
ಕಂಪ್ಲಿಯ ಪಿಕೆಪಿಎಸ್‌ಗೆ 7ಲಕ್ಷ ರೂ. ಲಾಭ
Team Udayavani, Dec 23, 2020, 7:36 PM IST

ಕಂಪ್ಲಿ: ಕಳೆದ ಹಲವಾರು ತಿಂಗಳುಗಳಿಂದ ಆರ್ಥಿಕ ಪರಿಸ್ಥಿತಿಗಳು ಹದಗೆಟ್ಟಿದ್ದರೂ ಸಹಿತ ಕೋವಿಡ್‌ಸಂಕಷ್ಟದಲ್ಲಿಯೂ ಕಂಪ್ಲಿಯ ಪ್ರಾ.ಕೃ.ಪ.ಸ.ಸಂಘವೂ 2019-20ನೇ ಸಾಲಿನಲ್ಲಿ 7,01,210ರೂಗಳ ನಿವ್ವಳ ಲಾಭ ಗಳಿಸಿದೆ ಎಂದು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಎಚ್.ಈರಣ್ಣ ತಿಳಿಸಿದರು.
ಅವರು ಸಹಕಾರ ಸಂಘದ ಆವರಣದಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರದೊಂದಿಗೆ ಏರ್ಪಡಿಸಿದ್ದ ಸಂಘದ 41ನೇ ವಾರ್ಷಿ ಮಹಾಜನ ಸಭೆಯಲ್ಲಿ ಸಂಘದ ಲೆಕ್ಕ ಪತ್ರಗಳನ್ನು ಮಂಡಿಸಿ ಮಾತನಾಡಿ, ಸಂಘದಲ್ಲಿ 3508 ಸದಸ್ಯರಿದ್ದು, 74.10ಲಕ್ಷರೂಷೇರು ಬಂಡವಾಳ ಹಾಗೂ ಸರ್ಕಾರದ 2.20ಲಕ್ಷರೂ ಷೇರು ಬಂಡವಾಳವನ್ನು ಹೊಂದಿದ್ದು, ಕೆಸಿಸಿ ಅಲ್ಪಾವ ಧಿ ಬೆಳೆಸಾಲ 394.89 ಲಕ್ಷರೂಗಳನ್ನುವಿತರಣೆ ಮಾಡಲಾಗಿದೆ. ಬಿಡಿಪಿ ಸಾಲ 88.59ಲಕ್ಷ ರೂ. ವಿತರಿಸಿದ್ದು, ಉತ್ತಮ ವಸೂಲಾತಿಯನ್ನು ಹೊಂದಿದೆ ಎಂದು ವಿವರಿಸಿದರು. 5 ಜನರಿಗೆ ಐಪಿ ಸೆಟ್ ಸಾಲ 32ಲಕ್ಷರೂ ಮತ್ತು ಎಸ್‌ಎಚ್.ಜಿ. ಗುಂಪಿಗೆ 2ಲಕ್ಷ ರೂಗಳನ್ನು ವಿತರಿಸಲಾಗಿದೆ ಎಂದರು.
ಬೆಳೆ ಸಾಲ ಪಡೆದ ರೈತರಿಗೆ ವೈಯಕ್ತಿಕ ಅಪಘಾತ ವಿಮೆ ಯೋಜನೆಯನ್ನು ಅಳವಡಿಸಲಾಗಿದೆ ಎಂದರು. ಸಂಘದಲ್ಲಿ 170.55.ಲಕ್ಷರೂ ಠೇವಣಿ ಇದ್ದು, 243.91.ಲಕ್ಷರೂಗಳ ವ್ಯವಹಾರ ಮಾಡಿ 15,35,155 ರೂಗಳ ವ್ಯವಹಾರಿಕ ಲಾಭಗಳಿಸಿದ್ದರೆ, ಎಲ್ಲ ಖರ್ಚುಗಳು ಮತ್ತು ಅವಕಾಶಗಳನ್ನು ಮಾಡಿ ಸಂಘವು 7,01,210ರೂಗಳ ನಿವ್ವಳ ಲಾಭಗಳಿಸಿದೆ ಎಂದರು.
ಸಂಘದ ಅಧ್ಯಕ್ಷ ಕಟ್ಟೆ ಸಣ್ಣ ದುರುಗಪ್ಪ ಮಾತನಾಡಿ, ಸಂಘದಲ್ಲಿ ರೈತರಿಗಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದ್ದು ರೈತರು ಸದುಪಯೋಗಪಡೆದುಕೊಳ್ಳುವುದರ ಜೊತೆಗೆ ಸಂಘದ ಏಳಿಗೆಗೆ ಕೈಜೋಡಿಸಬೇಕೆಂದರು. ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದಪ್ಪ, ನಿರ್ದೇಶಕ ಬಿ.ರಮೇಶ ಸೇರಿದಂತೆ ಇತರರು ಮಾತನಾಡಿದರು. ಮಹಾಜನ ಸಭೆಯಲ್ಲಿ ಉಪಾಧ್ಯಕ್ಷೆ ಯು.ಪಾರ್ವತಿ, ನಿರ್ದೇಶಕರುಗಳಾದ ಜೆ.ಈರಪ್ಪ, ಅಳ್ಳಿ ನಾಗರಾಜ, ಎನ್. ಮಲ್ಲಿಕಾರ್ಜುನ, ಬಿ. ರಮೇಶ, ಕೋಲ್ಕಾರು ಮಲ್ಲಿಕಾರ್ಜುನ, ಬಳ್ಳಾರಿ ಬಸವರಾಜ, ಎಸ್.ರಾಜೇಶ್, ಡಿ.ಮುರಾರಿ, ಬಿ.ವೀರೇಶ್, ಕೆ.ರಾಜೇಶ್ವರಿ ಮತ್ತು ಎಸ್ ಸಣ್ಯೆಪ್ಪ, ಸಿಬ್ಬಂದಿಗಳಾದ ಕಾರೇಕಲ್ ಭರತ್‌ಇಟಗಿ ಈರಣ್ಣ, ಸಿದ್ದೇಶ್, ಮಂಜುನಾಥ್, ಪ್ರಕಾಶ್ ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ballari; ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಕಾರ್ಯಕ್ರಮ

Kurugodu; ಹೊಲಕ್ಕೆ ನೀರು ಹರಿಸುವಾಗ ಹಾವು ಕಡಿದು ರೈತ ಮೃತ್ಯು

Kotturu: ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಆಚರಣೆ ಶಾಂತಿ ಸಭೆ

Ballari; ಯಾರಿಗೂ ಹೆದರಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ: ಸೋಮಶೇಖರ್ ರೆಡ್ಡಿ

JDS ಜೊತೆ ಹೊಂದಾಣಿಕೆ ಕೇಂದ್ರಕ್ಕೆ ಬಿಟ್ಟದ್ದು: ಶಾಸಕ ಯತ್ನಾಳ್