

ರಾಯಬಾಗ: 2005ರ ಕೃಷ್ಣಾ ನದಿ ಪ್ರವಾಹದಿಂದ ಸಂತ್ರಸ್ತರಾದವರಿಗೆ ಮನೆ ಹಕ್ಕು ಪತ್ರ ನೀಡುವಂತೆ ಹಾಗೂ ಸಂತ್ರಸ್ತರಿಂದ ಹಣ ಪಡೆದ ಗ್ರಾಮ ಲೆಕ್ಕಾಧಿಕಾರಿಯನ್ನು ಸೇವೆಯಿಂದ ವಜಾ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಹಾಗೂ ಕುಡಚಿ ಸಂತ್ರಸ್ತರು ಮಿನಿವಿಧಾನಸೌಧ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಕುಡಚಿ ಪಟ್ಟಣದಲ್ಲಿ 2005ರ ಕೃಷ್ಣಾ ನದಿ ಪ್ರವಾಹದಿಂದ ಮುಳುಗಡೆಗೊಂಡ ಸಂತ್ರಸ್ತ ಕುಟುಂಬದವರಿಗೆ ವಾಸಿಸಲು ಸರ್ಕಾರ ಕುಡಚಿ ಗ್ರಾಮದ ವ್ಯಾಪ್ತಿಯಲ್ಲಿ ಖಾಸಗಿಯವರಿಂದ ಜಮೀನು ಪಡೆದು ನಿರಾಶ್ರಿತ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಾಣ ಮಾಡಿತ್ತು. ಆದರೆ ಕಳೆದ 10-14 ವರ್ಷಗಳುಕಳೆದರೂ ಇಲ್ಲಿಯವರೆಗೆ ಫಲಾನುಭವಿಗಳಿಗೆ ಮನೆಗಳ ಹಕ್ಕು ಪತ್ರಗಳನ್ನು ನೀಡಿಲ್ಲ. 2016ರಲ್ಲಿ ಜಿಲ್ಲಾಧಿಕಾರಿಗಳು ಸಂತ್ರಸ್ತ ಕುಟುಂಬದವರಿಗೆ ಹಕ್ಕು ಪತ್ರ ವಿತರಿಸಿ, ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ತಹಶೀಲ್ದಾರ್‌ ಅವರಿಗೆ ಆದೇಶ ಮಾಡಿದ್ದರೂ ಇನ್ನುವರೆಗೂ ಯಾವುದೇ ಹಕ್ಕು ಪತ್ರ ನೀಡಿಲ್ಲ ಎಂದು ಮನವಿಯಲ್ಲಿ ಆರೋಪಿಸಿದರು.

ಜಿಲ್ಲಾಧಿಕಾರಿಗಳ ಆದೇಶ ಮಾಡಿದ ನಂತರ ಕುಡಚಿ ಗ್ರಾಮಲೆಕ್ಕಾಧಿಕಾರಿ ಎಚ್‌.ಕೆ. ದಶವಂತ ಪರಿಶೀಲನೆ ನೆಪದಲ್ಲಿ ಸಂತ್ರಸ್ತ ಕುಟುಂಬಗಳಿಂದ ಹಣ ಪಡೆದು ಸಂತ್ರಸ್ತರಿಗೆ ಮೋಸ ಮಾಡಿದ್ದಾರೆ. ಇಂಥ ಗ್ರಾಮ ಲೆಕ್ಕಾಧಿಕಾರಿಯನ್ನು ಶೀಘ್ರವೇ ವಜಾಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಅಮೀನ ಜಾತಗಾರ, ಶ್ರೀಕಾಂತ ತಳವಾರ, ಸಂಜು ತಳವರಕರ, ಪ್ರಶಾಂತ ಕಾಂಬಳೆ, ಫಾತಿಮಾ ಶೇಖ, ಸುಂದ್ರವ್ವ ಕಟ್ಟಿಮನಿ, ಕುತಬುದ್ದಿನ ಮುಜಾವರ, ಮುಜಫರ ಸಂದರವಾಲೆ ಸೇರಿದಂತೆ ಸಂತ್ರಸ್ತರು ಮತ್ತು ಸಂಘಟನೆ ಮುಖಂಡರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ