Udayavni Special

ಕೃಷಿ ಸುಧಾರಣಾ ಕಾಯ್ದೆಗಳಿಂದ ರೈತರಿಗೆ ಲಾಭ: ಗುರುಲಿಂಗನಗೌಡ


Team Udayavani, Dec 9, 2020, 3:44 PM IST

ಕೃಷಿ ಸುಧಾರಣಾ ಕಾಯ್ದೆಗಳಿಂದ ರೈತರಿಗೆ ಲಾಭ: ಗುರುಲಿಂಗನಗೌಡ

ಬಳ್ಳಾರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕೃಷಿ ಸುಧಾರಣಾ ಮಸೂದೆಗಳ ಅನುಷ್ಠಾನರೈತರ ಪಾಲಿಗೆ ಲಾಭದಾಯಕವಾಗಿದ್ದು, ಕಾಂಗ್ರೆಸ್‌ ಮತ್ತು ಎಡ ಪಕ್ಷಗಳು ವಿನಾಕಾರಣ ರೈತರನ್ನು ದಾರಿ ತಪ್ಪಿಸುತ್ತಿವೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಎಸ್‌.ಗುರುಲಿಂಗನಗೌಡ, ಜಿಲ್ಲಾಧ್ಯಕ್ಷ ಗಣಪಾಲ್‌ ಐನಾಥ ರೆಡ್ಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಳೆದ ಹಲವು ದಶಕಗಳ ಹಿಂದೆ ರಚಿಸಿದ ಕಾಯ್ದೆಗಳು ತಿದ್ದುಪಡಿಯಾಗದೇ ಇದ್ದವು. ಇದರಿಂದ ಎಪಿಎಂಸಿಗಳಲ್ಲಿ ಏಕಸ್ವಾಮ್ಯತೆ ಬಂದಿತ್ತು. ಅದನ್ನು ತಪ್ಪಿಸಲು ರೈತರೇ ನೇರವಾಗಿಖರೀದಿದಾರನಿಗೆ ಮಾರಾಟ ಮಾಡಲು ಅನುಕೂಲವಾಗುವಂತೆ ಕಾಯ್ದೆಗೆ ತಿದ್ದುಪಡಿ ತಂದಿದೆ. ಇದರಿಂದಎಪಿಎಂಸಿಗಳನ್ನು ಮುಚ್ಚಲಾಗುತ್ತದೆ ಎಂದು ವದಂತಿ ಹಬ್ಬಿಸಿರುವುದುಸರಿಯಲ್ಲ ಎಂದರು. ರೈತರ ಖಾತೆಗೆ ತಲಾ ಎರಡು ಸಾವಿರ

ರೂ.ನಂತೆ ಮೂರು ಬಾರಿ ಸೇರಿ ವಾರ್ಷಿಕ 6 ಸಾವಿರ ರೂ.ಗಳನ್ನು ನೀಡುವ ಕಿಸಾನ್‌ ಸಮ್ಮಾನ್‌ ಯೋಜನೆ. ಇದರ ಜೊತೆಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದಕ್ಕೆ 4 ಸಾವಿರ ರೂ ಸೇರಿಸಿ ಒಟ್ಟು ವಾರ್ಷಿಕ 10 ಸಾವಿರ ರೂ.ಗಳನ್ನು ರೈತರಿಗೆ ನೀಡಲಾಗುತ್ತಿದೆ. ಇ-ಮಾರುಕಟ್ಟೆ (ಇ ನ್ಯಾಮ್‌) ಸ್ಥಾಪನೆಯ ಮೂಲಕ  ದೇಶಾದ್ಯಂತ ರೈತರನ್ನು ಮಾರುಕಟ್ಟೆಗೆ ಜೋಡಿಸಲಾಗಿದೆ. ರೈತರ ಪಂಪ್‌ಸೆಟ್‌ಗಳಿಗೆ ಸೋಲಾರ್‌ ವಿದ್ಯುತ್‌ ಜೊಡಣೆ, ಆತ್ಮ ನಿರ್ಭರ ಭಾರತ ಯೋಜನೆಯಡಿ 1 ಲಕ್ಷ ಕೋಟಿ ರೂ. ಮೊತ್ತವನ್ನು ಕೃಷಿ ಕ್ಷೇತ್ರದ ಮೂಲಭೂತ ಸೌಕರ್ಯದ ಅಭಿವೃದ್ಧಿಗಾಗಿ ನಿಯೋಜಿಸಲಾಗಿದೆ. ಇದರಿಂದಾಗಿ 2014ರಲ್ಲಿ 250 ಮಿಲಿಯನ್‌ ಟನ್‌ನಷ್ಟಿದ್ದ ಆಹಾರ ಧಾನ್ಯಗಳ ಉತ್ಪಾದನೆ 2020ರ ವೇಳೆಗೆದಾಖಲೆ ಮಟ್ಟದ 291 ಮಿಲಿಯನ್‌ ಟನ್‌ಗೆ ಏರಿಕೆಯಾಗಿದೆ. ಇಳುವರಿ ಹೆಚ್ಚಳದಿಂದ ಸುಮಾರು ಶೇ.20 ರಿಂದ 30 ರಷ್ಟು ಆದಾಯ ಹೆಚ್ಚಳವೂ ಸಾಧ್ಯವಾಗಲಿದೆ ಎಂದು ವಿವರಿಸಿದರು.

ಈಗಾಗಲೇ 2020ರ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ಅತಿ ಹೆಚ್ಚುಪ್ರಮಾಣದ ರೈತರ ಉತ್ಪನ್ನವನ್ನುಖರೀದಿಸಲಾಗಿದೆ. ಇದು ಕನಿಷ್ಠ ಬೆಂಬಲ ಯೋಜನೆಯ ರದ್ದತಿ ಕುರಿತಾದ ಆರೋಪವು ಸುಳ್ಳು ಎನ್ನುವುದನ್ನು ಸ್ಪಷ್ಟಗೊಳಿಸುತ್ತದೆ. ಕೇರಳದಲ್ಲಿ ಎಪಿಎಂಸಿ ಕಾಯ್ದೆ ಜಾರಿಗೊಳಿಸದೆ ಇರುವ ಕಮ್ಯುನಿಸ್ಟರುಇಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆಇದು ಅವರ ರಾಜಕೀಯ ಕುತಂತ್ರಕ್ಕೆ ಸಾಕ್ಷಿಯಾಗಿದೆ. ವಿರೋಧ ಪಕ್ಷಗಳು ಸೋತಿದ್ದು ಹತಾಶೆಯಿಂದ ರೈತರನ್ನು ಮೋದಿ ಸರ್ಕಾರದ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನವಾಗಿದೆ. ದಲ್ಲಾಳಿಗಳು ಮತ್ತು ಕಮಿಷನ್‌ ಏಜೆಂಟರು ರಾಜಕೀಯ ದುರುದ್ದೇಶದೊಂದಿಗೆ, ರೈತರ ಮುಖವಾಡ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿವರುದ್ರಗೌಡ ಸೇರಿ ಹಲವರು ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ತಂಡಕ್ಕೆ ಮರಳಿದ ಶಕಿಬ್‌

ತಂಡಕ್ಕೆ ಮರಳಿದ ಶಕಿಬ್‌

ಬೆಳಗಾವಿ ಕುರಿತಾದ  ಅಜಿತ್ ಪವಾರ್ ಹೇಳಿಕೆ ಉದ್ಧಟತನದ ಪ್ರತೀಕ : ಡಾ. ಸಿ. ಸೋಮಶೇಖರ

ಬೆಳಗಾವಿ ಕುರಿತಾದ ಅಜಿತ್ ಪವಾರ್ ಹೇಳಿಕೆ ಉದ್ಧಟತನದ ಪ್ರತೀಕ : ಡಾ. ಸಿ. ಸೋಮಶೇಖರ

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ : ಪುದುಚೇರಿ ವಿರುದ್ಧವೂ ಮುಂಬಯಿಗೆ ಮುಖಭಂಗ

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ : ಪುದುಚೇರಿ ವಿರುದ್ಧವೂ ಮುಂಬಯಿಗೆ ಮುಖಭಂಗ

whatsapp posts status reassuring privacy commitment after new privacy update

ಸ್ಟೇಟಸ್ ಮೂಲಕ ಬಳಕೆದಾರರಿಗೆ ‘ಪ್ರೈವೆಸಿ ಪಾಠ’ ಮಾಡಿದ ವಾಟ್ಸಾಪ್

Phone numbers of WhatsApp Web users reportedly found on Google Search

ಮುಗಿಯದ ವಾಟ್ಸಾಪ್ ಗೋಳು: ಗೂಗಲ್ ಸರ್ಚ್ ನಲ್ಲಿ ‘ಮಿಂಚಿ ಮರೆಯಾದ’ ನಿಮ್ಮ ಮೊಬೈಲ್ ನಂಬರ್ !

gulam

ಖ್ಯಾತ ಹಿಂದೂಸ್ತಾನಿ ಗಾಯಕ, ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫಾಖಾನ್ ವಿಧಿವಶ

siddu

ಭದ್ರಾವತಿ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಕಡೆಗಣನೆ; ತೀವ್ರವಾಗಿ ಖಂಡಿಸುತ್ತೇನೆ ಎಂದ ಸಿದ್ದುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress for the Protection of Farmers

ರೈತರ ರಕ್ಷಣೆಗಾಗಿ ಕಾಂಗ್ರೆಸ್‌ನಡಿಗೆ ಅನ್ನದಾತರ ಬಳಿಗೆ

Insist on liquor store evacuation

ಮದ್ಯದಂಗಡಿ ತೆರವಿಗೆ ಒತ್ತಾಯ

ballary

ಬಳ್ಳಾರಿ: ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಚಾಲನೆ

RANGOLI

ಗಣಿನಾಡಿನಲ್ಲಿ ಸಂಭ್ರಮದ ಸಂಕ್ರಾಂತಿ ಆಚರಣೆ

A fascinating Rangabharati park

ಮನಸೆಳೆವ ರಂಗಭಾರತಿ ಉದ್ಯಾನವನ

MUST WATCH

udayavani youtube

KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani

udayavani youtube

Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??

udayavani youtube

ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ

udayavani youtube

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ

udayavani youtube

ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು

ಹೊಸ ಸೇರ್ಪಡೆ

ಸೌರಶಕ್ತಿ ಪರಿಪೂರ್ಣತೆಯತ್ತ ಕಾಸರಗೋಡು ಜಿಲ್ಲೆ

ಸೌರಶಕ್ತಿ ಪರಿಪೂರ್ಣತೆಯತ್ತ ಕಾಸರಗೋಡು ಜಿಲ್ಲೆ

ಮಿತ್ತಬಾಗಿಲು ಗ್ರಾ.ಪಂ.ಗೆ ನೂತನ ಕಟ್ಟಡ ಭಾಗ್ಯ

ಮಿತ್ತಬಾಗಿಲು ಗ್ರಾ.ಪಂ.ಗೆ ನೂತನ ಕಟ್ಟಡ ಭಾಗ್ಯ

ಸುರತ್ಕಲ್‌: ಹನಿಟ್ರ್ಯಾಪ್‌ ಪ್ರಕರಣ ನಾಲ್ವರ ಬಂಧನ

ಸುರತ್ಕಲ್‌: ಹನಿಟ್ರ್ಯಾಪ್‌ ಪ್ರಕರಣ ನಾಲ್ವರ ಬಂಧನ

ಹಕ್ಕು ಚಲಾಯಿಸಿದ ಶ್ಯಾಮ್‌ ನೇಗಿ

ಹಕ್ಕು ಚಲಾಯಿಸಿದ ಶ್ಯಾಮ್‌ ನೇಗಿ

ಸದ್ಯಕ್ಕಿಲ್ಲ ನೀರಿನ ಅಭಾವದ ಆತಂಕ

ಸದ್ಯಕ್ಕಿಲ್ಲ ನೀರಿನ ಅಭಾವದ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.