Udayavni Special

ಬಳ್ಳಾರಿ ವಿವಿಧೆಡೆ ಇಕೋ ಪಾರ್ಕ್‌ ನಿರ್ಮಾಣ

•ತಾಲೂಕಿಗೆ 2 ಉದ್ಯಾನ•ಮಹಿಳಾ ಸ್ವಸಹಾಯ ಸಂಘಗಳಿಗೆ ಉದ್ಯೋಗಕ್ಕೆ ಅವಕಾಶ

Team Udayavani, May 22, 2019, 11:33 AM IST

Udayavani Kannada Newspaper

ಬಳ್ಳಾರಿ: ಇಲ್ಲಿನ ಜಿಪಂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪರಿಸರ ಸ್ನೇಹಿ (ಇಕೊ ಪಾರ್ಕ್‌) ಉದ್ಯಾನವನ ನಿರ್ಮಿಸಲು ಸಜ್ಜಾಗುತ್ತಿದೆ. ಈ ಮೂಲಕ ಗ್ರಾಮಗಳಲ್ಲಿ ಉತ್ತಮ ವಾತಾವರಣವನ್ನು ನಿರ್ಮಿಸುವುದರ ಜತೆಗೆ ಕೈ ತೋಟದಲ್ಲಿ ಬೆಳೆಯುವ ಉತ್ಪನ್ನಗಳಿಗೆ ಅಲ್ಲೇ ಮಾರಾಟ ವ್ಯವಸ್ಥೆ ಮಾಡುವ ಮೂಲಕ ಸ್ಥಳೀಯ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಮುಂದಾಗುತ್ತಿದೆ.

ಗ್ರಾಮೀಣ ಭಾಗದಲ್ಲಿ ಗುಳೆ ಪದ್ಧತಿ ನಿಯಂತ್ರಿಸುವ ಸಲುವಾಗಿ ಈಗಾಗಲೇ ಹಲವಾರು ಯೋಜನೆ ಜಾರಿಗೆ ತಂದಿರುವ ಜಿಪಂ ಅಧಿಕಾರಿಗಳು, ಇದೀಗ ಸಾಮಾಜಿಕ ಅರಣ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಪ್ರತಿ ತಾಲೂಕಿಗೆ 2 ಪರಿಸರ ಸ್ನೇಹಿ ಉದ್ಯಾನವನಗಳನ್ನು ಗ್ರಾಮೀಣ ಭಾಗದಲ್ಲಿ ನಿರ್ಮಿಸಲು ಸಿದ್ಧತೆ ನಡೆಸಿದೆ. ಇದರಲ್ಲಿ ಕೈ ತೋಟ, ಹಣ್ಣಿನ ಮರ ಬೆಳೆಸುವುದು, ಮಕ್ಕಳ ಆಟಕ್ಕೆ ಅಗತ್ಯ ಪರಿಕರ ಅಳವಡಿಸುವುದರ ಜತೆಗೆ ಸ್ಥಳೀಯ ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡುವ ಮೂಲಕ ಅವರನ್ನು ಆರ್ಥಿಕವಾಗಿಯೂ ಸಬಲರನ್ನಾಗಿ ಮಾಡಲು ಚಿಂತನೆ ನಡೆಸಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಜಮೀನು ಸರ್ವೇ ಕಾರ್ಯಗಳು ಪ್ರಗತಿಯಲ್ಲಿವೆ.

ಪರಿಸರ ಸ್ನೇಹಿ ಉದ್ಯಾನವನ ನಿರ್ಮಾಣಕ್ಕೆಂದು ಈಗಾಗಲೇ ಜಿಲ್ಲೆಯ ಹಡಗಲಿ ತಾಲೂಕು ಸೋವೇನಹಳ್ಳಿಯಲ್ಲಿ 20 ಎಕರೆ ಜಮೀನು ಲಭ್ಯವಿದ್ದು, ಸರ್ವೇ ಕಾರ್ಯ ನಡೆಯುತ್ತಿದೆ. ಜತೆಗೆ ಇಟಗಿ ಗ್ರಾಮದಲ್ಲಿ 5 ಎಕರೆ ಜಮೀನು ಗುರುತಿಸಲಾಗಿದೆ. ಅದರಂತೆ ಇನ್ನುಳಿದ ಬಳ್ಳಾರಿ ತಾಲೂಕು ಗೆಣಿಕೆಹಾಳು, ಎಂ.ಗೋನಾಳು, ಎಮ್ಮಿಗನೂರು, ಚಾನಾಳು, ಹ.ಬೊ.ಹಳ್ಳಿ ತಾಲೂಕಿನಲ್ಲಿ ಬಾಚಿಗೊಂಡನಹಳ್ಳಿ, ಬನ್ನಿಗೋಳ, ಹೊಸಪೇಟೆ ತಾಲೂಕು ಡಣನಾಯಕನಕೆರೆ, ನಂದಿಬಂಡೆ, ಕೂಡ್ಲಿಗಿ ತಾಲೂಕು ಗುಡೇಕೋಟೆ, ಸಂಡೂರು ತಾಲೂಕು ಯಶವಂತನಗರ, ತೋರಣಗಲ್ಲು, ವಿಠಲಾಪುರ, ಸಿರುಗುಪ್ಪ ತಾಲೂಕಿನಲ್ಲಿ ಬಿ.ಎಂ.ಸೂಗೂರು, ಕೆಂಚನಗುಡ್ಡ, ಕುಡದರಹಾಳು ಗ್ರಾಮಗಳಲ್ಲಿ ಈ ಉದ್ಯಾನವನ ನಿರ್ಮಿಸಲು ಜಮೀನನ್ನು ಗುರುತಿಸಲಾಗಿದೆ. ಕನಿಷ್ಠ 4 ಎಕರೆ ಜಮೀನು ಬೇಕಿದ್ದು, ಅದಕ್ಕಾಗಿ ಸಂಬಂಧಪಟ್ಟ ಆಯಾ ಗ್ರಾಪಂ ಅಧಿಕಾರಿಗಳು ಸರ್ವೇ ಕಾರ್ಯ ಮುಂದುವರಿಸಿದ್ದಾರೆ.

ತೋಟಗಾರಿಕೆ ಇಲಾಖೆಯು ಉದ್ಯಾನವನದಲ್ಲಿ ಮೆಕ್ಸಿಕನ್‌ ಹುಲ್ಲಿನ ಲಾನ್‌ ನಿರ್ಮಿಸಲಿದೆ. ಹೂವಿನ ಗಿಡಗಳ ಮಡಿ ನಿರ್ಮಿಸಲಾಗುತ್ತದೆ. ಉದ್ಯಾನದ ಮುಖ್ಯರಸ್ತೆಗಳ ಎರಡೂ ಬದಿಗಳಲ್ಲಿ ಅಲಂಕಾರಿಕ ಹೂವಿನ ಗಿಡ ಬೆಳೆಸುವ ಮೂಲಕ ಜನರನ್ನು ಆಕರ್ಷಿಸುವಂತೆ ನಿರ್ಮಿಸಲಾಗುತ್ತದೆ. ಇವುಗಳೊಂದಿಗೆ ವಿವಿಧ ಹಣ್ಣಿನ ಗಿಡಗಳು, ಇತರೆ ತೋಟಗಾರಿಕೆ ಗಿಡ ಬೆಳೆಸಲು ಯೋಜನೆ ರೂಪಿಸಲಾಗಿದೆ.

ಪರಿಸರ ಸ್ನೇಹಿ ಉದ್ಯಾನವನ (ಇಕೋ ಪಾಕ್‌) ನಿರ್ಮಾಣಕ್ಕೆ ಕನಿಷ್ಠ 4 ಎಕರೆ ಜಮೀನು ಅಗತ್ಯವಿದೆ. ಅಗತ್ಯ ಕೆಲಸ ಕಾರ್ಯಗಳನ್ನೆಲ್ಲ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕ್ರಮ ಕೈಗೊಳ್ಳಲಾಗುತ್ತದೆ. ಇತರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಚ್ಕೆಆರ್‌ಡಿಬಿ ಅನುದಾನದಲ್ಲಿ ನಿರ್ಮಿಸಲಾಗುತ್ತದೆ. ಈಗಾಗಲೇ ಜಮೀನು ಗುರುತಿಸಲಾಗಿದ್ದು, ಕಾಮಗಾರಿಗಳನ್ನಷ್ಟೇ ಕೈಗೆತ್ತಿಕೊಳ್ಳಬೇಕಾಗಿದೆ.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪರಿಸರ ಸ್ನೇಹಿ (ಇಕೋ ಪಾರ್ಕ್‌) ಉದ್ಯಾನ ನಿರ್ಮಿಸಲಾಗುವುದು. ಇದಕ್ಕಾಗಿ ಈಗಾಗಲೇ ಜಿಲ್ಲೆಯ ಹಡಗಲಿ ತಾಲೂಕು ಸೋವೇನಹಳ್ಳಿಯಲ್ಲಿ ಜಮೀನು ಸರ್ವೇ ಕಾರ್ಯ ನಡೆದಿದೆ. ಇನ್ನುಳಿದ ಎಲ್ಲ ತಾಲೂಕುಗಳಲ್ಲಿ ಜಮೀನು ಗುರುತಿಸಲು ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಶೀಘ್ರದಲ್ಲೇ ಚಾಲನೆ ಪಡೆದುಕೊಳ್ಳಲಿದೆ. ಸಾಮಾಜಿಕ ಅರಣ್ಯ ಇಲಾಖೆ, ಕೃಷಿ, ತೋಟಗಾರಿಕೆ ಜತೆಗೆ ಆಯಾ ಸ್ಥಳೀಯ ಗ್ರಾಪಂ ಸಹಯೋಗದಲ್ಲಿ ಇಕೋ ಪಾರ್ಕ್‌ ನಿರ್ಮಿಸಲಾಗುತ್ತದೆ. ಉದ್ಯಾನವನಗಳಿಂದ ಉತ್ತಮ ವಾತಾವರಣ ನಿರ್ಮಿಸುವುದರ ಜತೆಗೆ ಸ್ಥಳೀಯ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡುವುದು ಮುಖ್ಯ ಉದ್ದೇಶವಾಗಿದೆ.
•ಕೆ.ನಿತೀಶ್‌
ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಪಂ.

ವೆಂಕೋಬಿ ಸಂಗನಕಲ್ಲು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಭಾರಿ ಗಾಳಿ ಮಳೆಯಿಂದ ಶರಾವತಿ ಹಿನ್ನೀರಿನ ಮಧ್ಯದಲ್ಲಿ ಸಿಕ್ಕಿಬಿದ್ದಿರುವ ಲಾಂಚ್!

ಭಾರಿ ಗಾಳಿ ಮಳೆಯಿಂದ ಶರಾವತಿ ಹಿನ್ನೀರಿನ ಮಧ್ಯದಲ್ಲಿ ಸಿಕ್ಕಿಬಿದ್ದಿರುವ ಲಾಂಚ್!

ತಲಕಾವೇರಿಯಲ್ಲಿ ಭಾರಿ ಭೂಕುಸಿತ: ಎರಡು ಮನೆಗಳು ಮಣ್ಣುಪಾಲು, ಅರ್ಚಕರ ಕುಟುಂಬ ನಾಪತ್ತೆ

ತಲಕಾವೇರಿಯಲ್ಲಿ ಭಾರಿ ಭೂಕುಸಿತ: ಎರಡು ಮನೆಗಳು ಮಣ್ಣುಪಾಲು, ಅರ್ಚಕರ ಕುಟುಂಬ ನಾಪತ್ತೆ

leopard

ಬೇಟೆಯನ್ನು ಹಿಡಿಯಲು ಹೋಗಿ ಪ್ರಪಾತಕ್ಕೆ ಬಿದ್ದ ಹಿಮಚಿರತೆ: ಮನಕಲಕುವ ವಿಡಿಯೋ ವೈರಲ್

ಮಹಾ ಮಳೆಗೆ ಬೆಳಗಾವಿ ಗಡಿಯ ಅನೇಕ ಸೇತುವೆಗಳು ಮುಳುಗಡೆ: ಪ್ರವಾಹದ ಆತಂಕ

ಮಹಾ ಮಳೆಗೆ ಬೆಳಗಾವಿ ಗಡಿಯ ಅನೇಕ ಸೇತುವೆಗಳು ಮುಳುಗಡೆ: ಪ್ರವಾಹದ ಆತಂಕ

ಹಿರೋಶಿಮಾದ ನಂತರ ನಡೆದ ಮಹಾಸ್ಫೋಟ! ಬೈರೂತ್ ನಲ್ಲಿ ನಿಜಕ್ಕೂ ನಡೆದಿದ್ದೇನು?

ಹಿರೋಶಿಮಾದ ನಂತರ ನಡೆದ ಮಹಾಸ್ಫೋಟ! ಬೈರೂತ್ ನಲ್ಲಿ ನಿಜಕ್ಕೂ ನಡೆದಿದ್ದೇನು?

ಚಿಕ್ಕಮಗಳೂರು: ಮಹಾಮಳೆಗೆ ಮೊದಲ ಬಲಿ, ಮೂಡಿಗೆರೆ-ಮಂಗಳೂರು ಸಂಚಾರ ಬಂದ್

ಚಿಕ್ಕಮಗಳೂರು: ಮಹಾಮಳೆಗೆ ಮೊದಲ ಬಲಿ, ಮೂಡಿಗೆರೆ-ಮಂಗಳೂರು ಸಂಚಾರ ಬಂದ್

ಧರ್ಮಸ್ಥಳ ಸ್ನಾನಘಟ್ಟ

ಅಪಾಯದ ಮಟ್ಟ ತಲುಪುತ್ತಿದ್ದಾಳೆ ನೇತ್ರಾವತಿ: ಧರ್ಮಸ್ಥಳ ಸ್ನಾನಘಟ್ಟ ಮುಳುಗಡೆ ಸಾಧ್ಯತೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರಿ ಗಾಳಿ ಮಳೆಯಿಂದ ಶರಾವತಿ ಹಿನ್ನೀರಿನ ಮಧ್ಯದಲ್ಲಿ ಸಿಕ್ಕಿಬಿದ್ದಿರುವ ಲಾಂಚ್!

ಭಾರಿ ಗಾಳಿ ಮಳೆಯಿಂದ ಶರಾವತಿ ಹಿನ್ನೀರಿನ ಮಧ್ಯದಲ್ಲಿ ಸಿಕ್ಕಿಬಿದ್ದಿರುವ ಲಾಂಚ್!

ಅಪಾಯಮಟ್ಟ ಮೀರಿದ ಹರಿಯುತ್ತಿದೆ ಹಿರಣ್ಯಕೇಶಿ ನದಿ: ಜನರಲ್ಲಿ ಆತಂಕ

ಅಪಾಯಮಟ್ಟ ಮೀರಿ ಹರಿಯುತ್ತಿದೆ ಹಿರಣ್ಯಕೇಶಿ ನದಿ: ಜನರಲ್ಲಿ ಆತಂಕ

ಆಶ್ಲೇಷಾ ಅಬ್ಬರ; ನದಿಗಳ ಉಬ್ಬರ : ರಾಹೆ 63 ಸಂಚಾರ ಬಂದ್‌

ಆಶ್ಲೇಷಾ ಅಬ್ಬರ; ನದಿಗಳ ಉಬ್ಬರ : ರಾಹೆ 63 ಸಂಚಾರ ಬಂದ್‌

ತಲಕಾವೇರಿಯಲ್ಲಿ ಭಾರಿ ಭೂಕುಸಿತ: ಎರಡು ಮನೆಗಳು ಮಣ್ಣುಪಾಲು, ಅರ್ಚಕರ ಕುಟುಂಬ ನಾಪತ್ತೆ

ತಲಕಾವೇರಿಯಲ್ಲಿ ಭಾರಿ ಭೂಕುಸಿತ: ಎರಡು ಮನೆಗಳು ಮಣ್ಣುಪಾಲು, ಅರ್ಚಕರ ಕುಟುಂಬ ನಾಪತ್ತೆ

ಗುರುಪುರ: ಗುಡ್ಡ ಕುಸಿತ ದುರಂತಕ್ಕೆ ಒಂದು ತಿಂಗಳು; ವಾಸ್ತವ್ಯ ವ್ಯವಸ್ಥೆ ಇನ್ನೂ ಅನಿಶ್ಚಿತ

ಗುರುಪುರ: ಗುಡ್ಡ ಕುಸಿತ ದುರಂತಕ್ಕೆ ಒಂದು ತಿಂಗಳು; ವಾಸ್ತವ್ಯ ವ್ಯವಸ್ಥೆ ಇನ್ನೂ ಅನಿಶ್ಚಿತ

MUST WATCH

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farmಹೊಸ ಸೇರ್ಪಡೆ

ಸಂಸ್ಕೃತವನ್ನು ವಿಶ್ವ ಭಾಷೆಯನ್ನಾಗಿ ಮಾಡಲು ಸಾಮೂಹಿಕ ಪ್ರಯತ್ನ ಅಗತ್ಯ: ರಾಜ್ಯಪಾಲರು

ಸಂಸ್ಕೃತವನ್ನು ವಿಶ್ವ ಭಾಷೆಯನ್ನಾಗಿ ಮಾಡಲು ಸಾಮೂಹಿಕ ಪ್ರಯತ್ನ ಅಗತ್ಯ: ರಾಜ್ಯಪಾಲರು

disha-patani

ಬಾಲಿವುಡ್ ನಟಿ ದಿಶಾ ಪಟಾನಿ ತಂದೆಗೂ ಕೋವಿಡ್ ಪಾಸಿಟಿವ್

ಭಾರಿ ಗಾಳಿ ಮಳೆಯಿಂದ ಶರಾವತಿ ಹಿನ್ನೀರಿನ ಮಧ್ಯದಲ್ಲಿ ಸಿಕ್ಕಿಬಿದ್ದಿರುವ ಲಾಂಚ್!

ಭಾರಿ ಗಾಳಿ ಮಳೆಯಿಂದ ಶರಾವತಿ ಹಿನ್ನೀರಿನ ಮಧ್ಯದಲ್ಲಿ ಸಿಕ್ಕಿಬಿದ್ದಿರುವ ಲಾಂಚ್!

ಕೋವಿಡ್ ಮಹಾಮಾರಿ 24 ಗಂಟೆಗಳಲ್ಲಿ ರಾಜ್ಯದ 3 ಪೊಲೀಸರು ಬಲಿ

ಕೋವಿಡ್ ಮಹಾಮಾರಿ 24 ಗಂಟೆಗಳಲ್ಲಿ ರಾಜ್ಯದ 3 ಪೊಲೀಸರು ಬಲಿ

ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದರೂ ಸರಕಾರ ಗಂಭೀರವಾಗಿಲ್ಲ: ರಾಣೆ

ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದರೂ ಸರಕಾರ ಗಂಭೀರವಾಗಿಲ್ಲ: ರಾಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.