ಕುರುಬ ಸಂಘ ಅಭಿವೃದ್ಧಿಗೆ 5 ಲಕ್ಷ ರೂ. ದೇಣಿಗೆ
Team Udayavani, Mar 28, 2021, 7:14 PM IST
ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕು ಕುರುಬರ ಸಂಘಕ್ಕೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ದಮ್ಮೂರು ಶೇಖರ್ ಅವರು 5 ಲಕ್ಷ ರೂ.ಗಳ ದೇಣಿಗೆಯನ್ನು ಈಚೆಗೆ ನೀಡಿದರು. ಸಂಡೂರಿನ ಕನಕ ಭವನದಲ್ಲಿ ಸಮುದಾಯದ ಮುಖಂಡರನ್ನು ಭೇಟಿಯಾದ ದಮ್ಮೂರು ಶೇಖರ್ ಅವರು, ಸಂಘಕ್ಕೆ ಭೂಮಿ ಖರೀದಿಸಲು 5 ಲಕ್ಷ ರೂ.ಗಳ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎರ್ರಿಗೌಡ, ಪ್ರಧಾನ ಕಾರ್ಯದರ್ಶಿ ಮಲ್ಲೇಶಪ್ಪ, ಖಜಾಂಚಿ ಮೋಹನ್, ಸಹ ಕಾರ್ಯದರ್ಶಿ ಪಂಪಣ್ಣ, ಹೊನ್ನೂರು ಸ್ವಾಮಿ ಹಾಗೂ ಸಂಡೂರು ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ. ಸತ್ಯಪ್ಪ, ತಾಲೂಕು ಸಂಘದ ಗೌರವಾಧ್ಯಕ್ಷ ಬಿ.ಆರ್. ಮಸೂತಿ, ಜಿಪಂ ಸದಸ್ಯ ತಿರುಮಲ, ತಾಪಂ ಸದಸ್ಯ ಹೊಸಕೆರೆಪ್ಪ, ಈರಮ್ಮ, ಹಾಗೂ ಜಿಲ್ಲಾ ಕುರುಬರ ಸಂಘದ ನಿರ್ದೇಶಕರಾದ ಸುರೇಂದ್ರ, ಕೆ.ಆರ್. ಮಲ್ಲೇಶ್ ಕುಮಾರ್, ಕೆ. ಸುರೇಶ್ ಹಾಗೂ ಸಮಾಜದ ಮುಖಂಡರಾದ ಡಿ.ಶಂಕರ್ ದಾಸ್, ಸತೀಶ್, ಜಿ.ಅಜಯ್, ಅನಂತಕುಮಾರ್ ಇತರರಿದ್ದರು.