Udayavni Special

ಕೃಷಿ ಕಾರ್ಯ ಚುರುಕು; ರೈತನ ಮಿತ್ರಗೆ ಹೆಚ್ಚಿದ ಬೇಡಿಕೆ

ಎತ್ತುಗಳಿಂದ ಭೂಮಿ ಹರಗಿದರೆ ಉತ್ತಮ ಬೆಳೆ

Team Udayavani, Aug 7, 2020, 4:05 PM IST

ಕೃಷಿ ಕಾರ್ಯ ಚುರುಕು; ರೈತನ ಮಿತ್ರಗೆ ಹೆಚ್ಚಿದ ಬೇಡಿಕೆ

ಸಿರುಗುಪ್ಪ: ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಎತ್ತುಗಳ ಸಂಖ್ಯೆ ಕಡಿಮೆ ಇರುವುದರಿಂದ ಬಿತ್ತನೆ, ಭತ್ತದ ಗದ್ದೆ ನಾಟಿಗೆ ಮುನ್ನಾ ಭೂಮಿಯನ್ನು ಸಮಮಾಡಲು ಮತ್ತು ಬಿತ್ತಿದ ಹೊಲಗಳಲ್ಲಿ ಹರಗಲು ಎತ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ.

ತಾಲೂಕಿನಲ್ಲಿ ಸುಮಾರು 23 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ, ಸೂರ್ಯಕಾಂತಿ, ಸಜ್ಜೆ, ನವಣೆ, ಜೋಳ, ಮೆಣಸಿನಕಾಯಿ ಮುಂತಾದ ಬೆಳೆಗಳನ್ನು ಬೆಳೆಯಲಾಗಿದೆ. ಬೆಳೆದು ನಿಂತಿರುವ ಹತ್ತಿ, ಸೂರ್ಯಕಾಂತಿ, ಸಜ್ಜೆ, ನವಣೆ, ಜೋಳ, ಮೆಣಸಿನಕಾಯಿ ಬೆಳೆಗಳಲ್ಲಿ ಕಳೆ, ಕಸ ತೆಗೆಯಲು ಎತ್ತುಗಳನ್ನು ಬಳಕೆ ಮಾಡಲಾಗುತ್ತದೆ. ಇದರಿಂದಾಗಿ ಬೇಡಿಕೆಯು ಹೆಚ್ಚಾಗಿದ್ದು, ಎತ್ತುಗಳ ಸಂಖ್ಯೆ ಕಡಿಮೆ ಇರುವುದರಿಂದ ಎತ್ತುಗಳ ಮೂಲಕ ಕೃಷಿ ಚಟುವಟಿಕೆ ಮಾಡಲು ಎತ್ತುಗಳನ್ನು ಹೊಂದಿದ ರೈತರು ಬೆಲೆಯನ್ನು ಹೆಚ್ಚಿಸಿದ್ದಾರೆ.

ಆದರೆ ಮೆಣಸಿನಕಾಯಿ, ಜೋಳ, ಹತ್ತಿ ಬೆಳೆಗಳನ್ನು ಎತ್ತುಗಳಿಂದ ಹರಗಿದರೆ ಭೂಮಿಯಲ್ಲಿ ಬೆಳೆಗಳ ಬೇರು ಆಳವಾಗಿ ಬೇರೂರುತ್ತವೆ. ಇದರಿಂದ ಬೆಳೆಗಳು ಉತ್ತಮವಾಗಿ ಬೆಳೆದು ಇಳುವರಿ ಹೆಚ್ಚಾಗುತ್ತದೆ ಎನ್ನುವ ಕಾರಣದಿಂದ ಬಹುತೇಕ ರೈತರು ಎತ್ತುಗಳ ಮೂಲಕವೇ ತಮ್ಮ ಬೆಳೆಗಳಲ್ಲಿ ಕಳೆ ತೆಗೆಯಲು ಮತ್ತು ಬೋದು ಮಾಡಲು ಬಳಸುತ್ತಾರೆ.

ಇನ್ನೂ ಭತ್ತದ ಗದ್ದೆ ನಾಟಿಗೆ ಮುನ್ನ ಟ್ರಾಕ್ಟರ್‌ ನಿಂದ ಕೆ.ಜಿ. ವೀಲ್‌ನಿಂದ ಧಮ್‌ ಹೊಡೆದು ಸಿದ್ಧಮಾಡುತ್ತಾರೆ. ಆದರೆ ಭೂಮಿಯಲ್ಲಿ ಸಮಾನವಾಗಿ ನೀರು ನಿಂತರೆ ಮಾತ್ರ ಭತ್ತದ ಬೆಳೆ ಉತ್ತಮವಾಗಿ ಬೆಳೆಯುತ್ತದೆ ಎನ್ನುವ ಕಾರಣಕ್ಕೆ ರೈತರು ಎತ್ತುಗಳ ಮೂಲಕ ಹಲಗೆಯೊಂದಿಗೆ ಭೂಮಿಯನ್ನು ಸಮಾನಾಂತರ ಮಾಡುತ್ತಾರೆ. ಗದ್ದೆಯಲ್ಲಿ ಭೂಮಿಯನ್ನು ಸಮಾನಾಂತರ ಮಾಡಲು ಒಂದು ದಿನಕ್ಕೆ ಒಂದು ಸಾವಿರ ರೂ.ಗಳನ್ನು ಮತ್ತು ಒಣಭೂಮಿಯಲ್ಲಿ ಬೆಳೆದ ಬೆಳೆಗಳಲ್ಲಿ ಕುಂಟೆ, ರಂಟೆ ಹೊಡೆಯಲು ರೂ. 700 ಬಾಡಿಗೆಯನ್ನು ಎತ್ತುಗಳ ಮಾಲೀಕರು ನಿಗದಿ ಮಾಡಿದ್ದಾರೆ. ಆದರೂ ಸಮಯಕ್ಕೆ ಸರಿಯಾಗಿ ಎತ್ತುಗಳು ಕೃಷಿ ಮಾಡಲು ದೊರೆಯುತ್ತಿಲ್ಲ. ಸಮಯಕ್ಕೆ ಸರಿಯಾಗಿ ಎತ್ತುಗಳು ದೊರೆಯದೇ ಇರುವುದರಿಂದ ಹೆಚ್ಚಿನ ಬಾಡಿಗೆ ರೈತರು ನೀಡಿ ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಇಂದಿನ ಕೃಷಿಯಲ್ಲಿ ಆಧುನಿಕ ಯಂತ್ರಗಳು ಕೃಷಿ ಕೆಲಸಕ್ಕೆ ಕಾಲಿಟ್ಟಿದ್ದರಿಂದ ಸಾಂಪ್ರದಾಯಿಕವಾಗಿ ರೈತರ ಕೃಷಿಗೆ ಹೆಗಲು ನೀಡುತ್ತಿದ್ದ ಎತ್ತುಗಳ ಸಂಖ್ಯೆ ಕಡಿಮೆಯಾಗಿದೆ. ಇದರಿಂದಾಗಿ ಎತ್ತುಗಳ ಬಾಡಿಗೆಯೂ ಹೆಚ್ಚಾಗಿದೆ. – ಹುಲುಗಯ್ಯ, ಬಗ್ಗೂರು ಗ್ರಾಮದ ರೈತ

 

ಆರ್‌.ಬಸವರೆಡ್ಡಿ ಕರೂರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಏರ್‌ಇಂಡಿಯಾಗೆ ನಿರ್ಬಂಧ

ಏರ್ ‌ಇಂಡಿಯಾಗೆ ನಿರ್ಬಂಧ

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು

ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಅಮ್ಮನಾದ ಮಾಯಂತಿ ಐಪಿಎಲ್‌ಗೆ ಇಲ್ಲ

ಅಮ್ಮನಾದ “ಮಾಯಂತಿ” ಐಪಿಎಲ್‌ಗೆ ಇಲ್ಲ

ಧೋನಿಗೆ ಚಿನ್ನದ ಕ್ಯಾಪ್‌, ಜಡೇಜಾಗೆ ಚಿನ್ನದ ಖಡ್ಗ!

ಧೋನಿಗೆ ಚಿನ್ನದ ಕ್ಯಾಪ್‌, ಜಡೇಜಾಗೆ ಚಿನ್ನದ ಖಡ್ಗ!

ಆರ್‌ಸಿಬಿ ಗೀತೆಯಲ್ಲಿ ಕನ್ನಡ ಪ್ರತ್ಯಕ್ಷವಾಯಿತು!

ಆರ್‌ಸಿಬಿ ಗೀತೆಯಲ್ಲಿ ಕನ್ನಡ ಪ್ರತ್ಯಕ್ಷವಾಯಿತು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಳ್ಳಾರಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ

ಬಳ್ಳಾರಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ

ಹಂಪಿ: ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ದಾಳಿ ಮೂರು ಲಾರಿ ವಶ

ಹಂಪಿ: ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ದಾಳಿ; 3 ಲಾರಿ ವಶ

ರೈಲ್ವೆ  ಖಾಸಗೀಕರಣ ನಿರ್ಧಾರ ಹಿಂಪಡೆಯಿರಿ

ರೈಲ್ವೆ ಖಾಸಗೀಕರಣ ನಿರ್ಧಾರ ಹಿಂಪಡೆಯಿರಿ

ballry-tdy-1

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಸುಸೂತ್ರ ನಡೆಸಿ: ಎಡಿಸಿ ಮಂಜುನಾ¥

ರೈತರಿಗೆ ಯೂರಿಯಾ ಸಮರ್ಪಕವಾಗಿ ವಿತರಣೆಯಾಗಲಿ: ಪ್ರಭಾಕರ

ರೈತರಿಗೆ ಯೂರಿಯಾ ಸಮರ್ಪಕವಾಗಿ ವಿತರಣೆಯಾಗಲಿ: ಪ್ರಭಾಕರ

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

ಏರ್‌ಇಂಡಿಯಾಗೆ ನಿರ್ಬಂಧ

ಏರ್ ‌ಇಂಡಿಯಾಗೆ ನಿರ್ಬಂಧ

ಕರ್ನಾಟಕದ ಕೆಲವೆಡೆ ಇಂದು ಭಾರೀ ಮಳೆ

ಕರ್ನಾಟಕದ ಕೆಲವೆಡೆ ಇಂದು ಭಾರೀ ಮಳೆ

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು

ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.