ಮುಂಗಾರು ಬೆಳೆಗೆ ಸಿಕ್ಕೀತೆ ನೀರು?

ಜುಲೈನಲ್ಲಿ ಕೇವಲ 14.30 ಟಿಎಂಸಿ ನೀರು ಸಂಗ್ರಹ •ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ •ಆತಂಕದಲ್ಲಿ ಅನ್ನದಾತರು

Team Udayavani, Jul 18, 2019, 11:06 AM IST

18-July-9

ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು.

ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ಅಂತಾರಾಜ್ಯಗಳ ಜೀವನಾಡಿ ಯಾಗಿರುವ ತುಂಗಭದ್ರಾ ಜಲಾಶಯದಿಂದ ಈ ಬಾರಿಯೂ ಮುಂಗಾರು ಹಂಗಾಮು ಬೆಳೆಗೆ ನೀರು ದೊರೆಯುವುದು ಅನುಮಾನವಾಗಿದೆ.

ಜುಲೈ ತಿಂಗಳು ಕಳೆಯುತ್ತಿದ್ದು, ಈ ವರೆಗೂ ಜಲಾನಯನ ಪ್ರದೇಶದಲ್ಲಿ ಸಮರ್ಪಕವಾಗಿ ನಿರಂತರ ಮಳೆಯಾಗದ್ದರಿಂದ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದ ನೀರು ಹರಿದು ಬಂದಿಲ್ಲ. ಅಲ್ಲದೆ ಒಳಹರಿವಿನ ಪ್ರಮಾಣವೂ ಕುಸಿದಿದ್ದು, ಮಳೆ ಬಾರದಿದ್ದಲ್ಲಿ ಸಮಸ್ಯೆ ಉಲ್ಬಣಗೊಳ್ಳಲಿದೆ. ತುಂಗಭದ್ರಾ ಜಲಾಶಯ ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳ 6 ಜಿಲ್ಲೆಗಳ ಒಟ್ಟು 12 ಲಕ್ಷ ಎಕರೆಗೂ ಹೆಚ್ಚು ಜಮೀನುಗಳಿಗೆ ಮತ್ತು ಜನರಿಗೆ ಕುಡಿಯುವ ನೀರು ಪೂರೈಸುತ್ತದೆ. ಜಲಾನಯನ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ತುಂಗಾ ಜಲಾಶಯದಿಂದಲೂ ನದಿಗೆ ಹರಿದುಬರುವ ನೀರಿನ ಪ್ರಮಾಣ ಕುಸಿದಿದೆ. ಜುಲೈ ತಿಂಗಳು ಮುಗಿಯುತ್ತಿದ್ದರೂ ಜಲಾಶಯಕ್ಕೆ ಗರಿಷ್ಠ ಪ್ರಮಾಣದ ನೀರು ಹರಿದು ಬರುತ್ತಿಲ್ಲ. ಹೀಗಾಗಿ ಈ ಬಾರಿ ಮುಂಗಾರು ಬೆಳೆಗೆ ಜಲಾಶಯದಿಂದ ನೀರು ದೊರಕುವುದು ಅನುಮಾನ ಎನ್ನಲಾಗುತ್ತಿದ್ದು ರೈತರನ್ನು ಆತಂಕಕ್ಕೀಡು ಮಾಡಿದೆ.

60-70 ಟಿಎಂಸಿ ಇದ್ದರೆ ಭತ್ತಕ್ಕೆ ನೀರು: ಮೂರು ಜಿಲ್ಲೆಗಳಲ್ಲಿ ಬೆಳೆಯಲಾಗುವ ಭತ್ತಕ್ಕೆ ಕನಿಷ್ಠ 70ರಿಂದ 80 ಟಿಎಂಸಿ ನೀರು ಬೇಕಾಗಲಿದ್ದು, ಕನಿಷ್ಠ 60ಕ್ಕೂ ಹೆಚ್ಚು ಟಿಎಂಸಿ ನೀರು ಸಂಗ್ರಹವಾದಾಗ ಭತ್ತಕ್ಕೆ ನೀರು ಕೊಡಲಾಗುತ್ತದೆ ಎಂದು ಜಲಾಶಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮೊದಲ ಬೆಳೆಗೇ ನೀರಿಲ್ಲ: ತುಂಗಭದ್ರಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಸುರಿಯುವ ನಿರೀಕ್ಷೆಯಿದ್ದರೂ, ಗಾಳಿಗೆ ಮೋಡಗಳು ಚದುರಿದ್ದರಿಂದ ಮುಂಬೈ, ಗುಜರಾತ್‌ನಲ್ಲಿ ನಿರಂತರ ಮಳೆ ಸುರಿದಿದೆ. ಈ ವರೆಗೆ ಇದ್ದ ಎಲ್ಲ ನಿರೀಕ್ಷೆಗಳು ಹುಸಿಯಾಗಿದ್ದು, ಇದೀಗ ಜುಲೈ 1 ರಿಂದ ಇನ್ನೂ ಎರಡು ಮಳೆ ಸುರಿಯುವ ನಿರೀಕ್ಷೆಯಿದೆ.ಅವೂ ಕೈಕೊಟ್ಟರೆ, ಮೊದಲನೇ ಬೆಳೆಗೆ ನೀರು ಹರಿಸುವುದು ಕಷ್ಟವಾಗಲಿದೆ.

50 ಟಿಎಂಸಿ ನೀರು ಬೇಕು
ಒಂದು ಹಂಗಾಮಿನ ಬೆಳೆಗೆ ನೀರು ಕೊಡಲು ಜಲಾಶಯದಲ್ಲಿ ಕನಿಷ್ಠ 40 ರಿಂದ 50 ಟಿಎಂಸಿ ನೀರು ಲಭ್ಯವಿರಬೇಕು. 2017ರಲ್ಲಿ ಸಮರ್ಪಕ ಮಳೆಯಾಗದಿದ್ದರೂ, ಜುಲೈ ತಿಂಗಳ ಮೂರನೇ ವಾರದೊಳಗೆ 20 ರಿಂದ 25 ಟಿಎಂಸಿ ನೀರು ಹರಿದು ಬಂದಿತ್ತು. ಆಗಸ್ಟ್‌ ತಿಂಗಳೊಳಗಾಗಿ 40 ಟಿಎಂಸಿಗೂ ಹೆಚ್ಚು ನೀರು ಹರಿದು ಬಂದಿತ್ತು. ಆಗ ಆಗಸ್ಟ್‌ನಲ್ಲಿ ಐಸಿಸಿ ಸಭೆ ನಡೆಸಿ ಸೆಪ್ಟೆಂಬರ್‌ ತಿಂಗಳಲ್ಲಿ ಕಾಲುವೆಗೆ ನೀರು ಹರಿಸಲಾಯಿತು. ಆದರೆ ಈ ಬಾರಿ ಸದ್ಯ ಸಂಗ್ರಹವಿರುವ 14.30 ಟಿಎಂಸಿ ನೀರು ಆರು ಜಿಲ್ಲೆಗಳ ಜನರಿಗೆ ಕುಡಿಯಲೂ ಸಾಲುವುದಿಲ್ಲ.
ಮಂಜಪ್ಪ,
ಮುಖ್ಯ ಅಭಿಯಂತರರು, ಟಿಬಿ ಮಂಡಳಿ

ಟಾಪ್ ನ್ಯೂಸ್

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

“ಅಭ್ಯುದಯಕ್ಕೆ ಸಾಧು, ಸಂತರು ಪ್ರೇರಣೆ’

“ಅಭ್ಯುದಯಕ್ಕೆ ಸಾಧು, ಸಂತರು ಪ್ರೇರಣೆ’

ರೈತರಿಗೆ ಸರ್ಕಾರವನ್ನೇ ಬದಲಿಸುವ ತಾಕತ್ತಿದೆ’: ಚಂದ್ರಶೇಖರ್‌ ರಾವ್‌

ರೈತರಿಗೆ ಸರ್ಕಾರವನ್ನೇ ಬದಲಿಸುವ ತಾಕತ್ತಿದೆ’: ಚಂದ್ರಶೇಖರ್‌ ರಾವ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಅಭ್ಯುದಯಕ್ಕೆ ಸಾಧು, ಸಂತರು ಪ್ರೇರಣೆ’

“ಅಭ್ಯುದಯಕ್ಕೆ ಸಾಧು, ಸಂತರು ಪ್ರೇರಣೆ’

ಶಿಕ್ಷಕರ ನೇಮಕಾತಿ ಪರೀಕ್ಷೆ ದ.ಕ.: 1,606 ಅಭ್ಯರ್ಥಿಗಳು ಗೈರು

ಶಿಕ್ಷಕರ ನೇಮಕಾತಿ ಪರೀಕ್ಷೆ ದ.ಕ.: 1,606 ಅಭ್ಯರ್ಥಿಗಳು ಗೈರು

ಆಸ್ಟ್ರೇಲಿಯಾದ ಫೆಡರಲ್‌ ಚುನಾವಣೆಯಲ್ಲಿ ಮೀರಾ ಡಿ’ಸಿಲ್ವ ಸೋಲು

ಆಸ್ಟ್ರೇಲಿಯಾದ ಫೆಡರಲ್‌ ಚುನಾವಣೆಯಲ್ಲಿ ಮೀರಾ ಡಿ’ಸಿಲ್ವ ಸೋಲು

ಚುನಾವಣೆಗಾಗಿ ಕಾಂಗ್ರೆಸ್‌ ವಿವಾದ ಸೃಷ್ಟಿ: ಹರಿಕೃಷ್ಣ ಬಂಟ್ವಾಳ್‌

ಚುನಾವಣೆಗಾಗಿ ಕಾಂಗ್ರೆಸ್‌ ವಿವಾದ ಸೃಷ್ಟಿ: ಹರಿಕೃಷ್ಣ ಬಂಟ್ವಾಳ್‌

ನಿಬಿಡ ಶುಭ ಸಮಾರಂಭಗಳು: ಮೆಲ್ಕಾರ್‌-ಕಲ್ಲಡ್ಕ ಟ್ರಾಫಿಕ್‌ ಜಾಮ್‌

ನಿಬಿಡ ಶುಭ ಸಮಾರಂಭಗಳು: ಮೆಲ್ಕಾರ್‌-ಕಲ್ಲಡ್ಕ ಟ್ರಾಫಿಕ್‌ ಜಾಮ್‌

MUST WATCH

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

ಹೊಸ ಸೇರ್ಪಡೆ

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.