66 ವರ್ಷ ಕಳೆದರೂ ಸ್ವಂತ ಕಟ್ಟಡವೇ ಇಲ್ಲ!

Team Udayavani, Nov 5, 2019, 4:17 PM IST

ಹೊಸಪೇಟೆ: ಪ್ರಜೆಗಳಲ್ಲಿ ಅಕ್ಷರ ಸಂಸ್ಕೃತಿ, ಪ್ರಜ್ಞಾವಂತಿಕೆ ಬೆಳೆ ಸುವ ಮಹತ್ವದ ಆಶಯ  ದೊಂದಿಗೆ ಹಿಂದೆ ಮೈಸೂರು ಮಹಾ ರಾ ಜರು, ಕೃಷ್ಣ ರಾಜೇಂದ್ರರ ಹೆಸರಿನಲ್ಲಿ ನಾಡಿನಾದ್ಯಂತ ಸ್ಥಾಪಿಸಿದ್ದ  ಗ್ರಂಥಾಲಯ ಗಳೇ ಈಗ ರಾಜ್ಯದ ಸಾರ್ವಜನಿಕ ಗ್ರಂಥಾಲಯಗಳಾಗಿ ಜನರ ಸಾಹಿತ್ಯ ಕ್ತಿ, ಜ್ಞಾನದ ಹಸಿವು ತಣಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿವೆ.

ಜಿಲ್ಲಾ ಕೇಂದ್ರ ಗ್ರಂಥಾಲಯಗಳು ಈಗಾಗಲೇ ಆಧುನಿಕರಣಗೊಂಡಿದ್ದರೆ, ತಾಲೂಕುಮಟ್ಟದ ಬಹುತೇಕ ಸಾರ್ವಜನಿಕ ಗ್ರಂಥಾಲಯಗಳು ಅಗತ್ಯ ಮೂಲ ಭೂತ ಸೌಲಭ್ಯ ಗಳಲ್ಲದೇ ಸೊರಗುತ್ತಿವೆ. ನಗರದ ನಿಲ್ದಾಣದ ಹತ್ತಿರ  ಹಳೆ ನಗರ ಸಭೆಯ ಮೊದಲನೇ ಮಹಡಿಯಲ್ಲಿರುವ ಸಾರ್ವಜನಿಕ ಗ್ರಂಥಾಲಯ  ಮೂಲ ಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಅಲ್ಲದೆ, ಕಟ್ಟ ಡದ ಮೇಲ್ಛಾವ ಣಿ ಶಿಥಿ ಲ ಗೊಂಡು, ಆರ್‌ಸಿಸಿ ಉದುರಿ ಬೀಳುವ ಹಂತದಲ್ಲಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಒಳಪಡುವ ಇಲ್ಲಿನ ನಗರ ಕೇಂದ್ರ

ಗ್ರಂಥಾಲಯ ಈ ಹಿಂದೆ ನಗರದ ವಡಕಾರದೇವ ಸ್ಥಾನದ ಹತ್ತಿರದ ಕಟ್ಟಡ  ಒಂದರಲ್ಲಿ

1957ರಲ್ಲಿ ಬಳ್ಳಾರಿ ಜಿಲ್ಲಾ ಶಾಖಾ ಗ್ರಾಂಥಾಲ ಯ ವಾಗಿ ಆರಂಭ ಗೊಂಡಿತ್ತು. ಬಳಿಕ 1999ರಲ್ಲಿ ನಗ ರದ ರೀಡಿಂಗ್‌ ಆವರಣಕ್ಕೆ ಸ್ಥಳಾಂತರಗೊಂಡು, ಕಳೆದ 2007ರಲ್ಲಿ ನಗರಕೇಂದ್ರ  ಗ್ರಂಥಾಲಯ ವಾಗಿ ಪ್ರಸ್ತುತ ನಗ ರಸಭೆ ಕಟ್ಟ ಡ ದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಇಚ್ಛಾಶಕ್ತಿ ಕೊರತೆ: ಕಳೆದ 66 ವರ್ಷಗಳ ಹಿಂದೆ ನಗರದಲ್ಲಿ ತಲೆಯೆತ್ತಿ ರುವ ಗ್ರಂಥಾಲ ಯ ಕ್ಕೊಂದು ಸ್ವಂತ  ಕಟ್ಟಡವಿಲ್ಲದಿರುವುದು ನಿಜಕ್ಕೂ ವಿರ್ಪ ಯಾ ಸವೇ ಸರಿ. ಇದೀಗ ಜಿಲ್ಲಾಧಿಕಾರಿ ಎಸ್‌.ಎಸ್. ನ ಕುಲ್‌, ಗ್ರಂಥಾಲಯಕ್ಕೆ ಸ್ವಂತ ನಿವೇಶನ ಒದಗಿಸಲು ಮುಂದಾಗಿದ್ದು, ಉಪ ವಿಭಾಗಾಧಿಕಾರಿ ಹಾಗೂ ಪೌರಾಯುಕ್ತರು ಗ್ರಂಥಾಲಯಕ್ಕೆ ಅಗತ್ಯ ನಿವೇಶನ ಕಲ್ಪಿಸಲು ನಿರ್ದೇಶನ ನೀಡಿದ್ದಾರೆ. ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಹೋಗಿ ಬಂದು ಹೋಗಲು ಹತ್ತಿರ ಎನ್ನಿಸುವ ಪ್ರದೇಶ ಗುರುತಿಸುವ ಕಾರ್ಯ ಮಾಡುತ್ತಿದ್ದಾರೆ. ಕೆಲವೊಂದು ಸ್ಥಳವನ್ನು ಈಗಾಗಲೇ ಗುರುತಿಸಿದ್ದು, ಅವು  ಸಾರ್ವಜನಿಕರಿಗೆ ದೂರವಾಗುವ ಹಿನ್ನೆ ಲೆ ಯಲ್ಲಿ ಇನ್ನು ಅಂತಿಮ ಗೊಂಡಿಲ್ಲ. ಈ ನಡುವೆ ಪ್ರಸ್ತುತ ಇರುವ ನಗರ ಸಭೆ ಕಟ್ಟಡದ ಇನ್ನೊಂದು ಭಾಗದಲ್ಲಿ ಗ್ರಂಥಾ ಲಯ ಸ್ಥಳಾಂತರಕ್ಕೆ ಚಿಂತನೆ ನಡೆ ದಿದೆ. ಬಹು ತೇಕ ಈ ಕಟ್ಟಡದಲ್ಲಿ ಗ್ರಂಥಾಲಯ ಆಧುನೀಕರಣ ಗೊಂಡು ಡಿಜಿಟಲ್‌ ಗ್ರಂಥಾಲಯವಾಗಲಿ ದ.

ಓದುಗರು ಅಧಿಕ: ನಿತ್ಯ ಮುನ್ನೂರಕ್ಕೂ ಹೆಚ್ಚು ಓದು ಗರು ಸ್ಥಳ ದಲ್ಲಿ  ಓದುವುದು ಸೇರಿದಂತೆ ಪುಸ್ತಕ ಗಳನ್ನು ಎರವಲು ಪಡೆಯುವುದು ಮಾಡುತ್ತಾರೆ. ಗ್ರಂಥಾಲಯ ಬಸ್‌ ನಿಲ್ದಾಣಕ್ಕೆ ಹತ್ತಿರ ಇರುವುದರಿಂದ ಶಾಲಾ-ಕಾಲೇಜ್‌ ವಿದ್ಯಾ ರ್ಥಿ ಗಳು ಸೇರಿ ದಂತೆ ಹಿರಿಯ ನಾಗರಿಕರು, ಯುವಕರು, ಗ್ರಂಥಾಲಯದ ಲಾಭ ಪಡೆಯುತ್ತಿದ್ದಾರೆ. ವಿಶೇಷವಾಗಿ ತಾಲೂಕಿನ ನಾನಾ ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿ ಬಂದು ಓದು ವುದು ಹಾಗೂ ಪುಸಕ್ತ ಎರವಲು ಪಡೆಯುವು ದಕ್ಕೆ ತುಂಬ ಅನುಕೂಲವಾಗುತ್ತಿದೆ. ಈ ಕಾರಣಕ್ಕಾಗಿ ಪ್ರಸ್ತುತ ಇರುವ ಕಟ್ಟಡದ ಪಕ್ಕದ ಲ್ಲಿ ಅಗತ್ಯ ಸೌಲಭ್ಯ ಹೊಂದಿರುವ ಸುಸಜ್ಜಿತ ಗ್ರಂಥಾಲಯ ತೆರೆಯಬೇಕು ಎಂಬುದು ಜಿಲ್ಲಾಧಿಕಾರಿಗಳ ಸೂಚನೆಯಾಗಿದೆ.

ಶಾಖಾ ಗ್ರಂಥಾಲಯಗಳು: ನಗರ ಕೇಂದ್ರಗ್ರಂಥಾಲಯದ ಅಡಿಯಲ್ಲಿ ನ ರದ ವಿವಿಧಡೆ ಒಟ್ಟು 6 ಶಾಖಾ ಗ್ರಂಥಾಲಯಗಳು ತಲೆ ಎತ್ತಿವೆ. ನಗ ರದ ಮಾರ್ಕಂಡೇಯ ದೇವಸ್ಥಾನದ ಬಳಿ ಇರುವ ಸಮುದಾಯ ಭವನ, ನಗರದ ಚಪ್ಪರದಳ್ಳಿ ಕಬ್ಬೇರು ಪೇಟೆ ಶಾಲೆ ಯಲ್ಲಿ ಹತ್ತಿರ, ಆರ್‌ಟಿಓ ಕಚೇರಿ ಹಿಂಭಾಗ, ಸಂಕ್ಲಾ ಪುರ, ಕೊಂಡನಾ ಯಕ ಹಳ್ಳಿ ಹಾಗೂ ಟಿ.ಬಿ.  ಡ್ಯಾಂನಲ್ಲಿ ಒಟ್ಟು ಆರು ಶಾಖಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಇವು ಗಳಿಗೆ ಅಗತ್ಯ ಮೂಲ ಭೂತ ಸೌಲ ಭ್ಯಗಳ ಕೊರತೆ ಕಾಡುತ್ತಿದೆ.

 

-ಪಿ.ಸತ್ಯನಾರಾಯಣ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ