Udayavni Special

ರೈತರಿಗೂ ಪ್ಯಾಕೇಜ್‌ ಘೋಷಿಸಿ


Team Udayavani, Jun 5, 2021, 11:10 AM IST

ರೈತರಿಗೂ ಪ್ಯಾಕೇಜ್‌ ಘೋಷಿಸಿ

ಹೊಸಪೇಟೆ: ಕೋವಿಡ್‌ ಸಂಕಷ್ಟದಲ್ಲಿರುವ ಎಲ್ಲ ರೈತರಿಗೆ ಸರಕಾರ ಘೋಷಿಸಿರುವ ಪರಿಹಾರ ಪ್ಯಾಕೇಜ್‌ ಹಾಗೂ ಉತ್ತಮ ಬೀಜ, ರಸಗೊಬ್ಬರ ಉಚಿತವಾಗಿ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕ ಶುಕ್ರವಾರ ಆಗ್ರಹಿಸಿದೆ.

ಕಳೆದ ಎರಡು ವರ್ಷಗಳಿಂದ ರೈತರು, ಕೃಷಿ ಕೂಲಿಕಾರರು ಸಂಕಷ್ಟಕ್ಕೊಳಗಾಗಿದ್ದಾರೆ. ರೈತರು ಬೆಳೆದ ಬೆಳೆಗಳನ್ನು ವ್ಯವಸ್ಥಿತವಾದ ಮಾರುಕಟ್ಟೆಗೆ ತರಲಾರದಂತಹ ಮತ್ತು ಅವರು ಮಾರಾಟ ಮಾಡಲು ಅವಕಾಶ ಇಲ್ಲದಂಥ ಸನ್ನಿವೇಶ ಎದುರಿಸಿದ್ದಾರೆ. ಆದರೆ ಆಳುವ ಸರಕಾರಗಳು ರೈತರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆ.

ಏಕೆಂದರೆ ಹೊಲಗಳಲ್ಲಿ ಕಟಾವಿಗೆ ಬಂದಿದ್ದ ಹಣ್ಣು, ತರಕಾರಿಗಳು, ಭತ್ತ, ಶೇಂಗಾ, ಬಾಳೆ, ಮತ್ತಿತರೆ ಮಾರಾಟ ಮಾಡಲಿಕ್ಕೆ ಖರೀದಿ ಕೇಂದ್ರ ಇಲ್ಲದಿರುವುದು ಮತ್ತು ಅವುಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಒಂದು ಕಡೆಯಿಂದ ಮತ್ತೂಂದು ಕಡೆಗೆ ಸಾಗಿಸಲು ಅನುಕೂಲ ಇಲ್ಲದಿರುವುದರಿಂದ ರೈತರು ಹಲವುಕಿರುಕುಳಗಳನ್ನು ಅನುಭವಿಸಿದ್ದಾರೆ ಎಂದು ದೂರಿದರು.

ಪಸಲ್‌ ಬಿಮಾ ಯೋಜನೆಯ ಹಣ ತಾಲೂಕಿನ ಸಾಕಷ್ಟು ರೈತರಿಗೆ ಇನ್ನು ತಲುಪಿಲ್ಲ. ಡಿಎಪಿ ರಸಗೊಬ್ಬರ ಕೋವಿಡ್‌ ಸಂದರ್ಭದಲ್ಲಿ ಈ ಹಿಂದೆ ಇದ್ದಂತೆಯೇ 1200 ರೂ. ಇದೆ. ಕೇಂದ್ರ, ರಾಜ್ಯ ಸರಕಾರಗಳು 1200ರೂಗಿಂತ 800 ರೂ. ಅಥವಾ 850 ರೂಗೆ ಸಿಗುವಂತೆ ಅನುಕೂಲ ಮಾಡಿ ಉಳಿದ ಸಬ್ಸಿಡಿ ಹಣವನ್ನು ಕೇಂದ್ರ ಸರಕಾರ ಭರಿಸಬೇಕು. ರೈತರ ಪಹಣಿಗಳಲ್ಲಿ ಜಂಟಿ ಕುಟುಂಬಗಳು ಹೆಚ್ಚಾಗಿರುವುದರಿಂದ ಹಲವು ಸೌಲಭ್ಯಗಳನ್ನು ಪಡೆಯಲಿಕ್ಕೆ ಕಷ್ಟಕರವಾಗಿದೆ. ಆದ್ದರಿಂದ ಎಲ್ಲ ಬಡ ರೈತರ ಹಿತದೃಷ್ಟಿಯಿಂದ ಸಂಬಂಧಿ ಸಿದ ಇಲಾಖೆಗಳು ಪ್ರತ್ಯೇಕ ಪಹಣಿಗಳಾಗಲು ರೈತರ ಸಭೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳು: ಸರ್ಕಾರದಿಂದ ರೈತರಿಗೆ ಘೋಷಿಸಿದ 10,000 ರು. ಪ್ಯಾಕೇಜ್‌ ಸಮರ್ಪಕವಾಗಿ ಸಿಗುವಂತಾಗಲು ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಒದಗಿಸಬೇಕು. ತೋಟಗಾರಿಕೆ ಇಲಾಖೆಯಿಂದರೈತರಿಗೆ ಸಬ್ಸಿಡಿ ರೂಪದಲ್ಲಿ ಸಿಗುವ ಸಾವಯವ ಕೃಷಿ ಪದ್ಧತಿಗೆ ಎಲ್ಲ ಕ್ರಮ ವಹಿಸಬೇಕು. ಈರುಳ್ಳಿ ಶೇಖರಣೆ ಘಟಕ ಹಾಗೂ ಇನ್ನಿತರೆ ತರಕಾರಿ ಬೆಳೆಗಳ ಪ್ಯಾಕೇಜ್‌ ಹೌಸ್‌ಗಳನ್ನು ಹೆಚ್ಚಾಗಿ ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗಕ್ಕೆ ಸಿಗುವಂತೆ ಕ್ರಮ ವಹಿಸಬೇಕು. ಪ್ರತಿಯೊಬ್ಬ ರೈತರಿಗೆ ಉಚಿತವಾಗಿ ಬೀಜ ಗೊಬ್ಬರ ನೀಡಬೇಕು. ಡಿಎಪಿ ಇತರೆ ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಇಲಾಖೆಯಿಂದ ನಿಗದಿತ ದರದ ಸುತ್ತೋಲೆಯನ್ನು ಹೊರಡಿಸಬೇಕು. ರಾಜಾಪುರ ಭಾಗದಲ್ಲಿ ತ್ವರಿತವಾಗಿ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ತೋಟಗಾರಿಕೆ ಇಲಾಖೆ ಅಧಿಕಾರಿ ಜೆ. ಶಂಕರ್‌ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಂಘದ ಪದಾಧಿಕಾರಿಗಳಾದ ಜಿ. ಕರೆಹನುಮಂತ, ಎನ್‌. ಯಲ್ಲಾಲಿಂಗ, ಭಾಸ್ಕರ್‌ ರೆಡ್ಡಿ, ಬಾಣದ ನಾಗರಾಜ, ಬಾಣದ ರಾಮಣ್ಣ, ಬಿ. ತಾಯಪ್ಪ, ಭೀಮಜ್ಜ ಮತ್ತಿತರರಿದ್ದರು.

ಟಾಪ್ ನ್ಯೂಸ್

Minister Basavaraj Bommai On River Krishna water sharing with Maharashtra

ಕೃಷ್ಣಾ ನದಿ ನೀರು ಹಂಚಿಕೆ ಐ : ಅಂತಿಮ ಅಧಿಸೂಚನೆಗೆ ಕರ್ನಾಟಕ-ಮಹಾರಾಷ್ಟ್ರ ಜಂಟಿ ಪ್ರಯತ್ನ

ವಿಟ್ಲ:  ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪಿಕಪ್ ವಾಹನ

ವಿಟ್ಲ:  ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪಿಕಪ್ ವಾಹನ

Maharashtra: Former minister Sunil Deshmukh quits BJP, joins Congress on Rahul Gandhi’s birthday

ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಮಹಾರಾಷ್ಟ್ರದ ಮಾಜಿ ಸಚಿವ ಸುನಿಲ್ ದೇಶ್ ಮುಖ್..!

ಉತ್ತರಪ್ರದೇಶ: ಮಾಜಿ ಐಎಎಸ್ ಅಧಿಕಾರಿ ಎ.ಕೆ.ಶರ್ಮಾ ಬಿಜೆಪಿಯ ನೂತನ ಉಪಾಧ್ಯಕ್ಷರಾಗಿ ಆಯ್ಕೆ

ಉತ್ತರಪ್ರದೇಶ: ಮಾಜಿ ಐಎಎಸ್ ಅಧಿಕಾರಿ ಎ.ಕೆ.ಶರ್ಮಾ ಬಿಜೆಪಿಯ ನೂತನ ಉಪಾಧ್ಯಕ್ಷರಾಗಿ ಆಯ್ಕೆ

The world health organization says new species of coronavirus are spreading across the world data are available variant concern virus origin

ಕೋವಿಡ್ ಹೊಸ ರೂಪಾಂತರಿ ‘ಲಾಂಡಾ’ 29 ದೇಶಗಳಲ್ಲಿ ಪತ್ತೆ : ವಿಶ್ವ ಆರೋಗ್ಯ ಸಂಸ್ಥೆ

ನೀರಾವರಿ ಇಲಾಖೆ ಅವ್ಯವಹಾರಗಳ ತನಿಖೆಗೆ ಜಂಟಿ ಸದನ ಸಮಿತಿ ರಚನೆಗೆ ಡಿ.ಕೆ.ಶಿವಕುಮಾರ್ ಆಗ್ರಹ

ನೀರಾವರಿ ಇಲಾಖೆ ಅವ್ಯವಹಾರಗಳ ತನಿಖೆಗೆ ಜಂಟಿ ಸದನ ಸಮಿತಿ ರಚನೆಗೆ ಡಿ.ಕೆ.ಶಿವಕುಮಾರ್ ಆಗ್ರಹ

ಕೋವಿಡ್ ಇಳಿಮುಖ: ತೆಲಂಗಾಣದಲ್ಲಿ ಜೂ.20ರಿಂದ ಲಾಕ್ ಡೌನ್ ನಿರ್ಬಂಧ ಸಂಪೂರ್ಣ ತೆರವು

ಕೋವಿಡ್ ಇಳಿಮುಖ: ತೆಲಂಗಾಣದಲ್ಲಿ ಜೂ.20ರಿಂದ ಲಾಕ್ ಡೌನ್ ನಿರ್ಬಂಧ ಸಂಪೂರ್ಣ ತೆರವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹುಲುಗಪ್ಪನ ಮಾನವೀಯ ಕಾರ್ಯಕ್ಕೆ ಸಲಾಂ

ಹುಲುಗಪ್ಪನ ಮಾನವೀಯ ಕಾರ್ಯಕ್ಕೆ ಸಲಾಂ

18-14

ಆಟೋ ಚಾಲಕರಿಗೆ ಆಹಾರ ಕಿಟ್‌ ವಿತರಣೆ

18-13

ಹತ್ತಿ ಬೀಜಕ್ಕಾಗಿ ಸೀಮಾಂಧ್ರದತ್ತ ರೈತರ ಚಿತ್ತ

17-15

ಬೀಜ ಮಾರಾಟ ಮಳಿಗೆಗಳ ಮೇಲೆ ದಾಳಿ

17-14

ಧಾರ್ಮಿಕ ಕಾರ್ಯಗಳಿಂದ ಶ್ರೇಯಸ್ಸು: ಶ್ರೀಶೈಲ ಶ್ರೀ

MUST WATCH

udayavani youtube

ಕೊರ್ಗಿ : ಡಾ. ರವಿಶಂಕರ್‌ ಶೆಟ್ಟಿ ಅವರಿಂದ ಆಕ್ಸಿಜನ್ ಸಾಂದ್ರಕ ಕೊಡುಗೆ

udayavani youtube

ಸಾಮಾಜಿಕ ಅಂತರವಿಲ್ಲದೆ ಶಿಕ್ಷಕರಿಗೆ ಲಸಿಕಾ ಅಭಿಯಾನ

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

udayavani youtube

ದಿ. ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ

udayavani youtube

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

ಹೊಸ ಸೇರ್ಪಡೆ

Minister Basavaraj Bommai On River Krishna water sharing with Maharashtra

ಕೃಷ್ಣಾ ನದಿ ನೀರು ಹಂಚಿಕೆ ಐ : ಅಂತಿಮ ಅಧಿಸೂಚನೆಗೆ ಕರ್ನಾಟಕ-ಮಹಾರಾಷ್ಟ್ರ ಜಂಟಿ ಪ್ರಯತ್ನ

ಸದ್ಗಹಮಗ್ದ್ಗಹಜ

20 ದಿನಗಳಲ್ಲಿ ನಿರ್ಮಾಣವಾದ ಯಲಹಂಕ ಕೋವಿಡ್‌ ಆಸ್ಪತ್ರೆ ಲೋಕಾರ್ಪಣೆ ಮಾಡಿದ ಸಿಎಂ

mysore news

ಮನೆ ಮೇಲ್ಚಾವಣಿಯ ಪುಟ್ಟ ಜಾಗದಲ್ಲೇ ಸುಂದರ ಸಸ್ಯಕಾಶಿ

ವಿಟ್ಲ:  ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪಿಕಪ್ ವಾಹನ

ವಿಟ್ಲ:  ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪಿಕಪ್ ವಾಹನ

Maharashtra: Former minister Sunil Deshmukh quits BJP, joins Congress on Rahul Gandhi’s birthday

ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಮಹಾರಾಷ್ಟ್ರದ ಮಾಜಿ ಸಚಿವ ಸುನಿಲ್ ದೇಶ್ ಮುಖ್..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.