ನೀಲಿ ನಾಲಿಗೆ ರೋಗಕ್ಕೆ 30 ಕುರಿಗಳ ಸಾವು
Team Udayavani, Jan 21, 2022, 9:25 PM IST
ಕಂಪ್ಲಿ: ತಾಲೂಕಿನ ಹಳೇ ನೆಲ್ಲುಡಿ ಗ್ರಾಮದ ಹೊರವಲಯದಲ್ಲಿ ದೇವಸಮುದ್ರ ಗ್ರಾಮದ ಕುರಿಗಾರರ ಕುರಿಮಂದೆಯಲ್ಲಿ ಕಳೆದ ಎರಡು ದಿನಗಳ ಅವ ಧಿಯಲ್ಲಿ 30ಕ್ಕೂ ಅ ಧಿಕ ಕುರಿಗಳು ಸಾವನ್ನಪ್ಪಿವೆ.
ಕುರಿಗಳ ಬಾಯಲ್ಲಿ ನೊರೆ ಬಂದು, ಹೊಟ್ಟೆ ಉಬ್ಬಿ ಸಾಯುತ್ತಿವೆ ಎರಡು ದಿನಗಳಲ್ಲಿ ದೇವಸಮುದ್ರ ಗ್ರಾಮದ ಕುರಿಗಾರರಾದ ಗುಬಾಜಿ ಸಾದಪ್ಪ, ಗಂಗಾವತಿ ಮಾಬುಸಾಬ್, ಗೂಬಾಜಿ ರಾಮಣ್ಣ, ಮುದೆಪ್ಪ, ಗೂಬಾಜಿ ಗೂಳೆಪ್ಪ ಇವರ ತಲಾ 8 ಕುರಿಗಳು, ಬಳ್ಳಾಪುರದ ನೆಲ್ಲುಡಿ ಲಕ್ಕಪ್ಪನ 6, ಚಲುವಾದಿ ಶಂಕ್ರಮ್ಮ 5, ಮೂಲಿಮನೆ ಸಿದ್ದಲಿಂಗಯ್ಯನ ಯ ಮತ್ತು ಮೈಲಾರಪ್ಪನ 3 ಸೇರಿ 30ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ ಎಂದು ಕುರಿಗಳ ಮಾಲೀಕರು ತಿಳಿಸಿದ್ದಾರೆ.
ರೋಗದಿಂದ ಬಳಲುವ ಕುರಿಗಳ ಚಿಕಿತ್ಸೆಗಾಗಿ ಪಶುವೈದ್ಯರನ್ನು ಗಾಡಿಯಲ್ಲಿ ಹಟ್ಟಿಗೆ ಕರೆದುಕೊಂಡು ಬಂದು ಚಿಕಿತ್ಸೆಯ ನಂತರ ನಾವೇ ಬಿಟ್ಟು ಬರಬೇಕಾದ ಅನಿವಾರ್ಯತೆ ಇದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಒಂದು ತಿಂಗಳಲ್ಲಿ 300ಕ್ಕೂ ಅಧಿ ಕ ಕುರಿಗಳು ಸತ್ತಿದ್ದು, ಸರ್ಕಾರ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ತಾಲೂಕಿನ ಮುಖ್ಯ ಪಶು ವೈದ್ಯಾಧಿ ಕಾರಿ ಡಾ| ಬಸವರಾಜ ಕುರಿಮಂದೆಗೆ ಭೇಟಿ ನೀಡಿದ ಬಳಿಕ ಮಾತನಾಡಿ, ನೀಲಿ ನಾಲಿಗೆ ರೋಗದಿಂದ ಕುರಿಗಳು ಸಾಯುತ್ತಿವೆ. ಈ ರೋಗಕ್ಕೆ ಕುರುಡು ನೊಣ ಕಾರಣವಾಗಿದ್ದು, ರೋಗ ನಿಯಂತ್ರಣಕ್ಕೆ ಡಿಸೆಂಬರ್, ಜನವರಿ ತಿಂಗಳಲ್ಲಿ ಕುರಿ ಮಂದೆಯ ಹತ್ತಿರ ಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಆರು ತಿಂಗಳಿಗೊಮ್ಮೆ ನೀಲಿ ನಾಲಿಗೆ ರೋಗದ ವಿರುದ್ಧ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.