ಲೋಕ ಅದಾಲತ್‌ನಲ್ಲಿ 1085 ಪ್ರಕರಣ ಇತ್ಯರ್ಥ

Team Udayavani, Jul 15, 2019, 3:45 PM IST

ಬಳ್ಳಾರಿ: ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್‌ ನಡೆಯಿತು.

ಬಳ್ಳಾರಿ: ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ ಶನಿವಾರ ನಡೆದಿದ್ದು, 5316 ಪ್ರಕರಣಗಳನ್ನು ಕೈಗೆತ್ತಿಕೊಂಡು 1085 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.

ಅದಾಲತ್‌ನಲ್ಲಿ ಒಟ್ಟು 7 ಪೀಠಗಳನ್ನು ರಚಿಸಿ ರಾಜಿ ಮಾಡಿಕೊಳ್ಳಬಹುದಾದ ಬ್ಯಾಂಕ್‌ ಸಾಲ, ವಿದ್ಯುತ್‌ ಬಿಲ್ ಪಾವತಿ ಪ್ರಕರಣಗಳು, ಕಾರ್ಮಿಕ ವಿವಾದ ಪ್ರಕರಣಗಳು, ವೈವಾಹಿಕ ವಿವಾದ ಸೇರಿದಂತೆ ಇತರೆ ವ್ಯಾಜ್ಯ ಪೂರ್ವ ಮತ್ತು ಚಾಲ್ತಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿದ್ದ 4655 ಪ್ರಕರಣಗಳ ಪೈಕಿ 794 ಪ್ರಕರಣಗಳು ಇತ್ಯರ್ಥಗೊಂಡಿದ್ದು, 7,39,26,767 ರೂ. ಹಣ ಸಂದಾಯವಾಗಿದೆ. 825 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ 291 ಇತ್ಯರ್ಥಗೊಂಡು 1,09,01,757 ರೂ. ಸಂದಾಯವಾಗಿದೆ. ಇದರೊಂದಿಗೆ ಒಟ್ಟು 8,48,28,254 ರೂ. ಹಣ ಸಂದಾಯವಾಗಿದೆ.

ಅದಾಲತ್‌ನಲ್ಲಿ ಒಟ್ಟು 5316 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಚೆಕ್‌ ಬೌನ್ಸ್‌, ಆಸ್ತಿ ವಿವಾದ, ಮನೆ ಬಾಡಿಗೆ ವಿವಾದಗಳು ಸೇರಿದಂತೆ ರಾಜಿ ಮಾಡಿಕೊಳ್ಳಬಹುದಾದ ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರ್ಜುನ್‌.ಎಸ್‌. ಮೆಲ್ಲೂರ್‌ ಹೇಳಿದರು.

ಅದಾಲತ್‌ನಲ್ಲಿ ಪ್ರಕರಣಗಳನ್ನು ಇಬ್ಬರ ಮಧ್ಯಸ್ಥಿಕೆಯಲ್ಲಿ ರಾಜಿ ಮಾಡಿಕೊಳ್ಳುವುದರಿಂದ ಸಂಬಂಧ ಗಟ್ಟಿಗೊಳ್ಳುತ್ತದೆ. ವ್ಯಾಜ್ಯಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಹಳ ಸಮಯ ಹಿಡಿಯುತ್ತವೆ. ಆದರೆ, ಅದಾಲತ್‌ನಲ್ಲಿ ಇಬ್ಬರ ಒಪ್ಪಿಗೆ ಮೇರೆಗೆ ಪ್ರಕರಣವನ್ನು ಇತ್ಯರ್ಥಗೊಳಿಸ ಲಾಗುತ್ತದೆ. ಇದರಿಂದ ಶತೃತ್ವ ಭಾವನೆ ಕಡಿಮೆಯಾಗುತ್ತದೆ. ಪ್ರಕರಣಗಳು ಬೇಗನೆ ಇತ್ಯರ್ಥಗೊಂಡು ಸಮಯ ಮತ್ತು ಹಣ ಉಳಿತಾಯವಾಗುತ್ತದೆ ಎಂದರು.

ಅದಾಲತ್‌ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳನ್ನು ಮತ್ತೆ ಬೇರೆ ಕಡೆ ಪ್ರಶ್ನಿಸುವಂತಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವಂತಿಲ್ಲ. ಲೋಕ ಅದಾಲತ್‌ನಿಂದ ದ್ವೇಷ ಅಸೂಯೆ ಶಮನವಾಗುತ್ತದೆ. ಇದರಿಂದ ನ್ಯಾಯಾಲಯ ಶುಲ್ಕ ಹಿಂದಿರುಗಿಸಲಾಗುತ್ತದೆ.

ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಸಮಯ ಮತ್ತು ಹಣ ಉಳಿತಾಯ ವಾಗಲಿದ್ದು, ಕಡಿಮೆ ಸಮಯದಲ್ಲಿ ಪ್ರಕರಣ ಇತ್ಯರ್ಥವಾಗುತ್ತವೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎನ್‌. ಸುಜಾತ ಹೇಳಿದರು. ವಿವಿಧ ಪೀಠಗಳಲ್ಲಿ ಖಾಸಿಂ ಚೂರಿಖಾನ್‌ ಸೇರಿದಂತೆ ವಿವಿಧ ನ್ಯಾಯಾಧೀಶರು ಪ್ರಕರಣಗಳನ್ನು ಇತ್ಯರ್ಥಪಡಿಸುವ ಕಾರ್ಯ ಮಾಡಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.

ಈ ವಿಭಾಗದಿಂದ ಇನ್ನಷ್ಟು

  • ಜಿ.ಎಸ್‌. ಕಮತರ ವಿಜಯಪುರ: ತ್ಯಾಜ್ಯಗಳಿಂದಾಗಿ ಕೊಳಕು ನಾರುತ್ತಿರುವ ನಗರದ ಅರೆಕಿಲ್ಲಾ ಪ್ರದೇಶದಲ್ಲಿರುವ ಐತಿಹಾಸಿಕ ಗಗನ ಮಹಲ್ ಕಂದಕದಲ್ಲಿ ಬೋಟಿಂಗ್‌ ಆರಂಭಿಸಿ...

  • ಕನಕಗಿರಿ: ಪಟ್ಟಣದಲ್ಲಿ ಖಜಾನೆ ಮತ್ತು ಉಪ ನೋಂದಣಿ ಕಚೇರಿಯನ್ನು ಪ್ರಾರಂಭಿಸಲು ಈಗಾಗಲೇ ಬಾಡಿಗೆ ಕಟ್ಟಡ ಪಡೆಯಲಾಗಿದೆ. ಶೀಘ್ರವೇ ಕಚೇರಿ ಪ್ರಾರಂಭಿಸಲಾಗುವುದು...

  • ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಕನಕಾಪೂರ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಯಲ್ಲಾಲಿಂಗನ...

  • •ರವೀಂದ್ರ ಮುಕ್ತೇದಾರ ಔರಾದ: ಔರಾದ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಮಾಡುವುದಕ್ಕಿಂತ ಸರ್ಕಾರ ಸಂತಪೂರ ಪಟ್ಟಣವನ್ನು ತಾಲೂಕು ಕೇಂದ್ರವಾಗಿಸಬೇಕು ಎಂದು ಜನಪ್ರತಿನಿಧಿಗಳು...

  • ಬಂಕಾಪುರ: ರಾಯಚೂರ ಗಲ್ಲಿಯಲ್ಲಿನ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೊಳಚೆ ನಿಂತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಪರಿಣಾಮ ಮಕ್ಕಳಲ್ಲಿ...

ಹೊಸ ಸೇರ್ಪಡೆ